Mahindra Thar Roxxನ ಮುಂಭಾಗದ ಮೊದಲ ಸ್ಪಷ್ಟ ನೋಟ ಇಲ್ಲಿದೆ
ಮಹೀಂದ್ರ ಥಾರ್ ರಾಕ್ಸ್ ಗಾಗಿ shreyash ಮೂಲಕ ಆಗಸ್ಟ್ 12, 2024 02:54 pm ರಂದು ಪ್ರಕಟಿಸಲಾಗಿದೆ
- 59 Views
- ಕಾಮೆಂಟ್ ಅನ್ನು ಬರೆಯಿರಿ
ಥಾರ್ ರೋಕ್ಸ್ ಸಣ್ಣ ವಿನ್ಯಾಸದ ಬದಲಾವಣೆಗಳನ್ನು ಮತ್ತು ಮುಂಭಾಗದಲ್ಲಿ ಥಾರ್ 3-ಡೋರ್‌ನಲ್ಲಿಲ್ಲದ ಹೊಸ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಪಡೆಯುತ್ತದೆ
- ಹೊರಭಾಗದ ವಿನ್ಯಾಸದ ಅಂಶಗಳು ಹೊಸ 6-ಸ್ಲ್ಯಾಟ್ ಗ್ರಿಲ್ ಮತ್ತು ಸಿ-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್ಇಡಿ ಹೆಡ್‌ಲೈಟ್‌ಗಳನ್ನು ಒಳಗೊಂಡಿವೆ.
- ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಇದರ ಕ್ಯಾಬಿನ್ ಡ್ಯುಯಲ್-ಟೋನ್ ಥೀಮ್ ಹೊಂದಿರುವುದನ್ನು ತೋರಿಸಿತ್ತು.
- ಇದು ಪೆನರೋಮಿಕ್ ಸನ್‌ರೂಫ್, ಡ್ಯುಯಲ್ ಡಿಸ್‌ಪ್ಲೇಗಳು (ಎರಡೂ 10.25-ಇಂಚಿನ ಸ್ಕ್ರೀನ್‌ಗಳು) ಮತ್ತು ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರಬಹುದು.
- 3-ಡೋರ್ ಥಾರ್‌ನಲ್ಲಿ ನೀಡಲಾದ ಅದೇ 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಬಳಸುವ ಸಾಧ್ಯತೆಯಿದೆ.
- 15 ಲಕ್ಷ ರೂ.ನಿಂದ ಎಕ್ಸ್ ಶೋರೂಂ ಬೆಲೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.
ಮಹೀಂದ್ರಾ ಥಾರ್ ರೋಕ್ಸ್ ಈ ಸ್ವಾತಂತ್ರ್ಯ ದಿನದಂದು ಅಂದರೆ ಇದೇ ಆಗಸ್ಟ್ 15ರಂದು ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ. ಮಹೀಂದ್ರಾ ತನ್ನ 5-ಡೋರ್‌ನ ಎಸ್‌ಯುವಿಯ ಅನೇಕ ಟೀಸರ್‌ಗಳನ್ನು ಬಿಡುಗಡೆ ಈಗಾಗಲೇ ಬಿಡುಗಡೆ ಮಾಡಿದ್ದು, ಇದು ಒಳಗೆ ಮತ್ತು ಹೊರಗೆ ಹೇಗೆ ಕಾಣುತ್ತದೆ ಮತ್ತು ಯಾವುದೆಲ್ಲಾ ಫೀಚರ್‌ಗಳನ್ನು ಪಡೆಯುತ್ತದೆ ಎಂಬುವುದರ ವಿವರವನ್ನು ನೀಡಿತ್ತು. ಇತ್ತೀಚೆಗೆ, ಈ ಕಾರು ತಯಾರಕರು ಥಾರ್ ರೋಕ್ಸ್‌ನ ಚಿತ್ರದ ರೂಪದಲ್ಲಿ ಮತ್ತೊಂದು ಟೀಸರ್ ಅನ್ನು ಬಿಡುಡೆ ಮಾಡಿದ್ದು, ಇದು ಅದರ ಮುಂಭಾಗದ ಸ್ಪಷ್ಟ ನೋಟವನ್ನು ನಮಗೆ ನೀಡುತ್ತದೆ.
ಹೊಸ ಗ್ರಿಲ್ ಮತ್ತು ಹೆಡ್‌ಲೈಟ್‌ಗಳ ಸೇರ್ಪಡೆ
ಥಾರ್ ರೋಕ್ಸ್‌ನಲ್ಲಿ ನೀವು ಗಮನಿಸುವ ಮೊದಲ ವಿಷಯವೆಂದರೆ ಅದರ ಹೊಸ 6-ಸ್ಲಾಟ್ ಗ್ರಿಲ್, ಇದನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಆದರೆ ಥಾರ್‌ನ 3-ಡೋರ್ ಆವೃತ್ತಿಯಲ್ಲಿ ಗಮನಿಸುವುದಾದರೆ, ಅದು 7-ಸ್ಲಾಟ್ ಗ್ರಿಲ್‌ನೊಂದಿಗೆ ಬರುತ್ತದೆ. ಥಾರ್ ರೋಕ್ಸ್ ಹೊಸ ಹೆಡ್‌ಲೈಟ್‌ಗಳನ್ನು ಸಹ ಒಳಗೊಂಡಿದೆ, ಅದು ಥಾರ್ 3-ಬಾಗಿಲಿನಂತಲ್ಲದೆ, ಸಮಗ್ರ ಸಿ-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಪ್ರೊಜೆಕ್ಟರ್‌ಗಳಂತೆ ತೋರುತ್ತದೆ. ಆದರೆ, ಇಂಡಿಕೇಟರ್ ಮತ್ತು ಫಾಗ್ ಲ್ಯಾಂಪ್‌ಗಳ ನಿಯೋಜನೆಯು 3-ಬಾಗಿಲಿನ ಥಾರ್‌ನಂತೆ ನೀಡಲಾಗಿದೆ.
ಇಂಟಿರೀಯರ್ ಮತ್ತು ನಿರೀಕ್ಷಿತ ಫೀಚರ್‌ಗಳು
ಥಾರ್ ರೋಕ್ಸ್‌ನ ಹಿಂದಿನ ಟೀಸರ್‌ಗಳು ಇದು ಡ್ಯುಯಲ್-ಟೋನ್ ಕಪ್ಪು ಮತ್ತು ಬಿಳಿ ಥೀಮ್ ಅನ್ನು ಹೊಂದಿರುತ್ತದೆ ಎಂದು ಬಹಿರಂಗಪಡಿಸಿದೆ. ಸೀಟುಗಳನ್ನು ಬಿಳಿ ಕವರ್‌ನಲ್ಲಿ ಸಜ್ಜುಗೊಳಿಸಲಾಗುತ್ತದೆ, ಆದರೆ ಡ್ಯಾಶ್‌ಬೋರ್ಡ್ ಇದಕ್ಕೆ ವ್ಯತಿರಿಕ್ತವಾಗಿ ತಾಮ್ರದ ಸ್ಟಿಚ್ಚಿಂಗ್‌ನ ಎಕ್ಸೆಂಟ್ ಅನ್ನು ಸಹ ಪಡೆಯುತ್ತದೆ.
ಇದನ್ನೂ ಸಹ ಓದಿ: Tata Curvv EV ವೇರಿಯಂಟ್-ವಾರು ಪವರ್‌ಟ್ರೇನ್ ಆಯ್ಕೆಗಳ ವಿವರ
ಮಹೀಂದ್ರಾ ಥಾರ್ ಅನ್ನು ದೊಡ್ಡ ಟಚ್‌ಸ್ಕ್ರೀನ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ(ಎರಡೂ 10.25-ಇಂಚಿನ ಸ್ಕ್ರೀನ್‌ಗಳು), ಆಟೋಮ್ಯಾಟಿಕ್ ಎಸಿ, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ಫೀಚರ್‌ಗಳೊಂದಿಗೆ ನೀಡುತ್ತದೆ. ಇದು ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟುಗಳನ್ನು ಪಡೆಯುವ ನಿರೀಕ್ಷೆಯಿದೆ
ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಮತ್ತು ಡಿಸೆಂಟ್ ಕಂಟ್ರೋಲ್, ಮತ್ತು 360-ಡಿಗ್ರಿ ಕ್ಯಾಮೆರಾ ಇರಬಹುದು. ಇದು ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಎಕ್ಸ್‌ಯುವಿ 3XO ನಲ್ಲಿ ಕಂಡುಬರುವಂತೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಲೆವೆಲ್ 2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು) ವೈಶಿಷ್ಟ್ಯಗಳನ್ನು ಸಹ ಪಡೆಯಬಹುದು.
ನಿರೀಕ್ಷಿತ ಪವರ್‌ಟ್ರೇನ್ ಆಯ್ಕೆಗಳು
ಥಾರ್‌ನ 5-ಡೋರ್ ಆವೃತ್ತಿಯು ಬಹುಶಃ ರೆಗುಲರ್ ಥಾರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಬಳಸುತ್ತದೆ, ಆದರೆ ಇದರ ಪವರ್ ಮತ್ತು ಟಾರ್ಕ್ ಹೆಚ್ಚಿರಬಹುದು. ಎಂಜಿನ್ ಆಯ್ಕೆಗಳಲ್ಲಿ 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್, 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಿವೆ. ಇದು ಹಿಂಬದಿ-ಚಕ್ರ-ಡ್ರೈವ್ (RWD) ಮತ್ತು ನಾಲ್ಕು-ಚಕ್ರ-ಡ್ರೈವ್ (4WD) ಸಂರಚನೆಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಥಾರ್ ರೋಕ್ಸ್‌ನ ಎಕ್ಸ್ ಶೋರೂಂ ಬೆಲೆಗಳು 15 ಲಕ್ಷ ರೂ.ಗಳಿಂದ ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಫೋರ್ಸ್ ಗೂರ್ಖಾ 5-ಡೋರ್‌ಗೆ ನೇರಪ್ರತಿಸ್ಪರ್ಧಿಯಾಗಿದ್ದು, ಮತ್ತು ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಿದೆ.
ಹೆಚ್ಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡುವುದನ್ನು ಮಿಸ್ ಮಾಡ್ಬೇಡಿ
ಇನ್ನಷ್ಟು ಓದಿ : ಥಾರ್ ಆಟೋಮ್ಯಾಟಿಕ್