Login or Register ಅತ್ಯುತ್ತಮ CarDekho experience ಗೆ
Login

Citroen Basalt ಡಾರ್ಕ್ ಎಡಿಷನ್‌ನ ಟೀಸರ್‌ ಮತ್ತೊಮ್ಮೆ ಔಟ್‌, C3 ಮತ್ತು ಏರ್‌ಕ್ರಾಸ್ ಸ್ಪೆಷಲ್‌ ಎಡಿಷನ್‌ಅನ್ನು ಪಡೆಯುವುದು ಫಿಕ್ಸ್‌..!

ಏಪ್ರಿಲ್ 02, 2025 07:59 pm ರಂದು kartik ಮೂಲಕ ಪ್ರಕಟಿಸಲಾಗಿದೆ

ಮೂರು ಮೊಡೆಲ್‌ಗಳ ಡಾರ್ಕ್ ಎಡಿಷನ್‌ಗಳು ಎಕ್ಸ್‌ಟೀರಿಯರ್‌ ಕಲರ್‌ಗೆ ಪೂರಕವಾಗಿ ಸಂಪೂರ್ಣ ಕಪ್ಪು ಬಣ್ಣದ ಇಂಟೀರಿಯರ್‌ ಥೀಮ್ ಅನ್ನು ನೀಡುವ ನಿರೀಕ್ಷೆಯಿದೆ

  • ಸಿಟ್ರೊಯೆನ್ ಬಸಾಲ್ಟ್, ಸಿ3 ಮತ್ತು ಏರ್‌ಕ್ರಾಸ್ ಕಾರು ತಯಾರಕರಿಂದ ಡಾರ್ಕ್ ಎಡಿಷನ್‌ಗಳನ್ನು ಪಡೆಯುವ ಮೊದಲ ಮೊಡೆಲ್‌ಗಳಾಗಿವೆ.

  • ಟೀಸರ್ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು ಮತ್ತು C3 ನ ಗ್ರಿಲ್ ಅನ್ನು ಪ್ರದರ್ಶಿಸಿತು.

  • ಈ ಬಾರಿ ಇಂಟೀರಿಯರ್‌ ಗೋಚರಿಸಿತು, ಇದು ಡ್ಯಾಶ್‌ಬೋರ್ಡ್ ಮತ್ತು ಸೀಟುಗಳಿಗೆ ಹೊಸ ವಿನ್ಯಾಸವನ್ನು ಪ್ರದರ್ಶಿಸಿತು.

  • ಮೂರು ಕಾರುಗಳಿಗೂ ಪವರ್‌ಟ್ರೇನ್ ಆಯ್ಕೆಗಳು ಬದಲಾಗದೆ ಉಳಿಯುವ ಸಾಧ್ಯತೆಯಿದೆ.

  • ಎಲ್ಲಾ ಮೂರು ಎಡಿಷನ್‌ಗಳು ಅವುಗಳ ಅನುಗುಣವಾದ ವೇರಿಯೆಂಟ್‌ಗಳಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರುತ್ತವೆ ಎಂದು ನಿರೀಕ್ಷಿಸಲಾಗಿದೆ.

ಸಿಟ್ರೊಯೆನ್ ಮತ್ತೊಮ್ಮೆ ಬಸಾಲ್ಟ್ ನ ಡಾರ್ಕ್ ಎಡಿಷನ್‌ನ ಟೀಸರ್‌ಅನ್ನು ಬಿಡುಗಡೆ ಮಾಡಿದೆ; ಹಾಗೆಯೇ, ಈ ಬಾರಿ ಅದು C3 ಹ್ಯಾಚ್‌ಬ್ಯಾಕ್ ಮತ್ತು ಏರ್‌ಕ್ರಾಸ್ ಎಸ್‌ಯುವಿಗೂ ಸಹ ಅದೇ ರೀತಿಯ ಟೀಸರ್‌ ಬಿಡುಗಡೆ ಮಾಡಿದೆ. ಸಿಟ್ರೊಯೆನ್ ಇಂಡಿಯಾದ ಸೋಶಿಯಲ್‌ ಮಿಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಲಾದ ಕಿರು ಕ್ಲಿಪ್, ಡಾರ್ಕ್ ಎಡಿಷನ್‌ಗೆ ನಿರ್ದಿಷ್ಟವಾದ ಹೊಸ ಸೇರ್ಪಡೆಗಳೊಂದಿಗೆ ಮೊಡೆಲ್‌ಗಳ ಹೊರಭಾಗ ಮತ್ತು ಒಳಭಾಗವನ್ನು ತೋರಿಸಿದೆ. ಮೂರು ಡಾರ್ಕ್ ಎಡಿಷನ್‌ಗಳು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಟೀಸರ್‌ಗಳಲ್ಲಿ ಏನನ್ನು ಕಾಣಬಹುದು ಎಂಬುದರ ಒಂದು ತ್ವರಿತ ಅವಲೋಕನ ಇಲ್ಲಿದೆ.

ಏನನ್ನು ಗಮನಿಸಬಹುದು ?

ಇತ್ತೀಚಿನ ಟೀಸರ್ ಹೊರಭಾಗವನ್ನು ಮಾತ್ರವಲ್ಲದೆ ಇಂಟೀರಿಯರ್‌ನ ಸಣ್ಣ ಭಾಗಗಳನ್ನು ಸಹ ಪ್ರದರ್ಶಿಸಿತು. ವೀಡಿಯೊದಲ್ಲಿ, ಸಿ3 ನ ಗ್ರಿಲ್ ಗೋಚರಿಸುತ್ತಿತ್ತು, ಜೊತೆಗೆ ಏರ್‌ಕ್ರಾಸ್‌ನ ಅಲಾಯ್ ವೀಲ್‌ ಡ್ಯುಯಲ್-ಟೋನ್ ಬಣ್ಣದಲ್ಲಿ ಫಿನಿಶ್‌ ಮಾಡಿದಂತೆ ಕಾಣುತ್ತಿದ್ದವು.

ವೀಡಿಯೊವು ಇಂಟೀರಿಯರ್‌ನ ತುಣುಕುಗಳನ್ನು ಸಹ ತೋರಿಸಿದೆ, ಅಲ್ಲಿ ಡ್ಯಾಶ್‌ಬೋರ್ಡ್ ಮತ್ತು ಸಂಪೂರ್ಣ ಕಪ್ಪಾದ ಸೀಟುಗಳ ಮೇಲೆ ಕೆಂಪು ಹೊಲಿಗೆಗಳು ಗೋಚರಿಸಿತು. ಈ ಸೀಟುಗಳು ಕೆಂಪು ಬಣ್ಣದಲ್ಲಿ 'ಸಿಟ್ರೊಯೆನ್' ಎಂಬಾಸಿಂಗ್ ಅನ್ನು ಸಹ ಹೊಂದಿವೆ, ಇದು ಎಲ್ಲಾ ಮೂರು ಕಾರುಗಳ ರೆಗ್ಯುಲರ್‌ ಎಡಿಷನ್‌ನಲ್ಲಿ ಇರುವುದಿಲ್ಲ.

ಇದನ್ನೂ ಸಹ ಓದಿ: Kushaq ಮತ್ತು Slaviaಗಳನ್ನು ಜೋಡಿಸಲು ವಿಯೆಟ್ನಾಂನಲ್ಲಿ ಹೊಸ ಪ್ಲಾಂಟ್‌ಅನ್ನು ತೆರೆದ ಸ್ಕೋಡಾ

ಫೀಚರ್‌ಗಳು ಮತ್ತು ಸುರಕ್ಷತೆ

ಫೀಚರ್‌ಗಳು ಮತ್ತು ಸುರಕ್ಷತಾ ಪಟ್ಟಿಯ ಬಗ್ಗೆ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಮೂರು ಕಾರುಗಳ ಡಾರ್ಕ್ ಆವೃತ್ತಿಗಳುಎಡಿಷನ್‌ಗಳ ಟಾಪ್‌-ಸ್ಪೆಕ್ ಟ್ರಿಮ್‌ಗಳನ್ನು ಆಧರಿಸಿರಬಹುದು ಎಂದು ನಿರೀಕ್ಷಿಸಬಹುದು.

ಬಸಾಲ್ಟ್, ಸಿ3 ಮತ್ತು ಏರ್‌ಕ್ರಾಸ್‌ನ ಸಾಮಾನ್ಯ ಫೀಚರ್‌ಗಳೆಂದರೆ 10.2-ಇಂಚಿನ ಟಚ್‌ಸ್ಕ್ರೀನ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ-ಎಸಿ, ಬಟನ್‌ನಲ್ಲಿ ಆಡ್ಜಸ್ಟ್‌ ಮಾಡಬಹುದಾದ ಒಆರ್‌ವಿಎಂಗಳು ಮತ್ತು ರಿಮೋಟ್ ಕೀಲೆಸ್ ಎಂಟ್ರಿಗಳಾಗಿವೆ.

ಮೂರು ಮೊಡೆಲ್‌ಗಳ ಸುರಕ್ಷತಾ ಸೂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ಸೆನ್ಸಾರ್‌ಗಳೊಂದಿಗೆ ಹಿಂಬದಿಯ ನೋಟ ಕ್ಯಾಮೆರಾ, EBD ಯೊಂದಿಗೆ ABS, ಟೈರ್ ಪ್ರೆಶರ್‌ ಮಾನಿಟರಿಂಗ್‌ ಸಿಸ್ಟಮ್‌ (TPMS) ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಸೇರಿವೆ.

ಪವರ್‌ಟ್ರೈನ್

ಮೂರು ಸಿಟ್ರೊಯೆನ್ ಕಾರುಗಳು ಒಂದೇ ರೀತಿಯ ಪವರ್‌ಟ್ರೇನ್ ಅನ್ನು ಹಂಚಿಕೊಳ್ಳುತ್ತವೆ, ಇವುಗಳ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ ಎನ್/ಎ ಎಂಜಿನ್

1.2-ಲೀಟರ್ ಟರ್ಬೋ-ಪೆಟ್ರೋಲ್

ಪವರ್‌

82 ಪಿಎಸ್‌

110 ಪಿಎಸ್‌

ಟಾರ್ಕ್‌

115 ಎನ್‌ಎಮ್‌

205 ಎನ್‌ಎಮ್‌ವರೆಗೆ

ಟ್ರಾನ್ಸ್‌ಮಿಷನ್‌

5-ಸ್ಪೀಡ್ ಮ್ಯಾನ್ಯುವಲ್‌

6-ಸ್ಪೀಡ್ ಮ್ಯಾನ್ಯುವಲ್‌/ 6-ಸ್ಪೀಡ್ AT*

*AT=ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌

ಕಾರು ತಯಾರಕರು ಇಲ್ಲಿಯವರೆಗೆ ಪವರ್‌ಟ್ರೇನ್‌ನ ಯಾವುದೇ ವಿವರಗಳನ್ನು ದೃಢಪಡಿಸಿಲ್ಲ; ಆದರೂ, ಡಾರ್ಕ್ ಎಡಿಷನ್‌, ಕಾಸ್ಮೆಟಿಕ್ ಅಪ್‌ಗ್ರೇಡ್ ಆಗಿರುವುದರಿಂದ, ಮೊಡೆಲ್‌ಗಳು ಈ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಳ್ಳಬಹುದು ಎಂದು ನಾವು ನಿರೀಕ್ಷಿಸುತ್ತೇವೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಡಾರ್ಕ್ ಎಡಿಷನ್‌ಗಳ ಬೆಲೆಯು ಅವು ಆಧರಿಸಿರುವ ಅನುಗುಣವಾದ ವೇರಿಯೆಂಟ್‌ಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬಸಾಲ್ಟ್ ನೇರವಾಗಿ ಟಾಟಾ ಕರ್ವ್‌ಗೆ ಪ್ರತಿಸ್ಪರ್ಧಿಯಾಗಿದ್ದರೆ, C3 ಮಾರುತಿ ವ್ಯಾಗನ್ ಆರ್ ಮತ್ತು ಟಾಟಾ ಟಿಯಾಗೊದಂತಹ ಹ್ಯಾಚ್‌ಬ್ಯಾಕ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಹಾಗೆಯೇ ಏರ್‌ಕ್ರಾಸ್ ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

Share via

Write your Comment on Citroen ಬಸಾಲ್ಟ್‌

explore similar ಕಾರುಗಳು

ಸಿಟ್ರೊನ್ ಸಿ3

4.3288 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್19.3 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಸಿಟ್ರೊನ್ ಏರ್‌ಕ್ರಾಸ್‌

4.4143 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್17.6 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌

ಸಿಟ್ರೊನ್ ಬಸಾಲ್ಟ್‌

4.430 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್19.5 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಫೇಸ್ ಲಿಫ್ಟ್
Rs.65.90 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.10 - 11.23 ಲಕ್ಷ*
ಹೊಸ ವೇರಿಯೆಂಟ್
Rs.18.99 - 32.41 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ