Login or Register ಅತ್ಯುತ್ತಮ CarDekho experience ಗೆ
Login

Facelifted Land Rover Range Rover Evoque ಬಿಡುಗಡೆ; ಬೆಲೆಗಳು 67.90 ಲಕ್ಷ ರೂ.ನಿಂದ ಪ್ರಾರಂಭ

ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ಗಾಗಿ rohit ಮೂಲಕ ಜನವರಿ 30, 2024 09:45 pm ರಂದು ಪ್ರಕಟಿಸಲಾಗಿದೆ

ಈ ಫೇಸ್‌ಲಿಫ್ಟ್‌ನೊಂದಿಗೆ, ಎಂಟ್ರಿ-ಲೆವೆಲ್‌ನ ರೇಂಜ್ ರೋವರ್ ಎಸ್‌ಯುವಿಯು 5 ಲಕ್ಷ ರೂ. ನಷ್ಟು ಕಡಿತದೊಂದಿಗೆ ಹೆಚ್ಚು ಕೈಗೆಟಕುವ ಕಾರು ಆಗಿದೆ

  • ಲ್ಯಾಂಡ್ ರೋವರ್ 2023 ರ ಮಧ್ಯದಲ್ಲಿ ಜಾಗತಿಕವಾಗಿ ರಿಫ್ರೆಶ್ ಮಾಡಿದ ರೇಂಜ್ ರೋವರ್ ಇವೊಕ್ ಅನ್ನು ಪರಿಚಯಿಸಿತು.
  • ಹೊರಗಿನ ಆಪ್‌ಡೆಟ್‌ಗಳು ಸ್ಲೀಕರ್ ಮತ್ತು ಸುಧಾರಿಸಿದ ಲೈಟಿಂಗ್‌ ಮತ್ತು ತಾಜಾ ಅಲಾಯ್‌ ವೀಲ್‌ಗಳ ವಿನ್ಯಾಸವನ್ನು ಒಳಗೊಂಡಿವೆ.
  • ಇಂಟಿರೀಯರ್‌ನಲ್ಲಾಗಿರುವ ಬದಲಾವಣೆಗಳು ಹೆಚ್ಚು ಮಹತ್ವದ್ದಾಗಿವೆ, ಇದು ಸುಧಾರಣೆ ಮಾಡಲಾದ ಸೆಂಟರ್ ಕನ್ಸೋಲ್ ಮತ್ತು ತಾಜಾ ಅಪ್ಹೋಲ್ಸಟೆರಿಯನ್ನು ಒಳಗೊಂಡಿರುತ್ತದೆ.
  • ಈಗ ದೊಡ್ಡದಾದ 11.4-ಇಂಚಿನ ಟಚ್‌ಸ್ಕ್ರೀನ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಸ್ಟ್ಯಾಂಡರ್ಡ್‌ ಆಗಿ ಪಡೆಯುತ್ತದೆ.
  • ಮೊದಲಿನಂತೆಯೇ ಅದೇ 2-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಮುಂದುವರಿಯುತ್ತದೆ.

ಫೇಸ್‌ಲಿಫ್ಟೆಡ್ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ಅನ್ನು 2023 ರ ಮಧ್ಯದಲ್ಲಿ ಜಾಗತಿಕವಾಗಿ ಅನಾವರಣಗೊಳಿಸಿದ ನಂತರ ಅಂತಿಮವಾಗಿ ಭಾರತೀಯ ಮಾರುಕಟ್ಟೆಗೆ ತರಲಾಗಿದೆ. ಇದು ಸೂಕ್ಷ್ಮ ವಿನ್ಯಾಸ ವರ್ಧನೆಗಳಿಗೆ ಒಳಗಾಗಿದೆ, ತಂತ್ರಜ್ಞಾನದಲ್ಲಿ ಆಪ್‌ಗ್ರೇಡ್‌ಗಳನ್ನು ಸ್ವೀಕರಿಸಿದೆ ಮತ್ತು ಈಗ ಸುಧಾರಿತ ಮೈಲ್ಡ್‌ ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ಹೊಂದಿದೆ. ಭಾರತದಲ್ಲಿ, ಲ್ಯಾಂಡ್ ರೋವರ್ ಇದನ್ನು ಒಂದೇ ಡೈನಾಮಿಕ್ SE ವೇರಿಯೆಂಟ್‌ನಲ್ಲಿ ಮಾತ್ರ ನೀಡುತ್ತಿದೆ.

ವೇರಿಯಂಟ್-ವಾರು ಬೆಲೆಗಳು

ವೇರಿಯಂಟ್

ಬೆಲೆ

ಡೈನಾಮಿಕ್ ಎಸ್‌ಇ ಪೆಟ್ರೋಲ್

67.90 ಲಕ್ಷ ರೂ

ಡೈನಾಮಿಕ್ ಎಸ್‌ಇ ಡೀಸೆಲ್

67.90 ಲಕ್ಷ ರೂ

ಹೊರಹೋಗುವ ಮಾಡೆಲ್‌ಗೆ ಹೋಲಿಸಿದರೆ, ಫೇಸ್‌ಲಿಫ್ಟೆಡ್ ರೇಂಜ್ ರೋವರ್ ಇವೊಕ್ ಸುಮಾರು 5 ಲಕ್ಷದಷ್ಟು ಬೆಲೆ ಕಡಿತದೊಂದಿಗೆ ಹೆಚ್ಚು ಕೈಗೆಟುಕುವಂತಾಗಿದೆ.

ಹೊರಭಾಗದಲ್ಲಿ ಏನು ಬದಲಾಗಿದೆ?

ಫೇಸ್‌ಲಿಫ್ಟ್‌ನೊಂದಿಗೆ, ಎಸ್‌ಯುವಿಯು ಈಗ ಲ್ಯಾಂಡ್ ರೋವರ್‌ನ ಇತ್ತೀಚಿನ ಸಿಗ್ನೇಚರ್ ಗ್ರಿಲ್ ಮತ್ತು ಹೊಸ 4-ಪೀಸ್ ಅಂಶಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳು ಗ್ರಾಫಿಕ್ಸ್ ಅನ್ನು ಒಳಗೊಂಡಿರುವ ಸ್ಲೀಕರ್ ಸೆಟ್ ಹೆಡ್‌ಲೈಟ್‌ಗಳಂತಹ ಕೆಲವು ಸಣ್ಣ ಬಾಹ್ಯ ಸ್ಟೈಲಿಂಗ್ ಆಪ್‌ಡೇಟ್‌ಗಳನ್ನು ಪಡೆಯುತ್ತದೆ.

ಸೈಡ್‌ನಿಂದ ಗಮನಿಸುವಾಗ, ತಾಜಾ ಅಲಾಯ್ ವೀಲ್ ವಿನ್ಯಾಸ ಮಾತ್ರ ಬದಲಾವಣೆಯಾಗಿದೆ ಆದರೆ ಹಿಂಬದಿಯಲ್ಲಿ ತೀಕ್ಷ್ಣ ಕಣ್ಣಿನ ವೀಕ್ಷಕರು ಆಪ್‌ಗ್ರೇಡ್‌ ಮಾಡಿರುವ ಎಲ್‌ಇಡಿ ಟೈಲ್‌ಲೈಟ್ ಸೆಟಪ್ ಅನ್ನು ಗಮನಿಸುತ್ತಾರೆ. ರೇಂಜ್ ರೋವರ್ ಇವೊಕ್ ಈಗ ಟ್ರಿಬೆಕಾ ಬ್ಲೂ ಮತ್ತು ಕೊರಿಂಥಿಯನ್ ಬ್ರೋಂಜ್‌ ಎಂಬ ಎರಡು ತಾಜಾ ಬಣ್ಣಗಳಲ್ಲಿ ಬರುತ್ತದೆ. ಲ್ಯಾಂಡ್ ರೋವರ್ ಇನ್ನೂ ಈ ಎಸ್‌ಯುವಿಗಾಗಿ ಡ್ಯುಯಲ್-ಟೋನ್ ಪೇಂಟ್ ಆಯ್ಕೆಗಳನ್ನು ನೀಡುತ್ತಿದೆ ಮತ್ತು ಮೇಲ್ಛಾವಣಿಯನ್ನು ನಾರ್ವಿಕ್ ಬ್ಲ್ಯಾಕ್ ಮತ್ತು ಕೊರಿಂಥಿಯನ್ ಬ್ರೊಂಜ್‌ನಲ್ಲಿ ಫಿನಿಶ್‌ ಮಾಡಲಾಗಿದೆ.

ಇದನ್ನು ಸಹ ಪರಿಶೀಲಿಸಿ: ಹೊಸ ಆಲ್-ಎಲೆಕ್ಟ್ರಿಕ್ ಪೋರ್ಷೆ ಮ್ಯಾಕನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 7 ವಿಷಯಗಳು

ಕ್ಯಾಬಿನ್ ಮತ್ತು ವೈಶಿಷ್ಟ್ಯಗಳಲ್ಲಿ ಸಾಕಷ್ಟು ಆಪ್‌ಡೇಟ್‌ಗಳು

2024ರ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್‌ಗೆ ಹೆಚ್ಚು ಮಹತ್ವದ ಬದಲಾವಣೆಗಳನ್ನು ಕ್ಯಾಬಿನ್‌ನಲ್ಲಿ ಕಾಣಬಹುದು. ಇದು ಈಗ ಸೆಂಟರ್ ಕನ್ಸೋಲ್‌ಗಾಗಿ ಬದಲಾವಣೆ ಮಾಡಲಾದ ವಿನ್ಯಾಸವನ್ನು ಪಡೆಯುತ್ತದೆ, ಹೊಸದಾಗಿ ವಿನ್ಯಾಸಗೊಳಿಸಲಾದ ಡ್ರೈವ್ ಸೆಲೆಕ್ಟರ್ ಮತ್ತು ಕ್ಯಾಬಿನ್ ಸುತ್ತಲೂ ರಿಫ್ರೆಶ್ ಮಾಡಿದ ಅಪ್ಹೊಲ್ಸ್‌ಟೆರಿ ಮತ್ತು ಟ್ರಿಮ್ ಬಿಟ್‌ಗಳನ್ನು ಪಡೆಯುತ್ತದೆ.

ಹೊಸ ವೈಶಿಷ್ಟ್ಯಗಳ ವಿಷಯದಲ್ಲಿ, ಎಸ್‌ಯುವಿ ಈಗ ಬಾಗಿದ 11.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ (ಸ್ಟ್ಯಾಂಡರ್ಡ್ ಆಗಿ) ಮತ್ತು ವರ್ಧಿತ ಏರ್ ಪ್ಯೂರಿಫೈಯರ್ ಅನ್ನು ಹೊಂದಿದೆ. ಬೋರ್ಡ್‌ನಲ್ಲಿರುವ ಇತರ ತಂತ್ರಜ್ಞಾನದಲ್ಲಿ ಪನೋರಮಿಕ್ ಸನ್‌ರೂಫ್, ಕನೆಕ್ಟೆಡ್‌ ಕಾರ್ ಟೆಕ್, 14-ವೇ ಪವರ್-ಹೊಂದಾಣಿಕೆ ಚಾಲಕ ಸೀಟು, ಬಿಸಿಯಾದ ಮತ್ತು ಗಾಳಿ ಇರುವ ಮುಂಭಾಗದ ಆಸನಗಳು ಮತ್ತು ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಗಳನ್ನು ಒಳಗೊಂಡಿದೆ. ಹೊಸ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ಸುರಕ್ಷತಾ ಕಿಟ್ "ಪಾರದರ್ಶಕ ಬಾನೆಟ್" ವೀಕ್ಷಣೆಯೊಂದಿಗೆ 3D 360-ಡಿಗ್ರಿ ಕ್ಯಾಮೆರಾ ಮತ್ತು ಬಹು ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಉಪಯೋಗಿಸಿದ ಕಾರಿನ ಮೌಲ್ಯಮಾಪನ

ಕಾರ್ ಸರ್ವಿಸ್ ಹಿಸ್ಟರಿಯನ್ನು ಪರಿಶೀಲಿಸಿ

ಆಫರ್‌ನಲ್ಲಿರುವ ಪವರ್‌ಟ್ರೇನ್‌ಗಳು

ವಿಶೇಷಣಗಳು

2-ಲೀಟರ್ ಪೆಟ್ರೋಲ್

2-ಲೀಟರ್ ಡೀಸೆಲ್

ಪವರ್

249 ಪಿಎಸ್‌

204 ಪಿಎಸ್‌

ಟಾರ್ಕ್‌

365 ಎನ್‌ಎಮ್‌

430 ಎನ್‌ಎಮ್‌

ಟ್ರಾನ್ಸ್‌ಮಿಷನ್‌

9-ಸ್ಪೀಡ್ ಆಟೋಮ್ಯಾಟಿಕ್‌

9-ಸ್ಪೀಡ್ ಆಟೋಮ್ಯಾಟಿಕ್‌

ಕಾಂಪ್ಯಾಕ್ಟ್ ಐಷಾರಾಮಿ ಎಸ್‌ಯುವಿಯೊಂದಿಗೆ ಲ್ಯಾಂಡ್ ರೋವರ್ ಇನ್ನೂ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ನೀಡುತ್ತಿದೆ. ಇಂಧನ ದಕ್ಷತೆಯನ್ನು ಸುಧಾರಿಸಲು ಕಾರು ತಯಾರಕರು ಎರಡೂ ಎಂಜಿನ್‌ಗಳನ್ನು 48V ಮೈಲ್ಡ್‌-ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಿದ್ದಾರೆ. ಫೇಸ್‌ಲಿಫ್ಟೆಡ್ ರೇಂಜ್ ರೋವರ್ ಇವೊಕ್ ಆಲ್-ವೀಲ್-ಡ್ರೈವ್ ಸಿಸ್ಟಮ್ ಅನ್ನು ಪಡೆಯುತ್ತದೆ. ನಾವು ಇದರಲ್ಲಿ ಇಕೋ, ಕಂಫರ್ಟ್, ಗ್ರಾಸ್-ಗ್ರಾವೆಲ್-ಸ್ನೋ, ಮಡ್-ರಟ್ಸ್, ಸ್ಯಾಂಡ್, ಡೈನಾಮಿಕ್ ಮತ್ತು ಆಟೋಮ್ಯಾಟಿಕ್ ಎಂಬ ಹಲವು ಡ್ರೈವಿಂಗ್‌ ಮೋಡ್‌ಗಳನ್ನು ಸಹ ಪಡೆಯುತ್ತೇವೆ.

ಪ್ರತಿಸ್ಪರ್ಧಿಗಳ ಕುರಿತು ಹೇಳುವುದಾದರೆ

ಫೇಸ್‌ಲಿಫ್ಟೆಡ್ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ನ ಬೆಲೆಯನ್ನು ಗಮನಿಸಿದರೆ ಇದು ಮರ್ಸಿಡಿಸ್-ಬೆನ್ಜ್ ಜಿಎಲ್‌ಸಿ, ಆಡಿ ಕ್ಯೂ5 ಮತ್ತು ಬಿಎಂಡಬ್ಲ್ಯು ಎಕ್ಸ್ 3 ಗಳಿಗೆ ಸಮೀಪದ ಬೆಲೆಯನ್ನು ಹೊಂದಿದೆ.

ಇವುಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ

ಇನ್ನಷ್ಟು ಓದಿ: ಲ್ಯಾಂಡ್ ರೋವರ್ ರೇಂಜ್ ರೋವರ್ ಇವೊಕ್ ಆಟೋಮ್ಯಾಟಿಕ್

Share via

Write your Comment on Land Rover ರೇಂಜ್‌ ರೋವರ್ evoque

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ