Hyundai Exter vs Tata Punch: ಆಗಸ್ಟ್ ನ ಮಾರಾಟ ಮತ್ತು ಸಪ್ಟೆಂಬರ್ ನಲ್ಲಿನ ವೈಟಿಂಗ್ ಅವಧಿಯ ಕುರಿತ ಹೋಲಿಕೆ
ಹುಂಡೈ ಎಕ್ಸ್‌ಟರ್ ಗಾಗಿ rohit ಮೂಲಕ ಸೆಪ್ಟೆಂಬರ್ 13, 2023 11:51 am ರಂದು ಪ್ರಕಟಿಸಲಾಗಿದೆ
- 29 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ಎಕ್ಸ್ಟರ್ ವಾಹನವು 3ರಿಂದ 8 ತಿಂಗಳುಗಳ ಕಾಯುವಿಕೆ ಅವಧಿಯನ್ನು ಹೊಂದಿದ್ದರೆ ಟಾಟಾ ಪಂಚ್ ಕಾರನ್ನು ಕೇವಲ 3 ತಿಂಗಳುಗಳಲ್ಲಿ ಮನೆಗೆ ಕೊಂಡೊಯ್ಯಬಹುದು
- ಟಾಟಾ ಪಂಚ್ ವಾಹನಕ್ಕೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ಎಕ್ಸ್ಟರ್ ಕಾರನ್ನು 2023ರ ಜುಲೈ ತಿಂಗಳಿನಲ್ಲಿ ಪರಿಚಯಿಸಲಾಯಿತು.
- ಟಾಟಾ ಸಂಸ್ಥೆಯು ಪ್ರತಿ ತಿಂಗಳಿಗೆ ಸರಾಸರಿ 10,000 ಪಂಚ್ ಕಾರುಗಳ ಮಾರಾಟವನ್ನು ಹೊಂದಿದೆ.
- ಬಿಡುಗಡೆಯ ನಂತರ ಹ್ಯುಂಡೈಯು ಸುಮಾರು 7,000 ಎಕ್ಸ್ಟರ್ ಕಾರುಗಳನ್ನು ಮಾರಿದೆ.
- ಎರಡೂ SUV ಗಳು ಸರಿಸುಮಾರು ರೂ. 6 ರಿಂದ ರೂ. 10.10 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ).
ಮೈಕ್ರೊ SUV ವಿಭಾಗದಲ್ಲಿ 2021ರ ಅಕ್ಟೋಬರ್ ತಿಂಗಳಿನಿಂದ ಏಕಸ್ವಾಮ್ಯವನ್ನು ಹೊಂದಿದ್ದ ಟಾಟಾ ಪಂಚ್ ಕಾರು 2023ರ ಜುಲೈ ತಿಂಗಳಿನಿಂದ ಹ್ಯುಂಡೈ ಎಕ್ಸ್ಟರ್ ರೂಪದಲ್ಲಿ ನೇರ ಪ್ರತಿಸ್ಪರ್ಧಿಯನ್ನು ಹೊಂದಿದೆ. ಮಾರುಕಟ್ಟೆಗೆ ಬಂದ ಒಂದು ತಿಂಗಳಲ್ಲಿಯೇ ಈ ಹ್ಯುಂಡ್ಯ SUV ಯು 50,000 ಕ್ಕಿಂತಲೂ ಹೆಚ್ಚಿನ ಬುಕಿಂಗ್ ಪಡೆದಿದೆ ಎಂದು ವರದಿಯಾಗಿದೆ. ಆದರೆ ಪಂಚ್ ಕಾರಿನ ಬೇಡಿಕೆಯನ್ನು ತಗ್ಗಿಸಲು ಇದಕ್ಕೆ ಸಾಧ್ಯವಾಗಲಿದೆಯೇ? ಪೆಟ್ರೊಲ್ ಎಂಜಿನ್ ನಲ್ಲಿ ಮಾತ್ರವೇ ದೊರೆಯುವ ಈ ಎರಡೂ ಮೈಕ್ರೊ SUV ಯ ಎರಡು ತಿಂಗಳುಗಳ ಮಾರಾಟವನ್ನು ಹಾಗೂ ಪ್ರಸ್ತುತ ಕಾಯುವಿಕೆ ಅವಧಿಯನ್ನು ನೋಡೋಣ.
ಮಾರಾಟದ ವಿವರ
ಮಾದರಿ |
ಜುಲೈ 2023 |
ಆಗಸ್ಟ್ 2023 |
ಹ್ಯುಂಡೈ ಎಕ್ಸ್ಟರ್ |
7,000 ಕಾರುಗಳು |
7,430 ಕಾರುಗಳು |
ಟಾಟಾ ಪಂಚ್ |
12,019 ಕಾರುಗಳು |
14,523 ಕಾರುಗಳು |
ಮಾರಾಟವಾದ ಘಟಕಗಳನ್ನು ಹೋಲಿಸಿದರೆ, 2023ರ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಪಂಚ್ ಕಾರು ತನ್ನ ಪ್ರಧಾನ ಸ್ಪರ್ಧಿಗಿಂತ ಸ್ಪಷ್ಟ ಮುನ್ನಡೆ ಕಾಪಾಡಿಕೊಂಡಿರುವುದನ್ನು ನಾವು ನೋಡಬಹುದು. ಟಾಟಾ ಸಂಸ್ಥೆಯು ನಿರಂತರವಾಗಿ 10,000 ದಷ್ಟು ಪಂಚ್ ಕಾರುಗಳನ್ನು ಬಿಡುಗಡೆ ಮಾಡಿದ್ದರೆ ಎಕ್ಸ್ಟರ್ ಕಾರಿನ ಸಂಖ್ಯೆಯು 7,000 ದ ಆಸುಪಾಸಿನಲ್ಲಿದೆ. ಹ್ಯುಂಡೈ ಎಕ್ಸ್ಟರ್ ಮಾದರಿಯು ರಸ್ತೆಗೆ ಇಳಿದ ನಂತರ ಪ್ರತಿಸ್ಪರ್ಧಿಯಾಗಿರುವ ಪಂಚ್ ಕಾರು CNG ವೇರಿಯಂಟ್ ಮತ್ತು ಸನ್ ರೂಫ್ ಅನ್ನು ಸೇರ್ಪಡೆಗೊಳಿಸಿದೆ. ತನ್ನ ಎದುರಾಳಿಗೆ ಹೋಲಿಸಿದರೆ, ಟಾಟಾ ಸಂಸ್ಥೆಯ ಮಾಸಿಕ ಉತ್ಪಾದನಾ ಸಾಮರ್ಥ್ಯವು ಪಂಚ್ ಹೊಂದಿರುವ ಇನ್ನೊಂದು ಅನುಕೂಲತೆಯಾಗಿದೆ.
ಇದನ್ನು ಸಹ ಓದಿರಿ: ಟಾಟಾ ಪಂಚ್ CNG Vs ಹ್ಯುಂಡೈ ಎಕ್ಟ್ಟರ್ CNG - ಘೋಷಿಸಿರುವ ಮೈಲೇಜ್ ಹೋಲಿಕೆ
ಮನೆಗೆ ಕೊಂಡೊಯ್ಯುವ ಮೊದಲು ಎಷ್ಟು ಕಾಲ ಕಾಯಬೇಕು?
ಮಾದರಿ |
ಸೆಪ್ಟೆಂಬರ್ 2023 ಕಾಯುವಿಕೆ ಅವಧಿ |
ಹ್ಯುಂಡೈ ಎಕ್ಸ್ಟರ್ |
3 ರಿಂದ 8 ತಿಂಗಳುಗಳು |
ಟಾಟಾ ಪಂಚ್ |
1 ರಿಂದ 3 ತಿಂಗಳುಗಳು |
ಲಭ್ಯವಿರುವ ಎರಡು ಮಾದರಿಗಳನ್ನು ಪರಿಗಣಿಸಿದರೆ ಈ ಟಾಟಾ SUV ಯು ಮೊದಲ ಸ್ಥಾನದಲ್ಲಿ ಬರುತ್ತದೆ. ನೀವು ಎಕ್ಸ್ಟರ್ ವಾಹನವನ್ನು ಖರೀದಿಸಲು ಬಯಸುವುದಾದರೆ ತುಸು ಹೆಚ್ಚು ಕಾಲ ನೀವು ಕಾಯಬೇಕು. ಆದರೆ ಯಾವುದೇ ಪ್ರಮುಖ ನಗರಗಳಲ್ಲಿ ಈ ಎರಡೂ ಕಾರುಗಳು ತಕ್ಷಣವೇ ಲಭ್ಯವಿಲ್ಲ. ಆಯ್ದುಕೊಂಡ ವೇರಿಯಂಟ್ ಮತ್ತು ಬಣ್ಣವನ್ನು ಆಧರಿಸಿ ಪ್ರತಿ ಮಾದರಿಯ ಕಾಯುವಿಕೆ ಅವಧಿಯು ಬದಲಾಗುತ್ತದೆ ಎಂಬುದನ್ನು ಗಮನಿಸಿ.
ಸಂಬಂಧಿತ: ರೂ. 1 ಕೋಟಿ ಗೆದ್ದ ನಂತರ ಹ್ಯುಂಡೈ ಎಕ್ಸ್ಟರ್ ಪಡೆದ ಕೆ.ಬಿ.ಸಿ 2023 ಸ್ಪರ್ಧಿ ಜಸ್ಕರನ್ ಸಿಂಗ್
ವೇರಿಯಂಟ್ ಗಳು ಮತ್ತು ಬೆಲೆಗಳು
ಹ್ಯುಂಡೈ ಸಂಸ್ಥೆಯ ಎಕ್ಸ್ಟರ್ ಮಾದರಿಯು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ ಆರು ಬೇರೆ ಬೇರೆ ವೇರಿಯಂಟ್ ಗಳಲ್ಲಿ ಲಭ್ಯವಿದ್ದು, ರೂ. 6 ಲಕ್ಷದಿಂದ ರೂ. 10.10 ಲಕ್ಷದವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ). ಇನ್ನೊಂದೆಡೆ ಪಂಚ್ ಕಾರು ಪ್ಯೂರ್, ಅಡ್ವೆಂಚರ್, ಅಕಂಪ್ಲಿಷ್ಡ್ ಮತ್ತು ಕ್ರಿಯೇಟಿವ್ ಎಂಬ ಆರು ವಿವಿಧ ವೇರಿಯಂಟ್ ಗಳಲ್ಲಿ ದೊರೆಯುತ್ತಿದ್ದು, ಸರಿಸುಮಾರು ತನ್ನ ಹ್ಯುಂಡೈ ಪ್ರತಿಸ್ಪರ್ಧಿಯ ಬೆಲೆಯನ್ನೇ ಹೊಂದಿದೆ.
ಇದನ್ನು ಸಹ ಓದಿರಿ: ಹ್ಯುಂಡೈ ಎಕ್ಸ್ಟರ್ vs ಟಾಟಾ ಪಂಚ್: ಚಿತ್ರಗಳ ಮೂಲಕ ಹೋಲಿಕೆ
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯುಂಡೈ ಎಕ್ಸ್ಟರ್ AMT