ಮಾರುತಿ ಜಿಮ್ನಿಗೆ ಬೆಲೆ ಹೇಗೆ ನೀಡಬೇಕೆನ್ನುವುದು ಇಲ್ಲಿದೆ...
ಮಾರುತಿ ಜಿಮ್ನಿ ಗಾಗಿ sonny ಮೂಲಕ ಜನವರಿ 30, 2023 11:20 am ರಂದು ಪ್ರಕಟಿಸಲಾಗಿದೆ
- 47 Views
- ಕಾಮೆಂಟ್ ಅನ್ನು ಬರೆಯಿರಿ
ಅನುಮಾನವೇ ಬೇಡ, ಜಿಮ್ನಿ ಈ ವರ್ಷದ ಅತ್ಯಂತ ನಿರೀಕ್ಷಿತ ಎಸ್‌ಯುವಿಗಳಲ್ಲಿ ಒಂದಾಗಿದೆ, ಆದರೆ ಮಹೀಂದ್ರ ಥಾರ್‌ನ ಯಶಸ್ಸಿನ ಎತ್ತರ ಸಾಧಿಸಬಹುದೇ?
ಹಲವು ವರ್ಷಗಳ ಕಾಲ ಕಾದ ಬಳಿಕ ಕೊನೆಗೂ ಮಾರುತಿ ಸಂಸ್ಥೆ 'ಜಿಮ್ನಿ'ಯನ್ನು ಆಟೋ ಎಕ್ಸ್‌ಪೋ 2023ನಲ್ಲಿ ಭಾರತಕ್ಕೆ ಪರಿಚಯಿಸಿದೆ. ಅಷ್ಟೇ ಅಲ್ಲ, ವಿಭಿನ್ನ ವೇರಿಯಂಟ್, ವಾಹನ ವಿವರವನ್ನು ಬಿಡುಗಡೆ ಮಾಡಿದೆ. ಅದೇ ದಿನವೇ ಬುಕಿಂಗ್ ಪ್ರಕ್ರಿಯೆಯನ್ನೂ ಆರಂಭಿಸಿದೆ. ಇದೀಗ 'ಜಿಮ್ನಿ'ಯ ಬೆಲೆ ಎಷ್ಟು ಎನ್ನುವುದನ್ನು ಹೇಳುವ ಮೂಲಕ ಯಶಸ್ಸನ್ನು ವ್ಯಾಖ್ಯಾನಿಸಲಿದೆ.
ಏನಿದೆ ಆಫರ್?
ಐದು ಡೋರ್ ಹೊಂದಿರುವ 'ಜಿಮ್ನಿ'ಯ 4WD ಗುಣಮಟ್ಟದ ಎರಡು ವೇರಿಯಂಟ್‌ಗಳನ್ನು ಪರಿಚಯಿಸಲಾಗುತ್ತಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, 6 ಏರ್ ಬ್ಯಾಗ್, ರೇರ್ ವ್ಯೂವ್ ಕ್ಯಾಮರಾ, ಬ್ರೇಕ್ ಲಿಮಿಟೆಡ್ ಸ್ಲಿಪ್ ಢಿಫರೆನ್ಷಿಯಲ್, ಮುಂಭಾಗ / ಹಿಂಭಾಗದಲ್ಲಿ ಗುಣಮಟ್ಟದ ವೈಪರ್, ಎಲೆಕ್ಟ್ರಿಕಲ್ ಅಡ್ಜೆಸ್ಟೆಬಲ್ ORVMs ಜೊತೆಗೆ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನೀಡುತ್ತಿದೆ. ದೊಡ್ಡದಾದ ಅಲ್ಫಾ ಟ್ರಿಮ್ ಟಚ್ ಸ್ಕ್ರೀನ್, ಆಟೋ ಎಲ್‌ಇಡಿ ಹೆಡ್ ಲ್ಯಾಂಪ್, ಆಟೋ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಅಲಾಯ್ ವ್ಹೀಲ್ ಹೊಂದಿರಲಿದೆ.
ಇದನ್ನೂ ಓದಿ: ಫೋರ್ಸ್ ಗೂರ್ಖಾ ಮುಂದೆ ಮಾರುತಿ ಜಿಮ್ನಿ ಹೇಗೆ ಕಾಣುತ್ತದೆ
ಎಂಜಿನ್ ವಿಶೇಷ ಏನು?
5ಸ್ಪೀಡ್ ಮ್ಯಾನುವಲ್ ಮತ್ತು 4ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ 1.5 ಲೀಟರ್ ಪೆಟ್ರೋಲ್ ಸಾಮರ್ಥ್ಯದ ಎಂಜಿನ್ ಹೊಂದಿದೆ. ಅಲ್ಲದೆ, 105ಪಿಎಸ್ ಮತ್ತು 134ಎನ್ ಎಂ ದಹನ ಸಾಮರ್ಥ್ಯದ ಜೊತೆ ಐಡಲ್ ಸ್ಟಾರ್ಟ್-ಸ್ಟಾಪ್ ಇಂಧನ ಉಳಿತಾಯ ತಂತ್ರಜ್ಞಾನ ಅಳವಡಿಸಲಾಗಿದೆ.
ಸ್ಪರ್ಧೆಯಲ್ಲಿ ಸ್ಥಾನ ಯಾವುದು?
ಐದು ಡೋರ್‌ನ ಜಿಮ್ನಿಗೆ ಮೂರು ಡೋರ್‌ನ ಮಹೀಂದ್ರ ಥಾರ್ ದೊಡ್ಡ ಪ್ರತಿಸ್ಪರ್ಧಿಯಾಗಿದೆ. ಸಾಮಾನ್ಯ ಜೀವನಶೈಲಿ ಹೊಂದಿರುವವರೂ ಕೊಂಡುಕೊಳ್ಳಬಹುದಾದ ಮೊದಲ ಆಯ್ಕೆಯ ಎಸ್‌ಯುವಿ(SUV) ಇದಾಗಿದೆ. ಥಾರ್ ವಾಹನದಂತೆಯೇ ರೇರ್ ವ್ಹೀಲ್ ಡ್ರೈವ್ ವಿಶೇಷ ಗುಣಮಟ್ಟದ ಜಿಮ್ನಿಯ ಆರಂಭಿಕ ಬೆಲೆ ₹9.99 ಲಕ್ಷ ಇರಲಿದೆ. ಆದರೆ 4WD ತಂತ್ರಜ್ಞಾನ ಅಳವಡಿಕೆಯ ವೇರಿಯಂಟ್ ಬೆಲೆ ₹13.59 ಲಕ್ಷ(ದೆಹಲಿ ಎಕ್ಸ್ ಶೋ ರೂಂ) ದಿಂದ ಆರಂಭವಾಗಲಿದೆ. 4WD ತಂತ್ರಜ್ಞಾನ ಅಳವಡಿಕೆಯ ಥಾರ್ ಗಿಂತಲೂ ₹3.5 ಲಕ್ಷಕ್ಕಿಂತ ಕಡಿಮೆ ಅಂತರದ ಬೆಲೆಯಲ್ಲಿ ಗ್ರಾಹಕರಿಗೆ ನೀಡಲಿದೆ.
ಇದನ್ನೂ ಓದಿ: ಮಹೀಂದ್ರಾ ಥಾರ್‌ಗಿಂತ ಮಾರುತಿ ಜಿಮ್ನಿಯ ಟಾಪ್ 7 ಆಫರ್‌ಗಳು
ಹೀಗಿದ್ದೂ, ಲೈಫ್‌ಸ್ಟೈಲ್ ಸೆಗ್ಮೆಂಟ್ ನಿರೀಕ್ಷೆಗಿಂತ ಹೆಚ್ಚಿನದನ್ನೇ ಹೊಂದಿರಲಿದೆ. ಪ್ರಾಯೋಗಿಕವಾಗಿ ಥಾರ್ ವಾಹನದಲ್ಲಿಯೂ ನೋಡದೇ ಇರಬಹುದಾದ ಆಕರ್ಷಣೆ ಜಿಮ್ನಿಯಲ್ಲಿ ಸಿಗಲಿದೆ ಎನ್ನುವುದರಲ್ಲಿ ಯಾವ ಗೌಪ್ಯತೆ ಇಲ್ಲ. ಇನ್ನು, ಅಚ್ಚರಿ ಮೂಡಿಸುವ ಕಾರ್ಯಕ್ಷಮತೆ ಶ್ರೇಣಿಯ ಎಂಜಿನ್ ಗಳನ್ನು ಪೆಟ್ರೋಲ್ ಮತ್ತು ಡೀಸೆಲ್ ವೇರಿಯಂಟ್ ಹೊಂದಿದೆ. 150PS 2ಲೀಟರ್ ಟರ್ಬೋ ಪೆಟ್ರೋಲ್, 118PS 1.5ಲೀಟರ್ ಡೀಸೆಲ್ ಮತ್ತು 130PS 2.2ಲೀಟರ್ ಡೀಸೆಲ್ ಕಾರ್ಯಕ್ಷಮತೆಯಲ್ಲಿ ಲಭ್ಯವಿದೆ. ಥಾರ್‌ನಲ್ಲಿ ಅಳವಡಿಸಲಾದ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತು ದೊಡ್ಡ ಡೀಸೆಲ್ ಯೂನಿಟಿಗೆ ಹೋಲಿಸಿದರೆ ಜಿಮ್ನಿಯಲ್ಲಿ ಅಳವಡಿಸಲಾದ ಸಂಸ್ಕರಿತ ಪ್ರಾಚೀನ 4ಸ್ಪೀಡ್ ಎಟಿ ಹೆಚ್ಚು ಸಾಮರ್ಥ್ಯ, ಗುಣಮಟ್ಟದ್ದಾಗಿದೆ.
ಮಾರುತಿಗೆ ತಾನೇನು ಮಾಡುತ್ತಿದೆ ಎಂಬ ಅರಿವಿದೆ, ಅಲ್ವೇ?
ಕಾರು ಉತ್ಪಾದನೆಯಲ್ಲಿ ದೇಶದ ಅತ್ಯಂತ ದೊಡ್ಡ ಸಂಸ್ಥೆಯಾದ ಮಾರುತಿಗೆ ತನ್ನ ಉತ್ಪಾದನೆಯನ್ನು ಹೇಗೆ ಯಶಸ್ವಿ ಮಾಡಬೇಕೆನ್ನುವುದು ಗೊತ್ತಿದೆ. ಹೀಗೆಂದು ತಿಳಿದುಕೊಳ್ಳುವುದು ನ್ಯಾಯೋಚಿತ ಕೂಡ ಹೌದು. ಹಾಗಿದ್ದೂ ಪ್ರತಿಸ್ಪರ್ಧಿ ಉತ್ಪಾದಕರು ಭಾರತೀಯ ಆಟೋಮೋಟಿವ್ ಕ್ಷೇತ್ರ ಪ್ರವೇಶಿಸುವ ಮೊದಲು ಇಂತಹದ್ದೊಂದು ಇತಿಹಾಸವನ್ನು ಹೊಂದಿಲ್ಲ.
ಈಗಾಗಲೇ ಸಾಕಷ್ಟು ಸುಸಜ್ಜಿತ ಕಾಂಪ್ಯಾಕ್ಟ್ SUV ಹೊಸ ಗ್ರ್ಯಾಂಡ್ ವಿಟಾರಾ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಆದಾಗ್ಯೂ ಮಾರುಕಟ್ಟೆಯಲ್ಲಿ ಇದು ಗಟ್ಟಿಮುಟ್ಟಾದ ಹೈಬ್ರೀಡ್ ಪವರ್ ಟ್ರೇನ್ ಅಳವಡಿಕೆಯೊಂದಿಗೆ ಅತ್ಯಂತ ದುಬಾರಿ ಮಾದರಿಗಳಲ್ಲಿಯೇ ಹೇಗೆ ಒಂದಾಗಿದೆ ಎನ್ನುವುದು ಇಲ್ಲಿದೆ.
ಮಾರುತಿ ಗ್ರಾಂಡ್ ವಿಟಾರಾ |
ಹುಂಡೈ ಕ್ರೆಟಾ |
ಕಿಯಾ ಸೆಲ್ಟೋಸ್ |
ರೂ 10.45 ಲಕ್ಷದಿಂದ ರೂ 19.65 ಲಕ್ಷ |
ರೂ 10.64 ಲಕ್ಷದಿಂದ ರೂ 18.68 ಲಕ್ಷ |
ರೂ 10.69 ಲಕ್ಷದಿಂದ ರೂ 19.15 ಲಕ್ಷ |
ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋ ರೂಂ ಬೆಲೆಗಳಾಗಿವೆ.
ಮಾರುತಿ ಜಿಮ್ನಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲೇ ಮಾರುಕಟ್ಟೆ ಪ್ರವೇಶಿಸುವಂತೆ ಮಾಡಿದರೆ, ಬಹುಶಃ ಈಗಾಗಲೇ ನಿರ್ಧರಿಸದೇ ಇರುವ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗದೇ ಇರಬಹುದು.
ಮಾರುತಿ ಇದನ್ನು ತಪ್ಪಿಸುವುದು ಹೇಗೆ?
ಮಾರುತಿಯು ಜಿಮ್ನಿ ಮೇಲಿನ ಬಹು ನಿರೀಕ್ಷೆಯ ಲಾಭ ಪಡೆಯಬೇಕೆಂದರೆ, ಮಹೀಂದ್ರಾಗೆ ಸರಿಸಾಟಿಯಾಗಿ ನಿಲ್ಲಬೇಕಿದೆ. ಭಾರತದಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ SUV ಬೆಲೆ ಸಮರದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಕೈಗೆಟಕುವ ದರದಲ್ಲಿ ಮಾರುಕಟ್ಟೆ ಪ್ರವೇಶಿಸಬೇಕಿದೆ.
ಇದನ್ನು ಓದಿ: ವಾರದೊಳಗೆ ಮಾರುತಿ ಸ್ವೀಕರಿಸಿದೆ ಜಿಮ್ನಿಗಾಗಿ 5,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳು
ಉದಾಹರಣೆಗೆ 2020ರಲ್ಲಿ 4WD ಮಹೀಂದ್ರ ಥಾರ್ ₹9.8 ಲಕ್ಷ ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ತಂದು ಬಳಿಕ ವಿವಿಧ ವೇರಿಯಂಟ್ ಪರಿಚಯಿಸಿ ಬೆಲೆಯನ್ನೂ ಹೆಚ್ಚಿಸಿತು.
ನಿರೀಕ್ಷಿತ ಬೆಲೆ
ಮಾತುತಿ ಜಿಮ್ನಿಯು ಮಹೀಂದ್ರಾ ಥಾರ್ ಮಾದರಿಯಲ್ಲಿ ಬಗೆ ಬಗೆಯ ವೇರಿಯಂಟ್ ಹೊಂದಿಲ್ಲದೇ ಇರುವ ಕಾರಣ, ಆರಂಭಿಕ 15,000 ಯೂನಿಟ್‌ಗಳನ್ನು ಅಚ್ಚರಿಯ ಬೆಲೆಗೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮಾರುಕಟ್ಟೆಯಲ್ಲಿ ಆಕರ್ಷಣೆಗಾಗಿ ಈ ಕೆಳಗಿನಂತೆ ಬೆಲೆ ಇರಬಹುದೆಂದು ಊಹಿಸುತ್ತಿದ್ದೇವೆ.
ವೇರಿಯಂಟ್ |
ಪೆಟ್ರೋಲ್ -MT |
ಪೆಟ್ರೋಲ್ –AT |
ಜಿಟಾ |
ರೂ 10 ಲಕ್ಷ |
ರೂ 11.2 ಲಕ್ಷ |
ಅಲ್ಫಾ |
ರೂ 11.5 ಲಕ್ಷ |
ರೂ 12.7 ಲಕ್ಷ |
(ಎಕ್ಸ್ ಶೋ ರೂಂ)
₹10 ಲಕ್ಷ ಇದ್ದಲ್ಲಿ, ಇದು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಯ, ಕೈಗೆಟಕುವ ಬೆಲೆಯ 4WD ಆಗಿರಲಿದೆ. ಇದೇ ವೇಳೆ ಸರಿಸಾಟಿಯಾಗಿ ನಿಲ್ಲುವ ಕಾಂಟ್ಯಾಕ್ಟ್ SUV ಬ್ರೆಝಾಗಿಂತ ಒಂದೆರಡು ಲಕ್ಷ ರೂ. ಜಾಸ್ತಿಯಾಗಿರಲಿದೆ. ಹೀಗಾಗಿ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ಮತ್ತು ನಿಸ್ಸಾನ್ ಮ್ಯಾಗ್ನೇಟ್‌ನಂತಹ ಕಾಂಪ್ಯಾಕ್ಟ್ SUV ವಾಹನಗಳತ್ತ ಮುಖ ಮಾಡುವ ಖರೀದಿದಾರರ ಆಯ್ಕೆಯಾಗುವ, ಆಕರ್ಷಿಸುವ ಸಾಧ್ಯತೆ ಹೆಚ್ಚಿದೆ. 4WD ಎನ್ನುವುದು ಆಕರ್ಷಣೆಗೆ ಮತ್ತೊಂದು ಕಾರಣ ಆಗಬಹುದು.