Tata Punch ತರಹದ ಡ್ಯುಯಲ್ ಸಿಎನ್‌ಜಿ ಸಿಲಿಂಡರ್‌ಗಳೊಂದಿಗೆ Hyundai Exter ಬಿಡುಗಡೆ, ಬೆಲೆಗಳು ರೂ 8.50 ಲಕ್ಷದಿಂದ ಪ್ರಾರಂಭ
ಆಪ್‌ಡೇಟ್ ಮಾಡಲಾದ ಎಕ್ಸ್‌ಟರ್ ಸಿಎನ್‌ಜಿಯು ಮೂರು ಆವೃತ್ತಿಗಳಲ್ಲಿ ಲಭ್ಯವಿದ್ದು, ಅದರ ಬೆಲೆಗಳನ್ನು 7,000 ರೂ.ಗಳಷ್ಟು ಹೆಚ್ಚಿಸಲಾಗಿದೆ
-
ಹ್ಯುಂಡೈಯು ತನ್ನ ಎಕ್ಸ್‌ಟರ್ ಸಿಎನ್‌ಜಿಯನ್ನು ಎಸ್, ಎಸ್‌ಎಕ್ಸ್ ಮತ್ತು ಎಸ್‌ಎಕ್ಸ್ ನೈಟ್ ಎಡಿಷನ್ ಎಂಬ ಮೂರು ಆವೃತ್ತಿಗಳಲ್ಲಿ ನೀಡುತ್ತದೆ.
-
ಆಪ್‌ಡೇಟ್ ಮಾಡಲಾದ ಎಕ್ಸ್‌ಟರ್ ಸಿಎನ್‌ಜಿಯನ್ನು ಹೊಸ ಟಾಟಾ ಸಿಎನ್‌ಜಿ ಕೊಡುಗೆಗಳಂತೆ ಪೆಟ್ರೋಲ್ ಮತ್ತು ಸಿಎನ್‌ಜಿ ಮೋಡ್‌ಗಳ ನಡುವೆ ಬದಲಾಯಿಸಬಹುದು.
-
ಮೊದಲಿನಂತೆಯೇ ಅದೇ 1.2-ಲೀಟರ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದ್ದು, ಪ್ರತಿ ಕೆ.ಜಿಗೆ 27.1 ಕಿ.ಮೀ.ನಷ್ಟು ಮೈಲೇಜ್ ಹೊಂದಿದೆ.
-
ಬೋರ್ಡ್‌ನಲ್ಲಿರುವ ಫೀಚರ್‌ಗಳು 8-ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಒಳಗೊಂಡಿವೆ.
-
ದೆಹಲಿಯಲ್ಲಿ ಎಕ್ಸ್‌ಟರ್‌ನ ಎಕ್ಸ್ ಶೋರೂಂ ಬೆಲೆಗಳು 6.13 ಲಕ್ಷ ರೂ.ನಿಂದ 10.43 ಲಕ್ಷ ರೂ.ವರೆಗೆ ಇದೆ.
ಹ್ಯುಂಡೈ ತನ್ನ ಸಿಎನ್‌ಜಿ ಪವರ್‌ಟ್ರೇನ್‌ಗಾಗಿ ಈಗ ಡ್ಯುಯಲ್-ಸಿಲಿಂಡರ್ ತಂತ್ರಜ್ಞಾನವನ್ನು ಪರಿಚಯಿಸಿರುವುದರೊಂದಿಗೆ ಟಾಟಾದಂತೆ ಮಹತ್ತರವಾದ ಹೆಜ್ಜೆಯನ್ನು ಇಟ್ಟಂತೆ ತೋರುತ್ತಿದೆ. ಈ ಸೆಟಪ್‌ನೊಂದಿಗೆ ನೀಡಲಾಗುವ ಮೊದಲ ಮೊಡೆಲ್ ಹ್ಯುಂಡೈ ಎಕ್ಸ್‌ಟರ್ ಆಗಿದೆ, ಹಾಗೆಯೇ ಇದರ ಪ್ರಧಾನ ಪ್ರತಿಸ್ಪರ್ಧಿ ಟಾಟಾ ಪಂಚ್ ಸಹ ಇದೇ ರೀತಿಯ ತಂತ್ರಜ್ಞಾನವನ್ನು ಪಡೆಯುತ್ತದೆ. ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಪಡೆಯುವ ಮೈಕ್ರೋ ಎಸ್‌ಯುವಿಯ ಅದೇ ಮೂರು ಆವೃತ್ತಿಗಳಲ್ಲಿ ಸ್ಪ್ಲಿಟ್-ಸಿಲಿಂಡರ್ ಟ್ಯಾಂಕ್ ಸೆಟಪ್ ಅನ್ನು ಹ್ಯುಂಡೈ ನೀಡುತ್ತಿದೆ.
ವೇರಿಯೆಂಟ್-ವಾರು ಬೆಲೆಗಳು
ವೇರಿಯೆಂಟ್ |
ಹಳೆಯ ಬೆಲೆ (ಒಂದೇ ಸಿಎನ್‌ಜಿ ಸಿಲಿಂಡರ್‌ನೊಂದಿಗೆ) |
ಹೊಸ ಬೆಲೆ (ಎರಡು ಸಿಎನ್‌ಜಿ ಸಿಲಿಂಡರ್‌ಗಳೊಂದಿಗೆ) |
ವ್ಯತ್ಯಾಸ |
ಎಸ್ |
8.43 ಲಕ್ಷ ರೂ. |
8.50 ಲಕ್ಷ ರೂ. |
+7,000 ರೂ. |
ಎಸ್‌ಎಕ್ಸ್ |
9.16 ಲಕ್ಷ ರೂ. |
9.23 ಲಕ್ಷ ರೂ. |
+7,000 ರೂ. |
ಎಸ್‌ಎಕ್ಸ್ ನೈಟ್ ಎಡಿಷನ |
9.38 ಲಕ್ಷ ರೂ. |
9.38 ಲಕ್ಷ ರೂ. |
ಯಾವುದೇ ವ್ಯತ್ಯಾಸಗಳಿಲ್ಲ |
ಎಕ್ಸ್‌ಟರ್‌ನ ಸಿಎನ್‌ಜಿ ಆವೃತ್ತಿಗಳಿಗಾಗಿ ಸ್ಪ್ಲಿಟ್-ಸಿಲಿಂಡರ್ ಸೆಟಪ್‌ನ ಪರಿಚಯದೊಂದಿಗೆ, ಹುಂಡೈ ಸಹ ತಮ್ಮ ಬೆಲೆಗಳನ್ನು ರೂ 7,000 ರಷ್ಟು ಹೆಚ್ಚಿಸಿದೆ. ಕೊರಿಯನ್ ಮೂಲದ ಈ ಕಾರು ತಯಾರಕ ಕಂಪೆನಿ ಹೊಸದಾಗಿ ಬಿಡುಗಡೆಯಾದ ನೈಟ್ ಎಡಿಷನ್ ಎಸ್‌ಎಕ್ಸ್ ಆವೃತ್ತಿಯೊಂದಿಗೆ ಮೈಕ್ರೋ ಎಸ್‌ಯುವಿ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ನೀಡುತ್ತಿದೆ.
ಡ್ಯುಯಲ್-ಸಿಲಿಂಡರ್ ಸಿಎನ್‌ಜಿ ಸೆಟಪ್‌ನ ಪ್ರಯೋಜನಗಳು
ಡ್ಯುಯಲ್-ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನವನ್ನು ಒದಗಿಸುವ ದೊಡ್ಡ ಅನುಕೂಲವೆಂದರೆ ಬೂಟ್ ಸ್ಪೇಸ್ ಅನ್ನು ಹೆಚ್ಚಿಸಬಹುದು. ಆಪ್‌ಡೇಟ್ ಮಾಡಲಾದ ಎಕ್ಸ್‌ಟರ್ ಸಿಎನ್‌ಜಿಯು ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ (ಇಸಿಯು) ನೊಂದಿಗೆ ಬರುತ್ತದೆ, ಇದು ಇತ್ತೀಚಿನ ಟಾಟಾ ಸಿಎನ್‌ಜಿ ಕೊಡುಗೆಗಳಲ್ಲಿ ಲಭ್ಯವಿರುವಂತೆ ಪ್ರಯಾಣದಲ್ಲಿರುವಾಗ ಪೆಟ್ರೋಲ್ ಮತ್ತು ಸಿಎನ್‌ಜಿ ಮೋಡ್‌ಗಳ ನಡುವೆ ಬದಲಾಯಿಸುವುದನ್ನು ಸಕ್ರಿಯಗೊಳಿಸುತ್ತದೆ. ಎಕ್ಸ್‌ಟರ್‌ನಲ್ಲಿ ಡ್ಯುಯಲ್-ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನದೊಂದಿಗೆ, ಗ್ರಾಹಕರು 3 ವರ್ಷಗಳ ವಾರಂಟಿಗೆ ಅರ್ಹರಾಗಿರುತ್ತಾರೆ.
ಇದನ್ನು ಸಹ ಓದಿ: ಕಂಪನಿ ಅಳವಡಿಸಿದ CNG ಆಯ್ಕೆಯೊಂದಿಗೆ ಲಭ್ಯವಿರುವ ಟಾಪ್ 10 ಅತ್ಯಂತ ಕೈಗೆಟುಕುವ ಕಾರುಗಳು
ಎಕ್ಸ್‌ಟರ್ ಸಿಎನ್‌ಜಿ ಪವರ್‌ಟ್ರೈನ್
ಆಪ್‌ಡೇಟ್ ಮಾಡಲಾದ ಎಕ್ಸ್‌ಟರ್ ಸಿಎನ್‌ಜಿಯು ಮೊದಲಿನಂತೆಯೇ ಅದೇ ಪವರ್‌ಟ್ರೇನ್ ಸೆಟಪ್‌ನೊಂದಿಗೆ ಲಭ್ಯವಿದೆ, ಅದರ ವಿವರಗಳು ಈ ಕೆಳಗಿನಂತಿವೆ:
ವಿಶೇಷತೆಗಳು |
ಎಕ್ಸ್‌ಟರ್ ಸಿಎನ್‌ಜಿ |
ಎಂಜಿನ್ |
1.2-ಲೀಟರ್ ಪೆಟ್ರೋಲ್+ಸಿಎನ್‌ಜಿ |
ಪವರ್ |
69 ಪಿಎಸ್ |
ಟಾರ್ಕ್ |
95 ಎನ್‌ಎಮ್ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನುಯಲ್ |
ಆಪ್‌ಡೇಟ್ ಮಾಡಿದ ಎಕ್ಸ್‌ಟರ್ ಸಿಎನ್‌ಜಿಯಲ್ಲಿ ಪ್ರತಿ ಲೀ.ಗೆ 27.1 ಕಿಮೀ ಯಷ್ಟು ಇಂಧನ ದಕ್ಷತೆಯನ್ನು ಹ್ಯುಂಡೈ ಹೇಳಿಕೊಂಡಿದೆ. ಈ ಮೈಕ್ರೋ ಎಸ್‌ಯುವಿಯು ಎರಡು ಸಿಎನ್‌ಜಿ ಸಿಲಿಂಡರ್‌ಗಳಿಗೆ 60-ಲೀಟರ್ ನೀರಿನ ಸಮಾನ ಸಂಯೋಜಿತ ಸಾಮರ್ಥ್ಯವನ್ನು ಪಡೆಯುತ್ತದೆ. ರೆಗುಲರ್ ಪೆಟ್ರೋಲ್ ಆವೃತ್ತಿಗಳಲ್ಲಿ, 1.2-ಲೀಟರ್ ಪವರ್‌ಟ್ರೇನ್ 83 ಪಿಎಸ್ ಮತ್ತು 114 ಎನ್‌ಎಮ್ ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಎಎಮ್‌ಟಿ ಆಯ್ಕೆಯನ್ನು ಸಹ ಪಡೆಯುತ್ತದೆ.
ಎಕ್ಸ್‌ಟರ್ ಸಿಎನ್‌ಜಿ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಸಿಎನ್‌ಜಿ ಕಿಟ್ ಅನ್ನು ಎಕ್ಸ್‌ಟರ್‌ನ ಮಿಡ್-ಸ್ಪೆಕ್ ಎಸ್ ಆವೃತ್ತಿಯಲ್ಲಿ ಒದಗಿಸಲಾಗಿರುವುದರಿಂದ, ಎಸ್‌ಯುವಿಯ ಸಿಎನ್‌ಜಿ ಆವೃತ್ತಿಗಳು 8-ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್(TPMS), ಮತ್ತು ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್ (ESC) ನಂತಹ ಪ್ರಮುಖ ಫೀಚರ್‌ಗಳೊಂದಿಗೆ ಯೋಗ್ಯವಾಗಿ ಸಜ್ಜುಗೊಂಡಿವೆ.
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಹುಂಡೈ ಎಕ್ಸ್‌ಟರ್‌ನ ಬೆಲೆಯು 6.13 ಲಕ್ಷ ರೂ.ನಿಂದ 10.43 ಲಕ್ಷ ರೂ.ಗಳ (ಎಕ್ಸ್ ಶೋರೂಂ-ದೆಹಲಿ) ನಡುವೆ ಇದೆ. ಇದರ ನೇರ ಪ್ರತಿಸ್ಪರ್ಧಿ ಟಾಟಾ ಪಂಚ್ ಆಗಿದ್ದು (CNG ಆವೃತ್ತಿಗಳನ್ನು ಹೊಂದಿದೆ), ಇದು ಸಿಟ್ರೊಯೆನ್ ಸಿ3, ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ತಪ್ಪದೇ ಫಾಲೋ ಮಾಡಿ
ಇನ್ನಷ್ಟು ಓದಿ: ಹುಂಡೈ ಎಕ್ಸ್‌ಟರ್ ಎಎಮ್‌ಟಿ
rohit
- 48 ವೀಕ್ಷಣಿಗಳು