Citroen C3 Aircross: ಈ ಕಾರಿನಲ್ಲಿ ಏನೆಲ್ಲಾ ವೈಶಿಷ್ಟ್ಯಗಳು ಪಡೆಯಲಿದ್ದೀರಿ ? ಇಲ್ಲಿದೆ ಪಟ್ಟಿ
ಬಿಡುಗಡೆಯಾಗಲಿರುವ ಸಿಟ್ರಾನ್ C3 ಏರ್‌ಕ್ರಾಸ್‌ನ ಬೆಲೆಗಳನ್ನು ಹೊರತುಪಡಿಸಿ, ಅದರ ಟೆಕ್ನಿಕಲ್ ಸ್ಪೆಸಿಫಿಕೇಷನ್ ಮತ್ತು ಫೀಚರ್‌ಗಳನ್ನು ಒಳಗೊಂಡ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿದೆ.
-
C3 ಏರ್ ಕ್ರಾಸ್ ಐದು ಮತ್ತು ಏಳು-ಆಸನಗಳ ಸಂರಚನೆಗಳಲ್ಲಿ ವೇರಿಯೆಂಟ್ ಗಳನ್ನು ಹೊಂದಿದೆ.
-
ಇದು ತೆಗೆಯಬಹುದಾದ ಮೂರನೇ ಸಾಲಿನ ಸೀಟುಗಳನ್ನು ಮತ್ತು ಎರಡನೇ ಸಾಲಿನ ಸೀಟುಗಳಿಗೆ 60:40 ಸ್ಪ್ಲಿಟ್ ಸೆಟಪ್ ಅನ್ನು ಪಡೆಯುತ್ತದೆ.
-
10.2-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್ ಏರ್‌ಬ್ಯಾಗ್‌ಗಳು, TPMS ಮತ್ತು ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ.
-
6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 110PS 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.
-
ಇದರ ಬೆಲೆ ಸುಮಾರು ರೂ. 9 ಲಕ್ಷ (ಎಕ್ಸ್ ಶೋರೂಂ) ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಫ್ರಾನ್ಸ್ ಮೂಲದ ಕಾರು ತಯಾರಿಕಾ ಕಂಪೆನಿಯಾಗಿರುವ ಸಿಟ್ರಾನ್ ನಿಂದ C3 ಏರ್‌ಕ್ರಾಸ್ ಭಾರತದಲ್ಲಿ ಪರಿಚಯಿಸುತ್ತಿರುವ ನಾಲ್ಕನೇ ಮಾದರಿಯಾಗಿದ್ದು, ಇದು ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸ್ಪರ್ಧಿಸುತ್ತದೆ. ಸಿಟ್ರೊಯೆನ್ ಈಗ SUV ಯ ಎಲ್ಲಾ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸಿದೆ ಮತ್ತು ಅದರೊಂದಿಗೆ ಬರುವ ಎಲ್ಲಾ ವೈಶಿಷ್ಟ್ಯಗಳು ಇಲ್ಲಿವೆ:
ವೈಶಿಷ್ಟ್ಯಗಳ ವಿವರ
ಎಕ್ಸ್ ಟಿರಿಯರ್ |
ಇಂಟೀರಿಯರ್ |
ಕಂಫರ್ಟ್ ಮತ್ತು ಸೌಕರ್ಯ |
ಇನ್ಫೋಟೈನ್ಮೆಂಟ್ |
ಸುರಕ್ಷತೆ |
|
|
|
|
|
C3 ಏರ್‌ಕ್ರಾಸ್‌ನಲ್ಲಿರುವ ವೈಶಿಷ್ಟ್ಯಗಳ ಪಟ್ಟಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಮ್ಯಾನ್ಯುವಲ್ AC, ರೂಫ್-ಮೌಂಟೆಡ್ AC ವೆಂಟ್‌ಗಳು, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ORVM ಗಳು ಮತ್ತು ಎಲ್ಲ ಸೀಟ್ ನ ಸಾಲುಗಲ್ಲಿ USB ಚಾರ್ಜಿಂಗ್ ಪೋರ್ಟ್‌ಗಳನ್ನು ಒಳಗೊಂಡಿದೆ.
ಸುರಕ್ಷತೆಯ ದೃಷ್ಟಿಯಿಂದ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.
ಸೀಟಿಂಗ್ ಕಾನ್ಫಿಗರೇಷನ್
C3 ಏರ್‌ಕ್ರಾಸ್ ಮೂರನೇ ಸಾಲಿನಲ್ಲಿ ತೆಗೆಯಬಹುದಾದ ಆಸನಗಳನ್ನು ಪಡೆಯುತ್ತದೆ, ಇದರಿಂದಾಗಿ ಗ್ರಾಹಕರು ಅದರಲ್ಲಿ ಸಾಕಷ್ಟು ಬೂಟ್ ಸ್ಥಳವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರ ಐದು-ಆಸನಗಳ ಆಯ್ಕೆಯು 511 ಲೀಟರ್‌ಗಳವರೆಗಿನ ಕ್ಲಾಸ್-ಲೀಡಿಂಗ್ ಬೂಟ್ ಸಾಮರ್ಥ್ಯವನ್ನು ಪಡೆಯುತ್ತದೆ. ಎರಡನೇ ಸಾಲಿನ ಆಸನಗಳನ್ನು 60:40 ಅನುಪಾತದಲ್ಲಿ ಸ್ಪ್ಲಿಟ್ ಫೋಲ್ಡ್ ಮಾಡಬಹುದಾಗಿದೆ, ಮೂರು-ಸಾಲಿನ ಆವೃತ್ತಿಯಲ್ಲಿ ಅವುಗಳನ್ನು ಒರಗಿಸಬಹುದು. ಫೀಚರ್ ಭರಿತ ಈ ಏಕೈಕ ವೇರಿಯಂಟ್ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನುಭವವನ್ನು ಒದಗಿಸಲು ಸೆಮಿ-ಲೆಥೆರೆಟ್ ಸೀಟ್ ಅಪ್‌ಹೋಲೆಸ್ಟರಿಯನ್ನು ಹೊಂದಿದೆ.
ಪವರ್‌ಟ್ರೇನ್‌ಗಳು
C3 ಏರ್‌ಕ್ರಾಸ್ 1.2 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 110PS ಪವರ್ ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸದ್ಯಕ್ಕೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಪಡೆಯುತ್ತದೆ, ಭವಿಷ್ಯದಲ್ಲಿ ಕಂಪನಿಯು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಸಹ ಸೇರಿಸಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಸಿಟ್ರಾನ್ C3 ಏರ್‌ಕ್ರಾಸ್ vs ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯ ಹೋಲಿಕೆ
C3 ಏರ್‌ಕ್ರಾಸ್ ಬೆಲೆಯು ಸುಮಾರು 12 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಹ್ಯುಂಡೈ ಕ್ರೆಟಾ , ಕಿಯಾ ಸೆಲ್ಟೋಸ್ , ಫೋಕ್ಸ್‌ವ್ಯಾಗನ್ ಟೈಗನ್ , ಸ್ಕೋಡಾ ಕುಶಾಕ್ , MG ಆಸ್ಟರ್ , ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಹೋಂಡಾ ಎಲಿವೇಟ್‌ನೊಂದಿಗೆ ಈ ವಿಭಾಗದಲ್ಲಿ ಸ್ಪರ್ಧಿಸಲಿದೆ. ಬಿಡುಗಡೆಯಾಗಲಿರುವ ಈ ಕಾರಿನ ಬೆಲೆಯನ್ನು ಈ ಕಾಂಪ್ಯಾಕ್ಟ್ ಕಾರುಗಳ ಫೀಚರ್ ಭರಿತ ವೇರಿಯಂಟ್‌ಗಳಿಗಿಂತ ಕಡಿಮೆ ಇರಿಸುವ ನಿರೀಕ್ಷೆಯಿದೆ.
ಇನ್ನಷ್ಟು ಓದಿ: ಸಿಟ್ರಾನ್ C3 ಆನ್‌ರೋಡ್ ಬೆಲೆ