Login or Register ಅತ್ಯುತ್ತಮ CarDekho experience ಗೆ
Login

ICOTY 2024: ಮಾರುತಿ ಜಿಮ್ನಿ ಮತ್ತು ಹೋಂಡಾ ಎಲೆವೇಟ್‌ ಹಿಂದಿಕ್ಕಿ ʻಇಂಡಿಯನ್‌ ಕಾರ್‌ ಆಫ್‌ ದ ಈಯರ್‌ʼ ಪ್ರಶಸ್ತಿ ಗೆದ್ದ Hyundai Exter

ಹುಂಡೈ ಎಕ್ಸ್‌ಟರ್ ಗಾಗಿ sonny ಮೂಲಕ ಡಿಸೆಂಬರ್ 22, 2023 03:44 pm ರಂದು ಪ್ರಕಟಿಸಲಾಗಿದೆ

ಬರೋಬ್ಬರಿ ಎಂಟನೇ ಬಾರಿ ಹ್ಯುಂಡೈ ಸಂಸ್ಥೆಯ ಮಾದರಿಯೊಂದು ಪ್ರತಿಷ್ಠಿತ ಭಾರತೀಯ ಅಟೋಮೋಟಿವ್‌ ಪ್ರಶಸ್ತಿಯನ್ನು ಗೆದ್ದಿದೆ

2023ರಲ್ಲಿ ಅನೇಕ ಆಕರ್ಷಕ ಕಾರುಗಳು ಭಾರತೀಯ ಮಾರುಕಟ್ಟೆಗೆ ಬಂದಿದ್ದು, ಪ್ರತಿಷ್ಠಿತ 2024 ಇಂಡಿಯನ್‌ ಕಾರ್ ಆಫ್‌ ದ ಈಯರ್‌ ((ICOTY)) ಪ್ರಶಸ್ತಿಗೆ ಅನೇಕ ಸ್ಪರ್ಧಿಗಳಿದ್ದರು. ಕಾರ್‌ ದೇಖೊ ಸಂಪಾದಕರಾದ ಅಮೇಯಾ ದಾಂಡೇಕರ್‌ ಸೇರಿದಂತೆ ಹಿರಿಯ ಅಟೋಮೋಟಿವ್‌ ಪತ್ರಕರ್ತರನ್ನು ಒಳಗೊಂಡ ತೀರ್ಪುದಾರರ ತಂಡವು ಸಾಕಷ್ಟು ಚರ್ಚೆಯ ನಂತರ ಎಲ್ಲಾ ಮೂರು ವರ್ಗಗಳಲ್ಲಿ ಫಲಿತಾಂಶಗಳನ್ನು ಹೊರ ಹಾಕಿದೆ. ICOTY (ಒಟ್ಟಾರೆ), ಪ್ರೀಮಿಯಂ ಕಾರ್‌ ಆಫ್‌ ದ ಈಯರ್, ಮತ್ತು ಗ್ರೀನ್‌ ಕಾರ್‌ ಆಫ್‌ ದ ಈಯರ್. ವಿಜೇತರ ಪಟ್ಟಿ ಇಲ್ಲಿದೆ:

ICOTY 2024 ವಿಜೇತರು: ಹ್ಯುಂಡೈ ಎಕ್ಸ್ಟರ್

ಹ್ಯುಂಡೈ ಸಂಸ್ಥೆಯು ಎಂಟನೇ ಬಾರಿಗೆ ICOTY ಪ್ರಶಸ್ತಿಯನ್ನು ಪಡೆದಿದ್ದು, ಮೈಕ್ರೋ SUV ಕ್ಷೇತ್ರದಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ ಎಕ್ಸ್ಟರ್ ಮೂಲಕ ಇದು ಸಾಧ್ಯವಾಗಿದೆ. ಇದು ಗ್ರಾಂಡ್‌ i10 ನಿಯೋಸ್‌ ಹ್ಯಾಚ್‌ ಬ್ಯಾಕ್‌ ಅನ್ನು ಆಧರಿಸಿದ್ದು, ಈ ವಿಭಾಗದಲ್ಲಿ ಮೊದಲ ಬಾರಿಗೆ 6 ಏರ್‌ ಬ್ಯಾಗ್‌ ಗಳು, ಸನ್‌ ರೂಫ್‌ ಮತ್ತು ಡ್ಯಾಶ್‌ ಕ್ಯಾಮ್‌ ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಮೊದಲ ರನ್ನರ್‌ ಅಪ್‌ ಸ್ಥಾನವು ಜಿಪ್ಸಿ ಆಫ್‌ ರೋಡರ್‌ ನ ಉತ್ತರಾಧಿಕಾರಿ ಎನಿಸಿರುವ ಮಾರುತಿ ಜಿಮ್ನಿಗೆ ದಕ್ಕಿದೆ. ಇದೇ ವೇಳೆ ಎರಡನೇ ರನ್ನರ್‌ ಅಪ್‌ ಸ್ಥಾನವು ಹೋಂಡಾ ಎಲೆವೇಟ್ ಮತ್ತು ಟೊಯೊಟಾ ಇನೋವಾ ಹೈಕ್ರಾಸ್‌ ನಡುವೆ ಹಂಚಿ ಹೋಗಿದೆ. ಇಂಡಿಯನ್‌ ಕಾರ್‌ ಆಫ್‌ ದ ಯೀಯರ್‌ 2024 ರ ಇತರ ಕೆಲವು ಸ್ಪರ್ಧಿಗಳೆಂದರೆ ಹ್ಯುಂಡೈ ವೆರ್ನಾ ಮತ್ತು MG ಕೋಮೆಟ್‌ EV.

ಪ್ರೀಮಿಯಂ ಕಾರ್‌ ಆಫ್‌ ದ ಈಯರ್‌ 2024: BMW 7 ಸೀರೀಸ್

ಬಜೆಟ್‌ ಒತ್ತಡವಿಲ್ಲದೆ ಹೊಸ ಕಾರನ್ನು ಖರೀದಿಸುವ ಯೋಚನೆ ನಿಮ್ಮಲ್ಲಿದ್ದರೆ ಹೊಸ ತಲೆಮಾರಿನ BMW 7 ಸೀರೀಸ್ ಅನ್ನು ತೀರ್ಪುದಾರರ ತಂಡವು 2023ರ ಅತ್ಯುತ್ತಮ ಆಯ್ಕೆ ಎಂಬುದಾಗಿ ನಿರ್ಣಯಿಸಿದೆ. ಹೊರಾಂಗಣ ಶೈಲಿಯ ಕುರಿತು ಭಿನ್ನಾಭಿಪ್ರಾಯಗಳು ಇದ್ದರೂ ಈ BMW ಸೆಡಾನ್‌ ವಾಹನದ ಒಳಾಂಗಣವು ಸಾಕಷ್ಟು ಆಕರ್ಷಕವಾಗಿದೆ. ಈ ವಿಭಾಗದಲ್ಲಿ ಮೊದಲ ರನ್ನರ್‌ ಅಪ್‌ ಸ್ಥಾನವು ಮರ್ಸಿಡಿಸ್-ಬೆಂಜ್ GLC ಮಿಡ್‌ ಸೈಜ್ SUV‌ ಗೆ ದಕ್ಕಿದ್ದರೆ ಎರಡನೇ ರನ್ನರ್‌ ಅಪ್‌ ಸ್ಥಾನವು BMW X1 ಕಾರಿಗೆ ದೊರೆತಿದೆ. ಕಳೆದ ವರ್ಷದಲ್ಲಿ BMW i7 ನ ಪ್ರತಿಸ್ಪರ್ಧಿಯಾದ ಮರ್ಸಿಡಿಸ್‌ ಬೆಂಜ್‌ EQS 580 ಕಾರು ಪ್ರೀಮಿಯಂ ಕಾರ್‌ ಆಫ್‌ ದ ಈಯರ್‌ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.

ಗ್ರೀನ್ ಕಾರ್‌ ಆಫ್‌ ದ ಈಯರ್‌ 2024: ಹ್ಯುಂಡೈ ಅಯಾನಿಕ್ 5

ಹ್ಯುಂಡೈ ಸಂಸ್ಥೆಯು ಅಯಾನಿಕ್ 5 ಮೂಲಕ ICOTY 2024 ಪ್ರಶಸ್ತಿಯ ಇನ್ನೊಂದು ಗೌರವವನ್ನು ಪಡೆದಿದ್ದು, ಇದಕ್ಕೆ ಗ್ರೀನ್‌ ಕಾರ್‌ ಆಫ್‌ ದಿ ಈಯರ್‌ ಪ್ರಶಸ್ತಿಯು ದೊರೆತಿದೆ. ಸ್ತಳೀಯವಾಗಿ ಸಿದ್ಧಪಡಿಸಿದ ಈ ದೊಡ್ಡ ಕ್ರಾಸ್‌ ಓವರ್‌ EV ಯನ್ನು ಜನವರಿಯಲ್ಲಿ ಅಟೋ ಎಕ್ಸ್ಪೋ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದ್ದು, ಇದಕ್ಕೆ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿಪಡಿಸಲಾಗಿದೆ. ಹ್ಯುಂಡೈ ಸಂಸ್ಥೆಯು ಈಗಾಗಲೇ ಅಯಾನಿಕ್‌ 5 ಕಾರಿನ 1,000 ಕ್ಕೂ ಹೆಚ್ಚಿನ ಯೂನಿಟ್‌ ಗಳನ್ನು ಮಾರಾಟ ಮಾಡಿದೆ. ಇದು ಅನುಕ್ರಮವಾಗಿ BMW i7, MG ಕೋಮೆಟ್ EV, ಮಾತ್ರವಲ್ಲದೆ ಇತರ ಸ್ಪರ್ಧಿಗಳಾದ ಮಹೀಂದ್ರಾ XUV400, ವೋಲ್ವೊ C40 ರೀಚಾರ್ಜ್, ಮತ್ತು BYD ಅಟ್ಟೊ 3 ಇತ್ಯಾದಿ ಕಾರುಗಳನ್ನು ಹಿಂದಿಕ್ಕಿ ಈ ಪ್ರಶಸ್ತಿಯನ್ನು ಪಡೆದಿದೆ.

ಇದು 2023ರಲ್ಲಿ ಬಿಡುಗಡೆಯಾದ ಕಾರುಗಳ ಪೈಕಿ ಅತ್ಯುತ್ತಮ ಕಾರುಗಳೆಂದು ಗುರುತಿಸಲ್ಪಟ್ಟಿದ್ದು ಈ ವರ್ಷದಲ್ಲಿ ಭಾರತದಲ್ಲಿ ಬಿಡುಗಡೆಯಾದ ಹೊಸ ಕಾರುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಎಕ್ಸ್ಟರ್ AMT

Share via

Write your Comment on Hyundai ಎಕ್ಸ್‌ಟರ್

explore similar ಕಾರುಗಳು

ಹುಂಡೈ ಎಕ್ಸ್‌ಟರ್

ಪೆಟ್ರೋಲ್19.4 ಕೆಎಂಪಿಎಲ್
ಸಿಎನ್‌ಜಿ27.1 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ