ಸಿಟ್ರೊಯೆನ್ ಬಸಾಲ್ಟ್ ಡ್ರೈವಿಂಗ್: ಇದರ ಸಾಧಕ-ಬಾಧಕಗಳು ಇಲ್ಲಿವೆ
ವಿಶಾಲವಾದ ಬೂಟ್ ಮತ್ತು ಆರಾಮದಾಯಕ ವಿಶ್ರಾಂತಿ ಸೀಟ್‌ಗಳು ಬಸಾಲ್ಟ್ ಅನ್ನು ಉತ್ತಮ ಆಯ್ಕೆಯನ್ನಾಗಿ ಮಾಡುತ್ತದೆ, ಆದರೆ ಫೀಚರ್‌ಗಳು ಮತ್ತು ಪವರ್‌ನ ಕೊರತೆಯು ಅದನ್ನು ತಡೆಹಿಡಿಯುತ್ತದೆ
ಭಾರತದಾದ್ಯಂತ ಸಿಟ್ರೊಯೆನ್ ಬಸಾಲ್ಟ್ ಅನ್ನು 7.99 ಲಕ್ಷ ರೂ.ಬೆಲೆಯಲ್ಲಿ (ಪರಿಚಯಾತ್ಮಕ, ಎಕ್ಸ್-ಶೋರೂಮ್) ಬಿಡುಗಡೆಗೊಳಿಸಲಾಗಿದೆ ಮತ್ತು ನಾವು ಈಗಾಗಲೇ ಎಸ್‌ಯುವಿ-ಕೂಪ್‌ನ ಟೆಸ್ಟ್ ಡ್ರೈವ್ ಅನ್ನು ಪೂರೈಸಿದ್ದೇವೆ. ಇದು ವಿಶಿಷ್ಟ ಶೈಲಿಯನ್ನು ಹೊಂದಿದೆ, ಕ್ಯಾಬಿನ್‌ನಲ್ಲಿ ಉತ್ತಮ ಸ್ಥಳಾವಕಾಶ ಮತ್ತು ಕುಟುಂಬಕ್ಕೆ ಪ್ರಾಯೋಗಿಕ ಕೊಡುಗೆಯಾಗಿದೆ, ಆದರೆ ನಿಮ್ಮ ಖರೀದಿ ನಿರ್ಧಾರದ ಮೇಲೆ ಪರಿಣಾಮ ಬೀರುವ ತನ್ನದೇ ಆದ ಮಿತಿಗಳನ್ನೂ ಹೊಂದಿದೆ. ಇದನ್ನು ಡ್ರೈವ್ ಮಾಡಿದ ನಮ್ಮ ಅನುಭವದ ನಂತರ, ನಾವು ಏನು ಇಷ್ಟಪಟ್ಟಿದ್ದೇವೆ ಮತ್ತು ನಾವು ಇಷ್ಟಪಡುವುದಿಲ್ಲ ಎಂಬುದನ್ನು ಇಲ್ಲಿ ನೋಡೋಣ.
ಉತ್ತಮ ಅಂಶಗಳು
ವಿಭಿನ್ನವಾಗಿರುವ ಸ್ಟೈಲ್
ಬಸಾಲ್ಟ್ ಒಂದು ಎಸ್‌ಯುವಿ-ಕೂಪ್ ಆಗಿದೆ ಮತ್ತು ನಿರ್ದಿಷ್ಟ ವಿನ್ಯಾಸದ ವೈಶಿಷ್ಟ್ಯವು ಉಳಿದ ಪ್ರಮುಖ ಎಸ್‌ಯುವಿ ಮೊಡೆಲ್‌ಗಳಿಗಿಂತ ಎದ್ದು ಕಾಣುವಂತೆ ಮಾಡುತ್ತದೆ. ಇಳಿಜಾರಿನ ರೂಫ್ ಎತ್ತರದ ನಿಲುವುಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ರಸ್ತೆಯ ಮೇಲೆ ಸಾಗುವಾಗ ಯಾರು ಇದನ್ನು ಗಮನಿಸದೇ ಇರುವುವುದಿಲ್ಲ ಮತ್ತು ಎಲ್ಲರ ಗಮನವನ್ನು ಸೆಳೆಯುವುದು ಖಚಿತವಾಗಿದೆ.
ಬೃಹತ್ತಾದ ಬೂಟ್
ಇದು 470-ಲೀಟರ್ ಬೂಟ್ ಸ್ಪೇಸ್ ಅನ್ನು ಪಡೆಯುತ್ತದೆ, ಇದನ್ನು ನೀವು ಬಹಳಷ್ಟು ಲಗೇಜ್‌ಗಳನ್ನು ಕೊಂಡೊಯ್ಯಲು ಬಳಸಬಹುದು. ಬಸಾಲ್ಟ್‌ನ ಬೂಟ್ ಅಗಲ ಮತ್ತು ಆಳವಾಗಿದೆ, ಇದು ನಿಮಗೆ ಇನ್ನೂ ದೊಡ್ಡ ಸೂಟ್‌ಕೇಸ್‌ಗಳನ್ನು ಸುಲಭವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ ಮತ್ತು ಹೆಚ್ಚುವರಿ ಲಗೇಜ್‌ಗಾಗಿ, ಹೆಚ್ಚುವರಿ ಸ್ಥಳಕ್ಕಾಗಿ ನೀವು ಹಿಂದಿನ ಆಸನಗಳನ್ನು ಮಡಚಬಹುದು. ಆದರೆ, 60:40 ಸ್ಪ್ಲೀಟ್ ಮಾಡುವ ಆಯ್ಕೆ ಇಲ್ಲ. ಅಲ್ಲದೆ, ಎತ್ತರದ ಪೊಸಿಸನ್ ಮತ್ತು ಬೂಟ್ ತೆರೆಯುವಿಕೆಯ ಆಕಾರವು ಲಗೇಜ್‌ಗಳನ್ನು ಹಾಕಲು ಸುಲಭಗೊಳಿಸುತ್ತದೆ.
ಬೆಂಚ್ ಮಾರ್ಕ್ ಸೆಟ್ ಮಾಡುವಂತಹ ಹಿಂದಿನ ಸೀಟುಗಳು
ಬಜೆಟ್‌ನಲ್ಲಿ ಚಾಫರ್ ಚಾಲಿತ ಅನುಭವವನ್ನು ನೀವು ಬಯಸಿದರೆ, ಬಸಾಲ್ಟ್ ನಿಮಗೆ ಸೂಕ್ತವಾದ ಕಾರುಗಳಲ್ಲಿ ಒಂದಾಗಿದೆ. ಇದು ಇಳಿಜಾರಿನ ರೂಫ್ ಅನ್ನು ಹೊಂದಿದ್ದರೂ ಸಹ, 6-ಅಡಿ ಎತ್ತರದ ಪ್ರಯಾಣಿಕರಿಗೆ ಸಾಕಷ್ಟು ಹೆಡ್‌ರೂಮ್ ಇದೆ ಮತ್ತು ನೀವು ಮೊಣಕಾಲು ಇಡುವಲ್ಲಿ ಮತ್ತು ಲೆಗ್‌ರೂಮ್‌ನಲ್ಲಿ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ. ಹಿಂಬದಿಯ ಸೀಟ್‌ಗಳ ಉತ್ತಮ ಅಂಶವೆಂದರೆ, ಹೊರಗಿನ ಪ್ರಯಾಣಿಕರಿಗೆ ಹೊಂದಾಣಿಕೆ ಮಾಡಬಹುದಾದ ಕೆಳತೊಡೆಯ ಬೆಂಬಲವಾಗಿದೆ, ಇದು ಅವರ ಅತ್ಯಂತ ಆರಾಮದಾಯಕವಾದ ಸೀಟಿಂಗ್ ಪೊಸಿಶನ್ ಅನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ, ಇದು ಬಸಾಲ್ಟ್‌ನ ಹಿಂಬದಿಯ ಸೀಟ್‌ನ ಅನುಭವವನ್ನು ಅದರ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮವಾಗಿಸುತ್ತದೆ.
ಇದನ್ನು ಸಹ ಓದಿ: Citroen Basaltನ ವೇರಿಯೆಂಟ್-ವಾರು ಕೊಡುಗೆಗಳ ಸಂಪೂರ್ಣ ವಿವರ
ತೊಡಕುಗಳು
ಫೀಚರ್-ಭರಿತವಾಗಿಲ್ಲ
ಬಸಾಲ್ಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ ಮತ್ತು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ, ಆದರೆ ಇದರ ಪ್ರತಿಸ್ಪರ್ಧಿಗಳು ನೀಡುವ ಕೆಲವು ಪ್ರೀಮಿಯಂ ಫೀಚರ್‌ಗಳನ್ನು ಇದು ಕಳೆದುಕೊಳ್ಳುತ್ತದೆ.
ಲೆಥೆರೆಟ್ ಕವರ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಚಾಲಿತ ಡ್ರೈವರ್ ಸೀಟ್ ಮತ್ತು ಸನ್‌ರೂಫ್‌ನಂತಹ ಫೀಚರ್‌ಗಳ ಉಪಸ್ಥಿತಿಯು ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಖರೀದಿದಾರರಿಗೆ ಹೆಚ್ಚು ಇಷ್ಟವಾಗುವಂತೆ ಮಾಡುತ್ತದೆ.
ಪ್ರೀಮಿಯಂ ಪೀಚರ್‌ಗಳಿಲ್ಲ
ಬಸಾಲ್ಟ್ ವಿಶಿಷ್ಟವಾದ ಬಾಹ್ಯ ವಿನ್ಯಾಸವನ್ನು ಹೊಂದಿದೆ, ಆದರೆ ಇಂಟೀರಿಯರ್ ಸಾಕಷ್ಟು ಬೇಸಿಕ್ ಆಗಿದೆ, ಇದು ಪ್ರೀಮಿಯಂ ಅಂಶವನ್ನು ಕಳೆದುಕೊಳ್ಳುತ್ತದೆ. ಕ್ಯಾಬಿನ್‌ನಲ್ಲಿ ಪ್ರೀಮಿಯಂ ಮೆಟೀರಿಯಲ್‌ಗಳ ಕೊರತೆಯಿದೆ, ವಿಶೇಷವಾಗಿ ಸಾಫ್ಟ್ ಟಚ್ ಪ್ಯಾಡಿಂಗ್, ಇದು ಕ್ಯಾಬಿನ್ ಅನ್ನು ಸ್ವಲ್ಪ ಮಂದ ಮತ್ತು ಬೇಸಿಕ್ ಆಗಿ ಮಾಡುತ್ತದೆ. ಹೆಚ್ಚು ಸಾಫ್ಟ್ ಟಚ್ ಮೆಟಿರಿಯಲ್‌ಗಳ ಬಳಕೆಯು ಕ್ಯಾಬಿನ್ ಅನ್ನು ಇನ್ನಷ್ಟು ಲಕ್ಷುರಿಯನ್ನಾಗಿಸುತ್ತದೆ.
ಅಷ್ಟು ಸ್ಪೋರ್ಟಿ ಅಲ್ಲ
ಸಿಟ್ರೊಯೆನ್ ಬಸಾಲ್ಟ್ ಅನ್ನು 1.2-ಲೀಟರ್ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತದೆ, ಇದು ರೆಗುಲರ್ ಡ್ರೈವಿಂಗ್‌ಗೆ ಉತ್ತಮವಾಗಿದೆ. ಆದರೆ ನೀವು ಈ ಎಸ್‌ಯುವಿ-ಕೂಪ್ ಶೈಲಿಯ ಕಾರುಗಳಿಂದ ಹೆಚ್ಚು ಉತ್ಸಾಹಭರಿತ ಡ್ರೈವ್ ಅನುಭವವನ್ನು ಎದುರು ನೋಡುತ್ತಿದ್ದರೆ, ದುರದೃಷ್ಟವಶಾತ್ ನೀವು ಅದನ್ನು ಬಸಾಲ್ಟ್‌ನೊಂದಿಗೆ ಪಡೆಯುವುದಿಲ್ಲ.
ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸ್ವಲ್ಪ ನಿಧಾನವಾಗಿದೆ, ಇದು ಓವರ್‌ಟೇಕ್‌ಗಳಿಗೆ ನೀವು ಮುಂಚಿತವಾಗಿ ಯೋಜಿಸುವಂತೆ ಮಾಡುತ್ತದೆ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಅದರ ಪ್ರತಿಸ್ಪರ್ಧಿಗಳಿಂದ ನೀವು ಪಡೆಯಬಹುದಾದ ಅತ್ಯಾಕರ್ಷಕ ಡ್ರೈವ್ ಅನುಭವವನ್ನು ನೀವು ಕಳೆದುಕೊಳ್ಳುತ್ತೀರಿ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ಸಿಟ್ರೊಯೆನ್ ಬಸಾಲ್ಟ್‌ನ ಬೆಲೆಗಳು 7.99 ಲಕ್ಷ ರೂ.ನಿಂದ 13.83 ಲಕ್ಷ ರೂ.ವರೆಗೆ (ಪರಿಚಯಾತ್ಮಕ, ಎಕ್ಸ್ ಶೋರೂಂ) ಇರಲಿದ್ದು ಮತ್ತು ಇದು ಮುಂಬರುವ ಟಾಟಾ ಕರ್ವ್‌ಗೆ ಇದು ಪ್ರತಿಸ್ಪರ್ಧಿಯಾಗಿದೆ. ಬಸಾಲ್ಟ್ ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಮತ್ತು ಟಾಟಾ ನೆಕ್ಸಾನ್‌ನಂತಹ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ದೊಡ್ಡ ಪರ್ಯಾಯವಾಗಿದೆ, ಹಾಗೆಯೇ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಮುಂತಾದ ಕಾಂಪ್ಯಾಕ್ಟ್ ಎಸ್‌ಯುವಿಗಳ ಲೋವರ್ ವೇರಿಯೆಂಟ್‌ಗಳ ವಿರುದ್ಧವೂ ಸ್ಪರ್ಧಿಸುತ್ತದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇದರ ಕುರಿತು ಇನ್ನಷ್ಟು ಓದಿ: ಬಸಾಲ್ಟ್ ಆನ್ ರೋಡ್ ಬೆಲೆ
Write your Comment on Citroen ಬಸಾಲ್ಟ್
I checked out the car yesterday. The car is truly good. The seats are plush and the rear seats are very very good. The audio system is surprisingly crisp and clear. To improve - do provide a 50 / 40.