ನವೀಕೃತ ಕಿಯಾ ಸೆಲ್ಟೋಸ್ ಎಷ್ಟು ಇಂಧನ ದಕ್ಷತೆ ಹೇಗಿದೆ ಗೊತ್ತಾ?
ಕಿಯಾ ಸೆಲ್ಟೋಸ್ ಗಾಗಿ tarun ಮೂಲಕ ಜುಲೈ 27, 2023 07:16 pm ರಂದು ಪ್ರಕಟಿಸಲಾಗಿದೆ
- 14 Views
- ಕಾಮೆಂಟ್ ಅನ್ನು ಬರೆಯಿರಿ
ಡಿಸೇಲ್-iMT ಸಂಯೋಜನೆಯು ಸೆಲ್ಟೋಸ್‌ನ ಹಿಂದಿನ ಆವೃತ್ತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ
-
ಕಿಯಾ ಹೊಸ ಸೆಲ್ಟೋಸ್‌ನಲ್ಲಿ 1.5 ಲೀಟರ್ ಪೆಟ್ರೋಲ್, ಟರ್ಬೋ-ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತಿದೆ.
-
ಮ್ಯಾನ್ಯುವಲ್ ಮತ್ತು CVT ಆಯ್ಕೆಯಗಳನ್ನು ಹೊಂದಿರುವ ಪೆಟ್ರೋಲ್ ಎಂಜಿನ್ ಕ್ರಮವಾಗಿ 17kmpl ಮತ್ತು 17.7kmpl ಮೈಲೇಜ್ ನೀಡುತ್ತದೆ.
-
ಇದರ ಡಿಸೇಲ್ ವೇರಿಯೆಂಟ್‌ಗಳು iMT ಗೆ 20.7kmpl ಮತ್ತು ಆಟೋಮ್ಯಾಟಿಕ್‌ಗೆ 19.1kmpl ಅನ್ನು ಕ್ಲೈಮ್ ಮಾಡುತ್ತದೆ.
-
ಹೊಸ ಟರ್ಬೋ-ಪೆಟ್ರೋಲ್ ಎಂಜಿನ್ 17.9kmpl ವರೆಗಿನ ಆರ್ಥಿಕತೆಯ ಭರವಸೆಯನ್ನು ನೀಡುತ್ತದೆ.
-
ನವೀಕೃತ ಸೆಲ್ಟೋಸ್‌ನ ಬೆಲೆಯನ್ನು ರೂ. 10.90 ಲಕ್ಷದಿಂದ ರೂ. 20 ಲಕ್ಷದವರೆಗೆ (ಎಕ್ಸ್-ಶೋರೂಮ್) ನಿಗದಿಪಡಿಸಲಾಗಿದೆ
ನವೀಕೃತ ಕಿಯಾ ಸೆಲ್ಟೋಸ್‌ನ ಇಂಧನ ದಕ್ಷತೆಯನ್ನು ಅಧಿಕೃತವಾಗಿ ಬಹಿರಂಗಗೊಳಿಸಲಾಗಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿಯು ಇತ್ತೀಚೆಗೆ ಗಮನಾರ್ಹವಾದ ನವೀಕರಣವನ್ನು ಪಡೆದುಕೊಂಡಿದ್ದು, ಇದು ರಿಫ್ರೆಶ್ ವಿನ್ಯಾಸ, ಹೊಸ ಫೀಚರ್‌ಗಳು, ಮತ್ತು ಹೊಸ ಟರ್ಬೋ-ಪೆಟ್ರೋಲ್ ಮೋಟಾರ್ ಅನ್ನು ಪಡೆಯುತ್ತಿದೆ. ನಾವದನ್ನು ಸಂಪೂರ್ಣವಾಗಿ ಪರೀಕ್ಷಿಸಲು ಅವಕಾಶ ಹೊಂದಿಲ್ಲವಾದರೂ, ಕ್ಲೈಮ್ ಮಾಡಲಾದ ಅಂಕಿಅಂಶಗಳು ಸೆಲ್ಟೋಸ್‌ನ ಅನೇಕ ಪವರ್‌ಟ್ರೇನ್‌ಗಳಿಂದ ನಿರೀಕ್ಷಿತ ಇಂಧನ ದಕ್ಷತೆಯ ಉತ್ತಮ ಸೂಚಕವಾಗಿದೆ ಮತ್ತು ಹಿಂದಿನ ಆವೃತ್ತಿಗಿಂತ ಇದು ಹೆಚ್ಚು ಸುಧಾರಿಸಿದೆ ಎನ್ನಬಹುದು.
ಇದನ್ನೂ ಓದಿ: ನವೀಕೃತ ಕಿಯಾ ಸೆಲ್ಸೋಟ್ ವೇರಿಯೆಂಟ್‌ವಾರು ಫೀಚರ್‌ಗಳ ಬಹಿರಂಗ
ಎಂಜಿನ್‌ವಾರು ಮೈಲೇಜ್ ಅಂಕಿಅಂಶಗಳು
ಮೈಲೇಜ್ (ARAI-ಕ್ಲೈಮ್ ಮಾಡಲಾದ ಅಂಕಿಅಂಶಗಳು) |
ಹೊಸ ಸೆಲ್ಟೋಸ್ |
ಹಳೆಯ ಸೆಲ್ಟೋಸ್ |
ಕಿಯಾ ಕಾರೆನ್ಸ್ |
1.5-ಲೀಟರ್ P-MT |
17kmpl |
16.5kmpl |
15.7kmpl |
1.5- ಲೀಟರ್ P-CVT |
17.7kmpl |
16.8kmpl |
- |
1.4- ಲೀಟರ್ ಟರ್ಬೋ-MT |
- |
16.1kmpl |
- |
1.4- ಲೀಟರ್ ಟರ್ಬೋ-DCT |
- |
16.5kmpl |
- |
1.5- ಲೀಟರ್ ಟರ್ಬೋ-ಪೆಟ್ರೋಲ್ iMT |
17.7kmpl |
- |
- |
1.5- ಲೀಟರ್ ಟರ್ಬೋ-ಪೆಟ್ರೋಲ್ DCT |
17.9kmpl |
- |
- |
1.5- ಲೀಟರ್ D-MT (ಈಗ iMT) |
20.7kmpl |
21kmpl |
21.3kmpl |
1.5-ಲೀಟರ್ D-AT |
19.1kmpl |
18kmpl |
18.4kmpl |
-
1.5-ಲೀಟರ್ ನೈಸರ್ಗಿಕ-ಆ್ಯಸ್ಪಿರೇಟೆಡ್ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳಿಗೆ ಇರುವ ಏಕೈಕ ಬದಲಾವಣೆಗಳೆಂದರೆ ಅವುಗಳು ಈಗ BS6.2 ಅನ್ನು ಸರಿಸುಮಾರು ಅದೇ ಶಕ್ತಿ ಮತ್ತು ಟಾರ್ಕ್ ಅಂಕಿಅಂಶಗಳನ್ನು ಹೊಂದಿದೆ.
-
ನವೀಕೃತ ಸೆಲ್ಟೋಸ್‌ನಲ್ಲಿ, ಅದರ ಪೆಟ್ರೋಲ್ ಎಂಜಿನ್ ಹಿಂದಿನ ಆವೃತ್ತಿಗಿಂತ ಸ್ವಲ್ಪ ಹೆಚ್ಚು ಪರಿಣಾಮಕಾರಿಯಾಗಿದ್ದು, CVT ಆಟೋಮ್ಯಾಟಿಕ್‌ಗೆ 0.9kmpl ವರೆಗೆ ಮತ್ತು 6-ಸ್ಪೀಡ್ ಮ್ಯಾನ್ಯುವಲ್‌ನಲ್ಲಿ 0.5kmpl ವರೆಗೆ ಇಂಧನ ದಕ್ಷತೆಯನ್ನು ಒದಗಿಸುತ್ತದೆ.
-
ಏತನ್ಮಧ್ಯೆ, ಡಿಸೇಲ್ ಎಂಜಿನ್ ಇನ್ನು ಮುಂದೆ 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಲಭ್ಯವಿರದೆ ಇದು iMT (ಕ್ಲಚ್ ಪೆಡಲ್ ರಹಿತ ಮ್ಯಾನ್ಯುವಲ್) ಅನ್ನು ಪಡೆಯುತ್ತದೆ ಹಾಗೂ ಇದು 0.3kmpl ನಷ್ಟು ಕಡಿಮೆ ಆರ್ಥಿಕತೆಯನ್ನು ಕ್ಲೈಮ್ ಮಾಡುತ್ತದೆ. ಆದಾಗ್ಯೂ, 6-ಸ್ಪೀಡ್ ಟಾರ್ಕ್ ಪರಿವರ್ತಕ ಆಟೋಮ್ಯಾಟಿಕ್‌ನೊಂದಿಗಿನ ಅದೇ ಎಂಜಿನ್ ಈಗ 1.1kmpl ನಷ್ಟು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
-
ನವೀಕೃತ ಸೆಲ್ಟೋಸ್ ಈಗ ಹೊಸ ಟರ್ಬೋ-ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 20PS ನಷ್ಟು ಶಕ್ತಿಶಾಲಿಯಾಗಿದೆ. ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಈಗ iMT (ಮ್ಯಾನ್ಯುವಲ್ ರಹಿತ ಕ್ಲಚ್) ನಿಂದ ಬದಲಾಯಿಸಲಾಗಿದೆ.
-
ಹೆಚ್ಚು ಶಕ್ತಿಶಾಲಿ ಮಾತ್ರವಲ್ಲದೇ, ಹೊಸ ಟರ್ಬೋ-ವೇರಿಯೆಂಟ್‌ಗಳು ಹಳೆಯ 1.4 ಲೀಟರ್ ಆಯ್ಕೆಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ.
-
ಇದೆಲ್ಲದರ ನಡುವೆ, ಕಿಯಾ ಕಾರೆನ್ಸ್ ಎಂಪಿವಿ, ಹೊಸ ಸೆಲ್ಟೋಸ್‌ನಂತೆಯೇ ಅದೇ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ ಮತ್ತು ಡಿಸೇಲ್- iMT ಆಯ್ಕೆಗೆ ಬಂದಾಗ ಆರ್ಥಿಕತೆ ವಿಷಯದಲ್ಲಿ ಈ ಎಸ್‌ಯುವಿಗಿಂತ ಉತ್ತಮವಾಗಿದೆ.
ಇತರ ವಿವರಗಳ ಸಾರಾಂಶ
ಈ 2023 ಕಿಯಾ ಸೆಲ್ಟೋಸ್ ವಿಹಂಗಮ ಸನ್‌ರೂಫ್, ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ ಡ್ಯುಯಲ್ 10.25-ಇಂಚಿನ್ ಡಿಸ್‌ಪ್ಲೇಗಳು, ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಮತ್ತು ಹೆಡ್ಸ್-ಅಪ್ ಡಿಸ್‌ಪ್ಲೇಗಳನ್ನು ಫೀಚರ್‌ಗಳಾಗಿ ಹೊಂದಿದೆ. ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮರಾ, ಇಎಸ್‌ಸಿ, ಹಿಲ್ ಹೋಲ್ಡ್ ಅಸಿಸ್ಟ್, ಮತ್ತು ಇದು ರಡಾರ್-ಆಧಾರಿತ ADAS ತಂತ್ರಜ್ಞಾನವನ್ನು ಹೊಂದಿದೆ.
ಇದನ್ನೂ ಓದಿ: ಕಿಯಾ ಸೆಲ್ಟೋಸ್ HTX ವೇರಿಯೆಂಟ್‌ನ ಚಿತ್ರಗಳನ್ನು ಪರಿಶೀಲಿಸಿ
ನವೀಕೃತ ಕಿಯಾ ಸೆಲ್ಟೋಸ್ ಬೆಲೆಗಳನ್ನು ರೂ. 10.90 ಲಕ್ಷದಿಂದ ರೂ 20 ಲಕ್ಷಗಳವೆರಗೆ ನಿಗದಿಪಡಿಸಲಾಗಿದೆ (ಪರಿಚಯಾತ್ಮಕ ಎಕ್ಸ್-ಶೋರೂಮ್, ದೆಹಲಿ). ಆರಂಭಿಕ ಡೆಲಿವರಿಗಳು ಈಗಾಗಲೇ ನಡೆಯುತ್ತಿವೆ, ಆದರೆ, ಇದು ಈಗಾಗಲೇ 10000 ಕ್ಕೂ ಹೆಚ್ಚು ಮುಂಗಡ-ಆರ್ಡರ್‌ಗಳನ್ನು ಪಡೆದುಕೊಂಡಿರುವುದರಿಂದ ಯೋಗ್ಯವಾದ ಕಾಯುವಿಕೆ ಅವಧಿಯನ್ನು ಹೊಂದಿರಬಹುದು. ಇದು ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಎಂಜಿ ಆಸ್ಟರ್, ಮತ್ತು ಮುಂಬರುವ ಸಿಟ್ರಾನ್ C3 ಏರ್‌ಕ್ರಾಸ್ ಮತ್ತು ಹೋಂಡಾ ಎಲಿವೇಟ್‌ಗೆ ಪೈಪೋಟಿ ನೀಡುತ್ತದೆ.
ಇನ್ನಷ್ಟು ಇಲ್ಲಿ ಓದಿ: ಸೆಲ್ಟೋಸ್ ಆನ್‌ರೋಡ್ ಬೆಲೆ
0 out of 0 found this helpful