Tata Curvv EV ಮೊದಲ ಟೀಸರ್ ಡ್ರಾಪ್, ಬಿಡುಗಡೆಗೆ ಮುಂಚೆಯೆ ಹೆಚ್ಚಿದ ಉತ್ಸಾಹ
ಟಾಟಾ ಕರ್ವ್ ಇವಿ ಗಾಗಿ samarth ಮೂಲಕ ಜುಲೈ 09, 2024 08:18 pm ರಂದು ಪ್ರಕಟಿಸಲಾಗಿದೆ
- 50 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ತನ್ನ ಎಸ್‌ಯುವಿ ಕೂಪ್ ಅನ್ನು ಇವಿ ಮತ್ತು ICU ವರ್ಷನ್ ಗಳಲ್ಲಿ ನೀಡಲಿದೆ, ಆದರೆ ಇವಿ ಮೊದಲು ಬಿಡುಗಡೆಯಾಗಲಿದೆ
- ಟಾಟಾ ಕರ್ವ್ EV ಅನ್ನು ಮಾರುಕಟ್ಟೆಗೆ ಪರಿಚಯಿಸುವ ಮೊದಲು ಅದರ ಟೀಸರ್ ಅನ್ನು ಮೊದಲ ಬಾರಿಗೆ ಬಹಿರಂಗಪಡಿಸಲಾಗಿದೆ.
- ಇದು ಟಾಟಾದ Acti.ev ಪ್ಲಾಟ್‌ಫಾರ್ಮ್ ಮೇಲೆ ಆಧರಿಸಿದೆ ಮತ್ತು 500 ಕಿಮೀ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುವ ನಿರೀಕ್ಷೆಯಿದೆ.
- ವಿಶಿಷ್ಟ ಡಿಸೈನ್ ಫೀಚರ್ ಗಳಲ್ಲಿ ಸ್ಲೋಪಿಂಗ್ ರೂಫ್ ಲೈನ್, ಕನೆಕ್ಟೆಡ್ ಲೈಟ್ ಸೆಟ್ ಅಪ್ ಮತ್ತು ಫ್ಲಶ್ ಡೋರ್ ಹ್ಯಾಂಡಲ್‌ಗಳು ಸೇರಿವೆ.
- ಫೀಚರ್ ಗಳಲ್ಲಿ ಡ್ಯುಯಲ್ ಡಿಸ್‌ಪ್ಲೇಗಳು, ವೆಂಟಿಲೇಟೆಡ್ ಸೀಟ್ ಗಳು ಮತ್ತು ಪನರೋಮಿಕ್ ಸನ್‌ರೂಫ್ ಒಳಗೊಂಡಿವೆ.
- ಸುರಕ್ಷತಾ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ADAS ಅನ್ನು ಪಡೆಯಬಹುದು.
- ಬೆಲೆಯು ರೂ 20 ಲಕ್ಷದಿಂದ ಪ್ರಾರಂಭವಾಗುವ (ಎಕ್ಸ್ ಶೋ ರೂಂ) ನಿರೀಕ್ಷೆಯಿದೆ.
ಪ್ರಿ ಪ್ರೊಡಕ್ಷನ್ ಗೆ ಮೊದಲು ಕಾನ್ಸೆಪ್ಟ್ ಆಗಿ ಮತ್ತು ಟೆಸ್ಟ್ ಮಾಡುವಾಗ ರಸ್ತೆಯಲ್ಲಿ ಹಲವಾರು ಬಾರಿ ತೋರಿಸಲಾದ ನಂತರ, ಟಾಟಾ ಕರ್ವ್ EV ಯ ಮೊದಲ ಅಧಿಕೃತ ಟೀಸರ್ ಅನ್ನು ಅಂತಿಮವಾಗಿ ಬಿಡುಗಡೆ ಮಾಡಲಾಗಿದೆ. ಕರ್ವ್ ಮೊದಲು ಎಲೆಕ್ಟ್ರಿಕ್ ವಾಹನವಾಗಿ ಲಾಂಚ್ ಆಗಲಿದ್ದು, ICE ಎಂಜಿನ್ ವರ್ಷನ್ ನಂತರ ಬರಲಿದೆ. ಟೀಸರ್ ಈ ಭಾರತೀಯ ಕಾರು ತಯಾರಕರ ಮುಂಬರುವ ಎಲೆಕ್ಟ್ರಿಕ್ ವಾಹನದ ವಿವಿಧ ಫೀಚರ್ ಗಳನ್ನು ತೋರಿಸುತ್ತದೆ. ಬನ್ನಿ, ಈ ಹೊಸ EV ಯ ಹೆಚ್ಚಿನ ವಿವರಗಳನ್ನು ನೋಡೋಣ.
ನೋಡಲಾಗಿರುವ ಫೀಚರ್ ಗಳು
ಟಾಟಾ ಮೋಟಾರ್ಸ್‌ನ ಟೀಸರ್ ಕರ್ವ್ ನ ಸ್ಲೋಪಿಂಗ್ ರೂಫ್ ಲೈನ್ ಅನ್ನು ತೋರಿಸಿದೆ ಮತ್ತು ನೆಕ್ಸಾನ್ EV ಯಲ್ಲಿ ಇರುವ ಮುಂಭಾಗ ಮತ್ತು ಹಿಂಭಾಗದಲ್ಲಿ ಇರುವ ಕನೆಕ್ಟೆಡ್ ಲೈಟ್ ಸೆಟ್ ಅಪ್ ನಂತಹ ಫೀಚರ್ ಗಳನ್ನು ಹೈಲೈಟ್ ಮಾಡಿದೆ. ನಾವು ಟೀಸರ್‌ನಲ್ಲಿ ಅಲಾಯ್ ವೀಲ್ ಡಿಸೈನ್ ಅನ್ನು ನೋಡಿದ್ದೇವೆ, ಇದು ಏರೋ ಇನ್ಸರ್ಟ್‌ಗಳನ್ನು ಹೊಂದಿರುವ ನೆಕ್ಸಾನ್ EV ವೀಲ್ ಗಳನ್ನು ಹೋಲುತ್ತದೆ. ಇದು ಟಾಟಾ ಕಾರುಗಳಿಗೆ ಮೊಟ್ಟ ಮೊದಲ ಬಾರಿಗೆ ನೀಡಲಾಗಿರುವ ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಕೂಡ ಪಡೆಯಲಿದೆ. EV ಮಾಡೆಲ್ ನಲ್ಲಿ ಇರುವ ಇತರ ಡಿಸೈನ್ ವಿವರಗಳಲ್ಲಿ ಕ್ಲೋಸ್ಡ್ ಆಫ್ ಗ್ರಿಲ್ ಕೂಡ ಒಳಗೊಂಡಿವೆ.
ನಿರೀಕ್ಷಿಸಲಾಗಿರುವ ಫೀಚರ್ ಗಳು ಮತ್ತು ಸುರಕ್ಷತಾ ಕಿಟ್
ಟಾಟಾ ಮೋಟಾರ್ಸ್‌ನ SUV-ಕೂಪ್ 12.3-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಪಡೆಯುವ ನಿರೀಕ್ಷೆಯಿದೆ. ಸುರಕ್ಷತೆಯ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಹೊಂದಿರುವ 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಲೇನ್ ಕೀಪ್ ಅಸಿಸ್ಟ್, ಆಟೊನೊಮಸ್ ಬ್ರೆಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಲೆವೆಲ್ 2 ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಪಡೆಯುವ ನಿರೀಕ್ಷೆಯಿದೆ.
ನಿರೀಕ್ಷಿಸಲಾಗಿರುವ ಪವರ್‌ಟ್ರೇನ್
ಇಲ್ಲಿಯವರೆಗೆ, ಕರ್ವ್ ಎಲೆಕ್ಟ್ರಿಕ್ SUV ಯ ನಿಖರವಾದ ಬ್ಯಾಟರಿ ಸೈಜ್ ಮತ್ತು ಮೋಟಾರ್ ಸ್ಪೆಸಿಫಿಕೇಷನ್ ಗಳ ಬಗ್ಗೆ ಬ್ರ್ಯಾಂಡ್ ಯಾವುದೇ ವಿವರಗಳನ್ನು ನೀಡಿಲ್ಲ. ಆದರೆ, ಗರಿಷ್ಠ 500 ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ರೇಂಜ್ ಅನ್ನು ಒದಗಿಸುವ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ನೀಡುವ ನಿರೀಕ್ಷೆಯಿದೆ. ಇದು ಪಂಚ್ EV ಯಂತೆಯೇ ಟಾಟಾದ Acti.ev ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ಇದು DC ಫಾಸ್ಟ್ ಚಾರ್ಜಿಂಗ್, V2L (ವೆಹಿಕಲ್ ಟು ಲೋಡ್), ವಿಭಿನ್ನ ಡ್ರೈವ್ ಮೋಡ್‌ಗಳು ಮತ್ತು ಮತ್ತು ಅಡ್ಜಸ್ಟ್ ಮಾಡಬಹುದಾದ ಎನರ್ಜಿ ರೀಜನರೇಷನ್ ನಂತಹ ಫೀಚರ್ ಗಳನ್ನು ಹೊಂದಿರುತ್ತದೆ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಟಾಟಾ ಕರ್ವ್ EV ಆರಂಭಿಕ ಬೆಲೆಯು 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ ಮತ್ತು ಇದು MG ZS EV ಮತ್ತು ಮುಂಬರುವ ಕ್ರೆಟಾ EV ಗೆ ಪ್ರತಿಸ್ಪರ್ಧಿಯಾಗಲಿದೆ.
ಕರ್ವ್ ತನ್ನ ICE ವರ್ಷನ್ ಅನ್ನು ಕೂಡ ಈ ವರ್ಷದಲ್ಲಿ ಬಿಡುಗಡೆ ಮಾಡಲಿದ್ದು, ಇದರ ಬೆಲೆಯು ರೂ 10.50 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ. ಕರ್ವ್ ಸಿಟ್ರೊಯೆನ್ ಬಸಾಲ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ, ಅದರ ಜೊತೆಗೆ ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್‌ಗಳೊಂದಿಗೆ ಕೂಡ ಸ್ಪರ್ಧಿಸಲಿದೆ.
ಇತ್ತೀಚಿನ ಎಲ್ಲಾ ಆಟೋಮೋಟಿವ್ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ಅವರ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
0 out of 0 found this helpful