Hyundai i20 Sportz (O) ವರ್ಸಸ್ Maruti Baleno ಝೀಟಾ ಮ್ಯಾನುಯಲ್ ಮತ್ತು ಆಲ್ಫಾ ಆಟೋಮ್ಯಾಟಿಕ್: ಸ್ಪೆಸಿಫಿಕೇಷನ್ ಗಳ ಹೋ ಲಿಕೆ
ಹುಂಡೈ I20 ಗಾಗಿ shreyash ಮೂಲಕ ಫೆಬ್ರವಾರಿ 13, 2024 05:34 pm ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸದಾಗಿ ಪರಿಚಯಿಸಲಾದ ಹ್ಯುಂಡೈ i20 ಸ್ಪೋರ್ಟ್ಜ್ (O), ಕೆಲವು ಹೊಸ ಫೀಚರ್ ಗಳನ್ನು ತಂದಿದೆ, ಆದರೆ ಮಾರುತಿ ಹ್ಯಾಚ್‌ಬ್ಯಾಕ್ ಇದೇ ಬೆಲೆಯಲ್ಲಿ ಕೆಲವು ಪ್ರಯೋಜನಗಳನ್ನು ಕೂಡ ಹೊಂದಿದೆ.
ಹ್ಯುಂಡೈ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹೊಸ ಮಿಡ್-ಸ್ಪೆಕ್ ಸ್ಪೋರ್ಟ್ಜ್ (O) ವೇರಿಯಂಟ್ ಅನ್ನು ಸ್ಪೋರ್ಟ್ಜ್ ಮತ್ತು ಆಸ್ಟಾ ವೇರಿಯಂಟ್ ಗಳ ನಡುವೆ ಇರಿಸಿದೆ. ಇದು ಆಸ್ಟಾದ ಕೆಲವು ಪ್ರೀಮಿಯಂ ಫೀಚರ್ ಗಳನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಸಿಗುವಂತೆ ಮಾಡುತ್ತದೆ. ಈ ಹೊಸದಾಗಿ ಪರಿಚಯಿಸಲಾದ i20 ವೇರಿಯಂಟ್, ಬೆಲೆಯಲ್ಲಿ ಮಾರುತಿ ಬಲೆನೊ ಝೀಟಾ ಮತ್ತು ಆಲ್ಫಾ ವೇರಿಯಂಟ್ ಗಳಿಗೆ, ಕ್ರಮವಾಗಿ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಗಳೊಂದಿಗೆ ಹೋಲುತ್ತದೆ.
ಹ್ಯುಂಡೈ i20 ಸ್ಪೋರ್ಟ್ಜ್ (O) |
ಮಾರುತಿ ಬಲೆನೋ |
ವ್ಯತ್ಯಾಸ |
|
ಮ್ಯಾನುಯಲ್ |
ರೂ. 8.73 ಲಕ್ಷ |
ರೂ. 8.38 ಲಕ್ಷ (ಝೀಟಾ) |
(-) ರೂ. 35,000 |
ಆಟೋಮ್ಯಾಟಿಕ್ |
ರೂ. 9.78 ಲಕ್ಷ |
ರೂ. 9.88 ಲಕ್ಷ (ಆಲ್ಫಾ) |
(+) ರೂ. 10,000 |
*ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳಾಗಿವೆ
ಸ್ಪೆಸಿಫಿಕೇಷನ್ ಗಳ ವಿಷಯದಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳನ್ನು ಯಾವ ರೀತಿಯಲ್ಲಿ ಹೋಲಿಸಬಹುದು ಎಂಬುದನ್ನು ಮೊದಲು ನೋಡೋಣ:
ಡೈಮೆನ್ಷನ್ಸ್
ಹ್ಯುಂಡೈ i20 |
ಮಾರುತಿ ಬಲೆನೋ |
|
ಉದ್ದ |
3995 ಮಿ.ಮೀ |
3990 ಮಿ.ಮೀ |
ಅಗಲ |
1775 ಮಿ.ಮೀ |
1745 ಮಿ.ಮೀ |
ಎತ್ತರ |
1505 ಮಿ.ಮೀ |
1500 ಮಿ.ಮೀ |
ವೀಲ್‌ಬೇಸ್ |
2580 ಮಿ.ಮೀ |
2520 ಮಿ.ಮೀ |
ಹ್ಯುಂಡೈ i20 ಎಲ್ಲಾ ಆಯಾಮಗಳಲ್ಲಿ ಮಾರುತಿ ಬಲೆನೊವನ್ನು ಮೀರಿಸುತ್ತದೆ; ಇದರ ಜೊತೆಗೆ ಇದು 20mm ಉದ್ದದ ವೀಲ್‌ಬೇಸ್‌ನೊಂದಿಗೆ 30 mm ಅಗಲವಾಗಿದೆ.
ಇದನ್ನು ಕೂಡ ಓದಿ: ಈ 7 ರಿಯಲ್-ಟೈಮ್ ಚಿತ್ರಗಳಲ್ಲಿ ಮಾರುತಿ ಫ್ರಾಂಕ್ಸ್ ಡೆಲ್ಟಾ ಪ್ಲಸ್ ವೆಲಾಸಿಟಿ ಎಡಿಷನ್ ಅನ್ನು ನೋಡೋಣ
ಪವರ್‌ಟ್ರೇನ್ ಗಳು
ಹ್ಯುಂಡೈ i20 |
ಮಾರುತಿ ಬಲೆನೋ |
|
ಇಂಜಿನ್ |
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
ಪವರ್ |
83 PS (MT) / 88 PS (CVT) |
90 PS |
ಟಾರ್ಕ್ |
115 Nm |
113 Nm |
ಟ್ರಾನ್ಸ್ಮಿಷನ್ |
5-ಸ್ಪೀಡ್ MT / CVT |
5-ಸ್ಪೀಡ್ MT / 5-ಸ್ಪೀಡ್ AMT |
ಮಾರುತಿ ಬಲೆನೊ ಹ್ಯುಂಡೈ i20 ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಎರಡೂ ಕಾರುಗಳು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿದೆ, ಆದರೆ i20 CVT ಆಟೋಮ್ಯಾಟಿಕ್ ಆಗಿದೆ, ಮತ್ತು ಬಲೆನೊ AMT ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಹುಂಡೈ i20 CVT ಬಲೆನೊ AMT ಗಿಂತ ಸುಗಮವಾದ ಡ್ರೈವಿಂಗ್ ಅನುಭವವನ್ನು ನೀಡುತ್ತದೆ, ಆದರೆ ಇದರ ಬೆಲೆಯು ಪ್ರೀಮಿಯಂ ಮಟ್ಟದಲ್ಲಿದೆ.
ಫೀಚರ್ ಹೈಲೈಟ್ ಗಳು
ಹ್ಯುಂಡೈ i20 ಸ್ಪೋರ್ಟ್ಜ್ (O) ವರ್ಸಸ್ ಮಾರುತಿ ಬಲೆನೊ ಝೀಟಾ ಮ್ಯಾನುಯಲ್
ಹ್ಯುಂಡೈ i20 ಸ್ಪೋರ್ಟ್ಜ್ (O) MT |
ಮಾರುತಿ ಬಲೆನೊ ಝೀಟಾ MT |
ವ್ಯತ್ಯಾಸ |
ರೂ. 8.73 ಲಕ್ಷ |
ರೂ. 8.38 ಲಕ್ಷ |
(-) ರೂ. 35,000 |
ಫೀಚರ್ ಗಳು |
ಹ್ಯುಂಡೈ i20 ಸ್ಪೋರ್ಟ್ಜ್ (O) MT |
ಮಾರುತಿ ಬಲೆನೊ ಝೀಟಾ MT |
ಹೊರಭಾಗ |
|
|
ಒಳಭಾಗ |
|
|
ಸೌಕರ್ಯ ಮತ್ತು ಅನುಕೂಲತೆ |
|
|
ಇನ್ಫೋಟೈನ್ಮೆಂಟ್ |
|
|
Safety ಸುರಕ್ಷತೆ |
|
|
-
i20 ಸ್ಪೋರ್ಟ್ಜ್ (O) ಮತ್ತು ಬಲೆನೊ ಝೀಟಾ ಮ್ಯಾನ್ಯುವಲ್, ಈ ಎರಡೂ ಕಾರುಗಳು ಸಮಗ್ರ ಫೀಚರ್ ಗಳೊಂದಿಗೆ ಬಂದಿದ್ದರೂ ಕೂಡ, i20 ಮಾರುತಿ ಹ್ಯಾಚ್‌ಬ್ಯಾಕ್‌ಗೆ ಹೋಲಿಸಿದರೆ ವೈರ್‌ಲೆಸ್ ಚಾರ್ಜಿಂಗ್, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಹೆಚ್ಚಿನ ಅನುಕೂಲತೆಯ ಫೀಚರ್ ಗಳನ್ನು ನೀಡುತ್ತದೆ.
-
ಹ್ಯುಂಡೈನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸನ್‌ರೂಫ್ ಅನ್ನು ಕೂಡ ನೀಡುತ್ತದೆ, ಈ ಫೀಚರ್ ಮಾರುತಿ ಬಲೆನೊದ ಯಾವುದೇ ವೇರಿಯಂಟ್ ನೊಂದಿಗೆ ಲಭ್ಯವಿಲ್ಲ.
-
ಆದರೆ, i20 ಮಿಡ್-ಸ್ಪೆಕ್ ವೇರಿಯಂಟ್ LED ಹೆಡ್‌ಲೈಟ್‌ಗಳು, ಅಲಾಯ್ ವೀಲ್ಸ್, ಪುಶ್-ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಹಾಗೆಯೇ ಹಿಂಭಾಗದ ವೈಪರ್ ಮತ್ತು ವಾಷರ್ ಅನ್ನು ಹೊಂದಿಲ್ಲ, ಇವೆಲ್ಲವನ್ನೂ ಬಲೆನೊದಲ್ಲಿ ನೀಡಲಾಗಿದೆ.
-
ಸುರಕ್ಷತೆಯ ವಿಷಯದಲ್ಲಿ, ಎರಡೂ ಹ್ಯಾಚ್‌ಬ್ಯಾಕ್‌ಗಳು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಸೆನ್ಸರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿವೆ. ಆದರೆ, ಬಲೆನೊ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಪಡೆದಿಲ್ಲ.
-
i20 ಸ್ಪೋರ್ಟ್ಜ್ (O) ನ ಫೀಚರ್ ಗಳು ಬಲೆನೊ ಝೀಟಾಗೆ ಹೋಲಿಸಿದರೆ ಅದರ ಪ್ರೀಮಿಯಂ ಬೆಲೆಯನ್ನು ಸುಲಭವಾಗಿ ಸಮರ್ಥಿಸುತ್ತದೆ.
ಹ್ಯುಂಡೈ i20 ಸ್ಪೋರ್ಟ್ಜ್ (O) ವರ್ಸಸ್ ಮಾರುತಿ ಬಲೆನೊ ಆಲ್ಫಾ ಆಟೋಮ್ಯಾಟಿಕ್
ಹ್ಯುಂಡೈ i20 ಸ್ಪೋರ್ಟ್ಜ್ (O) CVT |
ಮಾರುತಿ ಬಲೆನೊ ಆಲ್ಫಾ ಆಟೋಮ್ಯಾಟಿಕ್ |
ವ್ಯತ್ಯಾಸ |
ರೂ. 9.78 ಲಕ್ಷ |
ರೂ. 9.88 ಲಕ್ಷ |
(+) ರೂ. 10000 |
ಫೀಚರ್ ಗಳು |
ಹ್ಯುಂಡೈ i20 ಸ್ಪೋರ್ಟ್ಜ್ (O) |
ಮಾರುತಿ ಬಲೆನೊ ಆಲ್ಫಾ ಆಟೋಮ್ಯಾಟಿಕ್ |
ಹೊರಭಾಗ |
|
|
ಒಳಭಾಗ |
|
|
ಸೌಕರ್ಯ ಮತ್ತು ಅನುಕೂಲತೆ |
|
|
ಇನ್ಫೋಟೈನ್ಮೆಂಟ್ |
|
|
ಸುರಕ್ಷತೆ |
|
|
-
i20 ಮಿಡ್-ಸ್ಪೆಕ್ ಸ್ಪೋರ್ಟ್ಜ್ (O) ಆಟೋಮ್ಯಾಟಿಕ್ ಬದಲಾಗಿ ಬಲೆನೊ ಟಾಪ್-ಸ್ಪೆಕ್ ಆಲ್ಫಾ ಆಟೋಮ್ಯಾಟಿಕ್ ವೇರಿಯಂಟ್ ಗೆ ನೀವು ರೂ 10,000 ಮೊತ್ತದ ಸಣ್ಣ ಪ್ರೀಮಿಯಂ ಅನ್ನು ಪಾವತಿಸಿದರೆ, ನೀವು ಹೆಡ್ಸ್-ಅಪ್ ಡಿಸ್ಪ್ಲೇ, 360-ಡಿಗ್ರಿ ಕ್ಯಾಮೆರಾ, ದೊಡ್ಡದಾದಂತಹ 9-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಟೋ-ಡಿಮ್ಮಿಂಗ್ IRVM, LED ಫಾಗ್ ಲ್ಯಾಂಪ್‌ಗಳೊಂದಿಗೆ ಆಲ್-LED ಹೆಡ್‌ಲೈಟ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಹೆಚ್ಚುವರಿ ಫೀಚರ್ ಗಳಾಗಿ ಪಡೆಯುತ್ತೀರಿ.
-
ಫೀಚರ್ ಗಳ ವಿಷಯದಲ್ಲಿ, ಬಲೆನೊ ಅಲ್ಫಾ AMT ಅದರ ಬೆಲೆಗೆ i20 ಸ್ಪೋರ್ಟ್ಜ್ (O) CVT ಗಿಂತ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.
-
ಆದರೆ, i20 ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್ ಅನ್ನು ಪಡೆಯುತ್ತದೆ, ಇವುಗಳನ್ನು ಬಲೆನೊದ ಮೇಲ್ಮಟ್ಟದ ವೇರಿಯಂಟ್ ನೊಂದಿಗೆ ನೀಡಲಾಗುವುದಿಲ್ಲ. ಇದು ಮಾರುತಿ 5-ಸ್ಪೀಡ್ AMT ಗಿಂತ ಮೃದುವಾದ CVT ಆಟೋಮ್ಯಾಟಿಕ್ ಅನ್ನು ಕೂಡ ಪಡೆಯುತ್ತದೆ.
ಒಟ್ಟಾರೆ ಬೆಲೆಗಳು
ಹ್ಯುಂಡೈ i20 |
ಮಾರುತಿ ಬಲೆನೋ |
ರೂ. 7.04 ಲಕ್ಷದಿಂದ ರೂ. 11.21 ಲಕ್ಷ |
ರೂ. 6.66 ಲಕ್ಷದಿಂದ ರೂ. 9.88 ಲಕ್ಷ |
* ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಬೆಲೆಯಾಗಿದೆ
ಮಾರುತಿ ಬಲೆನೊಗೆ ಹೋಲಿಸಿದರೆ ಹುಂಡೈ i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸ್ವಲ್ಪ ದುಬಾರಿ ಬೆಲೆಯ ಕೊಡುಗೆಯಾಗಿದೆ.
ಇವುಗಳಲ್ಲಿ ಯಾವ ಹ್ಯಾಚ್‌ಬ್ಯಾಕ್ ಅನ್ನು ನೀವು ಆಯ್ಕೆ ಮಾಡುತ್ತೀರಿ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಇನ್ನಷ್ಟು ಓದಿ: ಹುಂಡೈ i20 ಆಟೋಮ್ಯಾಟಿಕ್