Login or Register ಅತ್ಯುತ್ತಮ CarDekho experience ಗೆ
Login

ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ ಈಗ ಇನ್ನಷ್ಟು ಫೀಚರ್ ಗಳು ಮತ್ತು ADAS ನೊಂದಿಗೆ ಬಿಡುಗಡೆಯಾಗಿದೆ, ಬೆಲೆಗಳು ರೂ 7.99 ಲಕ್ಷದಿಂದ ಪ್ರಾರಂಭವಾಗಲಿದೆ

published on ಜನವರಿ 12, 2024 05:25 pm by rohit for ಕಿಯಾ ಸೊನೆಟ್

ಫೇಸ್‌ಲಿಫ್ಟ್ ಆಗಿರುವ ಸೋನೆಟ್ ಅನ್ನು ಏಳು ವೇರಿಯಂಟ್ ಗಳಲ್ಲಿ ನೀಡಲಾಗುತ್ತದೆ: HTE, HTK, HTK+, HTX, HTX+, GTX+, ಮತ್ತು X-ಲೈನ್.

  • 2020 ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ನಂತರ ಇದು ಸಬ್-4m SUV ಗಾಗಿ ಆಗುತ್ತಿರುವ ಮೊದಲ ಪ್ರಮುಖ ಅಪ್ಡೇಟ್ ಆಗಿದೆ.

  • SUVಯು ಈಗ ರೀಡಿಸೈನ್ ಆಗಿರುವ ಫಾಸಿಯಾ, ಕನೆಕ್ಟೆಡ್ ಟೈಲ್ಲ್ಯಾಂಪ್ಗಳು ಮತ್ತು ಹೊಸ ಅಲಾಯ್ ವೀಲ್ ಗಳನ್ನು ಪಡೆದಿದೆ.

  • ರಿವೈಸ್ ಆಗಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇಯನ್ನು ಹೊರತುಪಡಿಸಿ ಇದರ ಕ್ಯಾಬಿನ್ ಡಿಸೈನ್ ನಲ್ಲಿ ಹೆಚ್ಚು ಬದಲಾವಣೆಗಳಾಗಿಲ್ಲ.

  • ಹೊಸದಾಗಿ ಸೇರಿಸಲಾದ ಫೀಚರ್ ಗಳಲ್ಲಿ 360-ಡಿಗ್ರಿ ಕ್ಯಾಮೆರಾ ಮತ್ತು ADAS ಸೇರಿವೆ.

  • ಇದನ್ನು ಮೂರು ಎಂಜಿನ್ ಮತ್ತು ನಾಲ್ಕು ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಒದಗಿಸಲಾಗಿದೆ; ಡೀಸೆಲ್-MT ಮತ್ತೆ ವಾಪಾಸ್ ಬಂದಿದೆ.

  • ಬೆಲೆಗಳು ರೂ 7.99 ಲಕ್ಷದಿಂದ ಶುರುವಾಗಿ ರೂ 15.69 ಲಕ್ಷದವರೆಗೆ ಇರುತ್ತದೆ (ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆ).

ಡಿಸೆಂಬರ್ 2023 ರಲ್ಲಿ ಭಾರತದಲ್ಲಿ ಅನಾವರಣಗೊಂಡಾಗ ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ ಮೊದಲ ಲುಕ್ ಅನ್ನು ನಾವು ನೋಡಿದ್ದೇವೆ. ಕಿಯಾ ಈಗ ಅಪ್ಡೇಟ್ ಆಗಿರುವ SUV ಅನ್ನು ಅದರ ಸಂಪೂರ್ಣ ವಿವರ ಹೊಂದಿರುವ ವೇರಿಯಂಟ್-ವಾರು ಬೆಲೆ ಪಟ್ಟಿಯನ್ನು ಬಹಿರಂಗಪಡಿಸುವ ಮೂಲಕ ಬಿಡುಗಡೆ ಮಾಡಿದೆ:

ಹೊಸ ಸೋನೆಟ್ ಬೆಲೆಗಳು

ವೇರಿಯಂಟ್

1.2-ಲೀಟರ್ N.A. ಪೆಟ್ರೋಲ್ MT

1-ಲೀಟರ್ ಟರ್ಬೊ-ಪೆಟ್ರೋಲ್ iMT

1-ಲೀಟರ್ ಟರ್ಬೊ-ಪೆಟ್ರೋಲ್ DCT

1.5-ಲೀಟರ್ ಡೀಸೆಲ್ MT

1.5-ಲೀಟರ್ ಡೀಸೆಲ್ iMT

1.5-ಲೀಟರ್ ಡೀಸೆಲ್ AT

HTE

ರೂ 7.99 ಲಕ್ಷ

ರೂ 9.79 ಲಕ್ಷ

HTK

ರೂ 8.79 ಲಕ್ಷ

ರೂ 10.39 ಲಕ್ಷ

HTK+

ರೂ 9.90 ಲಕ್ಷ

ರೂ 10.49 ಲಕ್ಷ

ರೂ 11.39 ಲಕ್ಷ

HTX

ರೂ 11.49 ಲಕ್ಷ

ರೂ 12.29 ಲಕ್ಷ

ರೂ 11.99 ಲಕ್ಷ

ರೂ 12.60 ಲಕ್ಷ

ರೂ 12.99 ಲಕ್ಷ

HTX+

ರೂ 13.39 ಲಕ್ಷ

ರೂ 13.69 ಲಕ್ಷ

ರೂ 14.39 ಲಕ್ಷ

GTX+

ರೂ 14.50 ಲಕ್ಷ

ರೂ 15.50 ಲಕ್ಷ

X-Line

X- ಲೈನ್

ರೂ 14.69 ಲಕ್ಷ

ರೂ 15.69 ಲಕ್ಷ

ಎಲ್ಲಾ ಬೆಲೆಗಳು ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯಾಗಿದೆ

ಫೇಸ್ಲಿಫ್ಟ್ನೊಂದಿಗೆ, ಸೋನೆಟ್ಆರಂಭಿಕ ಬೆಲೆ ರೂ. 20,000 ದಷ್ಟು ಜಾಸ್ತಿಯಾಗಿದೆ. ಹಾಗೆಯೇ ಇದರ ಟಾಪ್-ಸ್ಪೆಕ್ ವೇರಿಯಂಟ್ ರೂ 80,000 ವರೆಗೆ ದುಬಾರಿಯಾಗಿದೆ.

ಡಿಸೈನ್ ಬದಲಾವಣೆಗಳ ವಿವರಗಳು

LED DRL ಗಳು ಮತ್ತು ಕನೆಕ್ಟೆಡ್ ಟೈಲ್ಲ್ಯಾಂಪ್ಗಳಂತಹ ಅಪ್ಡೇಟ್ ಆಗಿರುವ ಲೈಟಿಂಗ್ ಎಲಿಮೆಂಟ್ ಗಳ ಮೂಲಕ, ಕಿಯಾ ಸೋನೆಟ್ ಮುಂಭಾಗ ಮತ್ತು ಹಿಂಭಾಗದ ಲುಕ್ ಅನ್ನು ಹೆಚ್ಚು ಸ್ಟೈಲಿಶ್ ಮಾಡಿದೆ. ಕ್ಯಾಬಿನ್ ನಲ್ಲಿ ಹೆಚ್ಚು ಬದಲಾವಣೆಗಳಾಗಿಲ್ಲ, ರೀಡಿಸೈನ್ ಆಗಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಹೊರತುಪಡಿಸಿ ಅದರ ಡ್ಯಾಶ್ಬೋರ್ಡ್ ಡಿಸೈನ್ ಹೆಚ್ಚಾಗಿ ಹಾಗೆಯೇ ಉಳಿದಿದೆ.

ಬಹಳಷ್ಟು ಫೀಚರ್ ಗಳನ್ನು ಸೇರಿಸಲಾಗಿದೆ

ಕಿಯಾ ಸೋನೆಟ್ಹಲವಾರು ಫೀಚರ್ ಅಪ್ಗ್ರೇಡ್ಗೆ ಒಳಗಾಗಿದೆ, ಅಪ್ಗ್ರೇಡ್ಗಳು ಅದನ್ನು ಮತ್ತೊಮ್ಮೆ ತನ್ನ ಸೆಗ್ಮೆಂಟ್ ನಲ್ಲಿರುವ ಅತ್ಯಂತ ಸುಸಜ್ಜಿತ SUV ಗಳಲ್ಲಿ ಒಂದಾಗಿ ಮಾಡುತ್ತದೆ. ಗಮನಾರ್ಹ ಅಪ್ಡೇಟ್ ಗಳಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ, ಆರು ಏರ್ಬ್ಯಾಗ್ಗಳು (ಸ್ಟ್ಯಾಂಡರ್ಡ್ಆಗಿರುವ), ಮತ್ತು 4-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಸೇರಿವೆ. 10 ಲೆವೆಲ್-1 ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ಸ್ (ADAS) ಇದರ ಅತಿ ದೊಡ್ಡ ಅಪ್ಗ್ರೇಡ್ಆಗಿದೆ.

ಇದನ್ನು ಕೂಡ ಓದಿ: 2024 ಕಿಯಾ ಸೋನೆಟ್ ಫೇಸ್‌ಲಿಫ್ಟ್ ರಿವ್ಯೂ: ಪರಿಚಿತವಾಗಿದೆ, ಉತ್ತಮವಾಗಿದೆ, ಬೆಲೆ ಹೆಚ್ಚಿಸಲಾಗಿದೆ.

ಎಂಜಿನ್ ನಲ್ಲಿ ಏನೇನಿದೆ?

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್, ಎರಡೂ ಆಯ್ಕೆಗಳನ್ನು ನೀಡುವ ನಾಲ್ಕು ಸಬ್-4m SUV ಗಳಲ್ಲಿ ಇದೂ ಒಂದಾಗಿದೆ. ಅದರ ಎಲ್ಲಾ ಟೆಕ್ನಿಕಲ್ ಸ್ಪೆಸಿಫಿಕೇಷನ್ ಗಳನ್ನು ಇಲ್ಲಿ ನೀಡಲಾಗಿದೆ:

  • 1.2-ಲೀಟರ್ ಪೆಟ್ರೋಲ್ (83 PS/115 Nm): 5-ಸ್ಪೀಡ್ MT

  • 1-ಲೀಟರ್ ಟರ್ಬೊ-ಪೆಟ್ರೋಲ್ (120 PS/172 Nm): 6-ಸ್ಪೀಡ್ iMT, 7-ಸ್ಪೀಡ್ DCT

  • 1.5-ಲೀಟರ್ ಡೀಸೆಲ್ (116 PS/250 Nm): 6-ಸ್ಪೀಡ್ MT (ಹೊಸ), 6-ಸ್ಪೀಡ್ iMT, 6-ಸ್ಪೀಡ್ AT

2023 ಆರಂಭದಲ್ಲಿ ಕಿಯಾದ ಎಲ್ಲಾ ಕಾರಿನ ಶ್ರೇಣಿಗಳಲ್ಲಿ ಸ್ಥಗಿತಗೊಳಿಸಲಾದ ಡೀಸೆಲ್-ಮ್ಯಾನ್ಯುವಲ್ ಕಾಂಬೊ ಮತ್ತೆ ವಾಪಾಸ್ ಬಂದಿದೆ.

ಹೊಸ ಸೋನೆಟ್ ಪ್ರತಿಸ್ಪರ್ಧಿಗಳು

ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್‌, ಮಾರುಕಟ್ಟೆಯಲ್ಲಿರುವ ಟಾಟಾ ನೆಕ್ಸಾನ್, ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್ ಸಬ್-4m ಕ್ರಾಸ್ಒವರ್ SUV ಯೊಂದಿಗೆ ಸ್ಪರ್ಧಿಸಲಿದೆ.

ಇನ್ನಷ್ಟು ಓದಿ: ಕಿಯಾ ಸೋನೆಟ್ ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 810 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಸೊನೆಟ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ