Login or Register ಅತ್ಯುತ್ತಮ CarDekho experience ಗೆ
Login

ಕಿಯಾ ಇಂಡಿಯಾದಿಂದ ಹೊಸದೊಂದು ದಾಖಲೆ: 2.5 ಲಕ್ಷ ಕಾರುಗಳು ವಿದೇಶಕ್ಕೆ ರಫ್ತು, ಸೆಲ್ಟೋಸ್‌ಗೆ ಅತಿಹೆಚ್ಚಿನ ಬೇಡಿಕೆ..!

published on ಜೂನ್ 19, 2024 07:42 pm by samarth for ಕಿಯಾ ಸೆಲ್ಟೋಸ್

ಕೊರಿಯನ್ ಮೂಲದ ಈ ಕಾರು ತಯಾರಕರು ಭಾರತದಲ್ಲಿ ತಯಾರಿಸಿದ ಕಾರುಗಳನ್ನು ದಕ್ಷಿಣ ಆಫ್ರಿಕಾ, ಚಿಲಿ, ಪೆರಗ್ವೆ ಮತ್ತು ಇತರ ದೇಶಗಳಿಗೆ ರವಾನಿಸುತ್ತಾರೆ.

  • ಕಿಯಾ ತನ್ನ ಅನಂತಪುರದ ಉತ್ಪಾದನಾ ಘಟಕವು 2019 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಕಳೆದ ಐದು ವರ್ಷಗಳಲ್ಲಿ ಇದರಿಂದ 2.5 ಲಕ್ಷ ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ.

  • ಕಿಯಾ ಸೆಲ್ಟೋಸ್ ಈ ರಫ್ತಿನ ಅಂಕಿಅಂಶಕ್ಕೆ 59 ಪ್ರತಿಶತದಷ್ಟು ಕೊಡುಗೆ ನೀಡಿದರೆ, ಸೋನೆಟ್ ಮತ್ತು ಕ್ಯಾರೆನ್ಸ್ ಕ್ರಮವಾಗಿ 34 ಪ್ರತಿಶತ ಮತ್ತು 7 ಪ್ರತಿಶತವನ್ನು ಸೇರಿಸಿದವು.

  • ಕಿಯಾ ತನ್ನ ಕಾರುಗಳನ್ನು ಭಾರತದಿಂದ ಸುಮಾರು 100 ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರವಾನಿಸುತ್ತದೆ.

  • ಕಿಯಾ 2024 ರ ಅಂತ್ಯದ ವೇಳೆಗೆ ಭಾರತದಲ್ಲಿ ಹೆಚ್ಚಿನ ಮೊಡೆಲ್‌ಗಳ ಸ್ಥಳೀಯ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸಿದೆ, ಸ್ಥಳೀಯ EV ಅನ್ನು 2025ಕ್ಕೆ ನಿಗದಿಪಡಿಸಲಾಗಿದೆ.

2019ರಲ್ಲಿ ಪ್ರಾರಂಭವಾದಾಗಿನಿಂದ, ಕಿಯಾ ಇಂಡಿಯಾ ತನ್ನ ಮಾಸ್-ಮಾರ್ಕೆಟ್ ಮತ್ತು ಪ್ರೀಮಿಯಂ ಕೊಡುಗೆಗಳಿಗೆ ಮನೆಮಾತಾಗಿದೆ, ಅದರ ಸಹೋದರ ಬ್ರ್ಯಾಂಡ್ ಹ್ಯುಂಡೈನಂತೆಯೇ. ತೀರಾ ಇತ್ತೀಚೆಗೆ, ಆಂಧ್ರಪ್ರದೇಶದ ಅನಂತಪುರದಲ್ಲಿರುವ ತನ್ನ ದೇಶೀಯ ಉತ್ಪಾದನಾ ಘಟಕದಲ್ಲಿ 2.5 ಲಕ್ಷ ಕಾರುಗಳನ್ನು ರಫ್ತು ಮಾಡುವ ಮೈಲಿಗಲ್ಲನ್ನು ಸಾಧಿಸಿದೆ. ಈ ಒಟ್ಟು ರಫ್ತಿನ ಸುಮಾರು 60 ಪ್ರತಿಶತವನ್ನು ಕಿಯಾ ಸೆಲ್ಟೋಸ್ ಕಾಂಪ್ಯಾಕ್ಟ್ ಎಸ್‌ಯುವಿಯು ತನ್ನದಾಗಿಸಿಕೊಂಡಿದೆ.

ರಫ್ತಿನ ಕುರಿತು

ಕಿಯಾ ಇಂಡಿಯಾ ತನ್ನ ಭಾರತೀಯ ಉತ್ಪಾದನಾ ಘಟಕದಿಂದ ದಕ್ಷಿಣ ಆಫ್ರಿಕಾ, ಚಿಲಿ, ಪೆರಗ್ವೆ ಮತ್ತು ಲ್ಯಾಟಿನ್ ಅಮೇರಿಕಾ ಸೇರಿದಂತೆ 100ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಕಾರುಗಳನ್ನು ರಫ್ತು ಮಾಡುತ್ತದೆ. ಐದು ವರ್ಷಗಳ ಹಿಂದೆ ತನ್ನ ಮೊದಲ ಕಾರನ್ನು ತಯಾರಿಸಿದ್ದ ಅನಂತಪುರದ ಉತ್ಪಾದನಾ ಘಟಕವು ಈಗ ಕಂಪನಿಯ ಜಾಗತಿಕ ನೆಟ್‌ವರ್ಕ್‌ನ ಪ್ರಮುಖ ರಫ್ತು ಕೇಂದ್ರಗಳಲ್ಲಿ ಒಂದಾಗಿದೆ.

ಈ ಉತ್ಪಾದನಾ ಘಟಕವು ಸೆಲ್ಟೋಸ್‌ನೊಂದಿಗೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು ಮತ್ತು ಅಂದಿನಿಂದ ಇನ್ನೂ ಎರಡು ಮೊಡೆಲ್‌ಗಳನ್ನು ತಯಾರಿಸಲು ಪ್ರಾರಂಭಿಸಿದೆ, ಅವುಗಳೆಂದರೆ ಸಬ್‌ 4ಎಮ್‌ ಎಸ್‌ಯುವಿಯಾಗಿರುವ ಸೊನೆಟ್‌ ಮತ್ತು ಎಮ್‌ಪಿವಿಯಾದ ಕ್ಯಾರೆನ್ಸ್. ಇವುಗಳೆರಡು ಇದುವರೆಗಿನ ಒಟ್ಟು ರಫ್ತುಗಳಲ್ಲಿ ಕ್ರಮವಾಗಿ 34 ಪ್ರತಿಶತ ಮತ್ತು 7 ಪ್ರತಿಶತವನ್ನು ಹೊಂದಿದೆ. ಸ್ವಲ್ಪ ಸಮಯದವರೆಗೆ, ಅನಂತಪುರದ ಘಟಕವು ಕಿಯಾ ಕಾರ್ನಿವಲ್‌ನ ಸ್ಥಳೀಯ ಜೋಡಣೆಯನ್ನು ಸಹ ಮಾಡುತ್ತಿತ್ತು, ನಂತರ ಅದನ್ನು ನಿಲ್ಲಿಸಲಾಗಿದೆ, ಆದರೆ ಮುಂದಿನ ಜನರೇಶನ್‌ನ ಪ್ರೀಮಿಯಂ ಎಮ್‌ಪಿವಿಯನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ.

ಕಿಯಾ ಇಂಡಿಯಾ ಲೈನ್‌ಅಪ್‌

ಪ್ರಸ್ತುತ, ಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ನಾಲ್ಕು ಕಾರುಗಳನ್ನು ನೀಡುತ್ತಿದೆ. ಅವುಗಳೆಂದರೆ, ಸೆಲ್ಟೋಸ್, ಸೋನೆಟ್, ಕ್ಯಾರೆನ್ಸ್ ಮತ್ತು ಸಂಪೂರ್ಣ-ನಿರ್ಮಿತ ಆಮದು ಮಾಡಿದ ಎಲೆಕ್ಟ್ರಿಕ್ EV6.

ಭಾರತದಲ್ಲಿ ತನ್ನ ಮೂರು ಇಂಧನ ಚಾಲಿತ ಎಂಜಿನ್ ಮೊಡೆಲ್‌ಗಳೊಂದಿಗೆ, ಕಿಯಾವು ಐದು ಎಂಜಿನ್‌ಗಳನ್ನು ನೀಡುತ್ತದೆ:

ಮೊಡೆಲ್‌

1.2-ಲೀಟರ್‌ ಪೆಟ್ರೋಲ್‌

1.5-ಲೀಟರ್‌ ಪೆಟ್ರೋಲ್‌

1-ಲೀಟರ್‌ ಟರ್ಬೋ ಪೆಟ್ರೋಲ್‌

1.5-ಲೀಟರ್‌ ಟರ್ಬೋ ಪೆಟ್ರೋಲ್‌

1.5-ಲೀಟರ್‌ ಡೀಸೆಲ್‌

ಸೊನೆಟ್‌

ಸೆಲ್ಟೋಸ್‌

ಕ್ಯಾರೆನ್ಸ್‌

iMT ಅಥವಾ ಕ್ಲಚ್-ಪೆಡಲ್ ಟ್ರಾನ್ಸ್‌ಮಿಷನ್ ಇಲ್ಲದೆಯೇ ಮ್ಯಾನ್ಯುವಲ್ ಆಯ್ಕೆಯನ್ನು ನೀಡುವ ಭಾರತದ ಏಕೈಕ ಸಮೂಹ-ಮಾರುಕಟ್ಟೆ ಬ್ರ್ಯಾಂಡ್ ಕಿಯಾ ಆಗಿದೆ. ಇದನ್ನು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಮಾತ್ರ ನೀಡಲಾಗುತ್ತದೆ.

ಇದರೊಂದಿಗೆ, EV6 77.4 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ, ಇದು ಸಿಂಗಲ್ ರಿಯರ್-ವೀಲ್-ಡ್ರೈವ್ (RWD) ಮತ್ತು ಡ್ಯುಯಲ್ ಮೋಟಾರ್ ಆಲ್-ವೀಲ್-ಡ್ರೈವ್ (AWD) ಸೆಟಪ್‌ಗಳೊಂದಿಗೆ ಬರುತ್ತದೆ.

ಇದನ್ನೂ ಓದಿ: Kia Carens ಫೇಸ್‌ಲಿಫ್ಟ್‌ನ ಫೋಟೊಗಳು ಮತ್ತೆ ಲೀಕ್‌, ಈ ಬಾರಿ 360-ಡಿಗ್ರಿ ಕ್ಯಾಮೆರಾದ ಮಾಹಿತಿ ಬಹಿರಂಗ

ಬೆಲೆಗಳು

ಕಿಯಾ ಇಂಡಿಯಾದ ಕಾರುಗಳು ವಿವಿಧ ಸೆಗ್ಮೆಂಟ್‌ಗಳನ್ನು ಮತ್ತು ವಿವಿಧ ಬೆಲೆಗಳನ್ನು ಒಳಗೊಂಡಿದೆ. ಪ್ರತಿ ಸ್ಥಳೀಯವಾಗಿ ನಿರ್ಮಿಸಿದ ಮತ್ತು ರಫ್ತು ಮಾಡಲಾದ ಕಿಯಾ ಮೊಡೆಲ್‌ನ ಭಾರತೀಯ ಬೆಲೆ ಶ್ರೇಣಿ ಇಲ್ಲಿದೆ:

ಮೊಡೆಲ್‌

ಎಕ್ಸ್ ಶೋರೂಂ ಬೆಲೆಗಳು (ದೆಹಲಿ)

ಕಿಯಾ ಸೊನೆಟ್‌

7.99 ಲಕ್ಷ ರೂ.ನಿಂದ 15.75 ಲಕ್ಷ ರೂ.

ಕಿಯಾ ಸೆಲ್ಟೋಸ್‌

10.90 ಲಕ್ಷ ರೂ.ನಿಂದ 20.35 ಲಕ್ಷ ರೂ.

ಕಿಯಾ ಕ್ಯಾರೆನ್ಸ್‌

10.52 ಲಕ್ಷ ರೂ.ನಿಂದ 19.67 ಲಕ್ಷ ರೂ.

ಕಿಯಾ ಇಂಡಿಯಾದ ಭವಿಷ್ಯದ ಯೋಜನೆಗಳು

ಹೊಸ ತಲೆಮಾರಿನ ಕಾರ್ನಿವಲ್ ಮತ್ತು ಅದರ ಎಲೆಕ್ಟ್ರಿಕ್ ಫ್ಲ್ಯಾಗ್‌ಶಿಪ್ಆದ EV9 ಎಸ್‌ಯುವಿಯಿಂದ ಪ್ರಾರಂಭವಾಗಿ ಕೊರಿಯನ್ ಕಾರು ತಯಾರಕರು ಮುಂದಿನ ಒಂದೆರಡು ವರ್ಷಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಾಕಷ್ಟು ಸಂಖ್ಯೆಯ ಹೊಸ ಮೊಡೆಲ್‌ಗಳನ್ನು ಹೊಂದಿದ್ದಾರೆ. ನಾವು ಕಿಯಾ ಮೈಕ್ರೋ-ಎಸ್‌ಯುವಿ (ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್‌ಗೆ ಸಮನಾದ ಮತ್ತು ಪ್ರತಿಸ್ಪರ್ಧಿ) ಮತ್ತು ಎಲೆಕ್ಟ್ರಿಕ್ ಕ್ಯಾರೆನ್ಸ್ ಮತ್ತು ಸೆಲ್ಟೋಸ್‌ನ ಎಲೆಕ್ಟ್ರಿಕ್ ಆವೃತ್ತಿಯಂತಹ ಸ್ಥಳೀಯ ಇವಿಗಳ ಪರಿಚಯವನ್ನು ನಿರೀಕ್ಷಿಸುತ್ತಿದ್ದೇವೆ.

ಇನ್ನಷ್ಟು ಓದಿ: ಸೆಲ್ಟೋಸ್ ಆಟೋಮ್ಯಾಟಿಕ್‌

s
ಅವರಿಂದ ಪ್ರಕಟಿಸಲಾಗಿದೆ

samarth

  • 35 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಕಿಯಾ ಸೆಲ್ಟೋಸ್

Read Full News

explore similar ಕಾರುಗಳು

ಕಿಯಾ ಸೆಲ್ಟೋಸ್

ಡೀಸಲ್19.1 ಕೆಎಂಪಿಎಲ್
ಪೆಟ್ರೋಲ್17.7 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ