5 ಚಿತ್ರಗಳಲ್ಲಿ ಹೊಸ Kia Sonet ಬೇಸ್-ಸ್ಪೆಕ್ HTE ವೇರಿಯಂಟ್ ನ ವಿವರಗಳನ್ನು ನೋಡಿ
ಕಿಯಾ ಸೊನೆಟ್ ಗಾಗಿ rohit ಮೂಲಕ ಜನವರಿ 22, 2024 02:23 pm ರಂದು ಪ್ರಕಟಿಸಲಾಗಿದೆ
- 85 Views
- ಕಾಮೆಂಟ್ ಅನ್ನು ಬರೆಯಿರಿ
ಇದು ಬೇಸ್-ಸ್ಪೆಕ್ ವೇರಿಯಂಟ್ ಆಗಿರುವುದರಿಂದ, ಕಿಯಾ ಇಲ್ಲಿ ಯಾವುದೇ ರೀತಿಯ ಮ್ಯೂಸಿಕ್ ಅಥವಾ ಇನ್ಫೋಟೈನ್‌ಮೆಂಟ್ ಸೆಟಪ್ ಅನ್ನು ನೀಡುತ್ತಿಲ್ಲ
- ಹೊರಭಾಗದ ಪ್ರಮುಖ ಫೀಚರ್ ಗಳಲ್ಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಕವರ್‌ಗಳೊಂದಿಗೆ 15-ಇಂಚಿನ ಸ್ಟೀಲ್ ವೀಲ್ಸ್ ಅನ್ನು ಒಳಗೊಂಡಿವೆ.
- ಇದು ಮಾನ್ಯುಯಲ್ AC, ಮುಂಭಾಗದ ಪವರ್ ವಿಂಡೋಗಳು ಮತ್ತು ಆರು ಏರ್‌ಬ್ಯಾಗ್‌ಗಳನ್ನು ಕೂಡ ಒಳಗೊಂಡಿವೆ.
- ಪವರ್‌ಟ್ರೇನ್ ಆಯ್ಕೆಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಒಳಗೊಂಡಿರುತ್ತವೆ ಆದರೆ ಇದು ಮಾನ್ಯುಯಲ್ ಟ್ರಾನ್ಸ್ಮಿಷನ್ ನೊಂದಿಗೆ ಮಾತ್ರ.
- ಸೋನೆಟ್ HTE ಬೆಲೆಗಳು ರೂ 7.99 ಲಕ್ಷದಿಂದ ಶುರುವಾಗಿ ರೂ 9.79 ಲಕ್ಷದವರೆಗೆ ಇದೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ)
ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಹೊಸ ಸೋನೆಟ್ ನ ಒಳಭಾಗ ಮತ್ತು ಹೊರಭಾಗದಲ್ಲಿ ವಿವಿಧ ಡಿಸೈನ್ ಮತ್ತು ಫೀಚರ್ ಗಳನ್ನು ರಿವೈಸ್ ಮಾಡಲಾಗಿದ್ದರೂ ಕೂಡ, ಅದರ ವೇರಿಯಂಟ್ ಲೈನ್ ಅಪ್ ಹಾಗೆಯೇ ಇರುತ್ತದೆ. ರಿಫ್ರೆಶ್ ಮಾಡಲಾದ ಸಬ್-4m SUV ಏಳು ವೇರಿಯಂಟ್ ಗಳಲ್ಲಿ ಲಭ್ಯವಿದೆ: HTE, HTK, HTK+, HTX, HTX+, GTX+, ಮತ್ತು X-ಲೈನ್. ನಾವು ಈಗ ಬೇಸ್-ಸ್ಪೆಕ್ HTE ವೇರಿಯಂಟ್ ನ ಕೆಲವು ಚಿತ್ರಗಳನ್ನು ಪಡೆದುಕೊಂಡಿದ್ದೇವೆ, ಅದನ್ನು ನೀವು ಕೆಳಗೆ ನೋಡಬಹುದು:
ಹೊರಭಾಗ
ಎಂಟ್ರಿ ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ, ಸೋನೆಟ್ HTE ಅದೇ ರೀಡಿಸೈನ್ ಗೊಳಿಸಲಾದ ಗ್ರಿಲ್ ಅನ್ನು ಹೊಂದಿದೆ ಆದರೆ ಪಿಯಾನೋ ಬ್ಲಾಕ್ ಫಿನಿಷ್ ನೊಂದಿಗೆ ನೀಡಲಾಗಿದೆ. ಸೋನೆಟ್ HTE ಹ್ಯಾಲೊಜೆನ್ ಹೆಡ್‌ಲೈಟ್‌ಗಳೊಂದಿಗೆ ಬರುತ್ತದೆ, ಮತ್ತು ಯಾವುದೇ DRL ಗಳಿಲ್ಲದಿದ್ದರೂ ಕೂಡ, ಇದು ಅದರ ಔಟ್ಲೈನ್ ಗಳನ್ನು ಪಡೆಯುತ್ತದೆ. ಮುಂಭಾಗದ ಬಂಪರ್ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದ್ದು, ಇದು ಮುಂಭಾಗಕ್ಕೆ ಒರಟಾದ ಟಚ್ ಅನ್ನು ನೀಡುತ್ತದೆ.


ಕವರ್‌ಗಳೊಂದಿಗೆ 15-ಇಂಚಿನ ಸ್ಟೀಲ್ ವೀಲ್ಸ್ ಮತ್ತು ಬದಿಗಳಿಂದ ನೋಡಿದಾಗ ಮುಂಭಾಗದ ಫೆಂಡರ್-ಮೌಂಟೆಡ್ ಟರ್ನ್ ಇಂಡಿಕೇಟರ್‌ಗಳಿಂದ ಇದು ಬೇಸ್-ವೇರಿಯಂಟ್ ಎಂದು ಮತ್ತಷ್ಟು ಸ್ಪಷ್ಟವಾಗುತ್ತದೆ. ಹಿಂಭಾಗದಲ್ಲಿ, ಸೋನೆಟ್ ತನ್ನ HTE ವರ್ಷನ್ ಗೆ ಕನೆಕ್ಟೆಡ್ ಹ್ಯಾಲೊಜೆನ್ ಟೈಲ್‌ಲೈಟ್‌ಗಳನ್ನು ನೀಡಿದೆ ಆದರೆ ಸೆಂಟರ್ ಪೀಸ್ ಅನ್ನು ಲೈಟ್ ಮಾಡಲಾಗಿಲ್ಲ.
ಒಳಭಾಗ ಮತ್ತು ಇಕ್ವಿಪ್ಮೆಂಟ್
2024 ಕಿಯಾ ಸೋನೆಟ್ HTE ಒಳಭಾಗವು ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಆಲ್ ಬ್ಲಾಕ್ ಥೀಮ್ ಅನ್ನು ಪಡೆಯುತ್ತದೆ. ಕಿಯಾ ಇದರ ಸೆಂಟರ್ ಕನ್ಸೋಲ್‌ನ ಸುತ್ತಲೂ ಮತ್ತು ಸ್ಟೀರಿಂಗ್ ವೀಲ್‌ನಲ್ಲಿಯೂ ಸಹ ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಸಿಲ್ವರ್ ಫಿನಿಶ್ ಅನ್ನು ನೀಡಿದೆ.
ಕಾರಿನಲ್ಲಿರುವ ಇಕ್ವಿಪ್ಮೆಂಟ್ ಬಗ್ಗೆ ಹೇಳುವುದಾದರೆ, ಕಾರು ತಯಾರಕರು ಯಾವುದೇ ರೀತಿಯ ಇನ್ಫೋಟೈನ್‌ಮೆಂಟ್ ಅಥವಾ ಮ್ಯೂಸಿಕ್ ಸಿಸ್ಟಮ್ ಅನ್ನು ನೀಡಿಲ್ಲ. ಆದರೆ ಇದು ರಿಯರ್ ವೆಂಟ್ ನೊಂದಿಗೆ ಮಾನ್ಯುಯಲ್ AC, ಮುಂಭಾಗದ ಪವರ್ ವಿಂಡೋಗಳು ಮತ್ತು ಸೆಂಟ್ರಲ್ ಲಾಕಿಂಗ್ ನಂತಹ ಕೆಲವು ಮೂಲಭೂತ ಫೀಚರ್ ಗಳನ್ನು ಪಡೆಯುತ್ತದೆ.
ಸೋನೆಟ್‌ನ ಸ್ಟ್ಯಾಂಡರ್ಡ್ ಸುರಕ್ಷತಾ ಕಿಟ್ ನಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳನ್ನು ಒಳಗೊಂಡಿದೆ.
ಸಂಬಂಧಿಸಿದ ಲೇಖನ: ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ HTK ವೇರಿಯಂಟ್ ಅನ್ನು ಚಿತ್ರಗಳಲ್ಲಿ ವಿವರಿಸಲಾಗಿದೆ
ಇದರ ಎಂಜಿನ್ ನಲ್ಲಿ ಯಾವ ಯಾವ ಆಯ್ಕೆಗಳಿವೆ
ಕಿಯಾ ತನ್ನ ಬೇಸ್-ಸ್ಪೆಕ್ ಸೋನೆಟ್ HTE ಅನ್ನು 83 PS/ 115 Nm 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ (N/A) ಪೆಟ್ರೋಲ್ ಎಂಜಿನ್ ಜೊತೆಗೆ 5-ಸ್ಪೀಡ್ MT ಅಥವಾ 116 PS/ 250 Nm 1.5-ಲೀಟರ್ ಡೀಸೆಲ್ ಯೂನಿಟ್ ಜೊತೆಗೆ 6-ಸ್ಪೀಡ್ MT ಅನ್ನು ನೀಡುತ್ತಿದೆ.
SUV ಯ ಮೇಲ್ಮಟ್ಟದ-ಸ್ಪೆಕ್ ಡೀಸೆಲ್ ವೇರಿಯಂಟ್ ಗಳು 6-ಸ್ಪೀಡ್ iMT (ಕ್ಲಚ್ ಪೆಡಲ್ ಇಲ್ಲದೆ ಮ್ಯಾನುಯಲ್) ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ಕೂಡ ಬರುತ್ತದೆ. ಹೆಚ್ಚಿನ ಪರ್ಫಾರ್ಮೆನ್ಸ್ ಅನ್ನು ಬಯಸುವವರಿಗೆ, 6-ಸ್ಪೀಡ್ iMT ಅಥವಾ 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಜೊತೆಗೆ 120 PS/ 172 Nm 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಕೂಡ ಲಭ್ಯವಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸೋನೆಟ್ HTE ಬೆಲೆಯು ರೂ 7.99 ಲಕ್ಷದಿಂದ ಶುರುವಾಗಿ ರೂ 9.79 ಲಕ್ಷದವರೆಗೆ ಇದೆ, ಅದರ ಟಾಪ್-ಸ್ಪೆಕ್ ವೇರಿಯಂಟ್ ಬೆಲೆಯು ರೂ 15.69 ಲಕ್ಷವಾಗಿದೆ. ಕಿಯಾದ ಈ ಸಬ್-4m SUVಯು ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಹುಂಡೈ ವೆನ್ಯೂ, ಮಹೀಂದ್ರ XUV300, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್ ಸಬ್-4m ಕ್ರಾಸ್ಒವರ್ SUV ಜೊತೆಗೆ ಸ್ಪರ್ಧಿಸಲಿದೆ.
ಎಲ್ಲಾ ಬೆಲೆಗಳು ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ ಬೆಲೆಯಾಗಿದೆ
ಇನ್ನಷ್ಟು ಓದಿ: ಸೋನೆಟ್ ಆನ್ ರೋಡ್ ಬೆಲೆ