Login or Register ಅತ್ಯುತ್ತಮ CarDekho experience ಗೆ
Login

ಈ 6 ಚಿತ್ರಗಳಲ್ಲಿ 2024 ಕಿಯಾ ಸೋನೆಟ್ ನ HTX ವೇರಿಯಂಟ್ ನ ಸಂಪೂರ್ಣ ವಿವರ

published on ಜನವರಿ 25, 2024 03:27 pm by shreyash for ಕಿಯಾ ಸೊನೆಟ್

ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ HTX ವೇರಿಯಂಟ್ ಡ್ಯುಯಲ್-ಟೋನ್ ಲೆಥೆರೆಟ್ ಅಪ್ಹೋಲಿಸ್ಟ್ರೀ ಮತ್ತು ಲೆಥೆರೆಟ್-ಸುತ್ತಿರುವ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ.

ಕಿಯಾ ಸೋನೆಟ್ ಇತ್ತೀಚೆಗೆ ಕೆಲವು ಬದಲಾವಣೆಗೆ ಒಳಗಾಗಿದೆ, ಇದರಲ್ಲಿ ಅಪ್ಡೇಟ್ ಆಗಿರುವ ಡಿಸೈನ್ ಮತ್ತು ಹೊಸ ಫೀಚರ್ ಗಳು ಸೇರಿವೆ. 2024 ಸೋನೆಟ್ ಫೇಸ್‌ಲಿಫ್ಟ್ ತನ್ನ ಡೀಸೆಲ್ ಪವರ್‌ಟ್ರೇನ್‌ನೊಂದಿಗೆ ಪ್ರಾಪರ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ವಾಪಾಸ್ ತಂದಿದೆ. ಕಿಯಾ ತನ್ನ ಅಪ್ಡೇಟ್ ಆಗಿರುವ ಸೋನೆಟ್ ಅನ್ನು ಏಳು ವೇರಿಯಂಟ್ ಗಳಲ್ಲಿ ನೀಡುತ್ತಿದೆ: HTE, HTK, HTK+, HTX, HTX+, GTX+ ಮತ್ತು X-ಲೈನ್. ಹೊಸ ಸೋನೆಟ್‌ನ ಮಿಡ್-ಸ್ಪೆಕ್ HTX ವೇರಿಯಂಟ್ ನಲ್ಲಿ ಏನೇನಿದೆ ಎಂಬುದನ್ನು ನೋಡೋಣ.

ಮುಂಭಾಗದಲ್ಲಿ, 2024 ರ ಕಿಯಾ ಸೋನೆಟ್‌ನ ಮಿಡ್-ಸ್ಪೆಕ್ HTX ವೇರಿಯಂಟ್ ಮ್ಯಾಟ್ ಕ್ರೋಮ್ ಗಾರ್ನಿಶ್ ನಿಂದ ಸುತ್ತುವರಿದ ಟೈಗರ್ ನೋಸ್ ಗ್ರಿಲ್ ಅನ್ನು ಹೊಂದಿದೆ. HTX ವೇರಿಯಂಟ್ ನಲ್ಲಿ LED DRL ಗಳು ಮತ್ತು LED ಫಾಗ್ ಲ್ಯಾಂಪ್‌ಗಳ ಜೊತೆಗೆ LED ಹೆಡ್‌ಲೈಟ್‌ಗಳು ಕೂಡ ಲಭ್ಯವಿದೆ. ಇದರ ಜೊತೆಗೆ, ಬಂಪರ್‌ನ ಕೆಳಗಿನ ಭಾಗವು ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ, ಇದು ಕಾರಿಗೆ ಒರಟಾದ ಲುಕ್ ಅನ್ನು ನೀಡುತ್ತದೆ.

ಪ್ರೊಫೈಲ್‌ನಲ್ಲಿ, ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ ಮಿಡ್-ಸ್ಪೆಕ್ HTX ವೇರಿಯಂಟ್ 16-ಇಂಚಿನ ಡೈಮಂಡ್-ಕಟ್ ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಅನ್ನು ಹೊಂದಿದೆ, ಆದರೆ ಇತರ ವಿವರಗಳು HTX ವೇರಿಯಂಟ್ ಗಿಂತ ಕೆಳ ಮಟ್ಟದಲ್ಲಿ ಇರುವ ಸೋನೆಟ್ ನ HTK+ ವೇರಿಯಂಟ್ ನಂತೆಯೇ ಇದೆ. ಈ ಸಬ್‌ಕಾಂಪ್ಯಾಕ್ಟ್ SUV ವೇರಿಯಂಟ್ ಸನ್‌ರೂಫ್ ಅನ್ನು ಕೂಡ ಹೊಂದಿದೆ, ಇದು ಎಲ್ಲಾ ಎಂಜಿನ್ ಆಯ್ಕೆಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಲಭ್ಯವಿದೆ.

ಹಿಂಭಾಗದ ಡಿಸೈನ್ ನಲ್ಲಿ ಕನೆಕ್ಟೆಡ್ LED ಟೈಲ್ ಲ್ಯಾಂಪ್ ಗಳು ಮತ್ತು ಶಾರ್ಕ್ ಫಿನ್ ಆಂಟೆನಾ ಇರುತ್ತದೆ. ಸಿಲ್ವರ್ ಸ್ಕಿಡ್ ಪ್ಲೇಟ್ ನೊಂದಿಗೆ ಸಂಯೋಜಿಸಲಾಗಿರುವ ಬ್ಲಾಕ್ ಔಟ್ ಆಗಿರುವ ಹಿಂಭಾಗದ ಬಂಪರ್‌ ಇದಕ್ಕೆ ಒರಟಾದ ಲುಕ್ ಅನ್ನು ನೀಡುತ್ತದೆ.

ಇದನ್ನು ಕೂಡ ಓದಿ: 5 ಚಿತ್ರಗಳಲ್ಲಿ ಹೊಸ ಕಿಯಾ ಸೋನೆಟ್ ಬೇಸ್-ಸ್ಪೆಕ್ HTE ವೇರಿಯಂಟ್ ಅನ್ನು ವಿವರಿಸಲಾಗಿದೆ

ಒಳಭಾಗದಲ್ಲಿ, 2024 ಕಿಯಾ ಸೋನೆಟ್ HTX ಬ್ಲಾಕ್ ಮತ್ತು ಬ್ರೌನ್ ಬಣ್ಣದ ಲೆಥೆರೆಟ್ ಸೀಟ್ ಅಪ್ಹೋಲಿಸ್ಟ್ರೀಯನ್ನು ಹೊಂದಿರುವ ಆಲ್ ಬ್ಲಾಕ್ ಡ್ಯಾಶ್‌ಬೋರ್ಡ್ ಅನ್ನು ಒಳಗೊಂಡಿದೆ. AC ವೆಂಟ್‌ಗಳು ಮತ್ತು ಡೋರ್ ಹ್ಯಾಂಡಲ್ ಸುತ್ತಲಿನ ಸಿಲ್ವರ್ ಅಕ್ಸೆನ್ಟ್ ಗಳು ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತವೆ. ಈ ವೇರಿಯಂಟ್ ಲೆಥೆರೆಟ್-ಸುತ್ತಿರುವ ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್ ಅನ್ನು ಕೂಡ ನೀಡುತ್ತದೆ. ಆದರೆ ಗಮನಿಸಿ, ಈ ಚಿತ್ರದಲ್ಲಿ ತೋರಿಸಿರುವ ಡ್ಯುಯಲ್-ಟೋನ್ ಅಪ್ಹೋಲಿಸ್ಟ್ರೀಯು 1-ಲೀಟರ್ ಟರ್ಬೊ-ಪೆಟ್ರೋಲ್ DCT ಮತ್ತು 1.5-ಲೀಟರ್ ಡೀಸೆಲ್ iMT ಅಥವಾ 2024 Sonet HTX ನ AT ವೇರಿಯಂಟ್ ಗಳಿಗೆ ಮಾತ್ರ ಸೀಮಿತವಾಗಿದೆ.

ಕಿಯಾ ಸೋನೆಟ್ ಫೇಸ್‌ಲಿಫ್ಟ್‌ನ HTX ವೇರಿಯಂಟ್ ನ ಫೀಚರ್ ಗಳಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ ಜೊತೆಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 4.2-ಇಂಚಿನ ಸೆಮಿ ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ, ಟೈಪ್-C ಚಾರ್ಜಿಂಗ್ ಪೋರ್ಟ್‌ಗಳು, ಎಲೆಕ್ಟ್ರಿಕಲ್ ಫೋಲ್ಡಬಲ್ ORVM ಗಳು, ಡ್ರೈವ್ ಮೋಡ್‌ಗಳು, ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ವೇರಿಯಂಟ್ ಗಳಲ್ಲಿ ಪ್ಯಾಡಲ್ ಶಿಫ್ಟರ್‌ಗಳು ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.

ಪ್ಯಾಸೆಂಜರ್ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್-ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಲ್ಲಾ ಪ್ಯಾಸೆಂಜರ್ ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್‌ಗಳನ್ನು ನೀಡಲಾಗಿದೆ.

ಅಪ್ಡೇಟ್ ಆಗಿರುವ ಸೋನೆಟ್‌ನ ಹಿಂಭಾಗದ ಸೀಟಿನಲ್ಲಿ ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು, ಹಿಂಭಾಗದ AC ವೆಂಟ್‌ಗಳನ್ನು ನೀಡಲಾಗಿದೆ ಮತ್ತು ಹಿಂದಿನ ಸೀಟುಗಳು ಹೆಚ್ಚಿನ ಲಗೇಜ್ ಸ್ಥಳಕ್ಕಾಗಿ 60:40 ಸ್ಪ್ಲಿಟ್ ಅನ್ನು ಹೊಂದಿವೆ.

ಪವರ್‌ಟ್ರೇನ್ ಆಯ್ಕೆಗಳು

ಕಿಯಾ ಸೋನೆಟ್ ಫೇಸ್‌ಲಿಫ್ಟ್ ತನ್ನ HTX ವೇರಿಯಂಟ್ ನಲ್ಲಿ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 1-ಲೀಟರ್ ಟರ್ಬೊ-ಪೆಟ್ರೋಲ್ (120 PS / 172 Nm) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (116 PS / 250 Nm). ಮೊದಲನೆಯ ಆಯ್ಕೆಯನ್ನು 6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದೆ ಮ್ಯಾನುಯಲ್ ಟ್ರಾನ್ಸ್‌ಮಿಷನ್) ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) ಗೆ ಜೋಡಿಸಲಾಗಿದೆ, ಮತ್ತು ಎರಡನೆಯ ಆಯ್ಕೆಯು ಮೂರು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯುತ್ತದೆ: 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್, 6-ಸ್ಪೀಡ್ iMT, ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 ಕಿಯಾ ಸೋನೆಟ್ ನ HTX ವೇರಿಯಂಟ್ ಬೆಲೆಯು ರೂ 11.49 ಲಕ್ಷದಿಂದ ಶುರುವಾಗಿ ರೂ 12.99 ಲಕ್ಷದವರೆಗೆ ಇದೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್ ಇಂಡಿಯಾ). ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ XUV300 ಮುಂತಾದವುಗಳ ಜೊತೆಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.

ಇನ್ನಷ್ಟು ಓದಿ: ಸೋನೆಟ್ ಆನ್ ರೋಡ್ ಬೆಲೆ

s
ಅವರಿಂದ ಪ್ರಕಟಿಸಲಾಗಿದೆ

shreyash

  • 49 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಸೊನೆಟ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ