Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ
ಕಿಯಾ ಸೊನೆಟ್ ಗಾಗಿ anonymous ಮೂಲಕ ನವೆಂಬರ್ 30, 2023 02:41 pm ರಂದು ಪ್ರಕಟಿಸಲಾಗಿದೆ
- 71 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಸೋನೆಟ್ ಅನ್ನು ಭಾರತದಲ್ಲಿ 2020ರಲ್ಲಿ ಬಿಡುಗಡೆ ಮಾಡಲಾಗಿದ್ದು, ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಇದು ಪರಿಷ್ಕರಣೆಗೆ ಒಳಗಾಗಿದೆ
- ಪರಿಷ್ಕೃತ ಗ್ರಿಲ್, ನವೀಕರಿಸಿದ LED DRL ಗಳು ಮತ್ತು ಹೊಸ ಸಂಪರ್ಕಿತ LED ಟೇಲ್ ಲ್ಯಾಂಪ್ ಗಳು ಈ ಬದಲಾವಣೆಯ ಪಟ್ಟಿಯಲ್ಲಿ ಸೇರಿವೆ.
- ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ನವೀನ ಕ್ಯಾಬಿನ್ ಥೀಮ್ ಹೊರತುಪಡಿಸಿ ಒಟ್ಟಾರೆಯಾಗಿ ಹಳೆಯ ಕ್ಯಾಬಿನ್ ಅನ್ನೇ ಉಳಿಸಿಕೊಳ್ಳಲಾಗಿದೆ.
- ಸೆಮಿ ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮರಾ ಮತ್ತು ADAS ತಂತ್ರಜ್ಞಾನವನ್ನು ಇದು ಪಡೆಯಲಿದೆ.
- ಕಿಯಾ ಸೋನೆಟ್ ಫೇಸ್ ಲಿಫ್ಟ್ ವಾಹನವು ಈಗಿನ ಮಾದರಿಯಲ್ಲಿ ಇರುವಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಪವರ್ ಟ್ರೇನ್ ಗಳನ್ನು ಮುಂದುವರಿಸಲಿದೆ.
ಕಿಯಾ ಸೋನೆಟ್ ಫೇಸ್ ಲಿಫ್ಟ್ ವಾಹನವು ಭಾರತದಲ್ಲಿ ಡಿಸೆಂಬರ್ 14ರಂದು ಅನಾವರಣಗೊಳ್ಳಲಿದ್ದು, 2024ರ ಆರಂಭದಲ್ಲಿ ಇದರ ಬೆಲೆಯನ್ನು ಘೋಷಿಸಲಾಗುತ್ತದೆ. ಈ ಜನಪ್ರಿಯ ಸಬ್ 4m SUV ವಾಹನವು 2020ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ ನಂತರ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಪರಿಷ್ಕರಣೆಗೆ ಒಳಗಾಗಿದೆ. ಒಟ್ಟಾರೆಯಾಗಿ ದೊಡ್ಡ ಗಾತ್ರದ ಸೆಲ್ಟೋಸ್ ಕಾರಿನಿಂದ ಒಂದಷ್ಟು ಶೈಲಿಯನ್ನು ಇದು ಎರವಲು ಪಡೆದಿದೆ.
ಕಿಯಾ ಸೋನೆಟ್ ಫೇಸ್ ಲಿಫ್ಟ್ ವಾಹನದ ಹೊರಾಂಗಣ
ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರು ಪರೀಕ್ಷಾರ್ಥ ಓಡಾಟದ ವೇಳೆ ಈಗಾಗಲೇ ಅನೇಕ ಬಾರಿ ಕಾಣಿಸಿಕೊಂಡಿದ್ದು, ಚೀನಾಕ್ಕೆ ಸೀಮಿತವಾಗಿರುವ ಮಾದರಿಯು ಮರೆಮಾಚದ ಸ್ಥಿತಿಯಲ್ಲಿಯೇ ಕಾಣಿಸಿಕೊಂಡಿದೆ. ಇನ್ಸರ್ಟ್ ಗಳ ಜೊತೆಗೆ ಹೊಸ ಗ್ರಿಲ್, ಪರಿಷ್ಕೃತ LED ಹೆಡ್ ಲ್ಯಾಂಪ್ ಗಳು ಮತ್ತು ಇನ್ನಷ್ಟು ಕೆಳಭಾಗದತ್ತ ವಿಸ್ತರಿಸಲಾಗಿರುವ DRLಗಳು - ಹೀಗೆ ವಿನ್ಯಾಸದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಇದರಲ್ಲಿ ಫಾಗ್ ಲ್ಯಾಂಪ್ ಮರೆಯಾಗಿದೆ. ರೀಪ್ರೊಫೈಲ್ಡ್ ಬಂಪರ್ ಜೊತೆಗೆ ಹೊಸ ಏರ್ ಡ್ಯಾಮ್ ಬರುವ ಕಾರಣ ಇದನ್ನು ಕೈಬಿಡಲಾಗಿದೆ.
ಹೊಸ ಅಲೋಯ್ ವೀಲ್ ಗಳ ರೂಪದಲ್ಲಿ ಪಕ್ಕದ ಪ್ರೊಫೈಲ್ ನಲ್ಲಿ ಏಕೈಕ ಬದಲಾವಣೆಯನ್ನು ಮಾಡಲಾಗಿದೆ. ಹಿಂಭಾಗದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು. ಹೊಸ ಬಂಪರ್ ಜೊತೆಗೆ, ಸೆಲ್ಟೋಸ್ ನಲ್ಲಿರುವಂತೆಯೇ ಹೊಸ ಸಂಪರ್ಕಿತ LED ಟೇಲ್ ಲ್ಯಾಂಪ್ ಗಳನ್ನು ಇವು ಒಳಗೊಂಡಿವೆ.
ಕಿಯಾ ಸೋನೆಟ್ ಒಳಾಂಗಣದಲ್ಲಿ ಪರಿಷ್ಕರಣೆ
ಹೊಸ ಸೋನೆಟ್ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಲಾಗಿಲ್ಲ. ನಡುಭಾಗದಲ್ಲಿ ತೇಲುವ ಟಚ್ ಸ್ಪ್ರೀನ್ ಇನ್ಫೊಟೈನ್ ಮೆಂಟ್ ಇದ್ದರೆ, ಸೂಕ್ಷ್ಮ ಕಣ್ಣನ್ನು ಹೊಂದಿರುವವರು AC ಕಂಟ್ರೋಲ್ ಗಳಿಗೆ ಮಾಡಲಾಗಿರುವ ಸಣ್ಣಪುಟ್ಟ ಬದಲಾವಣೆಗಳನ್ನು ಗಮನಿಸಬಹುದು. ಸೆಮಿ ಡಿಜಿಟಲ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಮತ್ತು ಹೊಸ ಕಪ್ಪು ಮತ್ತು ಟ್ಯಾನ್ ಕ್ಯಾಬಿನ್ ಥೀಮ್ ಇತ್ಯಾದಿ ಹೊಸತನವನ್ನು ಕ್ಯಾಬಿನ್ ನಲ್ಲಿ ಕಾಣಬಹುದು.
ಪರಿಷ್ಕೃತ ಕಿಯಾ ಸೋನೆಟ್ ಕಾರಿನಲ್ಲಿರುವ ವೈಶಿಷ್ಟ್ಯಗಳು
ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಮಾತ್ರವಲ್ಲದೆ ಕಿಯಾ ಸಂಸ್ಥೆಯು ಹೊಸ ಸೋನೆಟ್ ನಲ್ಲಿ 360 ಡಿಗ್ರಿ ಕ್ಯಾಮರಾವನ್ನು ಸಹ ಅಳವಡಿಸಲಿದೆ. ಈ ಸಬ್ - 4m SUV ಯು ಈಗಾಗಲೇ ವೈರ್ ಲೆಸ್ ಫೋನ್ ಚಾರ್ಜಿಂಗ್, ಸನ್ ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು ಮತ್ತು ಕ್ರೂಸ್ ಕಂಟ್ರೋಲ್ ಇತ್ಯಾದಿಗಳನ್ನು ಹೊಂದಿದ್ದು, ಹೊಸ ಮಾದರಿಯು ಸಹ ಇವುಗಳೊಂದಿಗೆ ರಸ್ತೆಗಿಳಿಯಲಿದೆ.
ಸುರಕ್ಷತೆಯ ದೃಷ್ಟಿಯಿಂದ ಹೇಳುವುದಾದರೆ, ಪರಿಷ್ಕೃತ ಕಿಯಾ ಸೋನೆಟ್ ಕಾರು, ತನ್ನ ದಾಯಾದಿ ಎನಿಸಿರುವ ಹ್ಯುಂಡೈ ವೆನ್ಯು ಮಾದರಿಯಲ್ಲಿ ಇರುವಂತೆಯೇ ಆರು ಏರ್ ಬ್ಯಾಗ್ ಗಳು, ಮುಂಭಾಗದ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ), ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಇತ್ಯಾದಿಗಳನ್ನು ಒಳಗೊಂಡಿರಲಿದೆ.
ಇದನ್ನು ಸಹ ಓದಿರಿ: ರೂ. 1 ಕೋಟಿ ಗೆದ್ದ ನಂತರ ಹ್ಯುಂಡೈ i20 ಪಡೆದ ಕೆ.ಬಿ.ಸಿ 2023 ಸ್ಪರ್ಧಿ ಮಯಾಂಕ್
ಕಿಯಾ ಸೋನೆಟ್ ಫೇಸ್ ಲಿಫ್ಟ್ ವಾಹನದ ಪವರ್ ಟ್ರೇನ್
ಯಾಂತ್ರಿಕವಾಗಿ ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರಿನಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಇದು ಪ್ರಸ್ತುತ ಮಾದರಿಯ ಎಂಜಿನ್ ಆಯ್ಕೆಗಳನ್ನು ಮುಂದುವರಿಸಲಿದೆ: 120 PS 1-ಲೀಟರ್ ಟರ್ಬೊ ಪೆಟ್ರೋಲ್, 116 PS 1.5-ಲೀಟರ್ ಡೀಸೆಲ್, ಮತ್ತು 83 PS 1.2-ಲೀಟರ್ N.A. (ನ್ಯಾಚುರಲಿ ಆಸ್ಪಿರೇಟೆಡ್) ಪೆಟ್ರೋಲ್. ಟ್ರಾನ್ಸ್ ಮಿಶನ್ ಆಯ್ಕೆಗಳು ಟರ್ಬೊ ಪೆಟ್ರೋಲ್ ಗೆ 6-ಸ್ಪೀಡ್ iMT ಮತ್ತು 7-ಸ್ಪೀಡ್ DCT, ಡೀಸೆಲ್ ಗೆ 6-ಸ್ಪೀಡ್ iMT ಮತ್ತು 6-ಸ್ಪೀಡ್ AT ಮತ್ತು N.A. ಪೆಟ್ರೋಲ್ ಗೆ 5-ಸ್ಪೀಡ್ MT ಯನ್ನು ಒಳಗೊಂಡಿವೆ.
ಪರಿಷ್ಕೃತ ಕಿಯಾ ಸೋನೆಟ್ ಕಾರಿನ ಪ್ರತಿಸ್ಪರ್ಧಿಗಳು ಮತ್ತು ನಿರೀಕ್ಷಿತ ಬೆಲೆ
ಹೊಸ ವೈಶಿಷ್ಟ್ಯಗಳ ಸೇರ್ಪಡೆಯ ಕಾರಣ, ಸದ್ಯಕ್ಕೆ ರೂ. 7.79 ಲಕ್ಷಕ್ಕೆ (ಎಕ್ಸ್ - ಶೋರೂಂ ದೆಹಲಿ) ದೊರೆಯುವ ಪ್ರಸ್ತುತ ಮಾದರಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಇದು ಹೊಂದಿರಲಿದೆ. ಕಿಯಾ ಸೋನೆಟ್ ಫೇಸ್ ಲಿಫ್ಟ್ ಕಾರು ಹ್ಯುಂಡೈ ವೆನ್ಯು, ಟಾಟಾ ನೆಕ್ಸನ್, ಮಾರುತಿ ಸುಜುಕಿ ಬ್ರೆಜ್ಜಾ, ಮಹೀಂದ್ರಾ XUV300, ರೆನೋ ಕೈಗರ್, ಮತ್ತು ನಿಸ್ಸಾನ್ ಮ್ಯಾಗ್ನೈಟ್ ಜೊತೆಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೋನೆಟ್ ಅಟೋಮ್ಯಾಟಿಕ್