ಅಂತಿಮವಾಗಿ C3 ಏರ್‌ಕ್ರಾಸ್ ಎಸ್‌ಯುವಿ ಅನ್ನು ಅನಾವರಣಗೊಳಿಸಿದ ಸಿಟ್ರಾನ್

published on ಮೇ 02, 2023 07:42 pm by ansh for ಸಿಟ್ರೊನ್ ಸಿ3 ಏರ್‌ಕ್ರಾಸ್‌

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

ಮೂರು-ಸಾಲುಗಳನ್ನು ಹೊಂದಿರುವ ಈ ಕಾಂಪ್ಯಾಕ್ಟ್ ಎಸ್‌ಯುವಿ C3 ಮತ್ತು C5 ಏರ್‌ಕ್ರಾಸ್ ಎರಡರಿಂದಲೂ ವಿನ್ಯಾಸವನ್ನು ಎರವಲು ಪಡೆದುಕೊಂಡಿದೆ ಮತ್ತು  ಇದು 2023 ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ

Citroen C3 Aircross

  • C3 ಏರ್‌ಕ್ರಾಸ್ ಮೂಲಭೂತವಾಗಿ ಮೂರು-ಸಾಲಿನ ಎಸ್‌ಯುವಿ ಆಗಿದೆ, ಆದರೆ ಮೂರನೇ-ಸಾಲಿನ ಸೀಟುಗಳು ಕಾರಣದಿಂದಾಗಿ ಬೂಟ್ ಸ್ಪೇಸ್ ಕಡಿಮೆಯಾಗಬಹುದು. 
  •  ಸಿಟ್ರಾನ್ C3 ನಿಂದ 110PS, 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಪಡೆಯುತ್ತದೆ.
  •  10-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಡಿಸ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆರು ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಫೀಚರ್‌ಗಳಾಗಿ ಹೊಂದಿದೆ.
  •  ರೂ. 9 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ.

ಸುದೀರ್ಘ ಕಾಯುವಿಕೆ ಮತ್ತು ಅನೇಕ ಸ್ಪೈ ಶಾಟ್‌ಗಳ ನಂತರ, ಸಿಟ್ರಾನ್ ಅಂತಿಮವಾಗಿ ತನ್ನ ಇತ್ತೀಚಿನ ಕೊಡುಗೆಯನ್ನು ಜಗತ್ತಿಗೆ ಬಹಿರಂಗಪಡಿಸಿದೆ. C3 ಹ್ಯಾಚ್‌ಬ್ಯಾಕ್ ಆಧರಿಸಿ, ಕಾರು ತಯಾರಕರು C3 ಏರ್‌ಕ್ರಾಸ್ ಎಂಬ 3-ಸಾಲಿನ ಕಾಂಪ್ಯಾಕ್ಟ್ ಎಸ್‌ಯುವಿ ಅನ್ನು ಬಹಿರಂಗಪಡಿಸಿದ್ದಾರೆ. ಈ ಮಾಡೆಲ್ ಬಗ್ಗೆ ನೀವು ತಿಳಿಯಬೇಕಾದ ಎಲ್ಲಾ ವಿಷಯಗಳು ಇಲ್ಲಿವೆ:

 

ವಿನ್ಯಾಸ

Citroen C3 Aircross

ನೀವು ಈ C3 ಏರ್‌ಕ್ರಾಸ್ ಅನ್ನು ಮುಂಬದಿಯಿಂದ ನೋಡಿದಾಗ, ಅದರ ವಿನ್ಯಾಸವು ಸ್ವಲ್ಪ ಮಟ್ಟಿಗೆ C3 ಮತ್ತು C5 ಏರ್‌ಕ್ರಾಸ್‌ನ ಮಿಶ್ರಣವಾಗಿರುವುದನ್ನು ನೀವು ಗಮನಿಸಬಹುದು. ಅದರ ಬೃಹತ್ ಮುಂಭಾಗವು C5 ಏರ್‌ಕ್ರಾಸ್‌ನಿಂದ ವಿನ್ಯಾಸವನ್ನು ಎರವಲು ಪಡೆದರೆ, ಮತ್ತೊಂದೆಡೆ ಹೆಡ್‌ಲ್ಯಾಂಪ್‌ಗಳು C3 ಹ್ಯಾಚ್‌ಬ್ಯಾಕ್‌ಗೆ ಹೋಲುತ್ತವೆ.

ಇದನ್ನೂ ಓದಿ: ಬ್ರೇಕಿಂಗ್: ಹೆಚ್ಚುವರಿ ಸುರಕ್ಷತಾ ಫೀಚರ್‌ಗಳ ಜೊತೆಗೆ ನವೀಕೃತ ಮೇ ನಲ್ಲಿ ಬಿಡುಗಡೆಯಾಗಲಿರುವ ಸಿಟ್ರಾನ್ C3 ಟರ್ಬೋ 

ಪಕ್ಕದಲ್ಲಿ, ಈ ಕಾಂಪ್ಯಾಕ್ಟ್ ಎಸ್‌ಯುವಿ ಮೂರನೇ ಸಾಲನ್ನು ಸುಲಭವಾಗಿ ಹೊಂದಿಕೆಯಾಗುವಂತೆ ಮಾಡಲು C3 ಗೆ ಹೋಲಿಸಿದರೆ ದೀರ್ಘ ಪ್ರೊಫೈಲ್ ಮತ್ತು ಹೆಚ್ಚಿನ ಎತ್ತರವನ್ನು ಪಡೆಯುತ್ತದೆ, ಆದರೆ ಕಾಂಪ್ಯಾಕ್ಟ್ ಎಸ್‌ಯುವಿ 5-ಸೀಟುಗಳ ಆಯ್ಕೆಯನ್ನು ಸಹ ಪಡೆಯಬಹುದು. ಇದು ಹೊಸ 17-ಇಂಚಿನ ಅಲಾಯ್ ವ್ಹೀಲ್‌ಗಳನ್ನು ಸಹ ಪಡೆಯುತ್ತದೆ, ಅದ ವಿನ್ಯಾಸವು ಇತರ ಎರಡು ಮಾಡೆಲ್‌ಗಳಂತೆ ಕಂಡುಬರುವುದಿಲ್ಲ.

Citroen C3 Aircross

ಹಿಂಭಾಗದಲ್ಲಿ, ಈ C3 ಏರ್‌ಕ್ರಾಸ್ ಒಂದೇ ರೀತಿಯ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ, ಆದರೆ ನಡುವೆ ಕಪ್ಪು ಬಣ್ಣದ ಒಂದು ಸಂಪರ್ಕಿತ ಅಂಶವನ್ನು ಪಡೆಯುತ್ತದೆ. ಕಾಂಪ್ಯಾಕ್ಟ್ ಎಸ್‌ಯುವಿಯ ಹಿಂಭಾಗವು C3ಯ ಹಿಂದಿನ ಪ್ರೊಫೈಲ್‌ನ ಆವೃತ್ತಿಯನ್ನು ಹೆಚ್ಚು ಹೋಲುತ್ತದೆ.

 

ಪವರ್‌ಟ್ರೇನ್

Citroen C3 Aircross Engine

ಈ C3 ಏರ್‌ಕ್ರಾಸ್ ಹ್ಯಾಚ್‌ನಿಂದ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಎರವಲು ಪಡೆದುಕೊಂಡಿದೆ. ಈ ಯೂನಿಟ್ ಆರು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿದ್ದು ಇದು 110PS ಮತ್ತು 190Nm ಅನ್ನು ನೀಡುತ್ತದೆ. ಸದ್ಯಕ್ಕೆ, C3 ಏರ್‌ಕ್ರಾಸ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಬರುವುದಿಲ್ಲ, ಆದರೆ ನೀವಿದನ್ನು ನಂತರ ಪಡೆಯಬಹುದು.

Citroen C3 Aircross Interior

ಇದರ ಇಂಟೀರಿಯರ್ ನೋಟವು C3 ಇಂದ ಪ್ರೇರಿತವಾಗಿದೆ, ಆದರೆ ಸ್ವಲ್ಪ ಟ್ವೀಕ್ ಮಾಡಲಾದ ಡ್ಯಾಶ್‌ಬೋರ್ಡ್ ವಿನ್ಯಾಸದೊಂದಿಗೆ ವಿಭಿನ್ನವಾದ ಕಪ್ಪು ಮತ್ತು ಬೀಜ್ ಡ್ಯುಯಲ್-ಟೋನ್ ಥೀಮ್‌ ಅನ್ನು ಒಳಗೊಂಡಿದೆ. ಈ C3 ಏರ್‌ಕ್ರಾಸ್ ಮೂಲಭೂತವಾಗಿ 7-ಸೀಟರ್‌ಗಳ ಎಸ್‌ಯುವಿ ಆಗಿದೆ, ಆದರೆ ರೆನಾಲ್ಟ್ ಟ್ರೈಬರ್‌ನಂತೆಯೇ ಇದರ ಮೂರನೇ ಸಾಲಿನ ಸೀಟುಗಳನ್ನಾ ತೆಗೆದುಹಾಕಬಹುದು.

ಇದರ ಫೀಚರ್‌ಗಳು ಸಿಟ್ರಾನ್ C3 ನಲ್ಲಿರುವಂತೆಯೇ ಕೆಲವು ಸೇರ್ಪಡೆಗಳನ್ನು ಹೋಲುತ್ತದೆ. ಇದು 10-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡೇ/ನೈಟ್ IRVM, ಮತ್ತು ಮ್ಯಾನ್ಯುವಲ್ ಎಸಿ ಹಾಗೂ ರೂಫ್-ಮೌಂಟೆಡ್ ರಿಯರ್ ಎಸಿ ವೆಂಟ್‌ಗಳನ್ನು ಪಡೆಯುತ್ತದೆ.

 

 

ಸುರಕ್ಷತೆ

Citroen C3 Aircross

 ಪ್ರಯಾಣಿಕರ ಸುರಕ್ಷತೆಯ ವಿಷಯಕ್ಕೆ ಬಂದರೆ, ಈ C3 ಏರ್‌ಕ್ರಾಸ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಸ್ಟಾರ್ಟ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರಿಯರ್‌ವ್ಯೂ ಕ್ಯಾಮರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Citroen C3 Aircross

 ಈ ಕಾಂಪ್ಯಾಕ್ಟ್ ಎಸ್‌ಯುವಿ ಬೆಲೆಯು ರೂ. 9 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುವ ಸಾಧ್ಯತೆಯಿದ್ದು ಆಗಸ್ಟ್ 2023 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ C3 ಏರ್‌ಕ್ರಾಸ್ ಬಿಡುಗಡೆಯಾದಾಗ, ಹ್ಯುಂಡೈ ಕ್ರೆಟಾಕಿಯಾ ಸೆಲ್ಟೋಸ್, ಟೊಯೋಟಾ ಹೈರೈಡರ್ಮಾರುತಿ ಗ್ರ್ಯಾಂಡ್ ವಿಟಾರಾಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ಗೆ ಪ್ರತಿಸ್ಪರ್ಧಿಯಾಗಲಿದೆ. 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಸಿಟ್ರೊನ್ ಸಿ3 Aircross

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience