Login or Register ಅತ್ಯುತ್ತಮ CarDekho experience ಗೆ
Login

2024ರ ಮಧ್ಯಭಾಗದಲ್ಲಿ Curvv EV ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ದೃಢಪಡಿಸಿದ Tata

ಟಾಟಾ ಕರ್ವ್‌ ಇವಿ ಗಾಗಿ ansh ಮೂಲಕ ಫೆಬ್ರವಾರಿ 09, 2024 07:15 pm ರಂದು ಪ್ರಕಟಿಸಲಾಗಿದೆ

ಮತ್ತೊಂದೆಡೆ, ಕರ್ವ್‌ ಇವಿ ಬಿಡುಗಡೆಗೊಂಡ 3 ರಿಂದ 4 ತಿಂಗಳ ನಂತರ ಕರ್ವ್‌ ICE ಆವೃತ್ತಿಯು ಬರಲಿದೆ.

ಟಾಟಾ ತನ್ನ EV ಲೈನ್‌ಆಪ್‌ಗಳನ್ನು ವಿಸ್ತರಿಸಲು ಕೆಲಸ ಮಾಡುತ್ತಿದೆ ಮತ್ತು ಅದಕ್ಕಾಗಿ, 2024 ರಲ್ಲಿ 3 EV ಗಳನ್ನು ಬಿಡುಗಡೆ ಮಾಡಲು ಈ ಕಾರು ತಯಾರಕರು ಯೋಜಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಟಾಟಾ ಪಂಚ್ ಇವಿ ಬಿಡುಗಡೆಯನ್ನು ನಾವು ಈಗಾಗಲೇ ನೋಡಿದ್ದೇವೆ ಮತ್ತು ಮುಂದಿನ ಎರಡು ಮೊಡೆಲ್‌ಗಳೆಂದೆರೆ ಕರ್ವ್ವ್ ಇವಿ ಮತ್ತು ಹ್ಯಾರಿಯರ್ ಇವಿ. ಈಗ, ICE-ಚಾಲಿತ ಕರ್ವ್‌ನ ಲಾಂಚ್ ಟೈಮ್‌ಲೈನ್‌ನೊಂದಿಗೆ ಟಾಟಾ ಈ ಎರಡು ಮೊಡೆಲ್‌ಗಳ ಲಾಂಚ್ ಟೈಮ್‌ಲೈನ್‌ಗಳನ್ನು ಬಹಿರಂಗಪಡಿಸಿದೆ.

ಟಾಟಾ ಕರ್ವ್‌ ಇವಿ ಕರ್ವ್‌

ತನ್ನ ಹೂಡಿಕೆದಾರರ ಸಭೆಯಲ್ಲಿ, 2024-2025 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕರ್ವ್‌ ಇವಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಟಾಟಾ ಬಹಿರಂಗಪಡಿಸಿದೆ. ಇದರರ್ಥ ಕರ್ವ್‌ ಇವಿಯನ್ನು 2024 ರ ಜುಲೈ ಅಥವಾ ಸೆಪ್ಟೆಂಬರ್ ನ ನಡುವೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಇದನ್ನೂ ಸಹ ಓದಿ: Tata Tiago ಮತ್ತು Tigor CNG AMT ಬಿಡುಗಡೆ; ಬೆಲೆಗಳು 7,89,900 ರೂ.ನಿಂದ ಪ್ರಾರಂಭ

2022 ರಲ್ಲಿ ನಾವು ಕೊನೆಯ ಬಾರಿಗೆ ಕರ್ವ್‌ ಇವಿಯನ್ನು ನೋಡಿದ್ದೇವು ಮತ್ತು ಅದು ಇನ್ನೂ ಅದರ ಪರಿಕಲ್ಪನೆಯ ಹಂತದಲ್ಲಿದೆ. ಅಲ್ಲದೆ, ಕೂಪ್ ಎಸ್‌ಯುವಿಯ ನಿಖರವಾದ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ ವಿವರಗಳು ನಮಗೆ ತಿಳಿದಿಲ್ಲವಾದರೂ, ಇದು 500 ಕಿಮೀ ವ್ಯಾಪ್ತಿಯನ್ನು ನೀಡಬಹುದು ಎಂದು ನಾವು ನಿರೀಕ್ಷಿಸುತ್ತೇವೆ.

ಟಾಟಾ ತನ್ನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ ಮೂರರಿಂದ ನಾಲ್ಕು ತಿಂಗಳ ನಂತರ ಕರ್ವ್‌ನ ICE (ಆಂತರಿಕ ದಹನಕಾರಿ ಎಂಜಿನ್) ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಬಹಿರಂಗಪಡಿಸಿದೆ. ಹಾಗಾಗಿ 2024-2025 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕರ್ವ್‌ ಇವಿಯನ್ನು ಪ್ರಾರಂಭಿಸಿದರೆ, ICE-ಚಾಲಿತ ಕರ್ವ್‌ ಈ ವರ್ಷ ಹಬ್ಬದ ಸೀಸನ್‌ನಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಾವು ನಿರೀಕ್ಷಿಸಬಹುದು.

ಅದರ ವಿಶೇಷಣಗಳಿಗೆ ಸಂಬಂಧಿಸಿದಂತೆ, ಇದು ಟಾಟಾದ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (125 PS/225 Nm) ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 7-ಸ್ಪೀಡ್ DCT ಯೊಂದಿಗೆ ಬರಲಿದೆ. ಇದು ನೆಕ್ಸಾನ್‌ನ 1.5-ಲೀಟರ್ ಡೀಸೆಲ್ ಎಂಜಿನ್ (115 ಪಿಎಸ್‌/260 ಎನ್‌ಎಮ್‌) ಅನ್ನು ಸಹ ಪಡೆಯುತ್ತದೆ, ಬಹುಶಃ ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಗಳೊಂದಿಗೆ.

ನಿರೀಕ್ಷಿತ ಬೆಲೆಗಳು

ಕರ್ವ್‌ ಇವಿಯಿಂದ ಪ್ರಾರಂಭಿಸುವುದಾದರೆ, ಇದರ ಆರಂಭಿಕ ಬೆಲೆಗಳು 20 ಲಕ್ಷ ರೂ.ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಐಸಿಇ ಕರ್ವ್‌ ಸರಿಸುಮಾರು 10.50 ಲಕ್ಷ ರೂ.ನಿಂದ ಬೆಲೆಗಳು ಪ್ರಾರಂಭವಾಗಬಹುದು. ಕರ್ವ್‌ ಇವಿಯು ಮಾರುಕಟ್ಟೆಯಲ್ಲಿ ಎಮ್‌ಜಿ ಜೆಡ್‌ಎಸ್‌ ಇವಿ ಮತ್ತು ಹ್ಯುಂಡೈ ಕೋನಾ ಇವಿಗೆ ಪ್ರತಿಸ್ಪರ್ಧಿಯಾಗಲಿದೆ. ಹಾಗೆಯೇ ಕರ್ವ್‌ವು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್ ಅನ್ನು ಒಳಗೊಂಡಿರುವ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನ ಕಾರುಗಳ ವಿರುದ್ಧ ಸಡ್ಡು ಹೊಡೆಯಲಿದೆ.

Share via

Write your Comment on Tata ಕರ್ವ್‌ EV

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ