ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಮಹೀಂದ್ರಾ XUV300, ಎರಡು ಹೊಸ ವಿವರಗಳು ಬಹಿರಂಗ
ಇತ್ತೀಚಿನ ಸ್ಪೈ ಶಾಟ್ XUV700-ಪ್ರೇರಿತ ಫ್ಲೋಟಿಂಗ್ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಅಲಾಯ್ ವ್ಹೀಲ್‌ಗಳ ಸೆಟ್ ಅನ್ನು ನಮಗೆ ತೋರಿಸುತ್ತಿದೆ
-
ಎಕ್ಸ್‌ಟೀರಿಯರ್ ಪರಿಷ್ಕರಣೆಗಳು ಸ್ಪ್ಲಿಟ್ ಗ್ರಿಲ್ ಸೆಟಪ್ ಮತ್ತು ಸಂಪರ್ಕಿತ ಟೈಲ್‌ಲೈಟ್‌ಗಳನ್ನು ಹೊಂದಿರುವ ಸಾಧ್ಯತೆಯಿದೆ.
-
ಇದು ಹೆಚ್ಚು ನವೀಕೃತ ಕ್ಯಾಬಿನ್ ಅನ್ನು ಪಡೆಯುತ್ತದೆ.
-
ಹೊಸ ಫೀಚರ್‌ಗಳು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳನ್ನು ಪಡೆಯುತ್ತದೆ.
-
ಪ್ರಸ್ತುತ ಮಾಡೆಲ್‌ನಲ್ಲಿರುವಂತೆಯೇ ಅದೇ ಎಂಜಿನ್ ಆಯ್ಕೆಯೊಂದಿಗೆ ಮುಂದುವರಿಯುವ ಸಾಧ್ಯತೆಯಿದೆ; ಎಎಂಟಿ ಆಯ್ಕೆಯ ಬದಲಿಗೆ ಟಾರ್ಕ್ ಕನ್ವರ್ಟರ್ ಯೂನಿಟ್ ಅನ್ನು ಪಡೆಯಬಹುದು.
-
ಇದು ಮುಂದಿನ ವರ್ಷದ ಆರಂಭದಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದ್ದು, ರೂ. 9 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ನಿಗದಿಪಡಿಸುವ ಸಾಧ್ಯತೆಯಿದೆ.
ಈ ನವೀಕೃತ ಮಹೀಂದ್ರಾ XUV300ಯು ಅಭಿವೃದ್ಧಿ ಹಂತದಲ್ಲಿದ್ದು ಈ ಎಸ್‌ಯುವಿಯ ಮತ್ತೊಂದು ಪರೀಕ್ಷಾ ವಾಹನವುs ನಮಗೆ ಗೋಚರಿಸಿದೆ. ಇದನ್ನು ಸಂಪೂರ್ಣವಾಗಿ ಮರೆಮಾಚಿದ್ದರೂ, ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್‌ನಲ್ಲಿ ಒಂದೆರಡು ಹೊಸ ವಿವರಗಳು ಗೋಚರಿಸುತ್ತವೆ. ಈ ವಿವರಗಳು ನಮಗೆ ಏನನ್ನು ಸೂಚಿಸುತ್ತವೆ ಎಂಬುದನ್ನು ನೋಡೋಣ.
ಹೊದಿಕೆಯಡಿಯಲ್ಲಿ ಏನನ್ನು ಕಾಣಬಹುದು
ಮೊದಲ ನೋಟದಲ್ಲಿ, ಪರೀಕ್ಷಾ ವಾಹನದಲ್ಲಿ ಅತ್ಯಂತ ಗಮನಾರ್ಹ ಬದಲಾವಣೆಯೆಂದರೆ ಅಲಾಯ್ ವ್ಹೀಲ್‌ಗಳ ಹೊಸ ವಿನ್ಯಾಸ. ಅಲ್ಲದೇ ಈ ಪರೀಕ್ಷಾ ವಾಹನವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, XUV700-ಪ್ರೇರಿತವಾದ ಹೊಸ ಫ್ಲೋಟೆಡ್ ಟಚ್‌ಸ್ಕ್ರೀನ್ ಅನ್ನು ಕಾಣಬಹುದು.
ಈ ನವೀಕೃತ XUV300 ರಿಫ್ರೆಶ್ ಮಾಡಲ್ಪಟ್ಟ ಸ್ಪ್ಲಿಟ್ ಗ್ರಿಲ್ ಸೆಟಪ್, ಬಾನೆಟ್ ಮತ್ತು ಬಂಪರ್ ಸೇರಿದಂತೆ ಮುಂಭಾಗ ಮತ್ತು ಹಿಂಭಾಗದಲ್ಲಿ ಸಮಗ್ರ ಬದಲಾವಣೆಯನ್ನು ಪಡೆದಿದೆ. ಹಿಂಭಾಗದಲ್ಲಿ, ಬೂಟ್ ಲಿಡ್ ಮೊದಲಿಗಿಂತ ಹೆಚ್ಚು ಗಟ್ಟಿಮುಟ್ಟಾಗಿದೆ ಮತ್ತು ಉತ್ತಮ ನೋಟಕ್ಕಾಗಿ ಲೈಸೆನ್ಸ್ ಪ್ಲೇಟ್ ಅನ್ನು ಸ್ಥಳಾಂತರಿಸಲಾಗಿದೆ. ಇದು XUV700 ಪ್ರೇರಿತ ಸಿ-ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಮತ್ತು ಹಿಂಭಾಗದಲ್ಲಿ ಸಂಪರ್ಕಿತ ಟೈಲ್‌ಲೈಟ್ ಸೆಟಪ್ ಅನ್ನು ಪಡೆಯಬಹುದು ಎಂದು ನಾವು ನಿರೀಕ್ಷಿಸುತ್ತೇವೆ.
ಇದನ್ನೂ ನೋಡಿ: ಪ್ರಥಮ ಬಾರಿಗೆ ಕಾಣಿಸಿಕೊಂಡ ಮಹೀಂದ್ರಾ BE.05 ರ ಸ್ಪೈ ಶಾಟ್‌ಗಳು
ನಿರೀಕ್ಷಿಸಬಹುದಾದ ಸೌಕರ್ಯಗಳು
ಈಗಾಗಲೇ ಅಸ್ತಿತ್ವದಲ್ಲಿರುವ ಸಿಂಗಲ್-ಪೇನ್ ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಕೆಲವು ಫೀಚರ್‌ಗಳನ್ನು ಇದು ಉಳಿಸಿಕೊಂಡು ಈ ನವೀಕೃತ XUV300 ಮಹೀಂದ್ರಾದ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 360-ಡಿಗ್ರಿ ಕ್ಯಾಮರಾ, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳನ್ನು ಮತ್ತು ದೊಡ್ಡ ಫ್ಲೋಟಿಂಗ್ ಟಚ್‌ಸ್ಕ್ರೀನ್ ಸೆಟಪ್ ಅನ್ನು ಪಡೆಯುತ್ತದೆ.
ಈಗಾಗಲೇ ಅಸ್ತಿತ್ವದಲ್ಲಿರುವ ಮಾಡೆಲ್‌ನಿಂದ ಸುರಕ್ಷತಾ ಕಿಟ್ ಅನ್ನು ಹೊಸ ನವೀಕೃತ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗೆ ಸಹ ತರಲಾಗುವುದು, ಇದು ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ಆಲ್-ವ್ಹೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ರಿಯರ್‌ವ್ಯೂ ಕ್ಯಾಮರಾವನ್ನು ಒಳಗೊಂಡಿರುತ್ತದೆ.
ಪವರ್‌ಟ್ರೇನ್ ಕುರಿತು
ಈ 2024 XUV300 ಪ್ರಸ್ತುತ ಮಾದರಿಯ ಅದೇ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಅವುಗಳೆಂದರೆ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (110PS/200Nm) ಮತ್ತು 1.5-ಲೀಟರ್ ಡಿಸೇಲ್ ಎಂಜಿನ್ (117PS/300Nm). ಎರಡು ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಎಎಂಟಿಗೆ ಜೋಡಿಸಲಾಗಿದೆ. ಮಹಿಂದ್ರಾ 1.2-ಲೀಟರ್ TGDi ಟರ್ಬೋ-ಪೆಟ್ರೋಲ್ ಎಂಜಿನ್ (130PS/250Nm) ಅನ್ನು ನೀಡುತ್ತಿದ್ದು, ಇದು ಕೇವಲ 6-ಸ್ಪೀಡ್ ಮ್ಯಾನ್ಯುವಲ್‌ನಲ್ಲಿ ಮಾತ್ರ ಲಭ್ಯವಿದೆ. ಮಹೀಂದ್ರಾ ಈ ನವೀಕೃತ ಎಸ್‌ಯುವಿನಲ್ಲಿ ಪ್ರಸ್ತುತ ಲಭ್ಯವಿರುವ ಎಎಂಟಿ ಗೇರ್‌ಬಾಕ್ಸ್ ಬದಲಿಗೆ ಟಾರ್ಕ್ ಕನ್ವರ್ಟರ್ ಯೂನಿಟ್ ಅನ್ನು ನೀಡಬಹುದು ಎಂದು ನಾವು ನಿರೀಕ್ಷಿಸುತ್ತೇವೆ.
ಬಿಡುಗಡೆ, ನಿರೀಕ್ಷಿತ ಬೆಲೆ, ಪ್ರತಿಸ್ಪರ್ಧಿಗಳು
ಈ ನವೀಕೃತ ಮಹೀಂದ್ರಾ XUV300 2024 ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಇದರ ಆರಂಭಿಕ ಬೆಲೆಯನ್ನು ರೂ. 9 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ. ಇದು ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ ಮತ್ತು ಕಿಯಾ ಸೊನೆಟ್ ಜೊತೆಗೆ ತನ್ನ ಸ್ಪರ್ಧೆಯನ್ನು ಮುಂದುವರಿಸುತ್ತದೆ.
ಇನ್ನಷ್ಟು ಇಲ್ಲಿ ಓದಿ : ಮಹೀಂದ್ರಾ XUV300 ಎಎಂಟಿ