2023ರ ಮಾರ್ಚ್ ನಲ್ಲಿ ಅತಿ ಹೆಚ್ಚು ಮಾರಾಟವಾದ 15 ಕಾರುಗಳು ಯಾವ್ಯಾವುವು ಗೊತ್ತಾ?
ಟಾಟಾ ನೆಕ್ಸಾನ್ 2020-2023 ಗಾಗಿ ansh ಮೂಲಕ ಏಪ್ರಿಲ್ 13, 2023 05:24 pm ರಂದು ಪ್ರಕಟಿಸಲಾಗಿದೆ
- 15 Views
- ಕಾಮೆಂಟ್ ಅನ್ನು ಬರೆಯಿರಿ
ಪಟ್ಟಿಯಲ್ಲಿರುವ ಎಲ್ಲಾ ಕಾರುಗಳಲ್ಲಿ ಅರುವತ್ತು ಪ್ರತಿಶತದಷ್ಟು ಮಾರುತಿಯ ಬ್ರ್ಯಾಂಡ್‌ಗಳಾಗಿವೆ.
ಮಾರುತಿ ಯಾವಾಗಲೂ ಮಾರಾಟದ ವಿಷಯದಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು ಇದು ಮಾರ್ಚ್ 2023 ರಲ್ಲೂ ಪುನಃ ಸಾಬೀತಾಗಿದೆ. ಮಾರ್ಚ್‌ನಲ್ಲಿ ಅತಿ ಹೆಚ್ಚು ಮಾರಾಟವಾದ 15 ಕಾರುಗಳಲ್ಲಿ ಒಂಬತ್ತು ಮಾಡೆಲ್‌ಗಳು ಮಾರುತಿಯದ್ದೇ ಆಗಿದ್ದು, ಟಾಟಾ ಮತ್ತು ಹ್ಯುಂಡೈ ನಂತಹ ಬ್ರ್ಯಾಂಡ್‌ಗಳ ಮಾಡೆಲ್‌ಗಳಿಗೆ ಸಣ್ಣ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಈ ಪಟ್ಟಿಯಲ್ಲಿರುವ ಕೆಲವು ಮಾಡೆಲ್‌ಗಳು ವರ್ಷದಿಂದ ವರ್ಷಕ್ಕೆ (YoY) ಮಾರಾಟದಲ್ಲಿ ನಷ್ಟವನ್ನು ಎದುರಿಸುತ್ತಿದ್ದರೂ, ಅವುಗಳಲ್ಲಿ ಹೆಚ್ಚಿನವು ಬೆಳವಣಿಗೆಯನ್ನು ಕಂಡಿವೆ.
ಇದನ್ನೂ ಓದಿ: ಮಾರ್ಚ್ 2023 ರಲ್ಲಿ ಹೆಚ್ಚು ಜನಪ್ರಿಯವಾದ 10 ಕಾರ್ ಬ್ರ್ಯಾಂಡ್‌ಗಳು
ಮಾರ್ಚ್ 2023 ರಲ್ಲಿ ಅತಿ ಹೆಚ್ಚು ಮಾರಾಟವಾದ ಈ 15 ಕಾರುಗಳು ಹೇಗೆ ಕಾರ್ಯನಿರ್ವಹಿಸಿದವು ಎಂಬುದನ್ನು ನೋಡೋಣ:
ಮಾಡೆಲ್‌ಗಳು |
ಮಾರ್ಚ್ 2023 |
ಮಾರ್ಚ್ 2022 |
ಫೆಬ್ರವರಿ 2023 |
ಮಾರುತಿ ಸ್ವಿಫ್ಟ್ |
17,559 |
13,623 |
18,412 |
ಮಾರುತಿ ವ್ಯಾಗನ್ ಆರ್ |
17,305 |
24,634 |
16,889 |
ಮಾರುತಿ ಬ್ರೆಝಾ |
16,227 |
12,439 |
15,787 |
ಮಾರುತಿ ಬಲೆನೊ |
16,168 |
14,520 |
18,592 |
ಟಾಟಾ ನೆಕ್ಸಾನ್ |
14,769 |
14,315 |
13,914 |
ಹ್ಯುಂಡೈ ಕ್ರೆಟಾ |
14,026 |
10,532 |
10,421 |
ಮಾರುತಿ ಡಿಸೈರ್ |
13,394 |
18,623 |
16,798 |
ಮಾರುತಿ ಇಕೊ |
11,995 |
9,221 |
11,352 |
ಟಾಟಾ ಪಂಚ್ |
10,894 |
10,526 |
11,169 |
ಮಾರುತಿ ಗ್ರ್ಯಾಂಡ್ ವಿಟಾರಾ |
10,045 |
- |
9,183 |
ಹ್ಯುಂಡೈ ವೆನ್ಯು |
10,024 |
9,220 |
9,997 |
ಮಹೀಂದ್ರಾ ಬೊಲೇರೊ |
9,546 |
6,924 |
9,782 |
ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ |
9,304 |
9,687 |
9,635 |
ಮಾರುತಿ ಆಲ್ಟೊ |
9,139 |
7,621 |
18,114 |
ಮಾರುತಿ ಎರ್ಟಿಗಾ |
9,028 |
7,888 |
6,472 |
ಪ್ರಮುಖಾಂಶಗಳು
-
17,500 ಕ್ಕೂ ಹೆಚ್ಚು ಯೂನಿಟ್‌ಗಳು ಮಾರಾಟವಾಗುವುದರೊಂದಿಗೆ, ಮಾರುತಿ ಸ್ವಿಫ್ಟ್ ಬಲೆನೊವನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ತಲುಪಿತು. ಮಾರ್ಚ್ 2022 ಕ್ಕೆ ಹೋಲಿಸಿದರೆ, ಅದರ ಮಾರಾಟವು ಶೇಕಡಾ 29 ರಷ್ಟು ಹೆಚ್ಚಾಗಿದೆ.
-
ವ್ಯಾಗನ್ ಆರ್ ಮಾರ್ಚ್ 2023 ರಲ್ಲಿ 17,300 ಯೂನಿಟ್‌ಗಳ ಮಾರಾಟದೊಂದಿಗೆ ಸ್ವಿಫ್ಟ್ ಅನ್ನು ನಿಕಟವಾಗಿ ಅನುಸರಿಸಿದೆ. ಅಂದರೆ ಅದರ ಮಾರಾಟವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 30 ರಷ್ಟು ನಷ್ಟವನ್ನು ಕಂಡಿದೆ.
-
ವ್ಯಾಗನ್ ಆರ್ ನಂತರ ಬ್ರೆಝಾ ಮತ್ತು ಬಲೆನೊ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿದ್ದು16,000 ರಿಂದ 16,300 ಯೂನಿಟ್‌ಗಳ ರೇಂಜ್‌ನಲ್ಲಿ ಮಾರಾಟವನ್ನು ಕಂಡಿವೆ. ಫೆಬ್ರವರಿ 2023 ಕ್ಕೆ ಹೋಲಿಸಿದರೆ, ಬ್ರೆಝಾ ಮೂರು ಸ್ಥಾನಗಳನ್ನು ಏರಿದರೆ, ಮತ್ತೊಂದೆಡೆ ಬಲೆನೊ ಅಗ್ರ ಸ್ಥಾನವನ್ನು ಕಳೆದುಕೊಂಡಿತು.
-
ಟಾಟಾ ನೆಕ್ಸಾನ್ ಮಾರ್ಚ್ 2023 ರಲ್ಲಿ 14,700 ಯೂನಿಟ್ ಮಾರಾಟದೊಂದಿಗೆ ಐದನೇ ಸ್ಥಾನವನ್ನು ಪಡೆದುಕೊಂಡರೆ, ಫೆಬ್ರವರಿ 2023 ರಲ್ಲಿ ಏಳನೇ ಸ್ಥಾನದಿಂದ ಏರಿಕೆಯನ್ನು ಕಂಡಿತು. ಈ ಮಾರಾಟದ ಅಂಕಿಅಂಶಗಳು ನೆಕ್ಸಾನ್ ಇವಿ ಪ್ರೈಮ್ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ಸಂಖ್ಯೆಗಳನ್ನು ಒಳಗೊಂಡಿದೆ.
-
14,000-ಯೂನಿಟ್ ಮಾರಾಟದ ಗಡಿ ದಾಟಿದ ಮತ್ತೊಂದು ಕಾರು ಹ್ಯುಂಡೈ ಕ್ರೆಟಾ, ಇದು ವರ್ಷದಿಂದ ವರ್ಷಕ್ಕೆ (YoY) 33 ಪ್ರತಿಶತದಷ್ಟು ಬೆಳೆವಣಿಗೆಯನ್ನು ಕಂಡಿದೆ.
- ಮಾರುತಿ ಡಿಸೈರ್ ಮಾರ್ಚ್ 2023 ರಲ್ಲಿ 13,400 ಕ್ಕಿಂತ ಕಡಿಮೆ ಯೂನಿಟ್ ಮಾರಾಟವಾಗುವುದರೊಂದಿಗೆ ತಿಂಗಳಿನಿಂದ ತಿಂಗಳ (MoM) ಮತ್ತು ವರ್ಷದಿಂದ ವರ್ಷದ (YoY) ಮಾರಾಟದಲ್ಲಿ ನಷ್ಟವನ್ನು ಕಂಡಿದೆ.
- ಮಾರುತಿ ಇಕೊ ಫೆಬ್ರವರಿ 2023 ರಲ್ಲಿರುವ ರೇಂಜ್‌ನಲ್ಲಿಯೇ ಇದೆ, ಆದರೆ ಅದರ ವರ್ಷದಿಂದ ವರ್ಷದ (YoY) ಮಾರಾಟದಲ್ಲಿ ಶೇಕಡಾ 30 ರಷ್ಟು ಬೆಳವಣಿಗಯನ್ನು ಕಂಡಿದೆ.
- ಟಾಟಾ ಪಂಚ್ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಮಾರುತಿಯ ಗ್ರ್ಯಾಂಡ್ ವಿಟಾರಾ ಮಾರ್ಚ್ 2023 ಕ್ರಮವಾಗಿ 10,894 ಮತ್ತು 10,045 ಯೂನಿಟ್‌ಗಳ ಮಾರಾಟದೊಂದಿಗೆ ಹತ್ತನೇ ಸ್ಥಾನದಲ್ಲಿದೆ.
-
ಹ್ಯುಂಡೈ ವೆನ್ಯು ಮಾರ್ಚ್ 2023 ರಲ್ಲಿ 10,000 ಯೂನಿಟ್‌ಗಳ ಮಾರಾಟದ ಗಡಿಯನ್ನು ದಾಟಿದ ಕೊನೆಯ ಮಾಡೆಲ್ ಆಗಿದೆ.
-
ಮಹೀಂದ್ರಾ ದಿಂದ ಟಾಪ್ 15 ಪಟ್ಟಿಗೆ ಪ್ರವೇಶಿಸಿದ ಏಕೈಕ ಮಾಡೆಲ್ ಎಂದರೆ ಬೊಲೆನೊ 9,500 ಯೂನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ.
-
ತನ್ನ MoM ಮತ್ತು YoY ಅಂಕಿಅಂಶಗಳಿಗೆ ಹೋಲಿಸಿದರೆ ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್’ ನ ಮಾರಾಟವು 9,000 ಯೂನಿಟ್‌ಗಳ ಬಾಲ್‌ಪಾರ್ಕ್‌ನಲ್ಲಿ ಸ್ಥಿರವಾಗಿದೆ.
-
ಕೊನೆಯ ಎರಡು ಶ್ರೇಯಾಂಕಗಳನ್ನು ಮಾರುತಿಯ ಕಾರುಗಳು ತೆಗೆದುಕೊಂಡಿದ್ದು ಅವುಗಳು, ಆಲ್ಟೊ ಮತ್ತು ಎರ್ಟಿಗಾ. ಎರ್ಟಿಗಾ ಹಿಂದಿನ ತಿಂಗಳಿಗೆ ಹೋಲಿಸಿದರೆ ಬೆಳವಣಿಗೆಯನ್ನು ಕಂಡರೆ ಆಲ್ಟೊದ ಮಾರಾಟವು 50 ಪ್ರತಿಶತದಷ್ಟು ಕುಸಿದು ಅದನ್ನು 14ನೇ ಸ್ಥಾನಕ್ಕೆ ಇಳಿಸಿತು.
ಇದನ್ನೂ ಓದಿ: Q2 2023 ರಲ್ಲಿ ಪಾದಾರ್ಪಣೆ ಮಾಡುತ್ತದೆಂದು ನಿರೀಕ್ಷಿಸಲಾದ ಟಾಪ್ 10 ಕಾರುಗಳು
ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ನೆಕ್ಸಾನ್ AMT
0 out of 0 found this helpful