Login or Register ಅತ್ಯುತ್ತಮ CarDekho experience ಗೆ
Login

Kia Sonet ಭಾರತದಲ್ಲಿ ಮತ್ತು ರಫ್ತು ಎರಡರಲ್ಲೂ 400,000 ಯುನಿಟ್‌ಗಳ ಮಾರಾಟ, ಸನ್‌ರೂಫ್ ವೇರಿಯಂಟ್ ಅತ್ಯಂತ ಜನಪ್ರಿಯ

published on ಏಪ್ರಿಲ್ 29, 2024 04:30 pm by rohit for ಕಿಯಾ ಸೊನೆಟ್

63 ಪ್ರತಿಶತ ಖರೀದಿದಾರರು ಸಬ್-4m SUV ಯ ಪೆಟ್ರೋಲ್ ಪವರ್‌ಟ್ರೇನ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ಕಿಯಾ ಹೇಳಿದೆ

  • ಕಿಯಾ 2020 ರಲ್ಲಿ ಭಾರತದಲ್ಲಿ ಸೋನೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತು ಮತ್ತು 2024 ರ ಆರಂಭದಲ್ಲಿ ಫೇಸ್‌ಲಿಫ್ಟ್ ನೀಡಲಾಯಿತು.
  • ಭಾರತದಲ್ಲಿ, 3.17 ಲಕ್ಷಕ್ಕೂ ಹೆಚ್ಚು ಸೋನೆಟ್ SUVಗಳನ್ನು ಮಾರಾಟ ಮಾಡಲಾಗಿದೆ ಮತ್ತು ಸುಮಾರು 86,000 ಯೂನಿಟ್ ಗಳನ್ನು ಇತರ ದೇಶಗಳಿಗೆ ರಫ್ತು ಮಾಡಲಾಗಿದೆ.
  • SUVಯ ಸುಮಾರು 28 ಪ್ರತಿಶತ ಮಾರಾಟ 7-ಸ್ಪೀಡ್ DCT (ಟರ್ಬೊ-ಪೆಟ್ರೋಲ್) ಮತ್ತು 6-ಸ್ಪೀಡ್ AT (ಡೀಸೆಲ್) ನಿಂದ ಬಂದಿದೆ.
  • 23 ಪ್ರತಿಶತ ಸೋನೆಟ್ ಖರೀದಿದಾರರು iMT ಗೇರ್‌ಬಾಕ್ಸ್ ಅನ್ನು ಆಯ್ಕೆ ಮಾಡಿದ್ದಾರೆ.
  • ಈಗಿರುವ ಸೋನೆಟ್‌ನ ಫೀಚರ್ ಗಳಲ್ಲಿ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು, ಆರು ಏರ್‌ಬ್ಯಾಗ್‌ಗಳು ಮತ್ತು ADAS ಸೇರಿವೆ.
  • ಬೆಲೆಯು ರೂ 7.99 ಲಕ್ಷದಿಂದ ಶುರುವಾಗಿ ರೂ 15.75 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.

ಕಿಯಾ ಸೋನೆಟ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್ 2020 ರಲ್ಲಿ ಪರಿಚಯಿಸಲಾಯಿತು, ಆ ಮೂಲಕ ಇದು ಸಬ್-4m SUV ಗಳ ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಪ್ರವೇಶಿಸಿತು. ಸೋನೆಟ್ ಭಾರತದಿಂದ ರಫ್ತು ಮಾಡಲಾದ ಯೂನಿಟ್ ಗಳನ್ನು ಒಳಗೊಂಡಂತೆ ಒಟ್ಟು 400,000 ಕ್ಕಿಂತ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕಿಯಾ ಸೋನೆಟ್ ಖರೀದಿದಾರರು ಇಷ್ಟಪಡುತ್ತಿರುವ ಮಾಡೆಲ್ ಗಳು

ನಾಲ್ಕು ಲಕ್ಷ ಯುನಿಟ್‌ಗಳಲ್ಲಿ, ಕಿಯಾ ಭಾರತದಲ್ಲಿ 317,000 ಸೋನೆಟ್ SUVಗಳನ್ನು ಮಾರಾಟ ಮಾಡಿದೆ ಮತ್ತು ಸುಮಾರು 86,000 ಯೂನಿಟ್ ಗಳನ್ನು ಇತರ ದೇಶಗಳಿಗೆ ರಫ್ತು ಮಾಡಿದೆ. ಭಾರತದಲ್ಲಿ SUV ಅನ್ನು ಮಾರಾಟ ಮಾಡಲು ಪ್ರಾರಂಭಿಸಿದಾಗಿನಿಂದ, 63% ಜನರು ಸನ್‌ರೂಫ್‌ನೊಂದಿಗೆ ಬರುವ ವರ್ಷನ್ ಅನ್ನು ಆಯ್ಕೆ ಮಾಡಿದ್ದಾರೆ ಎಂದು ಕಿಯಾ ಹೇಳಿದೆ. ಅಷ್ಟೇ ಪ್ರತಿಶತ ಜನರು ಸೋನೆಟ್‌ನ ಪೆಟ್ರೋಲ್ ವರ್ಷನ್ ಗಳನ್ನು ಇಷ್ಟಪಟ್ಟಿದ್ದಾರೆ.

ಟ್ರಾನ್ಸ್‌ಮಿಷನ್ ವಿಷಯದಲ್ಲಿ, ಟರ್ಬೊ-ಪೆಟ್ರೋಲ್ ಎಂಜಿನ್‌ನ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಮತ್ತು ಡೀಸೆಲ್ ಎಂಜಿನ್‌ನ 6-ಸ್ಪೀಡ್ AT ಯನ್ನು 28 ಪ್ರತಿಶತದಷ್ಟು ಜನರು ಆಯ್ಕೆ ಮಾಡಿದ್ದಾರೆ. ಹಾಗೆಯೇ, iMT (ಕ್ಲಚ್ ಪೆಡಲ್ ಇಲ್ಲದ ಮಾನ್ಯುಯಲ್) ಅನ್ನು 23 ಪ್ರತಿಶತದಷ್ಟು ಖರೀದಿದಾರರು ಆಯ್ಕೆ ಮಾಡಿದ್ದಾರೆ.

ಸೋನೆಟ್ ನಲ್ಲಿ ಏನೇನು ಫೀಚರ್ ಗಳಿವೆ?

ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇ (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ), ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳೊಂದಿಗೆ ಬರುತ್ತದೆ. ಇದರಲ್ಲಿ ಆಟೋ AC, 4-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಕನೆಕ್ಟೆಡ್ ಕಾರ್ ಟೆಕ್ ಅನ್ನು ಕೂಡ ನೀಡಲಾಗಿದೆ.

ಕಿಯಾ ಸುರಕ್ಷತೆಯ ವಿಷಯದಲ್ಲಿ ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಕೆಲವು ಅಡ್ವಾನ್ಸಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಫೀಚರ್ ಗಳನ್ನು ಪಡೆಯುತ್ತದೆ.

ಇದನ್ನು ಕೂಡ ಓದಿ: ಗ್ಲೋಬಲ್ NCAP ರೇಟಿಂಗ್ ನಲ್ಲಿ ಕಿಯಾ ಕ್ಯಾರೆನ್ಸ್ ಗೆ ಮತ್ತೆ 3 ಸ್ಟಾರ್‌ಗಳು

ಪವರ್‌ಟ್ರೇನ್ ಆಯ್ಕೆಗಳ ವಿವರ

ಈ ಸೆಗ್ಮೆಂಟ್ ನಲ್ಲಿರುವ ಇತರ ಕಾರುಗಳಿಗೆ ಹೋಲಿಸಿದರೆ ಇದು ಹಲವಾರು ಎಂಜಿನ್‌ಗಳು ಮತ್ತು ಗೇರ್‌ಬಾಕ್ಸ್‌ಗಳ ಆಯ್ಕೆಗಳೊಂದಿಗೆ ಬರುತ್ತದೆ, ವಿವರಗಳು ಕೆಳಗಿವೆ:

ಸ್ಪೆಸಿಫಿಕೇಷನ್

1.2-ಲೀಟರ್ N/A ಪೆಟ್ರೋಲ್

1-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ವರ್

83 PS

120 PS

116 PS

ಟಾರ್ಕ್

115 Nm

172 Nm

250 Nm

ಟ್ರಾನ್ಸ್‌ಮಿಷನ್

5-speed MT

5-ಸ್ಪೀಡ್ MT

6-speed iMT, 7-speed DCT

6-ಸ್ಪೀಡ್ iMT, 7-ಸ್ಪೀಡ್ DCT

6-speed MT, 6-speed iMT, 6-speed AT

6-ಸ್ಪೀಡ್ MT, 6-ಸ್ಪೀಡ್ iMT, 6-ಸ್ಪೀಡ್ AT

ಕ್ಲೈಮ್ ಮಾಡಿರುವ ಮೈಲೇಜ್

ಪ್ರತಿ ಲೀಟರ್ ಗೆ 18.83 ಕಿ.ಮೀ

ಪ್ರತಿ ಲೀಟರ್ ಗೆ 18.70 ಕಿ.ಮೀ, ಪ್ರತಿ ಲೀಟರ್ ಗೆ 19.20 ಕಿ.ಮೀ

ಪ್ರತಿ ಲೀಟರ್ ಗೆ 22.30 ಕಿ.ಮೀ (ಮ್ಯಾನುಯಲ್‌), ಪ್ರತಿ ಲೀಟರ್ ಗೆ 18.60 ಕಿ.ಮೀ (ಆಟೋಮ್ಯಾಟಿಕ್‌)

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾ ಸೋನೆಟ್ ಬೆಲೆಯು ರೂ 7.99 ಲಕ್ಷದಿಂದ ರೂ 15.75 ಲಕ್ಷದ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ನಡುವೆ ಇದೆ. ಇದು ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ರೆನಾಲ್ಟ್ ಕಿಗರ್ ನಂತಹ ಕಾರುಗಳೊಂದಿಗೆ ತುಂಬಿದ ಹೆಚ್ಚು ಮಾರಾಟವಾಗುವ ಮತ್ತು ಜನಪ್ರಿಯ ಸೆಗ್ಮೆಂಟ್ ನ ಭಾಗವಾಗಿದೆ. ಸೋನೆಟ್ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಮಹೀಂದ್ರಾ XUV 3XO ಮತ್ತು ಮುಂಬರುವ ಸ್ಕೋಡಾ ಸಬ್-4m SUV ಗೆ ಪ್ರತಿಸ್ಪರ್ಧಿಯಾಗಲಿದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4m ಕ್ರಾಸ್‌ಒವರ್‌ಗಳಿಗೆ ಪರ್ಯಾಯ ಆಯ್ಕೆಯಾಗಿದೆ.

ಇನ್ನಷ್ಟು ಓದಿ: ಸೋನೆಟ್ ಡೀಸೆಲ್

r
ಅವರಿಂದ ಪ್ರಕಟಿಸಲಾಗಿದೆ

rohit

  • 34 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Kia ಸೊನೆಟ್

Read Full News

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ