ಕೌನ್ ಬನೇಗಾ ಕರೋಡ್‌ಪತಿ: 1 ಕೋಟಿ ಗೆದ್ದ ಜಸ್ಕರನ್ ಸಿಂಗ್ ಗೆ ಬೋನಸ್ ಆಗಿ ಸಿಗಲಿದೆ ಹ್ಯುಂಡೈ ಎಕ್ಸ್ಟರ್..!
ರೂ. 7 ಕೋಟಿಯ ಪ್ರಶ್ನೆಗೆ ಸರಿಯಾದ ಉತ್ತರ ನೀಡುವವರಿಗೆ ಬೋನಸ್ ಪ್ರಶಸ್ತಿಯಾಗಿ ಹ್ಯುಂಡೈ ವೆರ್ನಾ ದೊರೆಯಲಿದೆ.
- ಎಕ್ಸ್ಟರ್ ವಾಹನವು ವೆನ್ಯು ಮಾದರಿಯ ಕೆಳಗಿನ ಹಂತದಲ್ಲಿರುವ ಹೊಚ್ಚ ಹೊಸ ಪ್ರವೇಶ ಹಂತದ SUV ಎನಿಸಿದೆ.
- ಇದನ್ನು 5 ವೇರಿಯಂಟ್ ಗಳಲ್ಲಿ ಮಾರಲಾಗುತ್ತದೆ: EX, S, SX, SX (O) ಮತ್ತು SX (O) ಕನೆಕ್ಟ್.
- ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ: 1.2-ಲೀಟರ್ N.A. ಮತ್ತು 1.2-ಲೀಟರ್ ಪೆಟ್ರೋಲ್l+CNG ಪವರ್ ಟ್ರೇನ್.
- 8 ಇಂಚಿನ ಟಚ್ ಸ್ಕ್ರೀನ್, ಡ್ಯುವಲ್ ಕ್ಯಾಮೆರಾ ಡ್ಯಾಶ್ ಕ್ಯಾಮ್ ಮತ್ತು ಆರು ಏರ್ ಬ್ಯಾಗುಗಳನ್ನು ಹೊಂದಿದೆ.
- ರೂ. 6 ರಿಂದ ರೂ. 10.10 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ).
ಅತ್ಯಂತ ಜನಪ್ರಿಯ ಟಿ.ವಿ ಗೇಮ್ ಶೋಗಳಲ್ಲಿ ಒಂದಾಗಿರುವ ಕೌನ್ ಬನೇಗಾ ಕರೋಡ್ ಪತಿ (ಕೆ.ಬಿ.ಸಿ) ಕಾರ್ಯಕ್ರಮದ 15ನೇ ಆವೃತ್ತಿಯು ಸದ್ಯಕ್ಕೆ ಪ್ರಸಾರಗೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ರೂ. 1 ಕೋಟಿ ಗೆದ್ದ ಮೊದಲ ಸ್ಪರ್ಧಿ ಎನಿಸಿದ ಜಸ್ಕರನ್ ಅವರು ಬೋನಸ್ ಪ್ರಶಸ್ತಿಯಾಗಿ ಹೊಚ್ಚ ಹೊಸ ಹ್ಯುಂಡೈ ಎಕ್ಸ್ಟರ್ ಕಾರನ್ನು ಸಹ ಪಡೆದಿದ್ದಾರೆ.
ರೂ. 1 ಕೋಟಿ ಗೆದ್ದ ನಂತರ ಈ ರಸಪ್ರಶ್ನೆ ಕಾರ್ಯಕ್ರಮದಿಂದ ಹೊರ ಬಂದರೂ, ರೂ. 7 ಕೋಟಿ ಪ್ರಶಸ್ತಿಯ ಪ್ರಶ್ನೆಗೆ ಉತ್ತರಿಸಿದ್ದರೆ ಹೊಸ ಹ್ಯುಂಡೈ ವೆರ್ನಾ ವಾಹನವನ್ನು ತನ್ನದಾಗಿಸುತ್ತಿದ್ದರು. ಅವರಿಗೆ ಈ ಮೈಕ್ರೊ SUV ವಾಹನದ ಯಾವ ವೇರಿಯಂಟ್ ಅನ್ನು ನೀಡಲಾಗಿದೆ ಎಂಬ ಕುರಿತು ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಅದು ಫುಲ್ಲಿ ಲೋಡೆಡ್ SX(O) ಕನೆಕ್ಟ್ ಟ್ರಿಮ್ ಆಗಿರಬೇಕೆಂದು ಶಂಕಿಸಲಾಗಿದೆ.
ಹ್ಯುಂಡೈ ಎಕ್ಸ್ಟರ್: ಸಾರಾಂಶ
ಹ್ಯುಂಡೈ ವಾಹನವು ಮೈಕ್ರೊ SUV ವಿಭಾಗದಲ್ಲಿ ಹ್ಯುಂಡೈ ಸಂಸ್ಥೆಯ ಸ್ಪರ್ಧಿಯಾಗಿದ್ದು, ತನ್ನ SUV ಸಾಲಿನಲ್ಲಿ ಪ್ರವೇಶ ಹಂತದ ಹೊಸ ಮಾದರಿ ಎನಿಸಿದೆ (ಈ ಹಿಂದೆ ವೆನ್ಯುಈ ಸ್ಥಾನವನ್ನು ಪಡೆದಿತ್ತು). ಇದು ಗ್ರಾಂಡ್ i10 Nios ವಾಹನದ ಪ್ಲಾಟ್ ಫಾರ್ಮ್ ಅನ್ನೇ ಆಧರಿಸಿದ್ದು, ಒಟ್ಟಾರೆಯಾಗಿ ಪೆಟ್ಟಿಗೆಯಾಕಾರದ ವಿನ್ಯಾಸ ಮತ್ತು ಕ್ಯಾಬಿನ್ ಜೊತೆಗೆ ಬರುತ್ತದೆ.
ಪವರ್ ಟ್ರೇನ್ ಬಗ್ಗೆ..
ಹ್ಯುಂಡೈ ಸಂಸ್ಥೆಯ ಈ SUV ವಾಹನವು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (83PS/114Nm) ಜೊತೆಗೆ ಲಭಿಸುತ್ತಿದ್ದು, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಅಥವಾ 5-ಸ್ಪೀಡ್ AMT ಜೊತೆಗೆ ಇದನ್ನು ಹೊಂದಿಸಲಾಗಿದೆ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಶನ್ ಜೊತೆಗೆ ಹೊಂದಿಸಲಾದ 1.2-ಲೀಟರ್ ಪೆಟ್ರೋಲ್-CNG ಆಯ್ಕೆಯೊಂದಿಗೂ (69PS/95Nm) ಲಭ್ಯ.
ಸಂಬಂಧಿತ: ಹ್ಯುಂಡೈ ಎಕ್ಸ್ಟರ್ ಮೊದಲ ಡ್ರೈವ್ ರಿವ್ಯೂ
ವಿಶೇಷ ಗುಣಲಕ್ಷಣಗಳು
ಹ್ಯುಂಡೈ ಎಕ್ಸ್ಟರ್ ವಾಹನವು 8 ಇಂಚಿನ ಟಚ್ ಸ್ಕ್ರೀನ್, ಚಾಲಕನ ಡಿಜಿಟಲ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ವೈರ್ ಲೆಸ್ ಚಾರ್ಜರ್ ಮತ್ತು ಅಟೋ AC ಯೊಂದಿಗೆ ಬರುತ್ತದೆ. ಸಿಂಗಲ್ ಪೇನ್ ಸನ್ ರೂಫ್, ಪ್ಯಾಡಲ್ ಶಿಫ್ಟರ್ ಗಳು, ಮಳೆಯನ್ನು ಗ್ರಹಿಸುವ ವೈಪರ್ ಗಳಂತಹ ಸೌಲಭ್ಯಗಳು ಇದರಲ್ಲಿ ಲಭ್ಯ.
ಆರು ಏರ್ ಬ್ಯಾಗುಗಳು (ಪ್ರಮಾಣಿತ), ISOFIX ಚೈಲ್ಡ್ ಸೀಟ್ ಮೌಂಟ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಡ್ಯುವಲ್ ಕ್ಯಾಮರ್ ಡ್ಯಾಶ್ ಕ್ಯಾಮ್ ಮತ್ತು ರಿವರ್ಸಿಂಗ್ ಕ್ಯಾಮರಾ ಇತ್ಯಾದಿಗಳ ಮೂಲಕ ಸುರಕ್ಷತೆಗೆ ಇರದಲ್ಲಿ ಒತ್ತು ನೀಡಲಾಗಿದೆ.
ಇದನ್ನು ಸಹ ಓದಿರಿ: ಹ್ಯುಂಡೈ ಎಕ್ಸ್ಟರ್ vs ಟಾಟಾ ಪಂಚ್: ಚಿತ್ರಗಳ ಮೂಲಕ ಹೋಲಿಕೆ
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈಯ ಎಕ್ಸ್ಟರ್ ವಾಹನವು ರೂ. 6 ಲಕ್ಷದಿಂದ ರೂ. 10.10 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ). ಈ ಮೈಕ್ರೊ SUV ಯು ಟಾಟಾ ಪಂಚ್ ಜೊತೆಗೆ ನೇರವಾಗಿ ಸ್ಪರ್ಧಿಸುತ್ತಿದ್ದು, ರೆನಾಲ್ಟ್ ಕೀಗರ್, ನಿಸಾನ್ ಮ್ಯಾಗ್ನೈಟ್, ಸಿಟ್ರಾನ್ C3 ಮತ್ತು ಮಾರುತಿ ಫ್ರಂಕ್ಸ್ ಕ್ರಾಸ್ ಓವರ್ ಇತ್ಯಾದಿಗಳಿಗೂ ಬದಲಿ ವಾಹನವೆನಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯುಂಡೈ ಎಕ್ಸ್ಟರ್ ಆಟೋಮ್ಯಾಟಿಕ್