• English
  • Login / Register

ಈ ವರ್ಷದಲ್ಲಿ ಬಿಡುಗಡೆಯಾದ ಕಾರುಗಳ ಸಂಪೂರ್ಣ ವಿವರ

ಬಿಎಂಡವೋ ಎಕ್ಸ1 ಗಾಗಿ rohit ಮೂಲಕ ಏಪ್ರಿಲ್ 03, 2023 03:07 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

2023ರ ಮೊದಲ ತ್ರೈಮಾಸಿಕದ ಆಟೋ ಎಕ್ಸ್‌ಪೋದೊಂದಿಗೆ, ಎಲ್ಲಾ ಪ್ರಮುಖ ಕಾರುಗಳ ಬಿಡುಗಡೆಯನ್ನು ಟ್ರ್ಯಾಕ್ ಮಾಡುವುದು ಕಷ್ಟಸಾಧ್ಯವಾಗಬಹುದು, ಆದ್ದರಿಂದ ಅವೆಲ್ಲವುಗಳ ಪಟ್ಟಿಯನ್ನು ನಿಮಗಾಗಿ ನಾವು ಒಟ್ಟಾಗಿ ನೀಡುತ್ತಿದ್ದೇವೆ. 

Cars launched in first quarter of 2023

2023 ದೇಶಾದ್ಯಂತ ಅನೇಕ ಕಾರುಗಳ ಬಿಡುಗಡೆ ಮತ್ತು ಅನಾವರಣದೊಂದಿಗೆ ಕಾರು ಪ್ರಿಯರು ಮತ್ತು ಖರೀದಿಸುವವರಿಗೆ ಆಶಾದಾಯಕವಾಗಿ ಪ್ರಾರಂಭವಾಯಿತು. ಮೊದಲನೆಯ ತ್ರೈಮಾಸಿಕದ ವಿವರಗಳು ತೆರೆದುಕೊಳ್ಳುತ್ತಿರುವಂತೆ, ಐಷಾರಾಮಿ ಕಾರ್ಯಕ್ಷಮತೆಯಯ ಸಲೂನ್‌ನಿಂದ ಇಲೆಕ್ಟ್ರಿಕ್ ಹ್ಯಾಚ್‍ಬ್ಯಾಕ್ ತನಕ ಬಿಡುಗಡೆಗೊಂಡ ಎಲ್ಲಾ ಪ್ರಮುಖ ಕಾರುಗಳ ವಿವರಗಳನ್ನು ತಿಳಿದುಕೊಳ್ಳೋಣ.

 ನಾವೀಗ Q1 2023ಯ ಸಂಪೂರ್ಣ ಕಾರು ತಯಾರಕ ಸಂಸ್ಥೆವಾರು ಬಿಡುಗಡೆ ಪಟ್ಟಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ:

ಮಾರುತಿ

ಗ್ರ್ಯಾಂಡ್ ವಿಟಾರಾ CNG

 ಬೆಲೆ ರೂ 12.85 ಲಕ್ಷದಿಂದ 

 ಮಾರುತಿ ಗ್ರ್ಯಾಂಡ್ ವಿಟಾರಾ ಈ ವರ್ಷ ಜನವರಿಯಲ್ಲಿ CNG ಕಿಟ್ ಆಯ್ಕೆಯನ್ನು ಹೊಂದಿರುವ ಭಾರತದ ಮೊದಲ SUV ಆಗಿದೆ. ಮಾರುತಿಯು CNG ಕಿಟ್ ಅನ್ನು ಮಿಡ್ ಸ್ಪೆಕ್ ಡೆಲ್ಟಾ ಮತ್ತು ಝೀಟಾ ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. ಈ ಗ್ರ್ಯಾಂಡ್ ವಿಟಾರಾ CNG 1.5-ಲೀಟರ್ ಮೈಲ್ಡ್ -ಹೈಬ್ರಿಡ್ ಪೆಟ್ರೋನ್ ಇಂಜಿನ್‌ನೊಂದಿಗೆ ಬರುತ್ತಿದೆ ಆದರೆ 88PS ಮತ್ತು 121.5Nm ಅನ್ನು ಬಳಸುತ್ತದೆ(ಸ್ಟಾಂಡರ್ಡ್ ಆವೃತ್ತಿಗಳು 103PS/137Nm ಅನ್ನು ಬಳಸುತ್ತವೆ), ಇದನ್ನು 5-ಸ್ಪೀಡ್ ಮ್ಯಾನುವಲ್‌ನೊಂದಿಗೆ ಮಾತ್ರ ಜೋಡಿಸಲಾಗಿದೆ.

Maruti Grand Vitara and Brezza

 ಬ್ರೆಝಾ CNG

ಬೆಲೆ ರೂ 9.14 ಲಕ್ಷದಿಂದ 

ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ನಂತರ ಮಾರ್ಚ್‌ನಲ್ಲಿ ಬಿಡುಗಡೆಗೊಂಡ ಈ ಮಾರುತಿ ಬ್ರೆಝಾ ಕೂಡಾ ಈ ವರ್ಷ CNG ಆಯ್ಕೆಯನ್ನು ಪಡೆದಿದೆ. ಇದು ಮೂರು ವೇರಿಯೆಂಟ್‌ಗಳಾದ– LXi, VXi, ಮತ್ತು ZXi – ನಲ್ಲಿ ಲಭ್ಯವಿದೆ ಮತ್ತು ಡ್ಯುಯಲ್-ಟೋನ್ ಶೇಡ್ ಅನ್ನೂ ಪಡೆದಿದೆ (ZXi DT). ಈ ಬ್ರೆಝಾ CNG 5-ಸ್ಪೀಡ್ MT ಅನ್ನು ಜೋಡಿಸಲಾದ ಅದೇ 1.5-ಲೀಟರ್ ಪೆಟ್ರೋಲ್ ಇಂಜಿನ್ (88PS/121.5Nm) ಬಳಸುತ್ತದೆ.

ಟಾಟಾ

ನವೀಕೃತ ಹ್ಯಾರಿಯರ್/ಸಫಾರಿ

ಬೆಲೆ ರೂ 23.62 ಲಕ್ಷ/ ರೂ 24.46 ಲಕ್ಷ

Updated Tata Harrier

Updated Tata Safari

ಈ ಕಾರು ತಯಾರಕರು 2023 ರ ಆಟೋ ಎಕ್ಸ್‌ಪೋದಲ್ಲಿ ಬಹಿರಂಗಪಡಿಸಲಾದ ಹ್ಯಾರಿಯರ್ ಮತ್ತು ಸಫಾರಿಯ ರೆಡ್ ಡಾರ್ಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ, ಈ ಎರಡೂ ಕಾರುಗಳು ದೊಡ್ಡದಾದ ಟಚ್‌ಸ್ಕ್ರೀನ್ ಮತ್ತು ಆಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್‌ಗಳನ್ನು (ADAS) ಒಳಗೊಂಡ ಕೆಲವು ಹೊಸ ಫೀಚರ್‌ಗಳನ್ನು ಪಡೆದಿದೆ. ಈ ಹೊಸ ಸೇರ್ಪಡೆಗಳು ಮತ್ತು ನೋಟವು ಲಕ್ಷದಷ್ಟು ದುಬಾರಿಯಾಗಿದೆ ಮತ್ತು ಎರಡೂ SUVಗಳ ಪವರ್‌ಟ್ರೇನ್ ಈಗ BS6 2.0 ಅನುಸರಣೆಗೆ ತಕ್ಕಂತೆ ಇದೆ.

Tata Altroz

Tata Nexon

BS6 2.0 ನವೀಕೃತ ಲೈನ್ಅಪ್: ಎಲ್ಲಾ ಟಾಟಾ ಕಾರುಗಳೂ ಈಗ BS6 2.0 ಅನುಸರಣೆಯ ಪವರ್‌ಟ್ರೇನ್ ಅನ್ನು ಪಡೆದಿದ್ದು ಟಿಯಾಗೋ, ಆಲ್ಟ್ರೋಝ್ ಮತ್ತು ಪಂಚ್ ಅನ್ನು ಒಳಗೊಂಡ ಸಣ್ಣ ಮಾಡೆಲ್‌ಗಳು ಹೆಚ್ಚಿನ ಇಂಧನ ದಕ್ಷತೆಯನ್ನೂ ಪಡೆದಿದೆ.

 ಇದನ್ನೂ ಓದಿ: 2023 ಟಾಟಾ IPL ಅಧಿಕೃತ ಪಾಲುದಾರನಾಗಿ ಟಿಯಾಗೋ EVಯೊಂದಿಗೆ  ಪಡೆಯುತ್ತಿದೆ ಹಸಿರಿನ ಸ್ಪರ್ಶ  

ಹ್ಯುಂಡೈ

Updated Hyundai Alcazar

ನವೀಕೃತ ಅಲ್ಕಾಝಾರ್

ಬೆಲೆ ರೂ 16.75 ಲಕ್ಷದಿಂದ

 ಆರನೇ-ಪೀಳಿಗೆ ವರ್ನಾದೊಂದಿಗೆ ಹ್ಯುಂಡೈ ತನ್ನ ಹೊಸ 1.5-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ (160PS/253Nm) ಅನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದ್ದಿತು, ಆದರೆ ತನ್ನ ಯೋಜನೆಯನ್ನು ಬದಲಾಯಿಸಿ ಇದಕ್ಕೆ ಪ್ರತಿಯಾಗಿ ಅಲ್ಕಾಝಾರ್ ಅನ್ನು ಪರಿಚಯಿಸಿತು. ಇದು ಈ ಹಿಂದೆ ನೀಡಲಾದ 159PS 2-ಲೀಟರ್ ಪೆಟ್ರೋಲ್ ಯೂನಿಟ್ ಅನ್ನು ಬದಲಾಯಿಸಿ ರೂ 65,000 ತನಕದ ಹೆಚ್ಚಿನ ಬೆಲೆಯನ್ನು ನಿಗದಿಪಡಿಸಿದೆ. 6-ಸ್ಪೀಡ್ MT ಅನ್ನು ಉಳಿಸಿಕೊಳ್ಳಲಾಗಿದ್ದು, ಈ ಹೊಸ ಟರ್ಬೋ ಯೂನಿಟ್ ಹಳೆಯ 6-ಸ್ಪೀಡ್ ಆಟೋಮ್ಯಾಟಿಕ್ ಬದಲಾಗಿ ಸೆವೆನ್-ಸ್ಪೀಡ್ DCT ಆಯ್ಕೆಯನ್ನು ತರುತ್ತಿದೆ.

Hyundai Grand i10 Nios

Hyundai Aura

ನವೀಕೃತ ಗ್ರ್ಯಾಂಡ್ i10 ನಿಯೋಸ್ ಮತ್ತು ಆರಾ

ಬೆಲೆ ರೂ 5.69 ಲಕ್ಷದಿಂದ ರೂ 6.30 ಲಕ್ಷದ ತನಕ

ಜನವರಿ 2023 ರಲ್ಲಿ ಹ್ಯುಂಡೈ ಭಾರತದಲ್ಲಿ ನವೀಕೃತ ಗ್ರ್ಯಾಂಡ್ i10 ನಿಯೋಸ್ ಮತ್ತು ಆರಾವನ್ನು ಬಿಡುಗಡೆ ಮಾಡಿತು. ಈ ಹ್ಯಾಚ್‌ಬ್ಯಾಕ್-ಸೆಡಾನ್ ಜೋಡಿ ಕೆಲವು ಕಾಸ್ಮೆಟಿಕ್ ವ್ಯತ್ಯಾಸಗಳು, ತುಸು ಪರಿಷ್ಕೃತ ಇಂಟೀರಿಯರ್‌ಗಳು ಮತ್ತು ಕೆಲವು ಹೊಸ ಫೀಚರ್‌ಗಳನ್ನು (ಬೀಫೈಯರ್ ಸುರಕ್ಷಾ ಕಿಟ್ ಒಳಗೊಂಡು) ಹೊಂದಿದ್ದು ಈ ಎಲ್ಲವೂ ರೂ 33,000 ತನಕದಷ್ಟು ಹೆಚ್ಚು ಬೆಲೆಯಲ್ಲಿ ಪಡೆಯಬಹುದು. ಅವುಗಳ 1.2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನೇ ಬಳಸಲಾಗಿದ್ದು (E20 ಮತ್ತು BS6 2.0 ಅನುಸರಣೆಗೆ ತಕ್ಕಂತೆ), ಅವುಗಳ 1-ಲೀಟರ್ ಟರ್ಬೋ ಯೂನಿಟ್ ಅನ್ನು ಕೈಬಿಡಲಾಗಿದೆ.

Hyundai Ioniq 5

 ಅಯಾನಿಕ್ 5

ಬೆಲೆ ರೂ 44.95 ಲಕ್ಷ

ಭಾರತದಲ್ಲಿ ಹ್ಯುಂಡೈನ ಮೊದಲ EV ಆಯಾನಿಕ್ 5 ಅನ್ನು ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆ ಮಾಡಲಾಯಿತು. ಇದು ನಮ್ಮ ಮಾರುಕಟ್ಟೆಯಲ್ಲಿ ಮಾರಾಟಕ್ಕಿರುವ ಅತ್ಯಂತ ದುಬಾರಿ ಹ್ಯುಂಡೈ ಕಾರು ಮತ್ತು ಇದು ಒಂದೇ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಇದರ ಅಮದು ಮಾಡಿಕೊಂಡ ಪ್ರತಿರೂಪ ಕಿಯಾ Kia EV6 ಗಿಂತ ಭಿನ್ನವಾಗಿ, ಈ ಹ್ಯುಂಡೈ EVಯನ್ನು ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ. ಇದು 72.6kWh ಬ್ಯಾಟರಿ ಪ್ಯಾಕ್, ARAI ಗೆ ಉತ್ತಮವಾದ- 631km ಕ್ಲೈಮ್ ಮಾಡಲಾದ ರೇಂಜ್‌ನೊಂದಿಗೆ ಸಜ್ಜುಗೊಂಡಿದೆ.

New Hyundai Verna

ಆರನೇ-ಪೀಳಿಗೆ ವರ್ನಾ

ಬೆಲೆ ರೂ 10.90 ಲಕ್ಷದಿಂದ ಪ್ರಾರಂಭ

ಹೊಸ ವರ್ನಾ ಈ ವರ್ಷ ಹ್ಯುಂಡೈನ ಇತ್ತೀಚಿನ ಮತ್ತು ಪ್ರಮುಖ ಬಿಡುಗಡೆಯಾಗಿದೆ. ಈ ಕಾಂಪ್ಯಾಕ್ಟ್ ಸೆಡಾನ್ ದೊಡ್ಡದಾಗಿದೆ, ಶಕ್ತಿಯುತವಾಗಿದೆ ಮತ್ತು ADAS  ಮತ್ತು ಹೀಟಡ್ ಸೀಟುಗಳಂತಹ ಹೊಸ ಸಾಧನಗಳನ್ನು ಒಳಗೊಂಡಿದೆ. ಇದನ್ನೂ ಡೀಸೆಲ್ ಇಂಜಿನ್ ಆಯ್ಕೆಯಲ್ಲೂ ಮಾಡಲಾಗಿದೆ ಆದರೆ, 160PS 1.5-ಲೀಟರ್ ಟರ್ಬೋಚಾರ್ಜ್ ಯೂನಿಟ್ ಅನ್ನು ಒಳಗೊಂಡ ಎರಡು ಪೆಟ್ರೋಲ್ ಪವರ್‌ಟ್ರೇನ್‍ಗಳೊಂದಿಗೆ ಲಭ್ಯವಿರುತ್ತದೆ.

ಇದನ್ನೂ ಓದಿ: ಕಾರುಪ್ರಿಯರು ರೂ 15 ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 10 ಟರ್ಬೋ-ಪೆಟ್ರೋಲ್ ಕಾರುಗಳು ಇಲ್ಲಿವೆ

ಹೋಂಡಾ

New Honda City and City Hybrid

 ನವೀಕೃತ ಸಿಟಿ ಮತ್ತು ಸಿಟಿ ಹೈಬ್ರಿಡ್ 

ಬೆಲೆ 11.49 ಲಕ್ಷ

 ಹೋಡಾ ತನ್ನ ಅಯಾನಿಕ್ ಸೆಡಾನ್, ಸಿಟಿ ಅನ್ನು ಹೊಸತಾಗಿ ನೀಡಿದೆ. ಸ್ಟಾಂಡರ್ಡ್ ಸಿಟಿ ಮತ್ತು ಸಿಟಿ ಹೈಬ್ರಿಡ್ ಎರಡು ಕೂಡಾ ಹೊಸ ಪ್ರವೇಶ-ಹಂತದ ವೇರಿಯೆಂಟ್ ಅನ್ನೂ ನೀಡಿದೆ. ಹೊಸ ವರ್ನಾದ ತದ್ರೂಪಿಯಾಗಿರುವ ಹೋಂಡಾ ಸಿಟಿ ಕೂಡಾ ಡೀಸೆಲ್ ಪವರ್ ಅನ್ನು ಕೈಬಿಟ್ಟಿದ್ದು, ಪೆಟ್ರೋಲ್ ಮಾತ್ರ ವೇರಿಯೆಂಟ್‌ಗಳಲ್ಲಿಯೂ ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ADAS ಅನ್ನು ಒಳಗೊಂಡ ಅವಶ್ಯ ಫೀಚರ್‌ಗಳನ್ನು ಹೊಂದಿದೆ. ಅವುಗಳ ಪವರ್‌ಟ್ರೇನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಮತ್ತು ಈ ವಿಭಾಗದಲ್ಲಿ ಇದು ಏಕೈಕ ಹೈಬ್ರಿಡ್ ಆಯ್ಕೆಯಾಗಿ ಉಳಿದಿದೆ.

ಕಿಯಾ

Kia Carens

 ನವೀಕೃತ ಕರೇನ್ಸ್

ಬೆಲೆ ರೂ 10.45 ಲಕ್ಷದಿಂದ

 ಕಿಯಾ ತನ್ನ ಜನಪ್ರಿಯ ಮಾಡೆಲ್‌ಗಳ ಪವರ್‌ಟ್ರೇನ್‌ಗಳ ನವೀಕರಿಸುವ ಯೋಜನೆಗಳನ್ನು ನಾವು ನಿಮಗೆ ಪ್ರತ್ಯೇಕವಾಗಿ ನೀಡಿದ ಸ್ವಲ್ಪ ಸಮಯದಲ್ಲೇ, ಈ ಕಾರುತಯಾರಕ ಸಂಸ್ಥೆ ನವೀಕೃತ ಕರೇನ್ಸ್ ಅನ್ನು ಬಿಡುಗಡೆ ಮಾಡಿತು. ಅದರ ಹಳೆಯ 1.4-ಲೀಟರ್ ಟರ್ಬೋ- ಪೆಟ್ರೋಲ್ ಇಂಜಿನ್‌ ಅನ್ನು ವರ್ನಾದ ಹೊಸ 1.5-ಲೀಟರ್ ಟರ್ಬೋ ಯೂನಿಟ್‌ಗೆ ಬದಲಾಯಿಸಲಾಗಿದೆ. ಅಲ್ಲದೇ ಕಿಯಾ ಟರ್ಬೋ ಇಂಜಿನ್‌ನೊಂದಿಗೆ 6-ಸ್ಪೀಡ್ MTಯ iMT ಗೇರ್‌ಬಾಕ್ಸ್ ಅನ್ನು ಹೊಂದಿದೆ. ಇದರ ಬೆಲೆ ಐವತ್ತುಸಾವಿರದಷ್ಟು ದುಬಾರಿಯಾಗಿದ್ದು ಕೆಲವು ಫೀಚರ್ ಸೇರ್ಪಡೆಗಳನ್ನೂ ಹೊಂದಿದೆ

ಎಂಜಿ

Facelifted MG Hector

MG Hector Plus

ನವೀಕೃತ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್

ಬೆಲೆ ರೂ 15 ಲಕ್ಷದಿಂದ

2023ರ ಆಟೋ ಎಕ್ಸ್‌ಪೋದಲ್ಲಿ, MG ನವೀಕೃತ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ SUVಗಳನ್ನು ಬಿಡುಗಡೆ ಮಾಡಿತು. ಹೊಸತನದೊಂದಿಗೆ, ಈ SUV ಜೋಡಿ ಕೆಲವು ಹೊಸ ವೇರಿಯೆಂಟ್‌ಗಳು, ಪ್ರೀಮಿಯಂ ನೋಟಗಳು ಮತ್ತು ADAS ಅನ್ನು ಒಳಗೊಂಡ ಹೆಚ್ಚು ಫೀಚರ್‌ಗಳನ್ನು ಪಡೆದಿದೆ. MG ಈಗಲೂ ಕೂಡಾ ಈ ಎರಡು SUVಗಳನ್ನು ಅದೇ 1.5-ಲೀಟರ್ ಟರ್ಬೋ-ಪೆಟ್ರೋಲ್ ಮತ್ತು 2-ಲೀಟರ್ ಡೀಸೆಲ್ ಇಂಜಿನ್ ಅನ್ನು ಪಡೆದಿದ್ದು ಮೊದಲನೆಯದರಲ್ಲಿ ಮಾತ್ರ ಐಚ್ಛಿಕ CVT ಗೇರ್ ಬಾಕ್ಸ್ ಅನ್ನು ಹೊಂದಿದೆ.

ಮಹೀಂದ್ರಾ

Mahindra Thar RWD ಥಾರ್ RWD

ಬೆಲೆ ರೂ. 9.99 ಲಕ್ಷದಿಂದ

ಈ ವರ್ಷ ಜನವರಿಯಲ್ಲಿ, ಮಹೀಂದ್ರಾ, ಥಾರ್‌ನ ಹೆಚ್ಚು ಕೈಗೆಟುಕುವ ವೈರಿಯೆಂಟ್‌ಗಳನ್ನು ಪರಿಚಯಿಸಿದ್ದು, ಇದು 4WD ಸಿಸ್ಟಮ್ ಅನ್ನು ರಿಯರ್-ವ್ಹೀಲ್ ಡ್ರೈವ್‌ಟ್ರೇನ್‌ಗೆ ಬದಲಾಯಿಸಿದೆ (RWD). ಇದನ್ನು ಮೂರು ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಹಾರ್ಡ್ ಟಾಪ್‌ ಅನ್ನು ಮಾತ್ರ ಹೊಂದಿದೆ. ಈ ಥಾರ್ 118PS 1.5-ಲೀಟರ್ ಡೀಸೆಲ್ ಇಂಜಿನ್ ಹೊಂದಿದ್ದು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಮಾತ್ರ ಬರುತ್ತದೆ. ಇದು ಟರ್ಬೋ-ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಆಟೋಮ್ಯಾಟಿಕ್‌ನಲ್ಲಿ ಮಾತ್ರ ಪಡೆದಿದೆ.

ಟೊಯೋಟಾ

2023 Toyota Innova Crysta

 ನವೀಕೃತ ಇನ್ನೋವಾ ಕ್ರಿಸ್ಟಾ

 ಬೆಲೆ ರೂ 19.13 ಲಕ್ಷದಿಂದ

 ಮೂರನೇ-ಪೀಳಿಗೆ ಇನ್ನೋವಾ ಮಾರಾಟಕ್ಕೆ ಬಂದಾಗಿನಿಂದ (ಇನ್ನೋವಾ ಹೈಕ್ರಾಸ್ ಎಂದು ಕರೆಯಲಾಗುತ್ತದೆ), ಇನ್ನೋವಾ ಕ್ರಿಸ್ಟಾ ಮತ್ತೊಮ್ಮೆ ಬರುತ್ತದೆ ಎಂದು ವರದಿಯಾಗಿದೆ. ಇದು ಮಾರ್ಚ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದು, ಹೈಕ್ರಾಸ್ ಪೆಟ್ರೋಲ್ ವೇರಿಯೆಂಟ್‌ಗಳಿಗೆ ಹೋಲಿಸಿದರೆ, ರೂ 59,000 ದಷ್ಟು ದುಬಾರಿಯಾಗಿದೆ. ಈ ಇನ್ನೋವಾ ಕ್ರಿಸ್ಟಾ 150PS 2.4-ಲೀಟರ್ ಡೀಸೆಲ್ ಪವರ್‌ಟ್ರೇನ್ ಹೊಂದಿದ್ದು, ಈಗ E20 ಮತ್ತು BS6 2.0 ಅನುಸರಣೆ ಹೊಂದಿದೆ.

Toyota Hyryder CNG

ಹೈರೈಡರ್ CNG

ಬೆಲೆ ರೂ 13.23 ಲಕ್ಷದಿಂದ

ಮಾರುತಿಯ ತದ್ರೂಪಿ– ಗ್ರ್ಯಾಂಡ್ ವಿಟಾರಾದಂತೆಯೇ – ಟೊಯೋಟಾದ ಕಾಂಪ್ಯಾಕ್ಟ್ SUV, ೈರೈಡರ್, ಈ ವರ್ಷ ಕೂಡಾ CNG ಕಿಟ್ ಆಯ್ಕೆಯನ್ನು ಹೊಂದಿದೆ. ಈ CNG ವೇರಿಯೆಂಟ್‌ಗಳು ಸಾಮಾನ್ಯ ವೇರಿಯೆಂಟ್‌ಗಳಿಗೆ ಹೋಲಿಸಿದರೆ ರೂ 95,000 ದಷ್ಟು ದುಬಾರಿಯಾಗಿದ್ದು ಮಾರುತಿ SUVಯಂತೆ ಅದೇ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ. 

Toyota Land Cruiser 300

 ನ್ಯೂ ಲ್ಯಾಂಡ್ ಕ್ರೂಸಿಯರ್ (LC300)

 ಬೆಲೆ ರೂ 2.10 ಕೋಟಿ

ಟೊಯೋಟಾ ಭಾರತಕ್ಕೆ ಲ್ಯಾಂಡ್ ಕ್ರ್ಯೂಸಿಯರ್ ಅನ್ನು ಆಟೋ ಎಕ್ಸ್‌ಪೋ 2023 ರಲ್ಲಿ ಮರಳಿ ತಂದಿತು ಹಾಗೂ ಇದರ ಪಾದಾರ್ಪಣೆಯಾದ ಸ್ವಲ್ಪ ಸಮಯದಲ್ಲೇ ಇದರ ಬೆಲೆಗಳನ್ನು ಪ್ರಕಟಿಸಿತು. ಮೊದಲ SUV ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾದ ಡೀಸೆಲ್ ಎಂಜಿನ್‍ನೊಂದಿಗೆ (3.3-ಲೀಟರ್ ಟ್ವಿನ್-ಟರ್ಬೋ V6) ಲಭ್ಯವಿದೆ.

ಇದನ್ನೂ ಓದಿ: ಸೊನ್ನೆಯಿಂದ ಆರರ ತನಕ: ಭಾರತೀಯ ಕಾರುಗಳಲ್ಲಿ ಏರ್‌ಬ್ಯಾಗ್‌ಗಳು ಹೇಗೆ ಕಡ್ಡಾಯ ಪೀಚರ್‌ಗಳಾದವು

ಬಿಡುಗಡೆಯಾದ ಇಲೆಕ್ಟ್ರಿಕ್ ಕಾರುಗಳು

Citroen eC3

 ಸಿಟ್ರಾನ್ eC3

ಬೆಲೆ 11.50 ಲಕ್ಷದಿಂದ

ಭಾರತದಲ್ಲಿ ಫ್ರೆಂಚ್ ಮಾರ್ಕೀಯ ಮೂರನೇ ಕೊಡುಗೆ C3 ಹ್ಯಾಚ್‌ಬ್ಯಾಕ್‌ನ ಸಂಪೂರ್ಣ ಇಲೆಕ್ಟ್ರಿಕ್ ಆವೃತ್ತಿಯಾಗಿದೆ. ಇದು 29.2kWh ಬ್ಯಾಟರಿ ಪ್ಯಾಕ್ (320km ನ ARAI-ಕ್ಲೈಮ್ ಮಾಡಲಾದ ಶ್ರೇಣಿ) ಅನ್ನು ಹೊಂದಿದ್ದು ICE ಆವೃತ್ತಿಯಂತೆಯೆ ಫೀಚರ್‌ಗಳು ಕಡಿಮೆ ಇವೆ.

Mahindra XUV400

 ಮಹೀಂದ್ರಾ XUV400

 ಬೆಲೆ ರೂ 15.99 ಲಕ್ಷದಿಂದ

ಈ XUV400 ಮೂಲತಃ ಇಲೆಕ್ಟ್ರಿಫೈಡ್ XUV300 ಆಗಿದ್ದು ಯಾವುದೇ ಹೆಜ್ಜೆಗುರುತನ್ನು ಉಳಿಸಿಲ್ಲ. ಇದು ಎರಡು ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ: 34.5kWh (375km) ಮತ್ತು 39.4kWh (456km). XUV300 ಗೆ ಹೋಲಿಸಿದರೆ ಇದು ಯಾವುದೇ ಫೀಚರ್ ಅಥವಾ ಇಂಟೀರಿಯರ್ ನವೀಕರಣಗಳನ್ನು ಒಳಗೊಂಡಿಲ್ಲ. 

ಬಿಡುಗಡೆಯಾದ ಐಷಾರಾಮಿ ಕಾರುಗಳು

New BMW X1

New Audi Q3 Sportback

ಭಾರತದಲ್ಲಿ ಐಷಾರಾಮಿ ಕಾರು ಮಾರುಕಟ್ಟೆಯು 2023 ರ ಮೊದಲ ಮೂರು ತಿಂಗಳಲ್ಲಿ ವಿಸ್ತರಿಸಿದ್ದು ಈಗಾಗಲೇ ಸುಮಾರು ಏಳ ಹೊಸ ಬಿಡುಗಡೆಯನ್ನು ಈಗಾಗಲೇ ಮಾಡಲಾಗಿದೆ. ಇವುಗಳು ಮರ್ಸಿಡೀಸ್-AMG E53 ಕ್ಯೈಬ್ರಿಯೋಲೆಟ್, ಹೊಸ ಆಡಿ Q3 ಸ್ಪೋರ್ಟ್‌ಬ್ಯಾಕ್, ಮತ್ತು  BMW ಮಾಡೆಲ್‌ಗಳ ಗುಚ್ಛವನ್ನು ಒಳಗೊಂಡಿದೆ: ಮೂರನೇ-ಪೀಳಿಗೆ BMW X1, i7 ಮತ್ತು ಏಳನೇ-ಪೀಳಿಗೆ 7 ಸರಣಿಗಳು ಮತ್ತು ನವೀಕೃತ 3 ಸರಣಿ ಗ್ರ್ಯಾನ್ ಲಿಮೋಸಿನ್ ಮತ್ತು X7 

ಇನ್ನಷ್ಟು ಓದಿ: BMW X1 ಆಟೋಮ್ಯಾಟಿಕ್

was this article helpful ?

Write your Comment on BMW ಎಕ್ಸ1

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience