• English
  • Login / Register

Kia Sonet Facelift; ಇಲ್ಲಿದೆ ಈ ಎಸ್‌ಯುವಿಯ ಮೊದಲ ಅಧಿಕೃತ ನೋಟ

ಕಿಯಾ ಸೊನೆಟ್ ಗಾಗಿ rohit ಮೂಲಕ ಡಿಸೆಂಬರ್ 04, 2023 11:52 am ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ನವೀಕೃತ ಕಿಯಾ ಸೊನೆಟ್ ಭಾರತದಲ್ಲಿ ಡಿಸೆಂಬರ್ 14 ರಂದು ಬಹಿರಂಗಗೊಳ್ಳಲಿದೆ

Kia Sonet facelift teased

  •  ಕಿಯಾ ಮೊದಲ ಬಾರಿಗೆ 2020 ರಲ್ಲಿ ಭಾರತದಲ್ಲಿ ಸೊನೆಟ್ ಅನ್ನು ಪರಿಚಯಿಸಿತು.
  •  ಇದರ ಮೊದಲ ಟೀಸರ್‌ನಲ್ಲಿ ಪರಿಷ್ಕೃತ ಗ್ರಿಲ್, ಎಲ್‌ಇಡಿ ಡಿಆರ್‌ಎಲ್‌ಗಳು, ಹೆಡ್‌ಲೈಟ್‌ಗಳು ಮತ್ತು ಫಾಗ್‌ ಲ್ಯಾಂಪ್‌ಗಳನ್ನು ನೋಡಬಹುದು.
  •  ಕ್ಯಾಬಿನ್ ನವೀಕರಣಗಳು ನವೀನ ಮೇಲ್ಗವಸು ಮತ್ತು ಹೊಸ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್ ಅನ್ನು ಹೊಂದಿರಬಹುದು.
  •  360-ಡಿಗ್ರಿ ಕ್ಯಾಮರಾ ಮತ್ತು ಬಹುಶಃ ADAS ಅನ್ನು ಇದರ ನಿರೀಕ್ಷಿತ ಫೀಚರ್‌ಗಳು ಒಳಗೊಂಡಿರಬಹುದು.
  •  ಅಸ್ತಿತ್ವದಲ್ಲಿರುವ ಸೊನೆಟ್‌ನ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್-ಗೇರ್‌ಬಾಕ್ಸ್ ಆಯ್ಕೆಗಳನ್ನು ಪಡೆಯಬಹುದು.
  •  ಬೆಲೆಯು ರೂ 8 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್-ಶೋರೂಮ್).

 ಕೆಲವು ದಿನಗಳ ಹಿಂದಷ್ಟೇ ನಾವು ನವೀಕೃತ ಕಿಯಾ ಸೊನೆಟ್‌ನ ಅನಾವರಣ ದಿನಾಂಕವನ್ನು ನಿಮಗೆ ತಿಳಿಸಿದ್ದೇವೆ. ಈಗ, ಈ ನವೀಕೃತ ಎಸ್‌ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸುವ ಮೂಲಕ ಕಾರು ತಯಾರಕರು ಅದನ್ನು ಖಚಿತಪಡಿಸಿದ್ದಾರೆ.

 

 ಗಮನಿಸಲಾದ ವಿವರಗಳು

 ಈ ವೀಡಿಯೊ ನವೀಕೃತ ಎಸ್‌ಯುವಿಯ ಮುಂಭಾಗದ ಒಂದು ನೋಟವನ್ನು ನೀಡುತ್ತದೆ ಮತ್ತು ಟ್ವೀಕ್ ಮಾಡಲಾದ ಗ್ರಿಲ್‌ನ ವಿನ್ಯಾಸ, ತೀಕ್ಷ್ಣ ಮಲ್ಟಿ-ರಿಫ್ಲೆಕ್ಟರ್, ಎಲ್‌ಇಡಿ ಹೆಡ್‌ಲೈಟ್ ಕ್ಲಸ್ಟರ್‌ಗಳು ಮತ್ತು ಫಾಂಗ್ ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ನಾವು ಇದರಲ್ಲಿ ನೋಡಬಹುದು. ಚೀನಾ-ಸ್ಪೆಕ್ ನವೀಕೃತ ಸೊನೆಟ್‌ನಲ್ಲಿ ನಾವು ಈಗಾಗಲೇ ಈ ಹೆಚ್ಚಿನ ಬದಲಾವಣೆಗಳನ್ನು ನೋಡಿದ್ದೇವೆ, ಆದರೆ ಇಂಡಿಯಾ-ಸ್ಪೆಕ್ ಆವೃತ್ತಿಯು ಕೆಲವು ಬದಲಾವಣೆಗಳನ್ನು ಹೊಂದಿರುತ್ತದೆ. ಈ ಟೀಸರ್‌ನಲ್ಲಿ ಸ್ಲೀಕರ್ ಎಲ್‌ಇಡಿ ಫಾಗ್ ಲ್ಯಾಂಪ್‌ಗಳೊಂದಿಗೆ, ವಿಭಿನ್ನ ಶೈಲಿಯ ಮುಂಭಾಗದ ಬಂಪರ್ ಅನ್ನು ಸಹ ನಾವು ಗಮನಿಸಬಹುದು. (ಪ್ರಸ್ತುತ ಮಾದರಿಯು ಹ್ಯಾಲೊಜೆನ್ ಪ್ರಾಜೆಕ್ಟರ್ ಯೂನಿಟ್‌ಗಳನ್ನು ಹೊಂದಿದೆ).

 ಈ ಟೀಸರ್ ಪರಿಷ್ಕೃತ ಅಲಾಯ್ ವ್ಹೀಲ್ ವಿನ್ಯಾಸಗಳನ್ನು ಬ್ಲ್ಯಾಕ್-ಔಟ್ ORVM ಹೌಸಿಂಗ್‌ಗಳು ಮತ್ತು ಕಪ್ಪು ರೂಫ್‌ನೊಂದಿಗೆ ತೋರಿಸುತ್ತದೆ.  ಅದರ ಹಿಂಭಾಗವನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ, ನವೀಕೃತ ಕಿಯಾ ಸೆಲ್ಟೋಸ್‌ನಲ್ಲಿ ಕಂಡುಬರುವಂತೆ ಇದು ಸಂಪರ್ಕಿತ ಎಲ್‌ಇಡಿ ಟೈಲ್‌ಲೈಟ್ ಸೆಟಪ್ ಅನ್ನು ಹೊಂದಿರುತ್ತದೆ ಎಬುದು ನಮ್ಮ ಅನಿಸಿಕೆ.

 

  ಕ್ಯಾಬಿನ್ ಮತ್ತು ಫೀಚರ್ ಬದಲಾವಣೆಗಳು

Kia Sonet facelift 10.25-inch touchscreen

ಹೊರಭಾಗವು ಪಡೆದಂತೆಯೇ, ಹೊಸ ಕಿಯಾ ಸೊನೆಟ್‌ನ ಒಳಭಾಗವು ಪ್ರಮುಖ ಬದಲಾವಣೆಗಳನ್ನು ಪಡೆಯುವುದಿಲ್ಲ. ಕಿಯಾ ಹೊಸದಾದ ಮೇಲ್ಗವಸು ಮತ್ತು ಮತ್ತು ಬಹುಶಃ ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್ ನೀಡುವ ಮೂಲಕ ಒಳಭಾಗದ ವಿಷಯಗಳನ್ನು ನವೀಕರಿಸಬಹುದು ಎಂದು ಇದು ತಿಳಿಸಿದೆ. ಅಸ್ತಿತ್ವದಲ್ಲಿರುವ ಮಾದರಿಯಲ್ಲಿ ಕಂಡುಬರುವ ಅದೇ 10.25-ಇಂಚಿನ ಇನ್‌ಫೊಟೈನ್‌ಮೆಂಟ್ ಸ್ಕ್ರೀನ್ ಮತ್ತು ಸೆಂಟ್ರಲ್ ಎಸಿ ವೆಂಟ್‌ಗಳನ್ನು ಟೀಸರ್‌ನಲ್ಲಿ ತೋರಿಸಲಾಗಿದೆ.

ನವೀಕೃತ ಸೊನೆಟ್ ಅರೆ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 360-ಡಿಗ್ರಿ ಕ್ಯಾಮರಾದೊಂದಿಗೆ ಬರುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ಇನ್‌ಫೊಟೈನ್‌ಮೆಂಟ್ ಸಿಸ್ಟಮ್ ಹೊರತಾಗಿ, ಸೊನೆಟ್ ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಉಳಿಸಿಕೊಳ್ಳುತ್ತದೆ.

 ಸುರಕ್ಷತೆಯ ವಿಷಯದಲ್ಲಿ, ಕಿಯಾ ಪ್ರಮಾಣಿತವಾಗಿ ಆರು ಏರ್‌ಬ್ಯಾಗ್‌ಗಳನ್ನು ನೀಡಬಹುದು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ (TPMS), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಯನ್ನು ಸಹ ನೀಡುತ್ತದೆ.

 

 ಪರಿಚಿತ ಡ್ರೈವಿಂಗ್ ಫೋರ್ಸ್

ನವೀಕೃತ ಕಿಯಾ ಸೊನೆಟ್ ಪ್ರಸ್ತುತ ಮಾದರಿಯ ಪವರ್‌ಟ್ರೇನ್ ಆಯ್ಕೆಗಳನ್ನು ಉಳಿಸಿಕೊಳ್ಳುತ್ತದೆ. ಅವು 83 PS/ 115 Nm 1.2-ಲೀಟರ್ ಪೆಟ್ರೋಲ್ ಎಂಜಿನ್ (5-ಸ್ಪೀಡ್ MT ಜೊತಗೆ), 120 PS/172 Nm 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (6-ಸ್ಪೀಡ್ iMT ಅಥವಾ 7-ಸ್ಪೀಡ್ DCT), ಮತ್ತು 116 PS/250 Nm 1.5-ಲೀಟರ್ ಡಿಸೇಲ್ ಎಂಜಿನ್ (6-ಸ್ಪೀಡ್ iMT ಅಥವಾ 6-ಸ್ಪೀಡ್ ಆಟೋಮ್ಯಾಟಿಕ್).

ಇದನ್ನೂ ಓದಿ: ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಕಾರು ಖರೀದಿಸುವ ಅನುಕೂಲ  ಮತ್ತು ಅನಾನುಕೂಲಗಳು

 

 ಬೆಲೆ ಮತ್ತು ಪ್ರತಿಸ್ಪರ್ಧಿಗಳು

Kia Sonet facelift teased

2024 ಕಿಯಾ ಸೊನೆಟ್ ಮುಂದಿನ ವರ್ಷ ಮಾರಾಟಕ್ಕೆ ಬರುವ ಸಂದರ್ಭದಲ್ಲಿ ರೂ 8 ಲಕ್ಷ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರುತ್ತದೆ. ಇದು ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯು, ಮಾರುತಿ ಬ್ರೆಝಾ, ಮಹೀಂದ್ರಾ XUV300, ರೆನಾಲ್ಟ್ ಕೈಗರ್, ನಿಸಾನ್ ಮ್ಯಾಗ್ನೈಟ್,  ಮತ್ತು ಮಾರುತಿ ಫ್ರಾಂಕ್ಸ್‌ ಕ್ರಾಸ್‌ಓವರ್‌ಗಳಿಗೆ ಪ್ರತಿಸ್ಪರ್ಧೆಯನ್ನೊಡ್ಡುತ್ತದೆ.

ಇನ್ನಷ್ಟು ಇಲ್ಲಿ ಓದಿ : ಕಿಯಾ ಸೊನೆಟ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಸೊನೆಟ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience