ಇಯರ್-ಎಂಡ್ ಸೇಲ್; ಈ ಡಿಸೆಂಬರ್‌ನಲ್ಲಿ Renault ಕಾರುಗಳ 77,000 ರೂ.ವರೆಗೆ ಡಿಸ್ಕೌಂಟ್ ಪಡೆಯಿರಿ
ರೆನಾಲ್ಟ್ ಕ್ವಿಡ್ ಗಾಗಿ shreyash ಮೂಲಕ ಡಿಸೆಂಬರ್ 04, 2023 07:25 pm ರಂದು ಪ್ ರಕಟಿಸಲಾಗಿದೆ
- 55 Views
- ಕಾಮೆಂಟ್ ಅನ್ನು ಬರೆಯಿರಿ
ರೆನಾಲ್ಟ್ ಎಲ್ಲಾ 3 ಕಾರುಗಳ 'ಅರ್ಬನ್ ನೈಟ್' ಆವೃತ್ತಿಯೊಂದಿಗೆ ಪ್ರಯೋಜನಗಳನ್ನು ಸಹ ನೀಡುತ್ತಿದೆ
- ರೆನಾಲ್ಟ್ ತನ್ನ ಕೈಗರ್ ಕಾರಿನಲ್ಲಿ ಭರ್ಜರಿ 77,000 ವರೆಗಿನ ಆಫರ್‌ಗಳನ್ನು ನೀಡುತ್ತಿದೆ.
- ರೆನಾಲ್ಟ್ ಕ್ವಿಡ್ ಮತ್ತು ರೆನಾಲ್ಟ್ ಟ್ರೈಬರ್ ಅನ್ನು 62,000 ರೂ.ವರೆಗೆ ಬೆಲೆ ಕಡಿತದೊಂದಿಗೆ ಖರೀದಿಸಬಹುದು.
- ಎಲ್ಲಾ ಆಫರ್‌ಗಳು 2023 ರ ಡಿಸೆಂಬರ್ ಅಂತ್ಯದವರೆಗೆ ಇರುತ್ತದೆ.
ನಾವು 2023 ರ ಕ್ಯಾಲೆಂಡರ್ ವರ್ಷದ ಕೊನೆಯ ತಿಂಗಳಿಗೆ ಪ್ರವೇಶಿಸುತ್ತಿದ್ದಂತೆ, ರೆನಾಲ್ಟ್ ತನ್ನ ವರ್ಷಾಂತ್ಯದ ಕೊಡುಗೆಗಳನ್ನು ಪರಿಚಯಿಸಿದೆ, ಇದು ತನ್ನ ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಮತ್ತು ರೆನಾಲ್ಟ್ ಕಿಗರ್ ಮೊಡೆಲ್‌ಗಳ ಈ ಆಫರ್ ಲಭ್ಯವಿರಲಿದೆ. ಈ ಕೊಡುಗೆಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸೆಂಜ್ ಲಾಭಗಳು ಮತ್ತು ಲಾಯಲ್ಟಿ ಬೋನಸ್‌ಗಳು ಸೇರಿವೆ. ಎಲ್ಲಾ ಮೂರು ಕಾರುಗಳ 'ಅರ್ಬನ್ ನೈಟ್' ಆವೃತ್ತಿಯಲ್ಲಿಯು ಗ್ರಾಹಕರು ಪ್ರಯೋಜನಗಳನ್ನು ಪಡೆಯಬಹುದು. ಮೊಡೆಲ್-ವಾರು ಆಫರ್‌ಗಳ ವಿವರಗಳು ಇಲ್ಲಿವೆ.
ಕ್ವಿಡ್‌ನಲ್ಲಿರುವ ಆಫರ್‌ಗಳು
ಆಫರ್‌ಗಳು |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
20,000 ರೂ.ವರೆಗೆ |
ಎಕ್ಸ್‌ಚೇಂಜ್ ಬೋನಸ್ |
20,000 ರೂ.ವರೆಗೆ |
ಲಾಯಲ್ಟಿ ಬೋನಸ್ |
10,000 ರೂ.ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
12,000 ರೂ.ವರೆಗೆ |
ಗರಿಷ್ಠ ಪ್ರಯೋಜನಗಳು |
62,000 ರೂ.ವರೆಗೆ |
- ರೆನಾಲ್ಟ್ ಕ್ವಿಡ್‌ನ ಬೇಸ್-ಮೊಡೆಲ್ RXE ಆವೃತ್ತಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಸಾಮಾನ್ಯ ವೇರಿಯೆಂಟ್‌ಗಳಿಗೆ ಮೇಲೆ ತಿಳಿಸಲಾದ ಪ್ರಯೋಜನಗಳು ಅನ್ವಯಿಸುತ್ತವೆ
- ಬೇಸ್-ಮೊಡೆಲ್ RXE ಟ್ರಿಮ್ ಮೇಲೆ 10,000 ರೂ.ವರೆಗಿನ ಲಾಯಲ್ಟಿ ಬೋನಸ್ ಮಾತ್ರ ಲಭ್ಯವಿದೆ.
- ಕ್ವಿಡ್‌ನ ಅರ್ಬನ್ ನೈಟ್ ಆವೃತ್ತಿಯಲ್ಲಿಯೂ ರೆನಾಲ್ಟ್ ಆಫರ್‌ಗಳನ್ನು ನೀಡುತ್ತಿದೆ, ಇದರಲ್ಲಿ ನಾವು ಕೇವಲ ಲಾಯಲ್ಟಿ ಮತ್ತು ಎಕ್ಸ್‌ಚೇಂಜ್ ಪ್ರಯೋಜನಗಳನ್ನು ಪಡೆಯಬಹುದು.
- ರೆನಾಲ್ಟ್ ಕ್ವಿಡ್‌ನ ಬೆಲೆ 4.70 ಲಕ್ಷ ರೂ.ನಿಂದ 6.45 ಲಕ್ಷ ರೂ ವರೆಗೆ ಇದೆ.
ಕಾರ್‌ದೇಖೋ ಮೂಲಕ ನಿಮ್ಮ ಬಾಕಿ ಇರುವ ಚಲನ್‌ಗಳನ್ನು ಪಾವತಿಸಿ
ಟ್ರೈಬರ್‌ನಲ್ಲಿರುವ ಕೊಡುಗೆಗಳು
ಆಫರ್‌ಗಳು |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
20,000 ರೂ.ವರೆಗೆ |
ಎಕ್ಸ್‌ಚೇಂಜ್ ಬೋನಸ್ |
20,000 ರೂ.ವರೆಗೆ |
ಲಾಯಲ್ಟಿ ಬೋನಸ್ |
10,000 ರೂ.ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
12,000 ರೂ.ವರೆಗೆ |
ಗರಿಷ್ಠ ಪ್ರಯೋಜನಗಳು |
62,000 ರೂ.ವರೆಗೆ |
- ಬೇಸ್-ಮೊಡೆಲ್ RXE ವೇರಿಯೆಂಟ್‌ನ್ನು ಹೊರತುಪಡಿಸಿ ರೆನಾಲ್ಟ್ ಟ್ರೈಬರ್‌ನ ಎಲ್ಲಾ ಆವೃತ್ತಿಗಳಲ್ಲಿ ಮೇಲಿನ ಆಫರ್‌ಗಳು ಲಭ್ಯವಿರುತ್ತದೆ.
- ಈ ಎಂಪಿವಿ (ಮಲ್ಟಿ ಪರ್ಪಸ್ ವೆಹಿಕಲ್)ನ ಬೇಸ್-ಮೊಡೆಲ್ RXE ವೇರಿಯೆಂಟ್ = ಕೇವಲ ಲಾಯಲ್ಟಿ ಬೋನಸ್‌ಗೆ ಸೀಮಿತವಾಗಿದೆ.
- ಟ್ರೈಬರ್‌ನ ಅರ್ಬನ್ ನೈಟ್ ಆವೃತ್ತಿಯು ಎಕ್ಸ್‌ಚೇಂಜ್ ಬೋನಸ್ ಮತ್ತು ಲಾಯಲ್ಟಿ ಡಿಸ್ಕೌಂಟ್‌ನೊಂದಿಗೆ ಲಭ್ಯವಿದೆ.
- ಟ್ರೈಬರ್‌ನ ಬೆಲೆಗಳು 6.33 ಲಕ್ಷ ರೂ.ನಿಂದ 8.97 ಲಕ್ಷ ರೂ.ವಿನ ನಡುವೆ ಇರಲಿದೆ.
ಇದನ್ನೂ ಓದಿ: ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಹೊಸ ಕಾರು ಖರೀದಿಸಿದರೆ ಆಗುವ ಲಾಭ ಮತ್ತು ನಷ್ಟ ಏನು?
ಕೈಗರ್‌ನಲ್ಲಿರುವ ಆಫರ್‌ಗಳು
ಆಫರ್‌ಗಳು |
ಮೊತ್ತ |
ಕ್ಯಾಶ್ ಡಿಸ್ಕೌಂಟ್ |
25,000 ರೂ.ವರೆಗೆ |
ಎಕ್ಸ್‌ಚೇಂಜ್ ಬೋನಸ್ |
20,000 ರೂ.ವರೆಗೆ |
ಲಾಯಲ್ಟಿ ಬೋನಸ್ |
20,000 ರೂ.ವರೆಗೆ |
ಕಾರ್ಪೊರೇಟ್ ಡಿಸ್ಕೌಂಟ್ |
12,000 ರೂ.ವರೆಗೆ |
ಗರಿಷ್ಠ ಪ್ರಯೋಜನಗಳು |
77,000 ರೂ.ವರೆಗೆ |
-
ರೆನಾಲ್ಟ್ ಕೈಗರ್‌ನೊಂದಿಗೆ ಹೆಚ್ಚಿನ ಆಫರ್‌ಗಳನ್ನು ನೀಡಲಾಗುತ್ತಿದೆ, ಇದರಲ್ಲಿ 25,000 ರೂ.ವರೆಗಿನ ಕ್ಯಾಶ್ ಡಿಸ್ಕೌಂಟ್ ಮತ್ತು 20,000 ರೂ.ವರೆಗೆ ಲಾಯಲ್ಟಿ ಬೋನಸ್‌ಗಳು ಸೇರಿವೆ.
-
ಆದಾಗಿಯೂ ಮೇಲೆ ತಿಳಿಸಲಾದ ನಗದು ರಿಯಾಯಿತಿಯು ಕೈಗರ್‌ನ ಮಿಡ್-ಸ್ಪೆಕ್ RXT ಮತ್ತು RXT (O) ಟರ್ಬೊ ಪೆಟ್ರೋಲ್ ವೇರಿಯೆಂಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.
-
ಈ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಟಾಪ್-ಎಂಡ್ ಮೊಡೆಲ್ ಆಗಿರುವ RXZ ಟ್ರಿಮ್‌ನಲ್ಲಿಯೂ ಇದೇ 20,000 ರೂ. ವರೆಗೆ ಕಡಿತ ಇರಲಿದೆ.
-
ಇದರ ಬೇಸ್-ಸ್ಪೆಕ್ ಆರ್‌ಎಕ್ಸ್‌ಇ ವೇರಿಯೆಂಟ್ ಕೇವಲ ಲಾಯಲ್ಟಿ ಬೋನಸ್‌ನೊಂದಿಗೆ ಬರುತ್ತದೆ, ಆದರೆ ಕೈಗರ್‌ನ ಅರ್ಬನ್ ನೈಟ್ ಆವೃತ್ತಿಯು ಲಾಯಲ್ಟಿ ಬೋನಸ್ ಮತ್ತು ಎಕ್ಸ್‌ಚೇಂಜ್ ಬೋನಸ್‌ನ್ನು ನೀಡುತ್ತಿದೆ.
-
ಕೈಗರ್‌ನ ಬೆಲೆಗಳು 6.50 ಲಕ್ಷ ರೂ.ನಿಂದ 11.23 ಲಕ್ಷ ರೂ. ವರೆಗೆ ಇದೆ.
ವಿಶೇಷ ಮಾಹಿತಿ
-
ರೆನಾಲ್ಟ್ ಎಲ್ಲಾ ಕಾರುಗಳ ಮೇಲೆ ರೂ 5,000 ರ ಗ್ರಾಮೀಣ ರಿಯಾಯಿತಿಯನ್ನು ನೀಡುತ್ತಿದೆ, ಆದರೆ ಇದನ್ನು ಕಾರ್ಪೊರೇಟ್ ರಿಯಾಯಿತಿಯೊಂದಿಗೆ ಸೇರಿಸುವಂತಿಲ್ಲ.
-
'R.E.Li.V.E' ಗುಜಿರಿ (scrappage) ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಕಾರುಗಳ ಮೇಲೆ 10,000 ರೂಪಾಯಿಗಳ ರಿಯಾಯಿತಿಯನ್ನು ಸಹ ನೀಡಲಾಗುತ್ತದೆ.
-
ರಾಜ್ಯ ಮತ್ತು ನಗರವನ್ನು ಅವಲಂಬಿಸಿ ರಿಯಾಯಿತಿಗಳು ಬದಲಾಗಬಹುದು, ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ರೆನಾಲ್ಟ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
-
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಬೆಲೆಗಳಾಗಿವೆ.
ಹೆಚ್ಚು ಓದಿ: ರೆನಾಲ್ಟ್ ಕ್ವಿಡ್ AMT