Kia Syrosನ ಬಿಡುಗಡೆ ದಿನಾಂಕ ಮತ್ತು ಡೆಲಿವರಿ ಕುರಿತ ಮಾಹಿತಿಗಳು ಬಹಿರಂಗ
ಕಿಯಾ syros ಗಾಗಿ dipan ಮೂಲಕ ಜನವರಿ 03, 2025 06:03 am ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಬಿಡುಗಡೆಯ ದಿನಾಂಕದ ಜೊತೆಗೆ, ಈ ಪ್ರೀಮಿಯಂ ಸಬ್-4ಎಮ್ ಎಸ್‌ಯುವಿಯ ಡೆಲಿವೆರಿಯ ಸಮಯವನ್ನು ಸಹ ಕಿಯಾ ತಿಳಿಸಿದೆ
-
ಇದರ ಡೆಲಿವೆರಿಗಳು ಫೆಬ್ರವರಿ ಮಧ್ಯದಲ್ಲಿ ಪ್ರಾರಂಭವಾಗಲಿದ್ದು, ಆದರೆ ಬೆಲೆಯನ್ನು ಫೆಬ್ರವರಿ 1ರಂದು ಪ್ರಕಟಿಸಲಿದ್ದಾರೆ.
-
ಇದು HTK, HTK (O), HTK ಪ್ಲಸ್, HTX, HTX ಪ್ಲಸ್, ಮತ್ತು HTX ಪ್ಲಸ್ (ಒಪ್ಶನಲ್) ಆರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
-
3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್-ಆಕಾರದ ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಪಡೆಯುತ್ತದೆ.
-
ಒಳಭಾಗದಲ್ಲಿ, ಇದು ಡ್ಯುಯಲ್-ಟೋನ್ ಕಪ್ಪು ಮತ್ತು ಬೂದು ಕ್ಯಾಬಿನ್ ಥೀಮ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ.
-
ಫೀಚರ್‌ಗಳಲ್ಲಿ 12.3-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, ಪನರೋಮಿಕ್ ಸನ್‌ರೂಫ್ ಮತ್ತು ಮುಂಭಾಗ ಮತ್ತು ಹಿಂಭಾಗದ ಸೀಟುಗಳಲ್ಲಿ ವೆಂಟಿಲೇಶನ್ ಅನ್ನು ಒಳಗೊಂಡಿವೆ.
-
ಇದರ ಸುರಕ್ಷತಾ ಕಿಟ್ 6 ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ಎಡಿಎಎಸ್ ಅನ್ನು ಒಳಗೊಂಡಿದೆ.
-
ಕಿಯಾ ಸೋನೆಟ್‌ನಿಂದ 1-ಲೀಟರ್ ಟರ್ಬೊ-ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ.
-
ಬೆಲೆಗಳು 9.70 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.
ಕಿಯಾ ಸಿರೋಸ್ ಅನ್ನು 2024ರ ಡಿಸೆಂಬರ್‌ನಲ್ಲಿ ಪ್ರೀಮಿಯಂ ಸಬ್-4ಎಮ್ ಎಸ್‌ಯುವಿಯಾಗಿ ಅನಾವರಣಗೊಳಿಸಲಾಯಿತು, ಇದು ಈ ಕಾರು ತಯಾರಕರ ಭಾರತೀಯ ಕಾರುಗಳ ಪಟ್ಟಿಯಲ್ಲಿ ಸೊನೆಟ್ ಮತ್ತು ಸೆಲ್ಟೊಸ್ ಎಸ್‌ಯುವಿಗಳ ನಡುವೆ ಸ್ಥಾನವನ್ನು ಪಡೆಯುತ್ತದೆ. 2025ರ ಫೆಬ್ರವರಿ 1 ರಂದು ಸಿರೊಸ್ ಅನ್ನು ಬಿಡುಗಡೆಗೊಳಿಸಲಾವುದು ಮತ್ತು ಡೆಲಿವೆರಿಗಳು ಫೆಬ್ರವರಿ ಮಧ್ಯದಲ್ಲಿ ಪ್ರಾರಂಭವಾಗುತ್ತವೆ ಎಂದು ಎಂದು ಕಿಯಾ ಘೋಷಿಸಿದೆ. ಸಿರೋಸ್ ಏನೆಲ್ಲಾ ಫೀಚರ್‌ಗಳನ್ನು ಒಳಗೊಂಡಿದೆ ಎಂಬುದರ ಕುರಿತು ತ್ವರಿತ ನೋಟ ಇಲ್ಲಿದೆ.
ಕಿಯಾ ಸಿರೋಸ್: ಒಂದು ಅವಲೋಕನ
ಕಿಯಾ ಸಿರೋಸ್ ಇವಿ9 ನಿಂದ ಪ್ರೇರಿತವಾದ ಬಾಕ್ಸ್ ಎಸ್‌ಯುವಿ ವಿನ್ಯಾಸವನ್ನು ಹೊಂದಿದೆ, 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು, L- ಆಕಾರದ ಎಲ್‌ಇಡಿ ಟೈಲ್ ಲೈಟ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಇದು ಮುಂಭಾಗ, ಹಿಂಭಾಗ ಮತ್ತು ಸೈಡ್‌ನಲ್ಲಿ ಸಹ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ.
ಒಳಭಾಗದಲ್ಲಿ, ಇದು ಡ್ಯುಯಲ್-ಟೋನ್ ಕಪ್ಪು ಮತ್ತು ಬೂದು ಕ್ಯಾಬಿನ್ ಥೀಮ್‌ನೊಂದಿಗೆ ಹೊಂದಾಣಿಕೆ ಮಾಡಬಹುದಾದ ಮತ್ತು ವೇಂಟಿಲೇಶನ್ ಇರುವ ಮುಂಭಾಗ ಮತ್ತು ಹಿಂಭಾಗದ ಸೀಟುಗಳನ್ನು ನೀಡುತ್ತದೆ. ಇದು 12.3-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, 2-ಸ್ಪೋಕ್ ಸ್ಟೀರಿಂಗ್ ವೀಲ್, ಪನೋರಮಿಕ್ ಸನ್‌ರೂಫ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನೊಂದಿಗೆ ಬರುತ್ತದೆ.
ಸುರಕ್ಷತಾ ಹೈಲೈಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಸೇರಿವೆ. ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಘರ್ಷಣೆ ತಗ್ಗಿಸುವಿಕೆಯ ಸಿಸ್ಟಮ್‌ನಂತಹ ಫೀಚರ್‌ಗಳೊಂದಿಗೆ ಲೆವೆಲ್-2 ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳ (ADAS) ಸೂಟ್‌ನೊಂದಿಗೆ ಬರುತ್ತದೆ.
ಇದನ್ನೂ ಓದಿ: ತನ್ನ ಬೇಸ್ ಮೊಡೆಲ್‌ಗಳಿಂದಲೇ ಈ ಪ್ರೀಮಿಯಮ್ ಫೀಚರ್‌ಗಳನ್ನು ನೀಡಲಿರುವ Kia Syros
ಕಿಯಾ ಸಿರೋಸ್ ಹೆಚ್‌ಟಿಕೆ: ಪವರ್‌ಟ್ರೈನ್ ಆಯ್ಕೆಗಳು
ಕಿಯಾ ಸಿರೋಸ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಅದರ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
120 ಪಿಎಸ್ |
116 ಪಿಎಸ್ |
ಟಾರ್ಕ್ |
172 ಎನ್‌ಎಮ್ |
250 ಎನ್‌ಎಮ್ |
ಟ್ರಾನ್ಸ್‌ಮಿಷನ್* |
6-ಸ್ಪೀಡ್ MT, 7-ಸ್ಪೀಡ್ ಡಿಸಿಟಿ |
6-ಸ್ಪೀಡ್ MT, 7-ಸ್ಪೀಡ್ AT |
* MT = ಮ್ಯಾನುಯಲ್ ಟ್ರಾನ್ಸ್‌ಮಿಷನ್;
AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಕಿಯಾ ಸಿರೋಸ್: ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸಿರೋಸ್‌ನ ಬೆಲೆ 9.70 ಲಕ್ಷ ರೂ.ನಿಂದ 16.50 ಲಕ್ಷ ರೂ.ಗಳ (ಎಕ್ಸ್ ಶೋರೂಂ) ನಡುವೆ ಇರಲಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ, ಆದರೆ ಇದು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು. ಹಾಗೆಯೇ, ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಹ್ಯುಂಡೈ ವೆನ್ಯೂ ಮುಂತಾದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.