ನಿಮಗಾಗಿ ತಂದಿದ್ದೇವೆ Citroen C3X Crossover Sedanನ ಇಂಟೀರಿಯರ್ ನ ಮೊದಲ ಆನ್ಅಫೀಶಿಯಲ್ ಲುಕ್
ಸಿಟ್ರೊನ್ ಬಸಾಲ್ಟ್ ಗಾಗಿ shreyash ಮೂಲಕ ಜನವರಿ 03, 2024 11:58 am ರಂದು ಪ್ರ ಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಸಿಟ್ರೊನ್ C3 ಮತ್ತು C3 ಏರ್‌ಕ್ರಾಸ್ ನಲ್ಲಿ ಕಾಣಸಿಗುವ ಡ್ಯಾಶ್‌ಬೋರ್ಡ್ ವಿನ್ಯಾಸವನ್ನೇ C3X ಕ್ರಾಸ್‌ಒವರ್ ಸೆಡಾನ್ ಗೆ ನೀಡಲಾಗಿದೆ
ನಿಮ್ಮ ರೆಫರೆನ್ಸ್ ಗಾಗಿ ಬಳಸಲಾದ ಸಿಟ್ರೊನ್ eC4X ನ ಚಿತ್ರ ಇಲ್ಲಿದೆ
- ಸಿಟ್ರೊನ್ C3 ಮತ್ತು C3 ಏರ್‌ಕ್ರಾಸ್‌ನಲ್ಲಿ ಕಂಡುಬರುವ ಪ್ಲಾಟ್‌ಫಾರ್ಮ್ ಮತ್ತು ಪವರ್‌ಟ್ರೇನ್ ಅನ್ನು ಸಿಟ್ರೊನ್ C3X ನಲ್ಲಿ ಕೂಡ ನೀಡಲಾಗಿದೆ.
- ಈ ಕ್ರಾಸ್ಒವರ್ ಸೆಡಾನ್ ಆಲ್-ಎಲೆಕ್ಟ್ರಿಕ್ ವರ್ಷನ್ ಅನ್ನು ಕೂಡ ಪಡೆಯಲಿದೆ.
- ಕಾರಿನ ಒಳಗೆ, C3 ಏರ್‌ಕ್ರಾಸ್‌ನಲ್ಲಿ ಕಂಡುಬರುವ ರೀತಿಯಲ್ಲಿ 10.2-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಆಡಿಯೊ ಮತ್ತು ಕಾಲಿಂಗ್ ಕಂಟ್ರೋಲ್ ನೊಂದಿಗೆ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ನೀಡಲಾಗಿದೆ.
- ಸಿಟ್ರೊನ್ C3X ಅನ್ನು 2024 ರ ಮಧ್ಯದಲ್ಲಿ 7 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ ಬೆಲೆ) ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಭಾರತಕ್ಕಾಗಿ ತಯಾರಿಸಿರುವ ಸಿಟ್ರೊನ್ C3X ಕ್ರಾಸ್ಒವರ್ ಸೆಡಾನ್‌ನ ಮೊಟ್ಟ ಮೊದಲ ಕೆಲವು ಇಂಟೀರಿಯರ್ ಸ್ಪೈ ಶಾಟ್‌ಗಳು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿವೆ. C3X ಭಾರತದಲ್ಲಿ ಫ್ರೆಂಚ್ ಕಾರು ತಯಾರಕರ ಐದನೇ ಕೊಡುಗೆಯಾಗಿದೆ ಮತ್ತು ಇದು C3 ಮತ್ತು C3 ಏರ್‌ಕ್ರಾಸ್ ಪ್ಲಾಟ್‌ಫಾರ್ಮ್ ಮೇಲೆ ಸಿದ್ಧಪಡಿಸಿರುವ ಮೂರನೇ ಮಾಡೆಲ್ ಆಗಿದೆ.
ಒಂದು ಚಿರಪರಿಚಿತ ಕ್ಯಾಬಿನ್
ಇದರ ಡ್ಯಾಶ್‌ಬೋರ್ಡ್ C3 ಏರ್‌ಕ್ರಾಸ್ SUV ಯನ್ನು ಸಾಕಷ್ಟು ಹೋಲುತ್ತದೆ. ಕೋ-ಡ್ರೈವರ್‌ಗಾಗಿ ನೀಡಿರುವ AC ವೆಂಟ್ ಗಳ ವಿನ್ಯಾಸವು C3, eC3 ಮತ್ತು C3 ಏರ್‌ಕ್ರಾಸ್‌ನಂತಹ ಈಗಾಗಲೇ ಮಾರುಕಟ್ಟೆಯಲ್ಲಿರುವ ಸಿಟ್ರೊನ್ ಮಾಡೆಲ್ ಗಳಲ್ಲಿ ನೋಡಿದಂತೆಯೇ ಇದೆ. ಇದರ ಜೊತೆಗೆ ದೊಡ್ಡ 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಡಿಯೋ ಮತ್ತು ಕಾಲಿಂಗ್ ಕಂಟ್ರೋಲ್ ನೊಂದಿಗೆ ಬರುವ 3-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ನೀಡಲಾಗಿದೆ. ಇದು ನಮಗೆ C3 ಏರ್‌ಕ್ರಾಸ್ SUV ಅನ್ನು ನೆನಪಿಸುವುದಂತೂ ಖಂಡಿತ.
ನೀವು ಇದನ್ನು ಕೂಡ ಓದಬಹುದು: ಈ 3 ಕಾರುಗಳು ಜನವರಿ 2024 ರಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗಿವೆ
ನೀವು ನಿರೀಕ್ಷಿಸಬಹುದಾದ ಫೀಚರ್ ಗಳು
ನಿಮ್ಮ ರೆಫರೆನ್ಸ್ ಗಾಗಿ ಬಳಸಲಾದ ಸಿಟ್ರೊನ್ C3 ಏರ್‌ಕ್ರಾಸ್‌ನ ಇಂಟೀರಿಯರ್ ಚಿತ್ರ
C3X ಕ್ರಾಸ್‌ಒವರ್‌ನಲ್ಲಿ ನಿರೀಕ್ಷಿಸಬಹುದಾದ ಫೀಚರ್ ಗಳಲ್ಲಿ ಡ್ರೈವರ್ ಗಾಗಿ ಡಿಜಿಟಲ್ ಡಿಸ್ಪ್ಲೇ, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ರಿವರ್ಸಿಂಗ್ ಕ್ಯಾಮೆರಾ ಇವೆಲ್ಲವೂ ಸೇರಿವೆ.
ನೀವು ಇದನ್ನು ಕೂಡ ಓದಬಹುದು: ಫೇಸ್ ಲಿಫ್ಟ್ ಆಗಿರುವ ಹ್ಯುಂಡೈ ಕ್ರೆಟಾದಲ್ಲಿ ನೀವು ನಿರೀಕ್ಷಿಸಬಹುದಾದ 5 ವಿಷಯಗಳು ಇಲ್ಲಿವೆ
ನಿರೀಕ್ಷಿಸಬಹುದಾದ ಪವರ್‌ಟ್ರೇನ್ ಗಳು
C3X ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ಮತ್ತು EV (ಎಲೆಕ್ಟ್ರಿಕ್ ವೆಹಿಕಲ್) ವೇರಿಯಂಟ್ ಗಳಲ್ಲಿ ಲಭ್ಯವಿರುತ್ತದೆ. ಕ್ರಾಸ್‌ಒವರ್‌ನ ICE ವರ್ಷನ್ ನಲ್ಲಿ C3 ಮತ್ತು C3 ಏರ್‌ಕ್ರಾಸ್ ಮಾಡೆಲ್ ಗಳಲ್ಲಿ ನೀಡಿರುವ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS / 190 Nm) ಅನ್ನು ನೀಡಬಹುದು. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ, ಅದರ ಜೊತೆಗೆ ಸಿಟ್ರೊನ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಸಹ ಒದಗಿಸಬಹುದು.
C3X ನ ಎಲೆಕ್ಟ್ರಿಕ್ ವರ್ಷನ್ ನ ಪವರ್‌ಟ್ರೇನ್ ವಿವರಗಳು ಇನ್ನೂ ತಿಳಿದುಬಂದಿಲ್ಲ. ಆದರೆ, ಕಾರು eC3 ಗಿಂತ ದೊಡ್ಡ ಬ್ಯಾಟರಿ ಮತ್ತು ಹೆಚ್ಚು ಶಕ್ತಿಶಾಲಿ ಮೋಟರ್ ಅನ್ನು ಹೊಂದಬಹುದು ಎಂಬುದು ನಮ್ಮ ಅನಿಸಿಕೆಯಾಗಿದೆ.
ಯಾವಾಗ ಮಾರುಕಟ್ಟೆಗೆ ಮತ್ತು ಪ್ರತಿಸ್ಪರ್ಧಿ ಕಾರುಗಳು ಯಾವುವು
ಸಿಟ್ರೊನ್ ತನ್ನ C3X ಅನ್ನು 2024 ರ ಮಧ್ಯದಲ್ಲಿ ರೂ 7 ಲಕ್ಷದ ಆರಂಭಿಕ ಬೆಲೆಯೊಂದಿಗೆ (ಎಕ್ಸ್ ಶೋರೂಂ) ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಇದು ಟಾಟಾ ಕರ್ವ್, ಹ್ಯುಂಡೈ ವೆರ್ನಾ ಮತ್ತು ಸ್ಕೋಡಾ ಸ್ಲಾವಿಯಾಗಳಂತಹ ಕಾರುಗಳ ಜೊತೆಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ, ಮತ್ತು C3X ನ ಎಲೆಕ್ಟ್ರಿಕ್ ವರ್ಷನ್ ಟಾಟಾ ಕರ್ವ್ EV ಗೆ ಪ್ರತಿಸ್ಪರ್ಧಿಯಾಗಲಿದೆ.