ಆಯ್ದ ಡೀಲರ್ ಶಿಪ್ ಗಳಲ್ಲಿ Hyundai i20 Facelift ಕಾರಿನ ಅನಧಿಕೃತ ಬುಕಿಂಗ್ ಆರಂಭ
ಹ್ಯುಂಡೈ ಸಂಸ್ಥೆಯು ಈ ಹಬ್ಬದ ಸಮಯದಲ್ಲಿ ಪರಿಷ್ಕೃತ i20 ವಾಹನವನ್ನು ಬಿಡುಗಡೆ ಮಾಡಲಿದೆ
- ಪರಿಷ್ಕೃತ i20 ಮಾದರಿಯು, ಪರಿಷ್ಕೃತ ಗ್ರಿಲ್ ಮತ್ತು DRL ಗಳು, ಪರಿಷ್ಕೃತ ಬಂಪರ್, ಮತ್ತು ಹೊಸ ಅಲೋಯ್ ವೀಲ್ ಗಳು ಹೀಗೆ ತನ್ನ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿದೆ.
- ಒಳಭಾಗದಲ್ಲಿ ಇದು ಉಫೋಲ್ಸ್ಟರಿಯ ಭಿನ್ನ ಶೇಡ್ ಅನ್ನು ಹೊಂದಿರಲಿದೆ.
- ಈಗಾಗಲೇ ಹ್ಯುಂಡೈ ವೆನ್ಯು ವಾಹನದಲ್ಲಿರುವ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಂ (ADAS) ಅನ್ನು ತನ್ನ ಹೊಸ ಹ್ಯಾಚ್ ಬ್ಯಾಕ್ ವಾಹನದಲ್ಲಿ ಹ್ಯುಂಡೈ ಸಂಸ್ಥೆಯು ಪರಿಚಯಿಸಲಿದೆ.
ಭಾರತದಲ್ಲಿ 2023 ಹಬ್ಬದ ಸಮಯಕ್ಕೆ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿರುವುದರಿಂದ, ಅನೇಕ ಹೊಸ ಕಾರುಗಳು ಇಲ್ಲಿ ರಸ್ತೆಗಿಳಿಯಲಿದ್ದು, ಹ್ಯುಂಡೈ i20 ಫೇಸ್ ಲಿಫ್ಟ್ ಇದರಲ್ಲಿ ಒಂದಾಗಿದೆ. ಅನೇಕ ಟೀಸರ್ ಗಳ ಮೂಲಕ ನಾವು ಈಗಾಗಲೇ 2023 ಹ್ಯುಂಡೈ i20 ಫೇಸ್ ಲಿಫ್ಟ್ ವಾಹನದ ಇಣುಕುನೋಟವನ್ನು ನೋಡಿದ್ದು, ಈ ಹಿಂದೆ ಬಿಡುಗಡೆಯಾಗಿರುವ ಜಾಗತಿಕ ಮಾದರಿಯಲ್ಲಿ ಇರುವಂತೆಯೇ ಈ ಪ್ರೀಮಿಯಂ ಹ್ಯಾಚ್ ಬ್ಯಾಕ್ ವಾಹನದಲ್ಲಿ ಅನೇಕ ಹೊಸ ವೈಶಿಷ್ಟ್ಯಗಳು ಕಾಣಸಿಗಲಿವೆ.
ಅಧಿಕೃತ ಬಿಡುಗಡೆಗೆ ಮೊದಲೇ ಅನೇಕ ಹ್ಯುಂಡೈ ಡೀಲರ್ ಶಿಪ್ ಗಳು i20 ಫೇಸ್ ಲಿಫ್ಟ್ ವಾಹನಕ್ಕೆ ಆಫ್ ಲೈನ್ ಆರ್ಡರ್ ಗಳನ್ನು ಸ್ವೀಕರಿಸುತ್ತಿವೆ. ಈ ಅನಧಿಕೃತ ಬುಕಿಂಗ್ ಗಳು ರೂ 5,000 ದಿಂದ ರೂ 21,000 ದ ವರೆಗಿನ ಠೇವಣಿಗೆ ಲಭ್ಯ. ನೀವು ಈ ಹೊಸ ಹ್ಯಾಚ್ ಬ್ಯಾಕ್ ವಾಹನದಲ್ಲಿ ಆಸಕ್ತಿ ಹೊಂದಿದ್ದಲ್ಲಿ ನಿರೀಕ್ಷಿತ ಬದಲಾವಣೆಗಳ ಪಕ್ಷಿನೋಟವನ್ನು ಈ ಕೆಳಗೆ ನೋಡಿರಿ:
ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆ
ಇತ್ತೀಚಿನ ಟೀಸರ್ ಗಳಲ್ಲಿ ಕಾಣಿಸಿಕೊಂಡಂತೆ, ಹ್ಯುಂಡೈ i20 ವಾಹನದಲ್ಲಿ ತೀರಾ ಸಣ್ಣ ಪ್ರಮಾಣದಲ್ಲಿ ವಿನ್ಯಾಸಕ್ಕೆ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಗಳು, ಮುಂಭಾಗದಲ್ಲಿ ಹೊಸ ಕ್ಯಾಸ್ಕೇಡಿಂಗ್ ಗ್ರಿಲ್, ಪರಿಷ್ಕೃತ LED DRL ಗಳು, ಮತ್ತು ಪರಿಷ್ಕೃತ ಬಂಪರ್ ವಿನ್ಯಾಸವನ್ನು ಹೊಂದಿವೆ. ಹ್ಯುಂಡೈ ಲೋಗೋವಿನ ಸ್ಥಾನದಲ್ಲಿ ಗಮನಾರ್ಹ ಬದಲಾವಣೆಯುಂಟಾಗಲಿದ್ದು, ಇದನ್ನು ಹುಡ್ ನಲ್ಲಿ ಇರಿಸಲಾಗುವುದು.
ಈ ಕಾರು ತಯಾರಕ ಸಂಸ್ಥೆಯು i20 ಫೇಸ್ ಲಿಫ್ಟ್ ಮಾದರಿಯ ಹಿಂಭಾಗದ ವಿನ್ಯಾಸದ ಕುರಿತು ನಮಗೆ ಒಂದಷ್ಟು ಮಾಹಿತಿಯನ್ನು ನೀಡಿದ್ದು, ಟೇಲ್ ಲೈಟ್ ಗಳನ್ನು ಪರಿಷ್ಕರಿಸಿದೆ. ಇದು ಜಾಗತಿಕವಾಗಿ ಮಾರಾಟವಾಗುವ i20 ಫೇಸ್ ಲಿಫ್ಟ್ ವಾಹನದ ಟೇಲ್ ಲೈಟ್ ಅನ್ನು ಹೋಲುತ್ತದೆ. ಅಲ್ಲದೆ, ನಮ್ಮ ಸ್ಪೈ ಶಾಟ್ ಗಳು ತಿಳಿಸಿರುವಂತೆ, ಪರಿಷ್ಕೃತ ಹ್ಯುಂಡೈ ಹ್ಯಾಚ್ ಬ್ಯಾಕ್ ವಾಹನವು ಹೊಸ ಅಲೋಯ್ ವೀಲ್ ಗಳೊಂದಿಗೆ ರಸ್ತೆಗಿಳಿಯಲಿದೆ.
ಇದನ್ನು ಸಹ ನೋಡಿರಿ: ಹೋಂಡಾ ಎಲೆವೇಟ್ Vs ಪ್ರತಿಸ್ಪರ್ಧಿಗಳು: ಬೆಲೆ ತಪಾಸಣೆ
ಕ್ಯಾಬಿನ್ ಪರಿಷ್ಕರಣೆ
ಹ್ಯುಂಡೈ ಫೇಸ್ ಲಿಫ್ಟ್ ವಾಹನದ ಕ್ಯಾಬಿನ್ ಮಾದರಿಯು ಈಗ ಇರುವ ಮಾದರಿಯನ್ನೇ ಹೋಲಲಿದ್ದು, ಉಫೋಲ್ಸ್ಟರಿಗೆ ಮಾತ್ರ ಬೇರೆಯೇ ಛಾಯೆಯನ್ನು ಪಡೆಯಲಿದೆ. ಈ ಪರಿಷ್ಕೃತ ಹ್ಯಾಚ್ ಬ್ಯಾಕ್ ವಾಹನವು ಚಾಲಕನ ಹೊಸ ಡಿಜಿಟಲ್ ಡಿಸ್ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಡ್ಯುವಲ್ ಕ್ಯಾಮರಾ ಡ್ಯಾಶ್ ಕ್ಯಾಮ್, ಮತ್ತು ಬಹುವರ್ಣದ ಆಂಬಿಯೆಂಟ್ ಲೈಟಿಂಗ್ ಮುಂತಾದ ಹೊಸ ವೈಶಿಷ್ಟ್ಯಗಳೊಂದಿಗೆ ಬರಲಿದೆ.
ಜತೆಗೆ ಪ್ರಮಾಣಿತ ಆರು ಏರ್ ಬ್ಯಾಗುಗಳು, 360 ಡಿಗ್ರಿ ಕ್ಯಾಮರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮುಂತಾದ ವೈಶಿಷ್ಟ್ಯಗಳನ್ನು ಇದರ ಸೇಫ್ಟಿ ಕಿಟ್ ಒಳಗೊಂಡಿದೆ. ಈ ಬಾರಿ, ಈಗಾಗಲೇ ಪರಿಷ್ಕೃತ ಹ್ಯುಂಡೈ ವೆನ್ಯು ಕಾರಿನಲ್ಲಿ ಇರುವಂತೆಯೇ ಈ ಹ್ಯಾಚ್ ಬ್ಯಾಕ್ ಮಾದರಿಯಲ್ಲಿಯೂ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಮ್ಸ್ (ADAS) ಅನ್ನು ಪರಿಚಯಿಸಲಿದೆ.
ಪವರ್ ಟ್ರೇನ್ ಪರಿಷ್ಕರಣೆಗಳು
ಹ್ಯುಂಡೈ ಸಂಸ್ಥೆಯು ಪರಿಷ್ಕೃತ i20 ಫೇಸ್ ಲಿಫ್ಟ್ ವಾಹನದಲ್ಲಿ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಉಳಿಸಿಕೊಳ್ಳಲಿದೆ. ಇವು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಅಥವಾ CVT ಗೇರ್ ಬಾಕ್ಸ್ ನೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ (83PS/114Nm), ಮತ್ತು ಸದ್ಯಕ್ಕೆ 7-ಸ್ಪೀಡ್ ಡ್ಯುವಲ್ ಕ್ಲಚ್ ಟ್ರಾನ್ಸ್ ಮಿಶನ್ (DCT) ಜೊತೆಗೆ ಲಭ್ಯವಿರುವ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (120PS/172Nm) ಅನ್ನು ಒಳಗೊಂಡಿವೆ. ಜತೆಗೆ ಇದು 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಆಯ್ಕೆಯನ್ನು ಸಹ ಒದಗಿಸಲಿದೆ.
ನಿರೀಕ್ಷಿತ ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ i20 ಫೇಸ್ ಲಿಫ್ಟ್ ವಾಹನವನ್ನು 2023ರ ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಸದ್ಯಕ್ಕೆ ರೂ. 7.46 ಲಕ್ಷದಿಂದ ರೂ 11.88 ಲಕ್ಷದ ತನಕ (ಎಕ್ಸ್-ಶೋರೂಂ) ದೊರೆಯುತ್ತಿರುವ ಈಗಿನ ಮಾದರಿಗಿಂತ ಹೆಚ್ಚಿನ ಬೆಲೆಯನ್ನು ಇದು ಹೊಂದಿರಲಿದೆ. ವಿನ್ಯಾಸದಲ್ಲಿನ ಬದಲಾವಣೆಗಳು, ವೈಶಿಷ್ಟ್ಯಗಳು ಮತ್ತು ಟ್ರಾನ್ಸ್ ಮಿಶನ್ ಆಯ್ಕೆಗಳು, ಪರಿಷ್ಕೃತ i20 N ಲೈನ್ ಮಾದರಿಗೂ ಅನ್ವಯವಾಗಲಿದ್ದು, ಇದೂ ಸಹ ಒಟ್ಟಿಗೆ ಬಿಡುಗಡೆಯಾಗುವ ಸಂಭವವಿದೆ. ಬಿಡುಗಡೆಯಾದ ನಂತರ ಇದು ಟಾಟಾ ಅಲ್ಟ್ರೊಜ್, ಮಾರುತಿ ಬಲೇನೊ ಮತ್ತು ಟೊಯೊಟಾ ಗ್ಲಾಂಜ ಇತ್ಯಾದಿ ಮಾದರಿಗಳೊಂದಿಗೆ ಸ್ಪರ್ಧಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯುಂಡೈ i20 ಆನ್ ರೋಡ್ ಬೆಲೆ