5 ಚಿತ್ರಗಳಲ್ಲಿ ಹೊಸ Hyundai Creta E ಬೇಸ್ ವೇರಿಯಂಟ್ ನ ಪ್ರಮುಖ ವಿವರಗಳನ್ನು ಪಡೆಯಿರಿ
ಹ್ಯುಂಡೈ ಕ್ರೆಟಾ E, ಬೇಸ್-ಸ್ಪೆಕ್ ವೇರಿಯಂಟ್ ಆಗಿರುವುದರಿಂದ ಮ್ಯೂಸಿಕ್ ಸಿಸ್ಟಮ್ ಅಥವಾ LED ಹೆಡ್ ಲೈಟ್ ಗಳು ಲಭ್ಯವಿಲ್ಲ.
- ಹುಂಡೈ ತನ್ನ ಹೊಸ ಕ್ರೆಟಾವನ್ನು ಏಳು ವೇರಿಯಂಟ್ ಗಳಲ್ಲಿ ನೀಡುತ್ತಿದೆ.
- ಇದರ ಬೇಸ್-ಸ್ಪೆಕ್ E ವೇರಿಯಂಟ್ ಫುಲ್-LED ಲೈಟಿಂಗ್ ಮತ್ತು 17-ಇಂಚಿನ ಅಲಾಯ್ ವೀಲ್ಸ್ ಅನ್ನು ಪಡೆಯುವುದಿಲ್ಲ.
- ಒಳಭಾಗದಲ್ಲಿ, 2024 ಕ್ರೆಟಾ E ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ಮ್ಯಾನ್ಯುವಲ್ AC ಅನ್ನು ಪಡೆಯುತ್ತದೆ.
- 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಮಾತ್ರ ನೀಡಲಾಗುತ್ತದೆ.
- ಕ್ರೆಟಾ E ವೇರಿಯಂಟ್ ಬೆಲೆಗಳು ರೂ 11 ಲಕ್ಷದಿಂದ ಶುರುವಾಗಿ ರೂ 12.45 ಲಕ್ಷದವರೆಗೆ ಇದೆ (ಪರಿಚಯಾತ್ಮಕ ಎಕ್ಸ್ ಶೋರೂಂ ಭಾರತದಾದ್ಯಂತ).
ಎರಡನೇ ಜನರೇಷನ್ ಹ್ಯುಂಡೈ ಕ್ರೆಟಾವನ್ನು ಭಾರತಕ್ಕಾಗಿ ಇದೀಗ ದೊಡ್ಡ ರಿಫ್ರೆಶ್ ನೀಡಲಾಗಿದೆ ಮತ್ತು ಅದರ ಬೆಲೆಗಳು ಈಗ ರೂ 11 ಲಕ್ಷದಿಂದ ಪ್ರಾರಂಭವಾಗುತ್ತವೆ (ಪರಿಚಯಾತ್ಮಕ ಎಕ್ಸ್-ಶೋರೂಮ್ ಭಾರತದಾದ್ಯಂತ). ಹುಂಡೈ ತನ್ನ ಅಪ್ಡೇಟ್ ಆಗಿರುವ SUV ಅನ್ನು ಏಳು ವೇರಿಯಂಟ್ ಗಳಲ್ಲಿ ನೀಡುತ್ತಿದೆ: E, EX, S, S (O), SX, SX Tech, ಮತ್ತು SX (O). ನೀವು ಎಂಟ್ರಿ ಲೆವೆಲ್ ವೇರಿಯಂಟ್ ಅನ್ನು ಆಯ್ಕೆ ಮಾಡಲು ಯೋಚಿಸುತ್ತಿದ್ದರೆ, ಕೆಳಗಿನ ಈ ಚಿತ್ರಗಳಲ್ಲಿ ಅದನ್ನು ವಿವರವಾಗಿ ನೋಡಬಹುದು:
ಹೊರಭಾಗ
ಮುಂಭಾಗದಲ್ಲಿ, ಕ್ರೆಟಾ E ಅದೇ ರೀಡಿಸೈನ್ ಗೊಳಿಸಲಾದ ಡಾರ್ಕ್ ಕ್ರೋಮ್ ಇನ್ಸರ್ಟ್ ಇಲ್ಲದ ಗ್ರಿಲ್ ಅನ್ನು ಪಡೆಯುತ್ತದೆ ಮತ್ತು ಡಲ್ ಗ್ರೇನಲ್ಲಿ ಫಿನಿಷ್ ಮಾಡಿದ ದಪ್ಪನಾದ ಬಂಪರ್ ಕೂಡ ಇದೆ. ಇದು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳೊಂದಿಗೆ ಬರುತ್ತದೆ ಮತ್ತು LED DRL ಸೆಟಪ್‌ನ ಒಳಗೆ ಇರುವ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಬೇಸ್ ವೇರಿಯಂಟ್ ಆಗಿರುವುದರಿಂದ, ಹ್ಯುಂಡೈ ಇದಕ್ಕೆ LED DRL ಗಳ ಸೆಟ್‌ಗಳನ್ನು ನೀಡಿಲ್ಲ.
ಮುಂಭಾಗದ ಫೆಂಡರ್ ನಲ್ಲಿ ಇರುವ ಟರ್ನ್ ಇಂಡಿಕೇಟರ್ ಗಳು, ಕ್ರೋಮ್ ಬದಲಿಗೆ ಬಾಡಿ ಕಲರ್ ನ ಡೋರ್ ಹ್ಯಾಂಡಲ್‌ಗಳು ಮತ್ತು ಕವರ್‌ಗಳೊಂದಿಗೆ 16-ಇಂಚಿನ ಸ್ಟೀಲ್ ವೀಲ್ಸ್ ನಿಂದಾಗಿ ಬದಿಯಿಂದ ಇದು ಬೇಸ್ ವೇರಿಯಂಟ್ ಎಂದು ಗೊತ್ತಾಗುತ್ತದೆ. ಹಿಂಭಾಗದಲ್ಲಿ, 2024 ಹ್ಯುಂಡೈ ಕ್ರೆಟಾ E ವೇರಿಯಂಟ್ LED ಟೈಲ್‌ಲೈಟ್‌ಗಳನ್ನು ಪಡೆಯುವುದಿಲ್ಲ ಆದರೆ ಮಧ್ಯದಲ್ಲಿ LED ಲೈಟ್ ಬಾರ್ ಲಭ್ಯವಿದೆ.
ಒಳಭಾಗ
ಇದು ನಿಜಕ್ಕೂ ಬೇಸ್-ಸ್ಪೆಕ್ ಕ್ರೆಟಾ ಎಂಬುದು ಒಳಭಾಗ ನೋಡಿದರೆ ಗೊತ್ತಾಗುತ್ತದೆ. ಇದು ಮಾನ್ಯುಯಲ್ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಹೊಂದಿದೆ ಮತ್ತು ಟಚ್‌ಸ್ಕ್ರೀನ್ ಅಥವಾ ಮ್ಯೂಸಿಕ್ ಸಿಸ್ಟಮ್ ಲಭ್ಯವಿಲ್ಲ. ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ ಗಳೊಂದಿಗೆ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಲಭ್ಯವಿದೆ.
ಬೇಸ್-ಸ್ಪೆಕ್ ಕ್ರೆಟಾ E ನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಎಲ್ಲಾ ಪ್ಯಾಸೆಂಜರ್ ಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ನೀಡಲಾಗಿದೆ.
ಇದನ್ನು ಕೂಡ ಓದಿ: ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾದ ಪ್ರತಿಯೊಂದು ವೇರಿಯಂಟ್ ನಲ್ಲಿ ಏನೇನಿದೆ ಎಂಬುದು ಇಲ್ಲಿದೆ
ಹುಂಡೈ ಕ್ರೆಟಾ E ಪವರ್‌ಟ್ರೇನ್ ಆಯ್ಕೆಗಳು
ಹ್ಯುಂಡೈ SUV ತನ್ನ ಎಂಟ್ರಿ ಲೆವೆಲ್ E ವೇರಿಯಂಟ್ ಅನ್ನು 115 PS/ 144 Nm 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ (N/A) ಪೆಟ್ರೋಲ್ ಎಂಜಿನ್ ಅಥವಾ 116 PS/ 250 Nm 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡುತ್ತದೆ. ಎರಡೂ ಯೂನಿಟ್ ಗಳು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರುತ್ತದೆ.
ಮೇಲ್ಮಟ್ಟದ ವೇರಿಯಂಟ್ ಗಳು ಕ್ರಮವಾಗಿ CVT ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಅದೇ ಎಂಜಿನ್ ಗಳನ್ನು ಪಡೆಯುತ್ತವೆ. ಹ್ಯುಂಡೈ SUV ಯಿಂದ ಹೆಚ್ಚಿನ ಪರ್ಫಾರ್ಮೆನ್ಸ್ ಅನ್ನು ಬಯಸುವವರಿಗೆ, ಇದು 160 PS/ 253 Nm 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್) ನೊಂದಿಗೆ ಕೂಡ ಲಭ್ಯವಿದೆ, ಆದರೆ ಇದು ಟಾಪ್ ವೇರಿಯಂಟ್ ನಲ್ಲಿ ಮಾತ್ರ.
ಸಂಬಂಧಿತ ಲೇಖನ: 2024 ಹ್ಯುಂಡೈ ಕ್ರೆಟಾ ಭಾರತದಲ್ಲಿ ಬಿಡುಗಡೆಯಾಗಬಹುದಾದ ಮುಂದಿನ N ಲೈನ್ ಮಾಡೆಲ್ ಆಗಿರಬಹುದು
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ E ಬೆಲೆಯು 11 ಲಕ್ಷದಿಂದ ಶುರುವಾಗಿ 12.45 ಲಕ್ಷದವರೆಗೆ ಇದೆ, ಹಾಗೆಯೇ SUVಯ ಟಾಪ್ ವೇರಿಯಂಟ್‌ಗಳ ಬೆಲೆಯು ರೂ.20 ಲಕ್ಷವಾಗಿದೆ. ಹ್ಯುಂಡೈನ ಈ ಕಾಂಪ್ಯಾಕ್ಟ್ SUVಯು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್ ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, MG ಆಸ್ಟರ್ ಮತ್ತು ಸಿಟ್ರೋನ್ C3 ಏರ್‌ಕ್ರಾಸ್ ನೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.
ಎಲ್ಲಾ ಬೆಲೆಗಳು, ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ
ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ