Login or Register ಅತ್ಯುತ್ತಮ CarDekho experience ಗೆ
Login

Hyundai Creta N Line ವರ್ಸಸ್ Hyundai Creta: ವ್ಯತ್ಯಾಸಗಳ ವಿವರ ಇಲ್ಲಿದೆ

published on ಮಾರ್ಚ್‌ 13, 2024 03:41 pm by ansh for ಹುಂಡೈ ಕ್ರೇಟಾ ಎನ್ ಲೈನ್

ಕ್ರೆಟಾ N ಲೈನ್ ಒಳಭಾಗ ಮತ್ತು ಹೊರಭಾಗದಲ್ಲಿ ಅನೇಕ ಕಾಸ್ಮೆಟಿಕ್ ಆಗಿರುವ ಸ್ಪೋರ್ಟಿ ಬದಲಾವಣೆಗಳನ್ನು ನೀಡುತ್ತಿದೆ ಮತ್ತು ಟರ್ಬೊ ಎಂಜಿನ್‌ಗಾಗಿ ಮಾನ್ಯುಯಲ್ ಆಯ್ಕೆ ಲಭ್ಯವಿದೆ. ಆದರೂ ಕೂಡ ಇದು ಕೆಲವು ನಿರ್ದಿಷ್ಟ ರೀತಿಯ ಖರೀದಿದಾರರಿಗೆ ಮಾತ್ರ ಇಷ್ಟವಾಗಬಹುದೆಂದು ನಾವು ಭಾವಿಸುತ್ತೇವೆ. ಇದಕ್ಕೆ ಕಾರಣಗಳನ್ನು ಕೆಳಗೆ ನೀಡಲಾಗಿದೆ

ಹುಂಡೈ ಕ್ರೆಟಾ ಈಗ ಭಾರತದಲ್ಲಿ ಸ್ಪೋರ್ಟಿಯರ್ N ಲೈನ್ ನೊಂದಿಗೆ ಲಭ್ಯವಿದೆ. ರೆಗ್ಯುಲರ್ SUV ಗೆ ಹೋಲಿಸಿದರೆ ಕ್ರೆಟಾ ಎನ್ ಲೈನ್ ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ, ಆದರೆ ರೆಗ್ಯುಲರ್ ಕ್ರೆಟಾದಲ್ಲಿ ನೀಡಲಾಗಿರುವ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಇಲ್ಲಿ ಕೂಡ ಬಳಸಲಾಗಿದೆ. ಕ್ರೆಟಾ N ಲೈನ್ ಮತ್ತು ಅದರ ಸ್ಟ್ಯಾಂಡರ್ಡ್ ವರ್ಷನ್ ನಡುವಿನ ವ್ಯತ್ಯಾಸಗಳನ್ನು ಮತ್ತು ಯಾವ ರೀತಿಯ ಖರೀದಿದಾರರಿಗೆ ಯಾವ ವರ್ಷನ್ ಸೂಕ್ತವಾಗಿರುತ್ತದೆ ಎಂಬುದನ್ನು ವಿವರವಾಗಿ ನೋಡೋಣ. ಮೊದಲಿಗೆ ಡಿಸೈನ್ ನಿಂದ ಶುರು ಮಾಡೋಣ.

ಹೊರಭಾಗದ ಡಿಸೈನ್

ಹ್ಯುಂಡೈ ಕ್ರೆಟಾ N ಲೈನ್ ನ ಹೊರಭಾಗದ ಡಿಸೈನ್ ತನ್ನ ಇತರ N ಲೈನ್ ಕಾರುಗಳಾದ i20 ಮತ್ತು ವೆನ್ಯೂಗೆ ಹೋಲುತ್ತದೆ. ಇದರಲ್ಲಿ N ಲೈನ್-ನಿರ್ದಿಷ್ಟ ಕಲರ್ ಆಯ್ಕೆಗಳು, ಬಾನೆಟ್ ಬದಲಿಗೆ ಗ್ರಿಲ್‌ನಲ್ಲಿ ಇರಿಸಲಾದ ಹುಂಡೈ ಲೋಗೋದೊಂದಿಗೆ ರೀಡಿಸೈನ್ ಗೊಳಿಸಲಾದ ಗ್ರಿಲ್, ರೆಡ್ ಬ್ರೇಕ್ ಕ್ಯಾಲಿಪರ್‌ಗಳೊಂದಿಗೆ ದೊಡ್ಡದಾದ 18-ಇಂಚಿನ ಅಲೊಯ್ ವೀಲ್ಸ್ ಮತ್ತು ದೊಡ್ಡದಾದ ರೂಫ್-ಇಂಟಿಗ್ರೇಟೆಡ್ ರಿಯರ್ ಸ್ಪಾಯ್ಲರ್ ಒಳಗೊಂಡಿದೆ. ಹ್ಯುಂಡೈ ಎಲ್ಲಾ ಕಡೆ "N ಲೈನ್" ಬ್ಯಾಡ್ಜಿಂಗ್‌ಗಳು ಮತ್ತು ರೆಡ್ ಅಕ್ಸೆಂಟ್ ಗಳನ್ನು ಸೇರಿಸಿದೆ, ಅದರ ಜೊತೆಗೆ ಡ್ಯುಯಲ್-ಟಿಪ್ ಎಕ್ಸಾಸ್ಟ್‌ ಕೂಡ ನೀಡಲಾಗಿದೆ. ಇವೆಲ್ಲವೂ ನಮಗೆ ಪ್ರಿ-ಫೇಸ್‌ಲಿಫ್ಟ್ ಕ್ರೆಟಾದ ಟರ್ಬೊ-ಪೆಟ್ರೋಲ್ ವೇರಿಯಂಟ್ ಅನ್ನು ನೆನಪಿಸುತ್ತದೆ. ಇವೆಲ್ಲವೂ ಕ್ರೆಟಾ N ಲೈನ್ ಗೆ ಹೆಚ್ಚು ಸ್ಪೋರ್ಟಿಯರ್ ಲುಕ್ ಅನ್ನು ನೀಡುತ್ತದೆ.

ಆದರೆ ರೆಗ್ಯುಲರ್ ಕ್ರೆಟಾ ತನ್ನದೇ ಆದ ಡಿಸೈನ್ ಮತ್ತು ಸ್ಟೈಲ್ ಅನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಫೇಸ್‌ಲಿಫ್ಟ್ ಆಗಿರುವ ಈ SUV ಹಳೆಯ ಮಾಡೆಲ್ ಗೆ ಹೋಲಿಸಿದರೆ, ವಿಶೇಷವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಬಹಳಷ್ಟು ಬದಲಾವಣೆಗಳೊಂದಿಗೆ ಬಂದಿದೆ. ಕನೆಕ್ಟೆಡ್ LED DRL ಗಳು, ಕನೆಕ್ಟೆಡ್ ಟೈಲ್‌ಲೈಟ್‌ಗಳು, ಬುಚ್ ಆಗಿರುವ ಹೊಸ ಗ್ರಿಲ್ ಮತ್ತು ಒಟ್ಟಾರೆ ಸ್ಕ್ವಾರಿಶ್ ಡಿಸೈನ್ ಇದಕ್ಕೆ ಆಧುನಿಕ ಆಕರ್ಷಣೆಯೊಂದಿಗೆ ಹೊಚ್ಚ ಹೊಸ ಲುಕ್ ಅನ್ನು ನೀಡುತ್ತದೆ.

ವಿಭಿನ್ನ ಕ್ಯಾಬಿನ್ ಗಳು

ಕ್ರೆಟಾ ಮತ್ತು ಕ್ರೆಟಾ N ಲೈನ್ ನಡುವಿನ ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಕ್ಯಾಬಿನ್. ಡ್ಯಾಶ್‌ಬೋರ್ಡ್ ಮತ್ತು ಅಪ್ಹೋಲ್‌ಸ್ಟರಿಯಲ್ಲಿ ರೆಡ್ ಇನ್ಸರ್ಟ್ ಹೊಂದಿರುವ ಅದರ ಆಲ್ ಬ್ಲಾಕ್ ಕ್ಯಾಬಿನ್‌ನಿಂದ ಕ್ರೆಟಾ N ಲೈನ್ ನ ಸ್ಪೋರ್ಟಿ ಲುಕ್ ಒಳಭಾಗದಲ್ಲಿ ಹೆಚ್ಚು ಎದ್ದು ಕಾಣುತ್ತದೆ. N ಲೈನ್-ನಿರ್ದಿಷ್ಟ ಗೇರ್ ನಾಬ್ ಮತ್ತು ಸ್ಟೀರಿಂಗ್ ವೀಲ್‌ನಲ್ಲಿಯೂ ಕೂಡ ನೀವು ಈ ರೆಡ್ ಇನ್ಸರ್ಟ್ ಅನ್ನು ನೋಡಬಹುದು. ಈ ವರ್ಷನ್ "N" ಬ್ರ್ಯಾಂಡಿಂಗ್‌ನೊಂದಿಗೆ ಸ್ಪೋರ್ಟಿ ಲೆಥೆರೆಟ್ ಸೀಟ್‌ಗಳನ್ನು ಕೂಡ ಪಡೆಯುತ್ತದೆ.

ನಿಮಗೆ ಡ್ಯಾಶ್‌ಬೋರ್ಡ್‌ನಲ್ಲಿ ರೆಡ್ ಆಂಬಿಯೆಂಟ್ ಲೈಟಿಂಗ್ ಜೊತೆಗೆ ಸ್ಪೋರ್ಟಿ ರೆಡ್ ಅಕ್ಸೆಂಟ್ ಕೂಡ ಸಿಗುತ್ತದೆ.

ರೆಗ್ಯುಲರ್ ಕ್ರೆಟಾದಲ್ಲಿ ಕ್ಯಾಬಿನ್ ಡಿಸೈನ್ ಅದೇ ರೀತಿ ಇದೆ ಆದರೆ ವೈಟ್ ಶೇಡ್ ಫಿನಿಷ್ ನೀಡಲಾಗಿದೆ, ಇದು ಈ SUV ಗೆ ಮಿನಿಮಲಿಸ್ಟ್ ಮತ್ತು ವಿಶಾಲವಾದ ಲುಕ್ ಅನ್ನು ನೀಡುತ್ತದೆ. ಇದಕ್ಕೆ ರೆಡ್ ಅಕ್ಸೆಂಟ್ ಮತ್ತು N ಲೈನ್‌ನ "N" ಬ್ರ್ಯಾಂಡಿಂಗ್ ಇಲ್ಲದೇ ಲೆಥೆರೆಟ್ ಸೀಟ್‌ಗಳನ್ನು ನೀಡಲಾಗಿದೆ.

ಯಾವುದೇ ಹೊಸ ಫೀಚರ್ ಗಳನ್ನು ನೀಡಲಾಗಿಲ್ಲ

ಕ್ರೆಟಾ N ಲೈನ್ ಯಾವುದೇ ಹೊಸ ಸೌಕರ್ಯಗಳನ್ನು ಪಡೆಯುವುದಿಲ್ಲ ಆದರೆ ರೆಗ್ಯುಲರ್ ಕ್ರೇಟಾದ ಟಾಪ್ ವೇರಿಯಂಟ್ ಗೆ ನೀಡಿರುವ ಎಲ್ಲಾ ಫೀಚರ್ ಗಳನ್ನು ಇಲ್ಲಿ ಕೂಡ ನೀಡಲಾಗಿದೆ. ಇದು 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿದೆ. ಬೇಸ್-ಸ್ಪೆಕ್ ಕ್ರೆಟಾ N ಲೈನ್ N8 ನಲ್ಲಿ ನೀವು ಒಂದು ಹೆಚ್ಚುವರಿ ಫೀಚರ್ ಅನ್ನು ಪಡೆಯುತ್ತೀರಿ. ಅದೇನೆಂದರೆ, ಡ್ರೈವಿಂಗ್ ಮಾಡುವಾಗ ರಸ್ತೆ ಮತ್ತು ಕ್ಯಾಬಿನ್ ಎರಡನ್ನೂ ರೆಕಾರ್ಡ್ ಮಾಡುವ ಸುರಕ್ಷತಾ ಸಾಧನವಾದ ಡ್ಯುಯಲ್-ಕ್ಯಾಮೆರಾ ಡ್ಯಾಶ್ ಕ್ಯಾಮೆರಾ. ಅಪಘಾತದ ಸಂದರ್ಭದಲ್ಲಿ ಈ ಫೂಟೇಜ್ ಗಳು ಉಪಯುಕ್ತವಾಗಬಹುದು.

ಇದನ್ನು ಕೂಡ ಓದಿ: ಹುಂಡೈ ಕ್ರೆಟಾ N ಲೈನ್ ವರ್ಸಸ್ ಇತರ 1.5-ಲೀಟರ್ ಟರ್ಬೊ-ಪೆಟ್ರೋಲ್ ಪ್ರತಿಸ್ಪರ್ಧಿಗಳು: ಬೆಲೆ ಬಗ್ಗೆ ಚರ್ಚೆ

ಸುರಕ್ಷತೆಯ ಬಗ್ಗೆ ನೋಡಿದರೆ, ನೀವು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಹಲವಾರು ADAS (ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಮ್) ಫೀಚರ್ ಅನ್ನು ಪಡೆಯುತ್ತೀರಿ.

ಎಂಜಿನ್ ಆಯ್ಕೆಗಳು

ಸ್ಪೆಸಿಫಿಕೇಷನ್ ಗಳು

ಹುಂಡೈ ಕ್ರೆಟಾ N ಲೈನ್

ಹುಂಡೈ ಕ್ರೆಟಾ

ಇಂಜಿನ್

1.5-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಪೆಟ್ರೋಲ್/ 1.5-ಲೀಟರ್ ಡೀಸೆಲ್/ 1.5-ಲೀಟರ್ ಟರ್ಬೊ-ಪೆಟ್ರೋಲ್

ಪವರ್

160 PS

115 PS/ 116 PS/ 160 PS

ಟಾರ್ಕ್

253 Nm

144 Nm/ 250 Nm/ 253 Nm

ಟ್ರಾನ್ಸ್‌ಮಿಷನ್

6MT, 7DCT

6MT, CVT/ 6MT, 6AT/ 7DCT

ಕ್ರೆಟಾ N ಲೈನ್ ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ ಮತ್ತು ಇದು ಈ ಸೆಗ್ಮೆಂಟ್ ನ ಅತ್ಯಂತ ಶಕ್ತಿಶಾಲಿ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ರೆಗ್ಯುಲರ್ ಕ್ರೆಟಾ ಕೂಡ ಈ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ ಆದರೆ DCT ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಮಾತ್ರ ಬರುತ್ತದೆ.

ಇದನ್ನು ಕೂಡ ಓದಿ: ಹ್ಯುಂಡೈ ಕ್ರೆಟಾ N ಲೈನ್ ವರ್ಸಸ್ ಇತರ ಟರ್ಬೊ-ಪೆಟ್ರೋಲ್ ಪ್ರತಿಸ್ಪರ್ಧಿಗಳು: ಕ್ಲೇಮ್ ಮಾಡಿರುವ ಇಂಧನ ದಕ್ಷತೆಯ ಹೋಲಿಕೆ ಇಲ್ಲಿದೆ

ಆದರೆ, ರೆಗ್ಯುಲರ್ ಕ್ರೆಟಾವು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೂಡ ಪಡೆಯುತ್ತದೆ, ಈ ಎರಡೂ ಆಯ್ಕೆಗಳು ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೊಂದಿಗೆ ಲಭ್ಯವಿದೆ.

ಬೆಲೆ

ಹುಂಡೈ ಕ್ರೆಟಾ

ಹುಂಡೈ ಕ್ರೆಟಾ N ಲೈನ್ (ಪರಿಚಯಾತ್ಮಕ ಬೆಲೆ)

ರೂ. 11 ಲಕ್ಷದಿಂದ ರೂ. 20.15 ಲಕ್ಷ

ರೂ. 16.82 ಲಕ್ಷದಿಂದ ರೂ. 20.30 ಲಕ್ಷ

ಹುಂಡೈ ಕ್ರೆಟಾ N ಲೈನ್ 2 ವೇರಿಯಂಟ್ ಗಳಲ್ಲಿ ಲಭ್ಯವಿದೆ: N8 ಮತ್ತು N10. ರೆಗ್ಯುಲರ್ ಕ್ರೇಟಾವು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಟಾಪ್-ಸ್ಪೆಕ್ ವೇರಿಯಂಟ್ ನಲ್ಲಿ ಮಾತ್ರ ನೀಡುತ್ತದೆ, ಆದರೆ N ಲೈನ್ ವರ್ಷನ್ ಈ ಎಂಜಿನ್ ಅನ್ನು ಅದರ ಎರಡೂ ವೇರಿಯಂಟ್ ಗಳಲ್ಲಿ ನೀಡುತ್ತಿದೆ. ಕ್ರೆಟಾ N ಲೈನ್ ಅದರ ರೆಗ್ಯುಲರ್ ಹ್ಯುಂಡೈ ಕ್ರೆಟಾ ವೇರಿಯಂಟ್ ಗೆ ಹೋಲಿಸಿದರೆ ರೂ. 30,000 ವರೆಗಿನ ಹೆಚ್ಚಿನ ಪ್ರೀಮಿಯಂ ಮೊತ್ತಕ್ಕೆ ಮೌಲ್ಯಯುತ ಕೊಡುಗೆಯಾಗಿದೆ. ಮಾನ್ಯುಯಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಟರ್ಬೊ-ಪೆಟ್ರೋಲ್ ಎಂಜಿನ್‌ನ ಲಭ್ಯತೆಯು ಅದನ್ನು ಇನ್ನಷ್ಟು ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡುತ್ತದೆ.

ತೀರ್ಪು

ಆದ್ದರಿಂದ, ನೀವು ಯಾವುದನ್ನು ಖರೀದಿಸಬೇಕು? ನಿಮಗೆ ರಸ್ತೆಯ ಮೇಲೆ ಸ್ಪೋರ್ಟಿಯಾಗಿ ಕಾಣಿಸುವ, ಕ್ಯಾಬಿನ್‌ನಲ್ಲಿ ನಿಮಗೆ ಸ್ಪೋರ್ಟಿ ಅನುಭವವನ್ನು ನೀಡುವ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಇರುವ ಕಾಂಪ್ಯಾಕ್ಟ್ SUV ಬೇಕಿದ್ದರೆ, ನಿಮಗೆ ಹುಂಡೈ ಕ್ರೆಟಾ N ಲೈನ್‌ ಸೂಕ್ತವಾಗಿದೆ. ಇದು ನಿಮಗೆ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನುಭವದೊಂದಿಗೆ ಟರ್ಬೊ-ಪೆಟ್ರೋಲ್ ಎಂಜಿನ್‌ನ ಸೆಗ್ಮೆಂಟ್-ಬೆಸ್ಟ್ ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ. ಕಿಯಾ ಸೆಲ್ಟೋಸ್‌ನಂತಹ ಇದೇ ರೀತಿಯ ಪವರ್‌ಟ್ರೇನ್ ಸೆಟಪ್‌ಗಳನ್ನು ನೀಡುವ ಬೇರೆ SUV ಗಳಿದ್ದರೂ ಕೂಡ, ಕ್ರೆಟಾ N ಲೈನ್ ಅವುಗಳಿಗಿಂತ ಭಿನ್ನವಾಗಿ ಕಾಣುತ್ತದೆ.

ಆದರೆ ಸ್ಪೋರ್ಟಿ ಲುಕ್ ಅಥವಾ ಡ್ರೈವಿಂಗ್ ಫೀಲ್ ಬದಲು ನೀವು DCT ಆಟೋಮ್ಯಾಟಿಕ್‌ನ ಡ್ರೈವಿಂಗ್ ಅನುಕೂಲವನ್ನು ನೋಡುತ್ತಿದ್ದರೆ, ರೆಗ್ಯುಲರ್ ಕ್ರೆಟಾವನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಇದು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಸಿಗುವುದರ ಜೊತೆಗೆ, ನಿಮಗೆ ಹೆಚ್ಚಿನ ಎಂಜಿನ್ ಆಯ್ಕೆಗಳನ್ನು ಕೂಡ ನೀಡುತ್ತದೆ. ಇದು N ಲೈನ್ ಮಾಡೆಲ್ ನಲ್ಲಿ ಇರುವ ಫೀಚರ್ ಗಳೊಂದಿಗೆ ಆಧುನಿಕ ಮತ್ತು ಪ್ರೀಮಿಯಂ ಡಿಸೈನ್ ಅನ್ನು ಹೊಂದಿದೆ.

ಇದನ್ನು ಕೂಡ ಓದಿ: ಹ್ಯುಂಡೈ ಕ್ರೆಟಾ N ಲೈನ್ ಆನ್ ರೋಡ್ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 27 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹುಂಡೈ ಕ್ರೆಟಾ n Line

explore similar ಕಾರುಗಳು

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ