• English
  • Login / Register

Skoda Kushaq ಆಟೋಮ್ಯಾಟಿಕ್‌ ಓನಿಕ್ಸ್ ಆವೃತ್ತಿಯ ಬಿಡುಗಡೆ, 13.49 ಲಕ್ಷ ರೂ. ಬೆಲೆ ನಿಗದಿ

published on ಜೂನ್ 11, 2024 09:08 pm by ansh for ಸ್ಕೋಡಾ ಸ್ಕೋಡಾ ಕುಶಾಕ್

  • 38 Views
  • ಕಾಮೆಂಟ್‌ ಅನ್ನು ಬರೆಯಿರಿ

ಆಟೋಮ್ಯಾಟಿಕ್‌ ಆವೃತ್ತಿಯು ಮ್ಯಾನುಯಲ್‌ಗಿಂತ 60,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ ಮತ್ತು ಆಂಬಿಷನ್ ಆವೃತ್ತಿಯಿಂದ ಕೆಲವು ವೈಶಿಷ್ಟ್ಯಗಳನ್ನು ಪಡೆಯುತ್ತದೆ

Skoda Kushaq Automatic Onyx Variant Launched

  • ಆಟೋಮ್ಯಾಟಿಕ್‌ ಓನಿಕ್ಸ್ ಆವೃತ್ತಿಯು 6-ಸ್ಪೀಡ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನೊಂದಿಗೆ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ.

  • ಇದು ಬಿ-ಪಿಲ್ಲರ್‌ಗಳಲ್ಲಿ "ಓನಿಕ್ಸ್" ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ ಮತ್ತು ಕ್ಯಾಬಿನ್ "ಓನಿಕ್ಸ್" ಎಂದು ಬರೆದ ಸ್ಕಫ್ ಪ್ಲೇಟ್‌ಗಳನ್ನು ಮತ್ತು ಓನಿಕ್ಸ್ ಬ್ರಾಂಡ್ ಕುಶನ್‌ಗಳನ್ನು ಪಡೆಯುತ್ತದೆ.

  • ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಪ್ಯಾಡಲ್ ಶಿಫ್ಟರ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಹಿಂಭಾಗದ ವೈಪರ್ ಮತ್ತು ಡಿಫಾಗರ್ ಸೇರಿವೆ.

  • ಓನಿಕ್ಸ್ ಆವೃತ್ತಿಯ ಬೆಲೆ 2.89 ಲಕ್ಷ ರೂ.ನಿಂದ 13.49 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ) ಇದೆ. 

ಸ್ಕೋಡಾ ಕುಶಾಕ್ ಕಳೆದ ವರ್ಷ ಓನಿಕ್ಸ್ ಆವೃತ್ತಿಯನ್ನು ಪಡೆದುಕೊಂಡಿತು, ಇದು ಕೆಲವು ಡಿಕಾಲ್‌ಗಳು, ಬ್ಯಾಡ್ಜಿಂಗ್ ಮತ್ತು ಟಾಪ್‌ ವೇರಿಯೆಂಟ್‌ನ ವೈಶಿಷ್ಟ್ಯಗಳೊಂದಿಗೆ ಬಂದಿತು. ಈ ಮೊದಲು, ಈ ವಿಶೇಷ ಆವೃತ್ತಿಯು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿತ್ತು, ಆದರೆ ಈಗ ಕಾರು ತಯಾರಕರು ಆಟೋಮ್ಯಾಟಿಕ್‌ ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಿದ್ದಾರೆ. ಈ ಹೊಸ ಆವೃತ್ತಿ ಏನೆಲ್ಲಾ ನೀಡುತ್ತದೆ ಎಂಬುವುದನ್ನು ಪಟ್ಟಿ ಮಾಡಲಾಗಿದೆ. 

ಓನಿಕ್ಸ್ ಎಡಿಷನ್‌ನ ಬೆಲೆ

ಟ್ರಾನ್ಸ್‌ಮಿಷನ್‌

ಎಕ್ಸ್‌ಶೋರೂಮ್‌ ಬೆಲೆ

ಮ್ಯಾನುಯಲ್‌

12.89 ಲಕ್ಷ ರೂ. 

ಆಟೋಮ್ಯಾಟಿಕ್‌

13.49  ಲಕ್ಷ ರೂ. 

ವ್ಯತ್ಯಾಸ

60,000 ರೂ.

ಓನಿಕ್ಸ್ ಎಡಿಷನ್‌ ಅನ್ನು ಕುಶಾಕ್‌ನ ಬೇಸ್-ಸ್ಪೆಕ್ ಆಕ್ಟಿವ್ ಮತ್ತು ಮಿಡ್-ಸ್ಪೆಕ್ ಆಂಬಿಷನ್  ನಡುವೆ ಇರಿಸಲಾಗಿದೆ ಮತ್ತು ಇದರ ಬೆಲೆ 12.89 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. 60,000 ರೂ ಹೆಚ್ಚುವರಿ ಬೆಲೆಯನ್ನು ಹೊಂದಿರುವ ಹೊಸ ಆಟೋಮ್ಯಾಟಿಕ್‌ ಆವೃತ್ತಿಯು ಆಂಬಿಷನ್ ಆವೃತ್ತಿಯಿಂದ ಕೆಲವು ವೈಶಿಷ್ಟ್ಯಗಳನ್ನು ಕಾಸ್ಮೆಟಿಕ್ ಆಪ್‌ಡೇಟ್‌ಗಳೊಂದಿಗೆ ಪಡೆಯುತ್ತದೆ.

ಏನಿದೆ ಹೊಸತು ?

Skoda Kushaq Onyx Badging

ಹೊರಭಾಗದಲ್ಲಿ, ಓನಿಕ್ಸ್ ಆಟೋಮ್ಯಾಟಿಕ್‌ ಆವೃತ್ತಿಯು ಬಿ-ಪಿಲ್ಲರ್‌ಗಳಲ್ಲಿ "ಓನಿಕ್ಸ್" ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ. ಈ ಹಿಂದೆ ಮ್ಯಾನುಯಲ್‌ ಆವೃತ್ತಿಯನ್ನು ಬಿಡುಗಡೆ ಮಾಡಿದಾಗ, ಬಾಗಿಲುಗಳ ಮೇಲೆ ಡಿಕಾಲ್‌ಗಳೊಂದಿಗೆ ಬಂದಿತು, ಅದನ್ನು ಈಗ ವಿಶೇಷ ಆವೃತ್ತಿಯಿಂದ ಕೈಬಿಡಲಾಗಿದೆ ಎಂದು ತೋರುತ್ತದೆ. ಈ ವಿಶೇಷ ಆವೃತ್ತಿಯು ಕವರ್‌ಗಳೊಂದಿಗೆ 16-ಇಂಚಿನ ಉಕ್ಕಿನ ಚಕ್ರಗಳೊಂದಿಗೆ ಬರುತ್ತದೆ.

ಒಳಗೆ, ಇದು ಸ್ಕಫ್ ಪ್ಲೇಟ್‌ಗಳಲ್ಲಿ "ಓನಿಕ್ಸ್" ಬ್ರ್ಯಾಂಡಿಂಗ್ ಅನ್ನು ಪಡೆಯುತ್ತದೆ ಮತ್ತು ಗ್ರಾಹಕರು ಓನಿಕ್ಸ್ ಲೇಬಲ್‌ ಮತ್ತು ಓನಿಕ್ಸ್-ಥೀಮಿನ ಕುಶನ್‌ಗಳೊಂದಿಗೆ ಸ್ಟ್ಯಾಂಡರ್ಡ್‌ ಆಗಿ ಪ್ರೀಮಿಯಂ ಮ್ಯಾಟ್‌ಗಳನ್ನು ಪಡೆಯುತ್ತಾರೆ.

Skoda Kushaq Automatic AC

ಹೊಸ ಫೀಚರ್‌ಗಳ ವಿಷಯದಲ್ಲಿ, ಎಸ್‌ಯುವಿಯ ವಿಶೇಷ ಆವೃತ್ತಿಯು ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು,  ಮುಂಭಾಗದ ಮೂಲೆಯಲ್ಲಿ ಫಾಗ್ ಲ್ಯಾಂಪ್‌ಗಳು, ಹಿಂಭಾಗದ ವೈಪರ್ ಮತ್ತು ಡಿಫಾಗರ್, 6 ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, 2-ಸ್ಪೋಕ್ ಲೆದರ್‌ನಿಂದ ಸುತ್ತಿದ ಸ್ಟೀರಿಂಗ್ ವೀಲ್, ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು (ಆಟೋಮ್ಯಾಟಿಕ್‌ನಲ್ಲಿ ಮಾತ್ರ) ಪಡೆಯುತ್ತದೆ. 

 ಇದನ್ನೂ ಓದಿ: ಮತ್ತೊಮ್ಮೆ Jeep Meridian X ಬಿಡುಗಡೆ, ಬೆಲೆಗಳು 34.27 ಲಕ್ಷ ರೂ.ನಿಂದ ಪ್ರಾರಂಭ

ಉಳಿದ ವೈಶಿಷ್ಟ್ಯಗಳಲ್ಲಿ ಎತ್ತರ ಹೊಂದಾಣಿಕೆಯ ಡ್ರೈವರ್ ಸೀಟ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈಯರ್ಡ್‌ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 6-ಸ್ಪೀಕರ್ ಸೌಂಡ್ ಸಿಸ್ಟಮ್, ಇಬಿಡಿಯೊಂದಿಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಸೇರಿವೆ.

ಪವರ್‌ಟ್ರೇನ್‌

Skoda Kushaq Onyx Automatic Transmission

ಎಂಜಿನ್‌

1-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

115 ಪಿಎಸ್‌

ಟಾರ್ಕ್‌

178 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

ಹೊಸ ಆಟೋಮ್ಯಾಟಿಕ್‌ ಒನಿಕ್ಷ್‌ ಆವೃತ್ತಿಯು ಅದೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಅನ್ನು ಪಡೆಯುತ್ತದೆ. ಕುಶಾಕ್ 150 PS 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಸಹ ಲಭ್ಯವಿದೆ, ಇದು ಅದೇ 6-ಸ್ಪೀಡ್ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಆದರೆ 6-ಸ್ಪೀಡ್ ಆಟೋಮ್ಯಾಟಿಕ್‌ ಬದಲಿಗೆ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಅನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು

Skoda Kushaq Onyx Edition

ಓನಿಕ್ಸ್ ಆವೃತ್ತಿಯು ವಿಭಾಗದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ ಮತ್ತು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು ಎಂಜಿ ಆಸ್ಟರ್‌ ನಂತಹ ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳ ಲೊವರ್‌-ಸ್ಪೆಕ್ ಆವೃತ್ತಿಗಳಿಗೆ ಪರ್ಯಾಯವಾಗಿ ಪರಿಗಣಿಸಬಹುದು.

ಇನ್ನಷ್ಟು ಓದಿ: ಸ್ಕೋಡಾ ಕುಶಾಕ್ ಆಟೋಮ್ಯಾಟಿಕ್  

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಸ್ಕೋಡಾ ಸ್ಕೋಡಾ ಕುಶಾಕ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience