• English
  • Login / Register

ಎಕ್ಸ್‌ಟರ್‌ನ ಮೈಕ್ರೋ SUVಯ ಎರಡು ಪ್ರಮುಖ ಫೀಚರ್‌ಗಳು ಬಹಿರಂಗ

ಹುಂಡೈ ಎಕ್ಸ್‌ಟರ್ ಗಾಗಿ rohit ಮೂಲಕ ಮೇ 25, 2023 02:00 pm ರಂದು ಪ್ರಕಟಿಸಲಾಗಿದೆ

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಭಾರತದಲ್ಲಿ ಸನ್‌ರೂಫ್ ಅನ್ನು ಪಡೆದ ಮೊದಲ ಮೈಕ್ರೋ SUV ಈ ಎಕ್ಸ್‌ಟರ್

Hyundai Exter sunroof

  • ಎಕ್ಸ್‌ಟರ್ ಅನ್ನು ಹ್ಯುಂಡೈ ಜುಲೈ 10ಕ್ಕೆ ಬಿಡುಗಡೆ ಮಾಡಲಿದೆ.
  •  EX, S, SX, SX (O), ಮತ್ತು SX (O) ಕನೆಕ್ಟ್ ಎಂಬ ಐದು ವೇರಿಯೆಂಟ್‌ಗಳೊಂದಿಗೆ ಇದನ್ನು ನೀಡಲಾಗಿದೆ.
  • ಅಲ್ಲದೇ ಈ ಎಕ್ಸ್‌ಟರ್ ಮುಂಭಾಗ ಮತ್ತು ಹಿಂಭಾಗದ ಎರಡು ಕ್ಯಾಮರಾಗಳೊಂದಿಗೆ ಡ್ಯಾಶ್‌ಕ್ಯಾಮ್ ಅನ್ನು ಪಡೆದಿದೆ.
  • ಇದರ ಸನ್‌ರೂಫ್, ಕಾರ್ಯಾಚರಣೆಗಳಿಗಾಗಿ ವಾಯ್ಸ್ ಕಮಾಂಡ್‌ಗಳನ್ನು ಬೆಂಬಲಿಸುತ್ತದೆ.
  • ಹ್ಯುಂಡೈ ಇದನ್ನು 1.2-ಲೀಟರ್ ಪೆಟ್ರೋಲ್ ಯೂನಿಟ್‌ನೊಂದಿಗೆ ನೀಡುತ್ತದೆ; ಇದು CNG ಆಯ್ಕೆಯನ್ನೂ ಪಡೆದಿದೆ.
  • ಆರಂಭಿಕ ಬೆಲೆ ರೂ 6 ಲಕ್ಷ (ಎಕ್ಸ್-ಶೋರೂಂ) ಹೊಂದಿರುವ ನಿರೀಕ್ಷೆ ಇದೆ.

 ಹ್ಯುಂಡೈ ಎಕ್ಸ್‌ಟರ್ ಬೋರ್ಡ್‌ನಲ್ಲಿ ಕೆಲವು ಪ್ರಮುಖ ಪೀಚರ್‌ಗಳನ್ನು ಬಹಿರಂಗಪಡೆಸಿದ ಬೆನ್ನಲ್ಲೇ, ಈ ಕಾರು ತಯಾರಕರು ಸಿಂಗಲ್-ಪೇನ್ ಸನ್‌ರೂಫ್ ಹೊಂದಿರುವ ಚಿತ್ರವನ್ನು ತೋರಿಸುವ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಚಿತ್ರದೊಂದಿಗೆ, ಈ ಮೈಕ್ರೋ SUVಅನ್ನು ಭಾರತದಲ್ಲಿ ಜುಲೈ 10ರಂದು ಬಿಡುಗಡೆ ಮಾಡಲಾಗುವುದು ಎಂದು ದೃಢೀಕರಿಸಿದ್ದಾರೆ. ಈ ಫೀಚರ್ ಹೊಂದಿರುವುದರಿಂದ ಎಕ್ಸ್‌ಟರ್ ತನ್ನ ಪ್ರಮುಖ ಪ್ರತಿಸ್ಪರ್ಧಿ ಟಾಟಾ ಪಂಚ್‌ಗಿಂತ ಒಂದು ಹೆಜ್ಜೆ ಮುಂದಿದೆ.

ಬಹಿರಂಗಪಡಿಸಲಾದ ಎರಡು ಪ್ರಮುಖ ಫೀಚರ್‌ಗಳ ಹೆಚ್ಚಿನ ವಿವರಗಳು

 ವಿಭಾದಲ್ಲೇ ಮೊದಲು ಆಗಿರುವ ಸನ್‌ರೂಫ್ ಹೊರತಾಗಿ, ಈ ಎಕ್ಸ್‌ಟರ್ ಎರಡು ಡ್ಯಾಶ್ ಕ್ಯಾಮ್ ಸೆಟಪ್‌ನಿಂದ ಸಜ್ಜುಗೊಂಡಿದ್ದು, ಇದು ಕೂಡಾ ವಿಭಾಗದಲ್ಲೇ ಮೊದಲು ಆಗಲಿದೆ.

Hyundai Exter dashcam

ಮುಂಭಾಗದ ಮತ್ತು ಹಿಂದಿನ ಕ್ಯಾಮರಾಗಳೆರಡನ್ನೂ ಹೊಂದಿರುವ ಇದು, 2.3-ಇಂಚು ಡಿಸ್‌ಪ್ಲೇ, ಸ್ಮಾರ್ಟ್‌ಫೋನ್‌ ಆ್ಯಪ್ ಕನೆಕ್ಟಿವಿಟಿ ಮತ್ತು ಮಲ್ಟಿ-ರೆಕಾರ್ಡಿಂಗ್ ಮೋಡ್‌ಗಳನ್ನು ನೀಡುತ್ತದೆ. ಅಲ್ಲದೇ ಇದು ಪೂರ್ಣ HD ರಿಸೆಲ್ಯೂಶನ್‌ನಲ್ಲಿ ವೀಡಿಯೋಗಳನ್ನು ಶೂಟ್ ಮಾಡುತ್ತದೆ, ಇದರೊಂದಿಗೆ ಎರಡು ಕ್ಯಾಮರಾಗಳು ಡ್ರೈವಿಂದ್ (ಸಾಮಾನ್ಯ), ಇವೆಂಟ್ (ಸುರಕ್ಷತೆ) ಮತ್ತು ವೆಕೇಶನ್ (ವಿರಾಮದ ಸಮಯ) ಮುಂತಾದ ವಿವಿಧ ರೆಕಾರ್ಡಿಂಗ್ ಆಯ್ಕೆಗಳನ್ನು ಹೊಂದಿದೆ.

” ಈ ಎಕ್ಸ್‌ಟರ್‍ ನ ಸನ್‌ರೂಫ್ ಅನ್ನು ಸಂಪರ್ಕಿತ ಕಾರು ತಂತ್ರಜ್ಞಾನದಿಂದಾಗಿ “ಸನ್‌ರೂಫ್ ತೆರೆಯಿರಿ” ಅಥವಾ  “ನಾನು ಆಕಾಶವನ್ನು ನೋಡಬೇಕು” ಮುಂತಾದ ವಾಯ್ಸ್ ಕಮಾಂಡ್‌ ಬಳಸಿಕೊಂಡು ಈ ಎಕ್ಸ್‌ಟರ್‌ನ ಸನ್‌ರೂಫ್ ಅನ್ನು ಆಪರೇಟ್ ಮಾಡಬಹುದು.

ಇದನ್ನೂ ಓದಿ: ನಿಮ್ಮ ಆ್ಯಂಡ್ರಾಯ್ಡ್ ಫೋನ್ ಶೀಘ್ರದಲ್ಲೇ ಡ್ಯಾಶ್‌ಕ್ಯಾಮ್ ಆಗಿಯೂ ಕಾರ್ಯನಿರ್ವಹಿಸಬಲ್ಲದು 

ಇತರ ನಿರೀಕ್ಷಿತ ಫೀಚರ್‌ಗಳು

Hyundai Exter

ಈ ಎರಡು ಫೀಚರ್‌ಗಳ ಹೊರತಾಗಿ, ಹ್ಯುಂಡೈ ಈ ಎಕ್ಸ್‌ಟರ್‌ಗೆ ಕ್ರೂಸ್ ಕಂಟ್ರೋಲ್, ದೊಡ್ಡ ಟಚ್‌ಸ್ಕ್ರೀನ್ ಯೂನಿಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ನೀಡಲಿದೆ. ಇದರ ಸುರಕ್ಷತಾ ಫೀಚರ್‌ಗಳು ಆರು ಏರ್‌ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ರಿವರ್ಸಿಂಗ್ ಕ್ಯಾಮರಾವನ್ನು ಹೊಂದಿದೆ.

ಎರಡು ಪವರ್‌ಟ್ರೇನ್ ಆಯ್ಕೆಗಳು

ಹ್ಯುಂಡೈ ಈ ಎಕ್ಸ್‌ಟರ್‌ಗೆ 1.2-ಲೀಟರ್ ಪೆಟ್ರೋಲ್ ಇಂಜಿನ್ ಮಾತ್ರ ಮತ್ತು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಯೊಂದಿಗೆ ನೀಡುತ್ತಿದೆ. ಇದು CNG ಆಯ್ಕೆಯ ಕಿಟ್‌ನೊಂದಿಗೂ ಬರುತ್ತದೆ.

ವೇರಿಯೆಂಟ್‌ಗಳು, ಬೆಲೆಗಳು ಮತ್ತು ಸ್ಪರ್ಧೆ

Hyundai Exter

ಇದು ಐದು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ- - EX, S, SX, SX (O), ಮತ್ತು SX (O) ಕನೆಕ್ಟ್. ಈ ಎಕ್ಸ್‌ಟರ್‌ನ ಬೆಲೆಗಳು ರೂ 6 ಲಕ್ಷಕ್ಕಿಂತ (ಎಕ್ಸ್-ಶೋರೂಂ) ಹೆಚ್ಚಾಗುವ ಸಂಭವವಿದೆ. ಟಾಟಾ ಪಂಚ್ ಹೊರತಾಗಿ, ಇದು ಸಿಟ್ರನ್ C3, ರೆನಾಲ್ಟ್ ಕಿಗಾರ್, ಮಾರುತಿ ಫ್ರಾಂಕ್ಸ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಿಂತಲೂ ಹೆಚ್ಚಿರಲಿದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Hyundai ಎಕ್ಸ್‌ಟರ್

1 ಕಾಮೆಂಟ್
1
A
ajeet kumar katoch
May 27, 2023, 3:02:22 PM

Where to book this car in south delhi

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience