Login or Register ಅತ್ಯುತ್ತಮ CarDekho experience ಗೆ
Login

ಭಾರತೀಯ Hyundai i20 Facelift ಆವೃತ್ತಿಯ ಫಸ್ಟ್ ಲುಕ್ ಹೀಗಿದೆ ನೋಡಿ

ಹುಂಡೈ I20 ಗಾಗಿ tarun ಮೂಲಕ ಸೆಪ್ಟೆಂಬರ್ 04, 2023 06:38 pm ರಂದು ಪ್ರಕಟಿಸಲಾಗಿದೆ

ಹೊಸ ಅವತಾರವನ್ನು ನೀಡುವುದಕ್ಕಾಗಿ ನವಿರಾದ ವಿನ್ಯಾಸವನ್ನು ಮಾಡಲಾಗಿದ್ದು, ಹೆಚ್ಚುವರಿ ವಿಶೇಷತೆಗಳನ್ನು ಸಹ ಸೇರಿಸಲಾಗಿದೆ

  • ಸರಿಹೊಂದಿಸಲಾದ ಫ್ರಂಟ್‌ ಗ್ರಿಲ್‌, ಪರಿಷ್ಕೃತ ಎಲ್‌.ಇ.ಡಿ ಲೈಟಿಂಗ್‌ ಮತ್ತು ಮರುವಿನ್ಯಾಸಗೊಳಿಸಿದ ಬಂಪರ್‌ ಇತ್ಯಾದಿಗಳನ್ನು ಟೀಸರ್‌ ತೋರಿಸುತ್ತದೆ.
  • ಹೊಸ ಅಲೋಯ್‌ ವೀಲ್‌ ಗಳೊಂದಿಗೆ ಇದು ಬರಲಿದ್ದು, ಜಗತ್ತಿನಾದ್ಯಂತ ಲಭಿಸುತ್ತಿರುವ ನವೀನ ರಿಯರ್‌ ಬಂಪರ್‌ ಅನ್ನು ಸಹ ಇದು ಹೊಂದಲಿದೆ.
  • ಹೊಸ ಡಿಜಿಟಲ್‌ ಕ್ಲಸ್ಟರ್‌, ಡ್ಯುವಲ್‌ ಕ್ಯಾಮರಾ ಡ್ಯಾಶ್‌ ಕ್ಯಾಮ್‌, ಮತ್ತು ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ ಗಳು ಇತ್ಯಾದಿ ಹೊಸ ವಿಶೇಷತೆಗಳೊಂದಿಗೆ ಇದು ರಸ್ತೆಗಿಳಿಯಲಿದೆ.
  • ಪ್ರಮಾಣಿತ ಆರು ಏರ್‌ ಬ್ಯಾಗುಗಳು ಮತ್ತು 360-ಡಿಗ್ರಿ ಕ್ಯಾಮೆರಾ ಇತ್ಯಾದಿ ಸುರಕ್ಷತಾ ಸೇರ್ಪಡೆಗಳನ್ನು ಮಾಡಲಾಗಿದೆ.
  • ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಗಳೊಂದಿಗೆ 1.2 ಲೀಟರ್‌ ಪೆಟ್ರೋಲ್‌ ಮತ್ತು 1 ಲೀಟರ್‌ ಟರ್ಬೋ ಪೆಟ್ರೋಲ್ ಎಂಜಿನ್‌ ಗಳನ್ನು ಉಳಿಸಿಕೊಳ್ಳಲಿದೆ.

ಹ್ಯುಂಡೈ i20 ಫೇಸ್‌ ಲಿಫ್ಟ್‌ ಕಾರಿನ ಟೀಸರ್‌ ಮೊದಲ ಬಾರಿಗೆ ಭಾರತದಲ್ಲಿ ಕಾಣಿಸಿಕೊಂಡಿದ್ದು, 2023 ರ ನವೆಂಬರ್‌ ತಿಂಗಳಿನಲ್ಲಿ ಇದು ಬಿಡುಗಡೆಯಾಗುವ ಸಂಭವವಿದೆ. ಈ ಪ್ರೀಮಿಯಂ ಹ್ಯಾಚ್‌ ನ ನಿರ್ಗಮಿಸುತ್ತಿರುವ ಆವೃತ್ತಿಯು 2020 ರಲ್ಲಿ ರಸ್ತೆಗೆ ಇಳಿದಿತ್ತು. ಅಂದಿನಿಂದ ಮೊದಲ ಬಾರಿಗೆ ಇದು ಪ್ರಮುಖ ಪರಿಷ್ಕರಣೆಗಳನ್ನು ಕಾಣುತ್ತಿದೆ. ಈ ಫೇಸ್‌ ಲಿಫ್ಟ್‌ ಈಗಾಗಲೇ ಇತರ ದೇಶಗಳಲ್ಲಿ ಬಿಡುಗಡೆಯಾಗಿದೆ.

ಇದರಲ್ಲಿ ಹೊಸತೇನಿದೆ?

View this post on Instagram

A post shared by Hyundai India (@hyundaiindia)

ಮುಂಭಾಗಕ್ಕೆ ಮಾಡಲಾಗಿರುವ ಬದಲಾವಣೆಗಳು ಸಾಕಷ್ಟು ನವಿರಾಗಿ ಮೂಡಿ ಬಂದಿವೆ. ಆದರೆ ಸಾಕಷ್ಟು ಐಷಾರಾಮಿ ವಾಹನವಾಗಿ ಇದು ಕಾಣುತ್ತದೆ. ಸರಿಹೊಂದಿಸಿದ ಹೊಸ ಕ್ಯಾಸ್ಕೇಡಿಂಗ್‌ ಗ್ರಿಲ್‌, ಅದೇ ಇನ್ವರ್ಟೆಡ್ LED DRL‌ ಗಳೊಂದಿಗೆ ಹೊಸ ಹೆಡ್‌ ಲ್ಯಾಂಪ್‌ ವಿನ್ಯಾಸ, ಪರಿಷ್ಕೃತ ಬಂಪರ್‌ ಮತ್ತು ಸೈಡ್‌ ಇನ್‌ ಟೇಕ್‌ ಗಳನ್ನು ಇದು ಹೊಂದಿದೆ. ಇತ್ತೀಚಿನ ಎಲ್ಲಾ ಮಾದರಿಗಳಲ್ಲಿ ನಾವು ಗಮನಿಸಿದಂತೆ, ಹ್ಯುಂಡೈ ಲೋಗೋಗೆ ಹೊಸ ನೋಟವನ್ನು ನೀಡಲಾಗಿದೆ. ಅಲ್ಲದೆ, ಈ ವಾಹನದ ಮುಂಭಾಗವು, ಮೇ ತಿಂಗಳಿನಲ್ಲಿ ಮಾರ್ಪಾಡನ್ನು ಕಂಡ, ಜಾಗತಿಕವಾಗಿ ಮಾರಲ್ಪಡುತ್ತಿರುವ i20 ಕಾರಿನಂತೆಯೇ ಇದೆ.

ಇತರ ನಿರೀಕ್ಷಿತ ಬದಲಾವಣೆಗಳು

ಅಂತರಾಷ್ಟ್ರೀಯವಾಗಿ ಪರಿಷ್ಕರಣೆಗೆ ಒಳಗಾದ ಮಾದರಿ ಎನಿಸಿದ 2023 ಹ್ಯುಂಡೈ i20 ವಾಹನವು ಹೊಸ ಅಲೋಯ್‌ ವೀಲ್‌ ಗಳನ್ನು ಸಹ ಹೊಂದಿರಲಿದೆ. ಮೊನಚಾದ ಬಂಪರ್‌ ಮತ್ತು ಹೆಚ್ಚು ಎದ್ದು ಕಾಣುವ ಸ್ಕಿಡ್‌ ಪ್ಲೇಟಿನೊಂದಿಗೆ ಹಿಂಭಾಗವನ್ನು ನವೀಕರಿಸಲಾಗಿದೆ. ಯುಫೋಲ್ಸ್ಟರಿಯ ತಾಜಾ ಮೆರುಗಿನೊಂದಿಗೆ ಇದರ ಒಳಾಂಗಣಕ್ಕೂ ನಾವಿನ್ಯತೆಯನ್ನು ನೀಡಲಾಗಿದೆ.

ಇದನ್ನು ಸಹ ಓದಿರಿ: ಹ್ಯುಂಡೈ ಎಕ್ಸ್ಟರ್‌ ಟಾಪ್-ಸ್ಪೆಕ್ AMT vs ಹ್ಯುಂಡೈ i20 ಸ್ಪ್ರೋರ್ಟ್ಜ್ ಟರ್ಬೊ-ಪೆಟ್ರೋಲ್ DCT - ಯಾವುದನ್ನು ಆರಿಸಬಹುದು?

ನಿರೀಕ್ಷಿತ ಹೊಸ ವೈಶಿಷ್ಟ್ಯಗಳು

ಈ ಪರಿಷ್ಕೃತ ಹ್ಯಾಚ್‌ ಬ್ಯಾಕ್‌ ವಾಹನವು ಚಾಲಕನ ಹೊಸ ಡಿಜಿಟಲ್‌ ಡಿಸ್ಪ್ಲೇ, ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು, ಡ್ಯುವಲ್‌ ಕ್ಯಾಮರಾ ಡ್ಯಾಶ್‌ ಕ್ಯಾಮ್‌, ಮತ್ತು ಬಹುವರ್ಣದ ಆಂಬಿಯೆಂಟ್‌ ಲೈಟಿಂಗ್‌ ಮುಂತಾದ ಹೊಸ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಪ್ರಮಾಣಿತ ಆರು ಏರ್‌ ಬ್ಯಾಗುಗಳು ಮತ್ತು 360-ಡಿಗ್ರಿ ಕ್ಯಾಮೆರಾ ಇತ್ಯಾದಿಗಳೊಂದಿಗೆ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಮುಂದಿನ ಅನೇಕ ಮಾದರಿಗಳು ADAS ಕಿಟ್‌ ಹೊಂದಿರಲಿವೆ ಎಂದು ಹ್ಯುಂಡೈ ಸಂಸ್ಥೆಯು ಹೇಳಿತ್ತು. ಆದರೆ i20 ಫೇಸ್‌ ಲಿಫ್ಟ್‌ ವಾಹನವು ಈ ತಂತ್ರಜ್ಞಾನದೊಂದಿಗೆ ಬರುವುದು ಕಷ್ಟಕರ.

ಇದು ಈಗಾಗಲೇ ಎಲೆಕ್ಟ್ರಿಕ್‌ ಸನ್‌ ರೂಫ್‌, 10.25 ಇಂಚಿನ ಟಚ್‌ ಸ್ಕ್ರೀನ್‌ ಸಿಸ್ಟಂ, ವೈರ್‌ ಲೆಸ್‌ ಚಾರ್ಜರ್‌, ಕ್ರೂಸ್‌ ಕಂಟ್ರೋಲ್‌, ರಿಯರ್‌ ಪಾರ್ಕಿಂಗ್‌ ಕ್ಯಾಮರಾ, ಆರು ಏರ್‌ ಬ್ಯಾಗುಗಳು ಮತ್ತು ಹಿಲ್‌ ಹೋಲ್ಡ್‌ ಅಸಿಸ್ಟ್‌ ಇತ್ಯಾದಿ ವೈಶಿಷ್ಟ್ಯತೆಗಳೊಂದಿಗೆ ಸಮೃದ್ಧವಾಗಿದೆ.

ಪರಿಷ್ಕೃತ ಪವರ್‌ ಟ್ರೇನ್‌ ಗಳು

i20 ಫೇಸ್‌ ಲಿಫ್ಟ್‌ ವಾಹನವು 83PS 1.2 ಲೀಟರ್‌ ಪೆಟ್ರೋಲ್‌ ಎಂಜಿನ್‌ ನೊಂದಿಗೆ ಮುಂದುವರಿಯಲಿದ್ದು, 5-ಸ್ಪೀಡ್‌ ಮ್ಯಾನುವಲ್‌ ಮತ್ತು CVT ಟ್ರಾನ್ಸ್‌ ಮಿಶನ್‌ ಗಳ ಆಯ್ಕೆಯನ್ನು ಹೊಂದಿದೆ. 120PS/172Nm 1-ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್‌ ಅನ್ನು ಉಳಿಸಲಾಗುತ್ತದೆ. ಈ ಹಿಂದಿನಂತೆಯೇ 7-ಸ್ಪೀಡ್ DCT‌ ಯು ದೊರೆಯಲಿದ್ದು, 6-ಸ್ಪೀಡ್‌ iMT ಯ ಬದಲಿಗೆ 6-ಸ್ಪೀಡ್‌ ಮ್ಯಾನುವಲ್‌ ಸ್ಟಿಕ್‌ ಬರಲಿದೆ. ಆದರೆ ಈ ಹ್ಯುಂಡೈ ಹ್ಯಾಚ್‌ ಬ್ಯಾಕ್‌ ವಾಹನವು ಡೀಸೆಲ್‌ ಎಂಜಿನ್‌ ಆಯ್ಕೆಯೊಂದಿಗೆ ಬರುವುದು ದುಸ್ತರ.

ಇದನ್ನು ಸಹ ಓದಿರಿ: A.I ಪ್ರಕಾರ ರೂ. 20 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ದೊರೆಯುವ ಭಾರತದ ಅತ್ಯುನ್ನತ 3 ಫ್ಯಾಮಿಲಿ SUV ಗಳು ಇಲ್ಲಿವೆ.

ನಿರೀಕ್ಷಿತ ಬೆಲೆ

ಹೊಸ ಹ್ಯುಂಡೈ i20 ವಾಹನವು ತನ್ನ ಪ್ರಸ್ತುತ ಬೆಲೆ ರೂ. 7.46 ಲಕ್ಷದಿಂದ ರೂ. 11.88 ಲಕ್ಷ (ಎಕ್ಸ್-ಶೋರೂಂ) ಶ್ರೇಣಿಗಿಂತಲೂ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ. ಈ ಹ್ಯಾಚ್‌ ಬ್ಯಾಕ್‌ ಕಾರು, ಮಾರುತಿ ಬಲೇನೊ, ಟೊಯೊಟಾ ಗ್ಲಾಂಜ ಮತ್ತು ಟಾಟಾ ಅಲ್ಟ್ರೋಜ್‌ ಜೊತೆಗೆ ಸ್ಪರ್ಧಿಸಲಿದೆ. i20 N ಲೈನ್‌ ಕಾರು ಸಹ ಹೊಸ ಅವತಾರದೊಂದಿಗೆ ರಸ್ತೆಗಿಳಿಯುವ ಸಾಧ್ಯತೆ ಇದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: i20 ಆನ್‌ ರೋಡ್‌ ಬೆಲೆ

Share via

Write your Comment on Hyundai I20

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.3.25 - 4.49 ಲಕ್ಷ*
ಹೊಸ ವೇರಿಯೆಂಟ್
Rs.5 - 8.45 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.16 - 10.15 ಲಕ್ಷ*
ಹೊಸ ವೇರಿಯೆಂಟ್
Rs.4.70 - 6.45 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ