ಫೇಸ್‌ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಇಂದು ಬಿಡುಗಡೆಯಾಗಲಿದೆ
ಹುಂಡೈ ಕ್ರೆಟಾ ಗಾಗಿ rohit ಮೂಲಕ ಜನವರಿ 16, 2024 01:08 pm ರಂದು ಪ್ರಕಟಿಸಲಾಗಿದೆ
- 66 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈನ ಜನಪ್ರಿಯ SUVಯಾಗಿರುವ ಕ್ರೆಟಾ ತನ್ನ ಈಗಾಗಲೇ ಇರುವ ಫೀಚರ್ ಗಳ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸಲು ಹೊಸ ಮತ್ತು ಆಕರ್ಷಕ ಡಿಸೈನ್ ಅನ್ನು ಪಡೆದುಕೊಂಡಿದೆ.
-
ಎರಡನೇ ಜನ್ ಮಾಡೆಲ್ 2020 ರಲ್ಲಿ ಪ್ರಾರಂಭವಾದಾಗಿನಿಂದ ಅದರ ಮೊಟ್ಟಮೊದಲ ದೊಡ್ಡ ಬದಲಾವಣೆಯನ್ನು ಪಡೆಯುತ್ತಿದೆ.
-
SUV ಗಾಗಿ 25,000 ಪಾವತಿ ಮಾಡುವ ಮೂಲಕ ಬುಕ್ಕಿಂಗ್ ಮಾಡಬಹುದು.
-
ಹೊರಭಾಗದಲ್ಲಿ ರಿವೈಸ್ ಮಾಡಲಾದ ಅಂಶಗಳಲ್ಲಿ ರೀಡಿಸೈನ್ ಆಗಿರುವ ಗ್ರಿಲ್ ಮತ್ತು ಕನೆಕ್ಟ್ ಆಗಿರುವ ಲೈಟಿಂಗ್ ಸೆಟಪ್ಗಳು ಸೇರಿವೆ.
-
ಕ್ಯಾಬಿನ್ ಅಪ್ಡೇಟ್ ಗಳಲ್ಲಿ ರಿವೈಸ್ ಆಗಿರುವ ಡ್ಯಾಶ್ಬೋರ್ಡ್ ಮತ್ತು ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಒಳಗೊಂಡಿವೆ.
-
ಹೊಸ ಫೀಚರ್ ಗಳಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ ಮತ್ತು ADAS ಸೇರಿವೆ.
-
ವೆರ್ನಾದ ಹೊಸ 1.5-ಲೀಟರ್ ಟರ್ಬೊ ಯೂನಿಟ್ ಸೇರಿದಂತೆ ಮೂರು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವುದು.
-
ಬೆಲೆಗಳು 11 ಲಕ್ಷದಿಂದ ಶುರುವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ).
ಫೇಸ್ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ನಾಳೆ ಮಾರುಕಟ್ಟೆಗೆ ಬರಲಿದೆ ಮತ್ತು ಹ್ಯುಂಡೈ ಈಗಾಗಲೇ ಅದರ ಎಲ್ಲಾ ಹೊಸ ಫೀಚರ್ ಗಳು ಮತ್ತು ಸ್ಪೆಸಿಫಿಕೇಷನ್ ಗಳನ್ನು ಬಹಿರಂಗಪಡಿಸಿದೆ. ಹೊಸ SUVಗಾಗಿ ಬುಕ್ಕಿಂಗ್ಗಳು ಆನ್ಲೈನ್ ಮತ್ತು ಭಾರತದಾದ್ಯಂತ ಇರುವ ಡೀಲರ್ಶಿಪ್ಗಳಲ್ಲಿ ಲಭ್ಯವಿದೆ ಮತ್ತು ಗ್ರಾಹಕರು ಕೇವಲ ರೂ 25,000 ಪಾವತಿ ಮಾಡುವ ಮೂಲಕ ಬುಕ್ಕಿಂಗ್ ಮಾಡಬಹುದು.
ಈ ಬದಲಾವಣೆಯಲ್ಲಿ ಏನೇನಿದೆ ಎಂಬುದರ ವಿವರಗಳು ಇಲ್ಲಿದೆ:
ಹೊರಭಾಗದ ಅಪ್ಡೇಟ್ ಗಳು
2024 ಹ್ಯುಂಡೈ ಕ್ರೆಟಾವು ಬಲಿಷ್ಠವಾದ ಮತ್ತು ಆಕರ್ಷಕವಾದ ಹೊರಭಾಗವನ್ನು ಪಡೆದಿದೆ, ಇದು ಹಲವಾರು ಸ್ಪೈ ಶಾಟ್ಗಳಲ್ಲಿ ಕಂಡುಬಂದಿದ್ದ ಲುಕ್ ಗಳನ್ನು ಸಾಬೀತುಪಡಿಸುತ್ತಿದೆ. ಪ್ರಮುಖ ಅಪ್ಡೇಟ್ ಗಳಲ್ಲಿ ಹೊಸ ರೀಡಿಸೈನ್ ಮಾಡಲಾದ ಗ್ರಿಲ್ನೊಂದಿಗೆ ರಿವೈಸ್ ಆಗಿರುವ ಫೆಸಿಯ, ಬಾನೆಟ್ನಷ್ಟು ಅಗಲದ ಉದ್ದನೆಯ LED DRL ಸ್ಟ್ರಿಪ್ ಮತ್ತು ಹೆಡ್ಲೈಟ್ಗಳಿಗಾಗಿ ರಿವೈಸ್ ಆಗಿರುವ ಚೌಕಾಕಾರದ ಹೌಸಿಂಗ್ಗಳು ಸೇರಿವೆ. ಕೆಳಗಿನ ಭಾಗವು ಈಗ ಸಿಲ್ವರ್ ಫಿನಿಷ್ ಪಡೆದಿರುವ ಹೆಚ್ಚು ದಪ್ಪ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿದೆ.
SUVಯ ಪ್ರೊಫೈಲ್ ನಲ್ಲಿ ಹೊಸದಾದ ಅಲಾಯ್ ವೀಲ್ ಅನ್ನು ಹೊರತುಪಡಿಸಿ ಯಾವುದೇ ಹೆಚ್ಚು ಬದಲಾವಣೆ ಪಡೆದಿಲ್ಲ. ಹಿಂಭಾಗದಲ್ಲಿ, ಫೇಸ್ಲಿಫ್ಟ್ ಆಗಿರುವ ಕ್ರೆಟಾ ಮುಂಭಾಗದಲ್ಲಿ ಇರುವಂತೆ ತಲೆಕೆಳಗಾದ L-ಆಕಾರದ ಡಿಸೈನ್ ಅನ್ನು ಪ್ರತಿಬಿಂಬಿಸುವ ಕನೆಕ್ಟ್ ಆಗಿರುವ LED ಟೈಲ್ ಲ್ಯಾಂಪ್ಗಳೊಂದಿಗೆ ಬರುತ್ತದೆ. ಬಂಪರ್ ಕೆಲವು ಸಣ್ಣ ಬದಲಾವಣೆಗಳನ್ನು ಪಡೆದಿದೆ, ಅದರಲ್ಲಿ ದೊಡ್ಡದಾದ ಸಿಲ್ವರ್ ಸ್ಕಿಡ್ ಪ್ಲೇಟ್ ಸೇರಿದೆ.
ಕ್ಯಾಬಿನ್ನ ಹೊಸದಾದ ಲುಕ್
2024 ಕ್ರೆಟಾದ ಒಳಭಾಗವನ್ನು ಸಂಪೂರ್ಣವಾಗಿ ರೀಡಿಸೈನ್ ಮಾಡಲಾಗಿದೆ, ಈಗ ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್ಪ್ಲೇಗಳನ್ನು ಒಳಗೊಂಡಿದೆ (ಇದರಲ್ಲಿ ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್ ಗಾಗಿ ಮತ್ತು ಇನ್ನೊಂದು ಇನ್ಸ್ಟ್ರುಮೆಂಟೇಷನ್ ಗಾಗಿ). ಪ್ಯಾಸೆಂಜರ್ ಬದಿಯ ಡ್ಯಾಶ್ಬೋರ್ಡ್ನ ಮೇಲಿನ ಭಾಗವು ಈಗ ಪಿಯಾನೋ ಬ್ಲಾಕ್ ಪ್ಯಾನೆಲ್ ಅನ್ನು ಹೊಂದಿದೆ, ಅದರ ಕೆಳಗೆ ಈಗ ಆಂಬಿಯೆಂಟ್ ಲೈಟಿಂಗ್ ಜೊತೆಗೆ ತೆರೆದ ಸ್ಟೋರೇಜ್ ಸ್ಥಳ ನೀಡಲಾಗಿದೆ. ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಕಿಯಾ ಸೆಲ್ಟೋಸ್ನಂತೆಯೇ ಟಚ್ ಆಧಾರಿತ ಕಂಟ್ರೋಲ್ ಗಳೊಂದಿಗೆ ಅಪ್ಡೇಟ್ ಮಾಡಲಾಗಿದೆ.
ಇದನ್ನು ಕೂಡ ಓದಿ: ಈ ಜನವರಿಯಲ್ಲಿ ಕೆಲವು ಹ್ಯುಂಡೈ ಕಾರುಗಳ ಖರೀದಿಯೊಂದಿಗೆ ರೂ 3 ಲಕ್ಷದವರೆಗೆ ಉಳಿತಾಯ ಮಾಡಿ
ನೀಡಲಾಗಿರುವ ಫೀಚರ್ ಗಳು
ಈ ಮಿಡ್ ಲೈಫ್ ಅಪ್ಡೇಟ್ ನೊಂದಿಗೆ, ಕ್ರೆಟಾ 10.25-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಡ್ಯುಯಲ್-ಝೋನ್ ಎಸಿ, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ಸ್ (ADAS) ನಂತಹ ಫೀಚರ್ ಗಳನ್ನು ಪಡೆದುಕೊಂಡಿದೆ. ಇದರ ಜೊತೆಗೆ 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್ರೂಫ್, ವೈರ್ಲೆಸ್ ಫೋನ್ ಚಾರ್ಜಿಂಗ್, 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳೊಂದಿಗೆ ನೀಡಲಾಗಿದೆ. ಆರು ಏರ್ಬ್ಯಾಗ್ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮೂಲಕ ಪ್ಯಾಸೆಂಜರ್ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.
ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳು
ಹುಂಡೈ ತನ್ನ 2024 ಕ್ರೆಟಾವನ್ನು ಮೂರು ಪವರ್ಟ್ರೇನ್ ಆಯ್ಕೆಗಳೊಂದಿಗೆ ನೀಡುತ್ತಿದೆ:
-
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ (115 PS/ 144 Nm): 6-ಸ್ಪೀಡ್ MT, CVT
-
1.5-ಲೀಟರ್ ಟರ್ಬೊ-ಪೆಟ್ರೋಲ್ (160 PS/ 253 Nm): 7-ಸ್ಪೀಡ್ DCT
-
1.5-ಲೀಟರ್ ಡೀಸೆಲ್ (116 PS/ 250 Nm): 6-ಸ್ಪೀಡ್ MT, 6-ಸ್ಪೀಡ್ AT
ಇದನ್ನು ಕೂಡ ಓದಿ: ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ವೇರಿಯಂಟ್ ಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನು ಬಹಿರಂಗಪಡಿಸಲಾಗಿದೆ
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಫೇಸ್ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾ ಆರಂಭಿಕ ಬೆಲೆಯು ರೂ.11 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಬಹುದು ಎಂದು ನಾವು ಅಂದುಕೊಂಡಿದ್ದೇವೆ. ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, MG ಆಸ್ಟರ್ ಮತ್ತು ಸಿಟ್ರೋನ್ C3 ಏರ್ಕ್ರಾಸ್ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಓದಿ: ಹುಂಡೈ ಕ್ರೆಟಾ ಆಟೋಮ್ಯಾಟಿಕ್
0 out of 0 found this helpful