ನವೀಕೃತ ಕಿಯಾ ಸೆಲ್ಟೋಸ್ ಜಿಟಿ ಲೈನ್ ಮತ್ತು ಟೆಕ್ ಲೈನ್ ವ್ಯತ್ಯಾಸಗಳ ಅನ್ವೇಷಣೆ
ಸೆಲ್ಟೋಸ್ ಅನ್ನು ಯಾವಾಗಲೂ ಟೆಕ್ ಲೈನ್ ಮತ್ತು ಜಿಟಿ ಲೈನ್ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದ್ದು, ಎರಡನೆಯದು ಈಗ ವಿಶಿಷ್ಟವಾದ ಹೊರಭಾಗವನ್ನು ಪಡೆಯುತ್ತಿದೆ
-
ಕಿಯಾ ಇಂಡಿಯಾ-ಸ್ಪೆಕ್ ನವೀಕೃತ ಸೆಲ್ಟೋಸ್ ಅನ್ನು ಅನಾವರಣಗೊಳಿಸಿದ್ದು ಸದ್ಯದಲ್ಲಿಯೇ ಬೆಲೆಯನ್ನು ಬಹಿರಂಗಪಡಿಸಲಿದೆ.
-
ಇದು ಟೆಕ್ ಲೈನ್, ಜಿಟಿ ಲೈನ್ ಮತ್ತು ಎಕ್ಸ್ ಲೈನ್ ಎಂಬ ಮೂರು ವಿಶಾಲ ಟ್ರಿಮ್‌ಗಳಲ್ಲಿ ಲಭ್ಯವಿದೆ.
-
ಜಿಟಿ ಲೈನ್ ಯಾವಾಗಲೂ ಸೆಲ್ಟೋಸ್ ಎಸ್‌ಯುವಿಯ ಸ್ಪೋರ್ಟಿಯರ್ ಆವೃತ್ತಿಯಾಗಿದ್ದು ಇದು ಈಗ ವಿಭಿನ್ನ ಬಂಪರ್‌ಗಳು ಮತ್ತು ಡ್ಯುಯಲ್ ಟಿಪ್ ಎಕ್ಸಾಸ್ಟ್‌ನೊಂದಿಗೆ ಬರುತ್ತಿದೆ.
-
ಎಕ್ಸ್-ಲೈನ್ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಜಿಟಿ ಲೈನ್ ಅನ್ನು ಆಧರಿಸಿದೆ.
-
ಇದು ರೂ. 11 ಲಕ್ಷದ (ಎಕ್ಸ್-ಶೋರೂಮ್) ಆರಂಭಿಕ ಬೆಲೆಯನ್ನು ಹೊಂದಿರಬಹುದೆಂದು ನಿರೀಕ್ಷಿಸಲಾಗಿದೆ.
ಈ 2023 ಕಿಯಾ ಸೆಲ್ಟೋಸ್ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು ಈ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಬುಕ್ಕಿಂಗ್‌ಗಳು ತೆರೆದಿದೆ. ಕಾರು ತಯಾರಕರು ಈಗಾಗಲೇ ಇದರ ಬೆಲೆಯನ್ನು ಹೊರತುಪಡಿಸಿ ಎಲ್ಲಾ ವಿವರಗಳನ್ನು ಬಹಿರಂಗಪಡಿಸಿದ್ದಾರೆ ಮತ್ತು ಇನ್ನೂ ಎರಡು ವಿಶಾಲ ಟ್ರಿಮ್‌ಗಳಲ್ಲಿ ನವೀಕೃತ ಸೆಲ್ಟೋಸ್ ಅನ್ನು ನೀಡುತ್ತಿದ್ದಾರೆ, ಅವುಗಳೆಂದರೆ: ಟೆಕ್ ಲೈನ್ ಮತ್ತು ಜಿಟಿ ಲೈನ್. ನವೀಕರಣದೊಂದಿಗೆ ಕಾರು ತಯಾರಕರು ಎಕ್ಸ್‌ಟೀರಿಯರ್ ವಿನ್ಯಾಸದ ವಿಷಯದಲ್ಲಿ ಎರಡು ಲೈನ್-ಅಪ್‌ಗಳನ್ನು ಹೆಚ್ಚು ವಿಶಿಷ್ಟಗೊಳಿಸಿದ್ದಾರೆ. ಎರಡು ವಿಧದ ಸೆಲ್ಟೋಸ್ ಎಸ್‌ಯುವಿಗಳ ಪ್ರಮುಖ ವ್ಯತ್ಯಾಸಗಳನ್ನು ವಿವರವಾಗಿ ನೋಡೋಣ:
ಎಕ್ಸ್‌ಟೀರಿಯರ್
ಮುಂಭಾಗ
ಮುಂಭಾಗದಲ್ಲಿ, ಎರಡೂ ಟ್ರಿಮ್‌ಗಳು ವಿಭಿನ್ನ ಶೈಲಿಯ ಮುಂಭಾಗದ ಗ್ರಿಲ್‌ಗಳು ಮತ್ತು ಬಂಪರ್‌ಗಳನ್ನು ಪಡೆಯುತ್ತವೆ. ಹೆಡ್ ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳು ಒಂದೇ ರೀತಿಯದ್ದಾಗಿವೆ. ಎರಡೂ ಒಂದೇ ರೀತಿಯಾಗಿ ಲಂಬವಾಗಿ-ಜೋಡಿಸಲಾದ ಫಾಗ್ ಲ್ಯಾಂಪ್‌ಗಳನ್ನು ಪಡೆಯುತ್ತವೆ ಆದರೆ ಜಿಟಿ ಲೈನ್‌ನಲ್ಲಿ ಕೆಳಭಾಗದಲ್ಲಿದ್ದು ಹೆಚ್ಚುವರಿ ಕ್ಲಾಡಿಂಗ್ ಅನ್ನು ಪಡೆಯುತ್ತವೆ. ಹೆಚ್ಚಿನ ಸ್ಪೋರ್ಟಿನೆಸ್‌ಗಾಗಿ, ಜಿಟಿ ಲೈನ್‌ನ ಬಂಪರ್ ಹೆಚ್ಚು ಪ್ರಮುಖವಾದ ಏರ್‌ಡ್ಯಾಮ್ ಅನ್ನು ಹೊಂದಿದೆ ಆದರೆ ಮುಂಭಾಗದ ಸ್ಕಿಡ್ ಪ್ಲೇಟ್ ಟೆಕ್ ಲೈನ್‌ನಲ್ಲಿರುವಂತೆ ಕಂಡುಬರುವುದಿಲ್ಲ.
ಸೈಡ್
ಪಾರ್ಶ್ವದಲ್ಲಿ ಅಲಾಯ್ ವ್ಹೀಲ್‌ಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ವ್ಯತ್ಯಾಸವಿಲ್ಲ. ಎರಡೂ ವೇರಿಯೆಂಟ್‌ಗಳು ವಿಭಿನ್ನ ಶೈಲಿಯ ಅಲಾಯ್ ವ್ಹೀಲ್‌ಗಳನ್ನು ಪಡೆದಿದ್ದು ಅವು ಜಿಟಿ ಲೈನ್‌ನಲ್ಲಿ ದೊಡ್ಡದಾಗಿರುತ್ತವೆ, ಅಂದರೆ –-17-ಇಂಚಿನ ಬದಲಾಗಿ 18 ಇಂಚಿನ ಚಕ್ರಗಳು.
ಹಿಂಭಾಗ
ಹಿಂಭಾಗದ ಪ್ರೊಫೈಲ್‌ನ ಒಟ್ಟಾರೆ ವಿನ್ಯಾಸವು ಸಾಕಷ್ಟು ಹೋಲುತ್ತವೆ. ಎರಡೂ ಒಂದೇ ರೀತಿಯ ಸಂಪರ್ಕಿತ ಟೈಲ್ ಲ್ಯಾಂಪ್ ಸೆಟಪ್ ಮತ್ತು ಒಂದೇ ರೀತಿಯ ಹಿಂಭಾಗದ ಸ್ಪಾಯ್ಲರ್ ಅನ್ನು ಪಡೆಯುತ್ತವೆ. ಆದರೆ ಬಂಪರ್ ವಿಷಯಕ್ಕೆ ಬಂದಾಗ ವಿನ್ಯಾಸವು ಸಂಪೂರ್ಣವಾಗಿ ಬದಲಾಗುತ್ತದೆ. ಟೆಕ್ ಲೈನ್ ದಪ್ಪವಾದ ಹೊದಿಕೆಯೊಂದಿಗೆ ಸರಳವಾಗಿ ಕಾಣುವ ಬಂಪರ್ ವಿನ್ಯಾಸವನ್ನು ಪಡೆದರೆ, ಜಿಟಿ ಲೈನ್ ಅದರ ಡ್ಯುಯಲ್ ಎಕ್ಸಾಸ್ಟ್‌ನೊಂದಿಗೆ ಸ್ಪೋರ್ಟಿ ವಿಧಾನವನ್ನು ಹೊಂದುತ್ತದೆ ಮತ್ತು ಸ್ಪೋರ್ಟಿಯರ್ ವಿನ್ಯಾಸದ ವಿವರಗಳೊಂದಿಗೆ ಕಡಿಮೆ ಪ್ರಮುಖವಾದ ಸ್ಕಿಡ್ ಪ್ಲೇಟ್ ಅನ್ನು ಪಡೆಯುತ್ತದೆ.
ಇಂಟೀರಿಯರ್
ಕ್ಯಾಬಿನ್
2023 ಕಿಯಾ ಸೆಲ್ಟೋಸ್‌ನ ಟೆಕ್‌ಲೈನ್ ವೇರಿಯೆಂಟ್‌ಗಳಲ್ಲಿ ಕಪ್ಪು ಮತ್ತು ಕಂದು ಕ್ಯಾಬಿನ್ ಥೀಮ್ ಅನ್ನು ಡ್ಯಾಶ್‌ಬೋರ್ಡ್‌ನಲ್ಲಿ ಪಡೆದರೆ ಜಿಟಿ ಲೈನ್ ಸಂಪೂರ್ಣ ಕಪ್ಪು ಕ್ಯಾಬಿನ್ ಅನ್ನು ಪಡೆಯುತ್ತದೆ. ಇವೆರಡರ ನಡುವೆ ಕ್ಯಾಬಿನ್ ವಿನ್ಯಾಸ ಅಥವಾ ಲೇಔಟ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಕೆಳಭಾಗದಲ್ಲಿ ವಿಭಿನ್ನ ಬ್ಯಾಡ್ಜಿಂಗ್‌ನೊಂದಿಗೆ ಅವು ಒಂದೇ ರೀತಿಯ ಸ್ಟೀರಿಂಗ್ ಚಕ್ರವನ್ನು ಸಹ ಪಡೆಯುತ್ತವೆ.
ಸೀಟುಗಳು
ಟೆಕ್ ಲೈನ್‌ನಲ್ಲಿ, ಪಿಲ್ಲರ್‌ಗಳು ಮತ್ತು ರೂಫ್‌ಗಳ ಮೇಲೆ ಕೆನೆ ವರ್ಣವನ್ನು ಹೊಂದಿರುವ ಮತ್ತು ಎಲ್ಲಾ ಆಸನಗಳ ಮೇಲೆ ಕಂದು ಬಣ್ಣದ ಹೊದಿಕೆಯನ್ನು ನೋಡಬಹುದಾಗಿದ್ದು ಇದು ಹೆಚ್ಚು ಗಾಳಿಯ ಅನುಭವವನ್ನು ನೀಡುತ್ತದೆ. ಮತ್ತೊಂದೆಡೆ ಜಿಟಿ ಲೈನ್ ಸಂಪೂರ್ಣ ಕಪ್ಪು ಹೊದಿಕೆಯನ್ನು ಹೊಂದಿದ್ದು ಈ ಚಿತ್ರದಲ್ಲಿ ಕಾಣಸಿಗುವಂತೆ ಬಿಳಿ ಬಣ್ಣದ ಔಟ್‌ಲೈನ್ ಅನ್ನು ಪಡೆಯುತ್ತದೆ, ಕ್ಯಾಬಿನ್ ಅನ್ನು ಹೆಚ್ಚು ಸ್ಪೋರ್ಟಿಯಾಗಿ ಕಾಣುವಂತೆ ಮಾಡಲು ಕಂಬಗಳು ಮತ್ತು ರೂಫ್‌ಗಳ ಮೇಲೆ ಅದೇ ಕಪ್ಪು ಬಣ್ಣವನ್ನು ನೀಡಲಾಗಿದೆ.
ಫೀಚರ್‌ಗಳು
ಈ ಎರಡೂ ಟ್ರಿಮ್-ಲೈನ್‌ಗಳು ಸುಸಜ್ಜಿತವಾಗಿವೆ. ಈ ಜಿಟಿ ಲೈನ್ ಕೇವಲ ಒಂದು ವೇರಿಯೆಂಟ್ ಅನ್ನು ಮಾತ್ರ ಪಡೆಯುತ್ತದೆ - GTX ಪ್ಲಸ್, ಇದು ಡ್ಯುಯಲ್-ಇಂಟಿಗ್ರೇಟೆಡ್ 10.25-ಇಂಚಿನ ಡಿಸ್‌ಪ್ಲೇಗಳು (ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಡ್ಯುಯಲ್ ಝೋನ್ ಕ್ಲೈಮೆಟ್ ಕಂಟ್ರೋಲ್, ವಿಹಂಗಮ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಆ್ಯಂಬಿಯೆಂಟ್ ಲೈಟಿಂಗ್, ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೇಷರ್ ಮಾನಿಟರಿಂಗ ಸಿಸ್ಟಮ್ (TPMS), ಆಲ್-ವ್ಹೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ರಿಯರ್ ವ್ಯೂ ಕ್ಯಾಮರಾದಂತಹ ಫೀಚರ್‌ಗಳೊಂದಿಗೆ ಟಾಪ್-ಸ್ಪೆಕ್ ಟೆಕ್ ಲೈನ್ HTX ಪ್ಲಸ್‌ಗೆ ಸಮನಾಗಿರುತ್ತದೆ.
ಇದನ್ನೂ ಓದಿ: ನವೀಕೃತ ಕಿಯಾ ಸೆಲ್ಟೋಸ್ ವೇರಿಯೆಂಟ್‌ವಾರು ಫೀಚರ್‌ಗಳ ಬಹಿರಂಗ
ಆದಾಗ್ಯೂ, ಈ ಜಿಟಿ ಲೈನ್ ವೇರಿಯೆಂಟ್ ಕಪ್ ಹೋಲ್ಡರ್‌ನ ಟಾಂಬರ್ ಕವರ್, ರೇನ್-ಸೆನ್ಸಿಂಗ್ ವೈಪರ್‌ಗಳು, ಆಟೋದೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360-ಡಿಗ್ರಿ ಕ್ಯಾಮರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬಿಮ್ ಅಸಿಸ್ಟ್ ಮತ್ತು ಗಮನಿಸುವಿಕೆಯ ಅಲರ್ಟ್‌ನಂತಹ ADAS ಫೀಚರ್‌ಗಳನ್ನು ಸಹ ಇದು ಪಡೆಯುತ್ತದೆ.
ಪವರ್‌ಟ್ರೇನ್‌ಗಳು
ವಿಶೇಷಣಗಳು |
ಟೆಕ್ ಲೈನ್ |
ಜಿಟಿ ಲೈನ್ |
|||
ಎಂಜಿನ್ |
1.5-ಲೀಟರ್ ಪೆಟ್ರೋಲ್ |
1.5-ಲೀಟರ್ ಟರ್ಬೋ ಪೆಟ್ರೋಲ್ |
1.5-ಲೀಟರ್ ಡಿಸೇಲ್ |
1.5-ಲೀಟರ್ ಟರ್ಬೋ ಪೆಟ್ರೋಲ್ |
1.5-ಲೀಟರ್ ಡಿಸೇಲ್ |
ಟ್ರಾನ್ಸ್‌ಮಿಷನ್ |
6MT/ CVT |
6iMT/ 7DCT |
6iMT/ 6AT |
7DCT |
6AT |
ಪವರ್ |
115PS |
160PS |
116PS |
160PS |
116PS |
ಟಾರ್ಕ್ |
114Nm |
253Nm |
250Nm |
253Nm |
250Nm |
ಜಿಟಿ ಲೈನ್ ಟೆಕ್ ಲೈನ್ ವೇರಿಯೆಂಟ್‌ಗಳೊಂದಿಗೆ ನೀಡಲಾದ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುವುದಿಲ್ಲ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಟರ್ಬೋ-ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್ ಅನ್ನು ಮಾತ್ರ ಪಡೆಯುತ್ತದೆ. ಅಂತೆಯೇ, ಟೆಕ್ ಲೈನ್ ವೇರಿಯೆಂಟ್‌ಗಳು ಜಿಟಿ ಲೈನ್‌ನೊಂದಿಗೆ ನೀಡಲಾದವುಗಳನ್ನು ಹೊರತುಪಡಿಸಿ ಪ್ರತಿಯೊಂದು ಪವರ್‌ಟ್ರೇನ್ ಕಾಂಬೋವನ್ನು ಪಡೆಯುತ್ತದೆ.
ಇದನ್ನೂ ಓದಿ: ನವೀಕೃತ ಕಿಯಾ ಸೆಲ್ಟೋಸ್‌ನೊಂದಿಗೆ ಕಿಯಾದ ಭಾರತೀಯ ಘಟಕ ಪೂರೈಸಲಿದೆ 10 ಲಕ್ಷ ಕಾರುಗಳ ಉತ್ಪಾದನೆ
ನವೀಕೃತ ಸೆಲ್ಟೋಸ್‌ನ ಬೆಲೆಗಳನ್ನು ಇನ್ನೂ ಬಹಿರಂಗಪಡಿಸಬೇಕಾಗಿದ್ದು, ರೂ. 11 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ಬಿಡುಗಡೆಯಾದ ನಂತರ, ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್‌ಗಳೊಂದಿಗೆ ಪೈಪೋಟಿಯನ್ನು ಮುಂದುವರಿಸುತ್ತಿದ್ದು ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಹೋಂಡಾ ಎಲಿವೇಟ್ ಮತ್ತು ಸಿಟಾರನ್ C3 ಏರ್‌ಕ್ರಾಸ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಇನ್ನಷ್ಟು ಇಲ್ಲಿ ಓದಿ : ಸೆಲ್ಟೋಸ್ ಡಿಸೇಲ್