Login or Register ಅತ್ಯುತ್ತಮ CarDekho experience ಗೆ
Login

Citroen C3 Aircross ಆಟೋಮ್ಯಾಟಿಕ್ ಆವೃತ್ತಿ ಬಿಡುಗಡೆ; 12.85 ಲಕ್ಷ ರೂ. ಬೆಲೆ ನಿಗದಿ

ಸಿಟ್ರೊನ್ aircross ಗಾಗಿ shreyash ಮೂಲಕ ಜನವರಿ 29, 2024 11:40 pm ರಂದು ಪ್ರಕಟಿಸಲಾಗಿದೆ

ಇತರ ಆಟೋಮ್ಯಾಟಿಕ್‌ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಹೋಲಿಸಿದರೆ 50,000 ರೂ. ವರೆಗಿನ ಬೆಲೆ ಕಡಿತದೊಂದಿಗೆ ಇದು ಈ ಸೆಗ್ಮೆಂಟ್‌ನಲ್ಲಿ ಅತ್ಯಂತ ಕೈಗೆಟುಕುವ ಆಟೋಮ್ಯಾಟಿಕ್‌ ಆಯ್ಕೆಯಾಗಿದೆ

  • C3 ಏರ್‌ಕ್ರಾಸ್ ಈಗ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನ ಆಯ್ಕೆಯೊಂದಿಗೆ ಲಭ್ಯವಿದೆ.
  • C3 ಏರ್‌ಕ್ರಾಸ್‌ನ ಮಿಡ್-ಸ್ಪೆಕ್ ಪ್ಲಸ್ ವೇರಿಯೆಂಟ್‌ನಿಂದ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಹೊಂದಬಹುದು.
  • ಇದು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ ಮತ್ತು ಅದು 110 PS ಮತ್ತು 190 Nm ನಷ್ಟು ಪವರ್‌ನ ಉತ್ಪಾದಿಸುತ್ತದೆ.
  • ಈ ಎಸ್‌ಯುವಿಯ ವೈಶಿಷ್ಟ್ಯಗಳ ಪಟ್ಟಿಗೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
  • ಇದು 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಮ್ಯಾನ್ಯುವಲ್ ಎಸಿಯನ್ನು ಒಳಗೊಂಡಿದೆ.
  • ಸುರಕ್ಷತೆಯನ್ನು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಿಂದ ಭದ್ರಗೊಳಿಸಲಾಗಿದೆ.

ಸಿಟ್ರೊಯೆನ್ C3 ಏರ್‌ಕ್ರಾಸ್ ಆಟೋಮ್ಯಾಟಿಕ್‌ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ಭಾರತದಾದ್ಯಂತ ಇದರ ಎಕ್ಸ್-ಶೋರೂಮ್ ಬೆಲೆಗಳು 12.85 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಇದನ್ನು ಆರಂಭದಲ್ಲಿ 2023 ರ ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ಪರಿಚಯಿಸಿದಾಗ, ಸಿಟ್ರೊಯೆನ್‌ನ ಕಾಂಪ್ಯಾಕ್ಟ್ ಎಸ್‌ಯುವಿಯನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಯಿತು. ಈಗ, ಇದು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ (ಟಾರ್ಕ್ ಕನ್ವರ್ಟರ್‌) ಆಯ್ಕೆಯನ್ನು ಸಹ ಪಡೆಯುತ್ತದೆ.

ಸಿ3 ಏರ್‌ಕ್ರಾಸ್ ಅನ್ನು ಲೈವ್, ಫೀಲ್ ಮತ್ತು ಮ್ಯಾಕ್ಸ್ ಎಂಬ ಮೂರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ ಮತ್ತು ಇದು 7-ಸೀಟರ್ ಕಾನ್ಫಿಗರೇಶನ್‌ನ ಆಯ್ಕೆಯನ್ನು ನೀಡುವ ಈ ಸೆಗ್ಮೆಂಟ್‌ನಲ್ಲಿ ಏಕೈಕ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ. ಇದು ತೆಗೆಯಬಹುದಾದ ಮೂರನೇ ಸಾಲಿನ ಆಸನಗಳೊಂದಿಗೆ ಬರುತ್ತದೆ. ಇವುಗಳಲ್ಲಿ, ಮಿಡ್-ಸ್ಪೆಕ್ ಪ್ಲಸ್ ಮತ್ತು ಟಾಪ್-ಸ್ಪೆಕ್ ಮ್ಯಾಕ್ಸ್ ವೇರಿಯೆಂಟ್‌ಗಳು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಲಭ್ಯವಿದೆ. ನಾವು ಹೆಚ್ಚಿನ ವಿವರಗಳತ್ತ ಚಿತ್ತವನ್ನು ಹರಿಸುವ ಮೊದಲು, C3 ಏರ್‌ಕ್ರಾಸ್ ಆಟೋಮ್ಯಾಟಿಕ್‌ನ ಬೆಲೆಗಳನ್ನು ನೋಡೋಣ:

ವೇರಿಯಂಟ್

ಮ್ಯಾನುಯಲ್‌

ಆಟೋಮ್ಯಾಟಿಕ್‌

ವ್ಯತ್ಯಾಸ

ಪ್ಲಸ್ 5-ಸೀಟರ್‌

11.55 ಲಕ್ಷ ರೂ

12.85 ಲಕ್ಷ ರೂ

+ 1.3 ಲಕ್ಷ ರೂ

ಮ್ಯಾಕ್ಸ್ 5-ಸೀಟರ್‌

12.20 ಲಕ್ಷ ರೂ

13.50 ಲಕ್ಷ ರೂ

+ 1.3 ಲಕ್ಷ ರೂ

ಮ್ಯಾಕ್ಸ್ 7-ಸೀಟರ್‌

12.55 ಲಕ್ಷ ರೂ

13.85 ಲಕ್ಷ ರೂ

+ 1.3 ಲಕ್ಷ ರೂ

ತಮ್ಮ ಮ್ಯಾನುಯಲ್‌ ಕೌಂಟರ್‌ಪಾರ್ಟ್‌ಗಳಿಗೆ ಹೋಲಿಸಿದರೆ, ಗ್ರಾಹಕರು ಆಟೋಮ್ಯಾಟಿಕ್‌ ಆವೃತ್ತಿಗಳಿಗಾಗಿ ಹೆಚ್ಚುವರಿಯಾಗಿ 1.3 ಲಕ್ಷ ರೂ.ಗಳನ್ನು ಪಾವತಿಸಬೇಕಾಗುತ್ತದೆ. ಈ ಎಸ್‌ಯುವಿಯ 7-ಸೀಟರ್ ಪ್ಲಸ್ ಆವೃತ್ತಿಯಲ್ಲಿ ಸಿಟ್ರೊಯೆನ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಯನ್ನು ಒದಗಿಸುತ್ತಿಲ್ಲ ಎಂಬುದನ್ನು ಗಮನಿಸಬೇಕಾದ ಅಂಶವಾಗಿದೆ.

ಸಹ ಪರಿಶೀಲಿಸಿ: ಟಾಪ್-ಸ್ಪೆಕ್ ಶೈನ್ ವೇರಿಯಂಟ್‌ನೊಂದಿಗೆ ಹೆಚ್ಚಿನ ವೈಶಿಷ್ಟ್ಯ-ಸಮೃದ್ಧತೆಯನ್ನು ಪಡೆದ Citroen eC3

ಅದೇ ಟರ್ಬೊ-ಪೆಟ್ರೋಲ್ ಎಂಜಿನ್

ಸಿಟ್ರೊಯೆನ್ C3 ಏರ್‌ಕ್ರಾಸ್ ಅದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS / 190 Nm) ನಿಂದ ಚಾಲಿತವಾಗಿದೆ, ಇದು ಈಗ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಎರಡರ ಆಯ್ಕೆಗಳನ್ನು ಪಡೆಯುತ್ತದೆ. 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ವೇರಿಯೆಂಟ್‌ನ ಟಾರ್ಕ್ ಔಟ್‌ಪುಟ್ 205 Nm ಗೆ ಹೆಚ್ಚಾಗುತ್ತದೆ, ಇದು C3 ಏರ್‌ಕ್ರಾಸ್‌ನ ಮ್ಯಾನುಯಲ್‌ ಆವೃತ್ತಿಗಿಂತ 15 Nm ನಷ್ಟು ಹೆಚ್ಚಿದೆ.

ಸಹ ಪರಿಶೀಲಿಸಿ: ಇದನ್ನೂ ಪರಿಶೀಲಿಸಿ: 2024ರ ಹ್ಯುಂಡೈ ಕ್ರೆಟಾ Vs ಸ್ಕೋಡಾ ಕುಶಾಕ್ Vs ವೋಕ್ಸ್‌ವ್ಯಾಗನ್ ಟೈಗನ್ Vs ಹೋಂಡಾ ಎಲಿವೇಟ್ Vs ಎಂಜಿ ಆಸ್ಟರ್ Vs ಸಿಟ್ರೊಯೆನ್ ಸಿ 3 ಏರ್‌ಕ್ರಾಸ್: ವಿಶೇಷಣಗಳ ಹೋಲಿಕೆ

ನಿಮ್ಮ ಬಾಕಿ ಇರುವ ಚಲನ್ ಪರಿಶೀಲಿಸಿ

ಉಪಯೋಗಿಸಿದ ಕಾರು ಮೌಲ್ಯಮಾಪನ

ವೈಶಿಷ್ಟ್ಯಗಳ ಪಟ್ಟಿಗೆ ಯಾವುದೇ ಬದಲಾವಣೆಗಳಿಲ್ಲ

ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ್ನು ಪರಿಚಯಿಸಿದರೂ ಈ ಎಸ್‌ಯುವಿಯ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಸಿಟ್ರೊಯೆನ್ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಸಿ3 ಏರ್‌ಕ್ರಾಸ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು ಮತ್ತು ಮ್ಯಾನ್ಯುವಲ್ ಎಸಿಯಂತಹ ಸೌಕರ್ಯಗಳನ್ನು ಹೊಂದಿದೆ.

ಸುರಕ್ಷತೆಯನ್ನು ಗಮನಿಸುವಾಗ, ಸಿಟ್ರೊಯೆನ್ C3 ಏರ್‌ಕ್ರಾಸ್ ಅನ್ನು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, EBD ಜೊತೆಗೆ ABS, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾನಂತಹ ಸೇಫ್ಟಿ ಸಾಧನಗಳೊಂದಿಗೆ ಸಜ್ಜುಗೊಳಿಸಿದೆ.

ಬೆಲೆ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

ಭಾರತದಾದ್ಯಂತ ಸಿಟ್ರೊಯೆನ್ C3 ಏರ್‌ಕ್ರಾಸ್‌ನ ಎಕ್ಸ್-ಶೋ ರೂಂ ಬೆಲೆಗಳು ಈಗ 9.99 ಲಕ್ಷ ರೂ.ನಿಂದ ಪ್ರಾರಂಭವಾಗಿ 13.85 ಲಕ್ಷ ರೂ.ವರೆಗೆ ಇರುತ್ತದೆ. ಇದು ಮಾರುಕಟ್ಟೆಯಲ್ಲಿ ಹೋಂಡಾ ಎಲಿವೇಟ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್ ಮುಂತಾದವುಗಳ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.

ಹೆಚ್ಚು ಓದಿ : C3 ಏರ್‌ಕ್ರಾಸ್ ಆನ್ ರೋಡ್ ಬೆಲೆ

Share via

Write your Comment on Citroen aircross

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.21.90 - 30.50 ಲಕ್ಷ*
Rs.9 - 17.80 ಲಕ್ಷ*
ಹೊಸ ವೇರಿಯೆಂಟ್
Rs.44.90 - 55.90 ಲಕ್ಷ*
Rs.75.80 - 77.80 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ