Login or Register ಅತ್ಯುತ್ತಮ CarDekho experience ಗೆ
Login

ನಾಳೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಬಹುನಿರೀಕ್ಷಿತ Kia Syros

ಕಿಯಾ syros ಗಾಗಿ rohit ಮೂಲಕ ಜನವರಿ 31, 2025 09:32 pm ರಂದು ಪ್ರಕಟಿಸಲಾಗಿದೆ

ಕಿಯಾ ಸಿರೋಸ್ ಅನ್ನು ಅಭಿವೃದ್ಧಿಪಡಿಸುವಲ್ಲಿ ವಿಭಿನ್ನ ವಿಧಾನವನ್ನು ತೆಗೆದುಕೊಂಡಿದ್ದು, ಇದನ್ನು ಪ್ರೀಮಿಯಂ ಸಬ್ -4 ಮೀ ಎಸ್‌ಯುವಿಯನ್ನಾಗಿ ಮಾಡಿದೆ, ಇದನ್ನು ಭಾರತೀಯ ರೇಂಜ್‌ನಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಇರಿಸಲಾಗುವುದು

  • 25,000 ರೂ.ಗಳಿಗೆ ಬುಕಿಂಗ್‌ಗಳು ತೆರೆದಿರುತ್ತವೆ, ಫೆಬ್ರವರಿಯ ಮಧ್ಯದಲ್ಲಿ ಡೆಲಿವೆರಿಗಳು ಪ್ರಾರಂಭವಾಗುತ್ತವೆ.

  • ಎಕ್ಸ್‌ಟೀರಿಯರ್‌ನ ಹೈಲೈಟ್‌ಗಳಲ್ಲಿ ಎಲ್ಲಾ-ಎಲ್‌ಇಡಿ ಲೈಟಿಂಗ್, 17-ಇಂಚಿನ ಅಲಾಯ್ ವೀಲ್‌ಗಳು ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳು ಸೇರಿವೆ.

  • 12.3-ಇಂಚಿನ ಡ್ಯುಯಲ್ ಪರದೆಗಳು, ಪನೋರಮಿಕ್ ಸನ್‌ರೂಫ್ ಮತ್ತು ಮುಂಭಾಗ ಮತ್ತು ಹಿಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ನಂತಹ ಫೀಚರ್‌ಗಳನ್ನು ಪಡೆಯುತ್ತದೆ.

  • ಸುರಕ್ಷತಾ ಪ್ಯಾಕೇಜ್‌ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿದೆ.

  • ಸೋನೆಟ್‌ನ 1-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಎರವಲು ಪಡೆಯುತ್ತದೆ.

  • 9.70 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಬೆಲೆ ನಿಗದಿಯಾಗಿದೆ.

2024ರ ಡಿಸೆಂಬರ್‌ನಲ್ಲಿ ಮಾಧ್ಯಮಗಳಿಗೆ ಬಹಿರಂಗಪಡಿಸಿದ ನಂತರ ಮತ್ತು 2025 ರ ಆಟೋ ಎಕ್ಸ್‌ಪೋದಲ್ಲಿ ಸಾರ್ವಜನಿಕವಾಗಿ ಪಾದಾರ್ಪಣೆ ಮಾಡಿದ ನಂತರ, ಕಿಯಾ ಸಿರೋಸ್ ಅಂತಿಮವಾಗಿ ನಾಳೆ ಭಾರತದಲ್ಲಿ ಮಾರಾಟಕ್ಕೆ ಬರಲಿದೆ. ಇದು ಕಿಯಾದ ಹೊಸ ಎಸ್‌ಯುವಿಯಾಗಿದ್ದು, ಕಾರು ತಯಾರಕರ ಭಾರತೀಯ ಕಾರುಗಳ ಪಟ್ಟಿಯಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ನಡುವೆ ಇರಲಿದೆ. ಕಿಯಾ ಕಂಪನಿಯು ಸಿರೋಸ್ ಅನ್ನು HTK, HTK (O), HTK ಪ್ಲಸ್, HTX, HTX ಪ್ಲಸ್ ಮತ್ತು HTX ಪ್ಲಸ್ (O) ಎಂಬ ಆರು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಿದೆ. ಇದರ ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿದೆ, ಆದರೆ ಡೆಲಿವೆರಿಗಳು ಫೆಬ್ರವರಿಯ ಮಧ್ಯದಿಂದ ಪ್ರಾರಂಭವಾಗಲಿವೆ. ಸಿರೋಸ್ ಏನನ್ನು ನೀಡುತ್ತದೆ ಎಂಬುದರ ಸಂಕ್ಷಿಪ್ತ ಸಾರಾಂಶ ಇಲ್ಲಿದೆ::

ಕಿಯಾ ಸಿರೋಸ್ ಎಕ್ಸ್‌ಟೀರಿಯರ್‌

ಇದು ಎಸ್‌ಯುವಿಯಂತೆ ಕಾಣುವ ವಿಶಿಷ್ಟವಾದ ಬಾಕ್ಸೀ ವಿನ್ಯಾಸವನ್ನು ಹೊಂದಿದ್ದು, ದೊಡ್ಡ ಕಿಯಾ ಇವಿ9 ನಿಂದ ಸ್ಪಷ್ಟವಾದ ಸ್ಫೂರ್ತಿ ಪಡೆದಿದೆ. ಕಿಯಾ ಇದನ್ನು ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸಜ್ಜುಗೊಳಿಸಿದೆ. Kia EV9.

ಸೈಡ್‌ನಿಂದ ಗಮನಿಸುವಾಗ, ನೀವು ದೊಡ್ಡ ವಿಂಡೋ ಪ್ಯಾನಲ್‌ಗಳು, ಸಿ-ಪಿಲ್ಲರ್ ಬಳಿ ಕಿಟಕಿಯ ರೇಖೆಯಲ್ಲಿ ಒಂದು ಕಿಂಕ್, ಮತ್ತು 17-ಇಂಚಿನ ಅಲಾಯ್ ವೀಲ್‌ಗಳಿಗೆ ಚೌಕಾಕಾರದ ವೀಲ್‌ ಆರ್ಚ್‌ಗಳು ಮತ್ತು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳನ್ನು ಗಮನಿಸಬಹುದು. ಹಿಂಭಾಗದಲ್ಲಿ, ಸಿರೋಸ್ ನಯವಾದ L-ಆಕಾರದ ಎಲ್‌ಇಡಿ ಲೈಟ್‌ಗಳು, ಸಿಲ್ವರ್‌ನಿಂದ ಫಿನಿಶ್‌ ಮಾಡಿದ ಎತ್ತರದ ಸ್ಕಿಡ್ ಪ್ಲೇಟ್‌ನೊಂದಿಗೆ ದಪ್ಪವಾದ ಬಂಪರ್ ಮತ್ತು ಫ್ಲಾಟ್ ಟೈಲ್‌ಗೇಟ್ ಅನ್ನು ಪಡೆಯುತ್ತದೆ.

ಕಿಯಾ ಸಿರೋಸ್‌ ಇಂಟೀರಿಯರ್‌ ಮತ್ತು ಫೀಚರ್‌ಗಳು

ಸಿರೋಸ್ ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಅನ್ನು ಹೊಂದಿದ್ದು, ಇದು ಆಯ್ಕೆ ಮಾಡಿದ ವೇರಿಯೆಂಟ್‌ಅನ್ನು ಅವಲಂಬಿಸಿ ಬದಲಾಗುತ್ತದೆ, ಲೆದರೆಟ್ ಕವರ್‌ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ.

ಫೀಚರ್‌ಗಳ ವಿಷಯದಲ್ಲಿ, ಸಿರೋಸ್ 12.3-ಇಂಚಿನ ಎರಡು ಡಿಸ್‌ಪ್ಲೇಗಳು (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್ಸ್‌ಟ್ರುಮೆಂಟೇಶನ್‌ಗಾಗಿ), ಪನೋರಮಿಕ್ ಸನ್‌ರೂಫ್ ಮತ್ತು ಮುಂಭಾಗ ಮತ್ತು ಹಿಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಫಂಕ್ಷನ್‌ನಿಂದ ಅಲಂಕರಿಸಲ್ಪಟ್ಟಿದೆ. ಇದು ಕ್ಲೈಮೇಟ್‌ ಕಂಟ್ರೋಲ್‌ಗಳಿಗಾಗಿ 5 ಇಂಚಿನ ಸ್ಕ್ರೀನ್‌, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 64-ಬಣ್ಣದ ಆಂಬಿಯೆಂಟ್‌ ಲೈಟಿಂಗ್‌ ಅನ್ನು ಸಹ ಪಡೆಯುತ್ತದೆ. ಪ್ರಯಾಣಿಕರ ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಮುಂಭಾಗ, ಬದಿ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಕೆಲವು ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳು (ADAS) ನೋಡಿಕೊಳ್ಳುತ್ತವೆ.

ಸಂಬಂಧಿತ: Kia Syros ನಿರೀಕ್ಷಿತ ಬೆಲೆಗಳು: ಸಬ್-4m ಎಸ್‌ಯುವಿಯಾದ ಸೋನೆಟ್‌ಗಿಂತ ಎಷ್ಟು ದುಬಾರಿಯಾಗಿದೆ ?

ಕಿಯಾ ಸಿರೋಸ್ ಪವರ್‌ಟ್ರೇನ್

ಕಿಯಾವು ಸೋನೆಟ್‌ನಂತೆಯೇ ಸಿರೋಸ್‌ಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ಒದಗಿಸಿದ್ದು, ಅವುಗಳ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ಸ್ಪೆಶಿಫಿಕೇಶನ್‌

1-ಲೀಟರ್‌ ಟರ್ಬೋ ಪೆಟ್ರೋಲ್‌

1.5-ಲೀಟರ್‌ ಡೀಸೆಲ್‌

ಪವರ್‌

120 ಪಿಎಸ್‌

116 ಪಿಎಸ್‌

ಟಾರ್ಕ್‌

172 ಎನ್‌ಎಮ್‌

250 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನ್ಯುವಲ್‌, 7-ಸ್ಪೀಡ್ ಡಿಸಿಟಿ

6-ಸ್ಪೀಡ್ ಮ್ಯಾನ್ಯುವಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

ಕಿಯಾ ಸಿರೋಸ್ ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಕಿಯಾ ಸಿರೋಸ್‌ನ ಬೆಲೆ 9.7 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ನಿರೀಕ್ಷಿಸಲಾಗಿದೆ. ಇದು ಸ್ಕೋಡಾ ಕೈಲಾಕ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಟಾಟಾ ನೆಕ್ಸಾನ್‌ನಂತಹ ಇತರ ಸಬ್-4ಎಮ್‌ ಎಸ್‌ಯುವಿಗಳೊಂದಿಗೆ ಸ್ಪರ್ಧಿಸಲಿದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Kia syros

V
venkatesan venkatesan
Jan 31, 2025, 12:58:52 PM

Is it possible to fit the cng

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.18.90 - 26.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.21.90 - 30.50 ಲಕ್ಷ*
Rs.9 - 17.80 ಲಕ್ಷ*
ಹೊಸ ವೇರಿಯೆಂಟ್
Rs.44.90 - 55.90 ಲಕ್ಷ*
Rs.75.80 - 77.80 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ