14.48 ಲಕ್ಷ ರೂ.ಗೆ MG Astor ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯನ್ನು ಪಡೆಯಿರಿ
ಎಂಜಿ ಅಸ್ಟೋರ್ ಗಾಗಿ ansh ಮೂಲಕ ಸೆಪ್ಟೆಂಬರ್ 07, 2023 06:36 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯು ಮಿಡ್ ಸ್ಪೆಕ್ ಸ್ಮಾರ್ಟ್ ಟ್ರಿಮ್ ಅನ್ನು ಆಧರಿಸಿದ್ದು, ಸಿಂಗಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ.
- ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯು ರೂ. 14.48 ರಿಂದ ರೂ. 15.77 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ).
- ಗ್ಲೋಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯನ್ನು ಹೋಲುವ ಸಂಪೂರ್ಣ ಕಪ್ಪು ಹೊರಾಂಗಣದೊಂದಿಗೆ ಇದು ರಸ್ತೆಗಿಳಿಯಲಿದೆ.
- ಒಳಗಡೆಯಲ್ಲಿ ಕೆಂಪು ಇನ್ಸರ್ಟ್ ಗಳ ಜೊತೆಗೆ ಸಂಪೂರ್ಣ ಕಪ್ಪು ಯುಫೋಲ್ಸ್ಟರಿಯನ್ನು ಇದು ಪಡೆಯಲಿದೆ.
- 10.1 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಪ್ಯಾನೊರಾಮಿಕ್ ಸನ್ ರೂಫ್ ಮತ್ತು ADAS ಇತ್ಯಾದಿ ವಿಶೇಷತೆಗಳನ್ನು ಇದು ಹೊಂದಿರಲಿದೆ.
- ಆಸ್ಟರ್ ವಾಹನವು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ: 110PS, 1.5-ಲೀಟರಿನ ಯೂನಿಟ್ ಮತ್ತು 140PS, 1.3-ಲೀಟರ್ ಟರ್ಬೋಚಾರ್ಜ್ಡ್ ಯೂನಿಟ್.
MG ಆಸ್ಟರ್ ವಾಹನವು ತನ್ನ ಹೊಸ ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯೊಂದಿಗೆ ಬ್ಲ್ಯಾಕ್ಡ್ ಔಟ್ ವರ್ಗವನ್ನು ಸೇರಿಕೊಂಡಿದೆ. ಈ ವಿಶೇಷ ಆವೃತ್ತಿಯು ಕೆಂಪು ಹೈಲೈಟ್ ಗಳೊಂದಿಗೆ ಸಂಪೂರ್ಣ ಕಪ್ಪಗಿನ ಬಣ್ಣದೊಂದಿಗೆ ಮಿಂಚಲಿದ್ದು, MG ಗ್ಲೋಸ್ಟರ್ ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯನ್ನು ಹೋಲುತ್ತದೆ. ಈ ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯು ಆಸ್ಟರ್ ವಾಹನದ ಮಿಡ್ ಸ್ಪೆಕ್ ಸ್ಮಾರ್ಟ್ ವೇರಿಯಂಟ್ ಅನ್ನು ಆಧರಿಸಿದ್ದು, ಇದರ ಬೆಲೆಗಳು ಕೆಳಗಿನಂತೆ ಇವೆ:
ಬೆಲೆ (ಎಕ್ಸ್-ಶೋರೂಂ) |
||
ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿ |
ವ್ಯತ್ಯಾಸ |
|
ರೂ 14.48 ಲಕ್ಷ |
+ ರೂ 27,000 |
|
ರೂ 15.77 ಲಕ್ಷ |
+ ರೂ 27,000 |
ಸಾಮಾನ್ಯ ಆಸ್ಟರ್ ಸ್ಮಾರ್ಟ್ ವಾಹನಕ್ಕೆ ಹೋಲಿಸಿದರೆ ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಗೆ ರೂ. 27,000 ದಷ್ಟು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕು.
ಸೌಂದರ್ಯವರ್ಧಕ ಬದಲಾವಣೆಗಳು
ಹೊರಗಡೆಗೆ, ವಿಶಿಷ್ಟ ಕಪ್ಪು ಹನಿಕೋಂಬ್ ಗ್ರಿಲ್, ಕಪ್ಪಗಿನ ಮುಂದಿನ ಮತ್ತು ಹಿಂದಿನ ಬಂಪರ್ ಗಳು, ಸ್ಮೋಕ್ಡ್ ಹೆಡ್ ಲ್ಯಾಂಪ್ ಗಳು, ಮತ್ತು ಬ್ಲ್ಯಾಕ್ಡ್ ಔಟ್ ಅಲೋಯ್ ವೀಲ್ ಗಳೊಂದಿಗೆ ಸಂಪೂರ್ಣವಾಗಿ ಕಪ್ಪು ಬಣ್ಣದೊಂದಿಗೆ ಮಿಂಚಲಿದೆ. ಈ ಕಪ್ಪು ಛಾಯೆಯ ಜೊತೆಗೆ ಕೆಂಪು ಬಣ್ಣದ ಫ್ರಂಟ್ ಬ್ರೇಕ್ ಕ್ಯಾಲಿಪರ್ ಗಳನ್ನು ಇದು ಹೊಂದಿದೆ. ಜೊತೆಗೆ, ಈ ವಿಶೇಷ ಆವೃತ್ತಿಯನ್ನು ಗುರುತಿಸುವುದಕ್ಕಾಗಿ ಮುಂದಿನ ಪ್ರತಿ ಫೆಂಡರ್ ಮೇಲೆ ʻʻಬ್ಲ್ಯಾಕ್ ಸ್ಟಾರ್ಮ್” ಬ್ಯಾಜ್ ಅನ್ನು ಹೊಂದಿರಲಿದೆ.
ಒಳಗಡೆಯೂ ಇದು ಇದೇ ರೀತಿಯ ಬಣ್ಣದಿಂದ ಕಾಣಿಸಿಕೊಳ್ಳಲಿದೆ. ಕ್ಯಾಬಿನ್ ನಲ್ಲಿ ಸೀಟುಗಳ ಮೇಲೆ ಕೆಂಪು ಬಣ್ಣದ ಹೊಲಿಗೆಯ ಜೊತೆಗೆ ಸಂಪೂರ್ಣ ಕಪ್ಪಗಿನ ಯುಫೋಲ್ಸ್ಟರಿಯು ಇರಲಿದೆ. ಸ್ಟಿಯರಿಂಗ್ ವೀಲ್, ಎ.ಸಿ ವೆಂಟ್ ಗಳು ಮತ್ತು ಸಂಪೂರ್ಣ ಕಪ್ಪಗಿನ ಕನ್ಸೋಲ್ ಟನಲ್ ಮೇಲೆ ಕೆಂಪಗಿನ ಇನ್ಸರ್ಟ್ ಅನ್ನು ಇದು ಪಡೆಯಲಿದೆ.
ಯಾವುದಾದರೂ ಹೊಸ ವೈಶಿಷ್ಟ್ಯಗಳು?
ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯು ಮೂಲಭೂತವಾಗಿ ತನ್ನ ಬೆಲೆಗೆ ತಕ್ಕುದಾದ ಸೌಂದರ್ಯವರ್ಧಕ ಬದಲಾವಣೆಗಳನ್ನು ತರಲಿದ್ದು, ಉಳಿದ ವೈಶಿಷ್ಟ್ಯಗಳಲ್ಲಿ ಯಾವುದೇ ಬದಲಾವಣೆ ಉಂಟಾಗದು. ಆದರೆ ಇದು, ಸಾಮಾನ್ಯ ಆಸ್ಟರ್ ಸ್ಮಾರ್ಟ್ ವೇರಿಯಂಟ್ ಬದಲಿಗೆ ಇದರಲ್ಲಿ ಡೀಲರ್ ಫಿಟ್ಟೆಡ್ JBL ಸೌಂಡ್ ಸಿಸ್ಟಂ ಅನ್ನು ಪಡೆಯಲಿದೆ. ಈ MG ಕಾಂಪ್ಯಾಕ್ಟ್ SUV ಯು ಈಗಾಗಲೇ ಆಂಡ್ರಾಯ್ಡ್ ಅಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 10.1 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್, ಅಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾನೊರಾಮಿಕ್ ಸನ್ ರೂಫ್ ಅನ್ನು ಹೊಂದಿದೆ.
ಇದನ್ನು ಸಹ ಓದಿರಿ: ತನ್ನ ಶತಮಾನೋತ್ಸವ ಆಚರಿಸುವುದಕ್ಕಾಗಿ ತನ್ನ ಗ್ರಾಹಕರಿಗೆ ಕೊಡುಗೆ ಮತ್ತು ರಿಯಾಯಿತಿ ಘೋಷಿಸಿದ MG
ಸುರಕ್ಷತೆಯ ಕುರಿತು ಹೇಳುವುದಾದರೆ, ಡ್ಯುವಲ್ ಫ್ರಂಟ್ ಏರ್ ಬ್ಯಾಗುಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಮತ್ತು ಡೆಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS), ರಿಯರ್ ಪಾರ್ಕಿಂಗ್ ಮತ್ತು ರಿಯರ್ ವ್ಯೂ ಕ್ಯಾಮರಾ ಇತ್ಯಾದಿ ಸೌಲಭ್ಯಗಳನ್ನು ಈ ಸ್ಮಾರ್ಟ್ ವೇರಿಯಂಟ್ ಹೊಂದಿದೆ.
ಸಿಂಗಲ್ ಪವರ್ ಟ್ರಾನ್
MG ಆಸ್ಟರ್ ವಾಹನವು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 6 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (140PS/220Nm), ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಅಥವಾ CVT ಗೇರ್ ಬಾಕ್ಸ್ ಜೊತೆಗೆ ಸಮ್ಮಿಳಿತಗೊಂಡಿರುವ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (110PS/144Nm). ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯು ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಗಳೆರಡರ ಜೊತೆಗೆ ಕೇವಲ 1.5 ಲೀಟರ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
MG ಸಂಸ್ಥೆಯು ತನ್ನ ಆಸ್ಟರ್ ವಾಹನಕ್ಕೆ ರೂ. 10.82 ಲಕ್ಷದಿಂದ ರೂ. 18.69 ಲಕ್ಷದ ವರೆಗಿನ ಬೆಲೆಯನ್ನು (ಎಕ್ಸ್-ಶೋರೂಂ) ನಿಗದಿಪಡಿಸಿದೆ. ಬ್ಲ್ಯಾಕ್ ಸ್ಟಾರ್ಮ್ ಆವೃತ್ತಿಯು ಕಿಯಾ ಸೆಲ್ಟೊಸ್ X-ಲೈನ್ ಗೆ ಹೋಲಿಸಿದರೆ ಅಗ್ಗದ ಆಯ್ಕೆ ಎನಿಸಿದ್ದು, ಹ್ಯುಂಡೈ ಕ್ರೆಟಾ ನೈಟ್ ಆವೃತ್ತಿ ಮತ್ತು ಸ್ಕೋಡ ಕುಶಕ್ ಮತ್ತು ಫೋಕ್ಸ್ ವ್ಯಾಗನ್ ತಿಗುವನ್ ಮಾದರಿಗಳ ಮ್ಯಾಟ್ ಆವೃತ್ತಿಗಳೊಂದಿಗೆ ಸ್ಪರ್ಧಿಸಲಿದೆ. ಒಟ್ಟಾರೆಯಾಗಿ ಈ ಕಾಂಪ್ಯಾಕ್ಟ್ SUV ಯು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಗ್ರಾಂಡ್ ವಿಟಾರ, ಟೊಯೊಟಾ ಹೈರೈಡರ್, ಫೋಕ್ಸ್ ವ್ಯಾಗನ್ ತೈಗುನ್, ಸ್ಕೋಡ ಕುಶಕ್, ಹೋಂಡಾ ಎಲೆವೇಟ್ ಮತ್ತು ಮುಂಬರುವ ಸಿಟ್ರನ್ C3 ಏರ್ ಕ್ರಾಸ್ ಇತ್ಯಾದಿಗಳಿಗೆ ಸ್ಪರ್ಧೆಯೊಡ್ಡಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: MG ಆಸ್ಟರ್ ಅಟೋಮ್ಯಾಟಿಕ್