ಮಹೀಂದ್ರಾ ಆಗಸ್ಟ್ 15 ರಂದು ಹೊಸ ಕಾನ್ಸೆಪ್ಟ್ ಕಾರುಗಳ ಪ್ರದರ್ಶನ: ಏನನ್ನು ನಿರೀಕ್ಷಿಸಬಹುದು ?
ಸ್ವಾತಂತ್ರ್ಯೋತ್ಸವದ ಪ್ರದರ್ಶನದಲ್ಲಿ ನಾವು ಆಲ್-ಎಲೆಕ್ಟ್ರಿಕ್ ಥಾರ್ ಮತ್ತು ಸ್ಕಾರ್ಪಿಯೋ ಎನ್‌ನ ಪಿಕಪ್ ಆವೃತ್ತಿಯ ಮೊದಲ ನೋಟವನ್ನು ಕಾಣಬಹುದಾಗಿದೆ
ಸ್ವಾತಂತ್ರ್ಯ ದಿನದ ಆಟೋಮೊಬೈಲ್ ಸಂಬಂಧಿತ ಪ್ರದರ್ಶನವನ್ನು ಮಹೀಂದ್ರಾ 2020 ರಿಂದ ಸಂಪ್ರದಾಯದಂತೆ ಮುಂದುವರಿಸಿಕೊಂಡು ಬಂದಿದೆ. ಅದರ ಇತ್ತೀಚಿನ ಟೀಸರ್‌ಗಳ ಆಧಾರದ ಮೇಲೆ ಈ ಆಗಸ್ಟ್ 15 ಕ್ಕೆ ಎರಡು ಹೊಸ ಕಾನ್ಸೆಪ್ಟ್‌ನ ಪ್ರದರ್ಶನವನ್ನು ದೃಢೀಕರಿಸಲಾಗಿದ್ದು ಇವೆರಡೂ ಸಂಪೂರ್ಣ ಎಲೆಕ್ಟ್ರಿಕ್ ಆಗಿರಬಹುದು ಎಂದು ನಿರೀಕ್ಷಿಸಿದ್ದೇವೆ. ಆದ್ದರಿಂದ ನಾಳೆ ನಡೆಯಲಿರುವ ಈ ಈವೆಂಟ್‌ನಿಂದ ನೀವು ಏನನ್ನು ನಿರೀಕ್ಷಿಸಬಹುದು ಎಂಬುದರ ವಿವರ ಇಲ್ಲಿದೆ:
ಥಾರ್.E : ಥಾರ್‌ನ ಎಲೆಕ್ಟ್ರಿಕ್ ಆವೃತ್ತಿ⚡
ಮಹೀಂದ್ರಾ ಒಂದು ಕಿರು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಇದು ಜನಪ್ರಿಯ ‘ಥಾರ್’ನ ಎಲೆಕ್ಟ್ರಿಕ್ ಆವೃತ್ತಿಯಾದ ‘ಥಾರ್.ಇ’ ಎಂಬ ನಾಮಫಲಕವನ್ನು ಹೊಂದಿದೆ. ಇದು ಮೊದಲು 3-ಬಾಗಿಲಿನ ಮಾದರಿಯ ಕಾನ್ಸೆಪ್ಟ್ ಆಗಿ ಪ್ರಾರಂಭಗೊಳ್ಳುವ ಸಾಧ್ಯತೆಯಿದ್ದು ನಂತರ ಉತ್ಪಾದನಾ ಕಾರ್ಯವು ಕೈಗೊಳ್ಳಬಹುದು (ನಿಜವಾಗಿಯೂ ಸಂಭವಿಸುವ ಸಾಧ್ಯತೆಯಿದ್ದರೆ).
ಥಾರ್ ಇವಿಯ ಉತ್ಪಾದನೆಯು ನಿಜವಾಗಿಯೂ ಪ್ರಾರಂಭಗೊಂಡರೆ, ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿರುವ ಜಗತ್ತಿನಾದ್ಯಂತ ಇರುವ ಕೆಲವು ಮಾದರಿಗಳಲ್ಲಿ ಇದರ ಹೆಸರು ಸಹ ಸೇರ್ಪಡೆಗೊಳ್ಳಲಿದೆ. ಇದರಲ್ಲಿರುವ ಇನ್ನೊಂದು ಪ್ರಮುಖಾಂಶವೆಂದರೆ ಇದು 4x4-ಸ್ನೇಹಿಯಾಗಿದೆ.
ಸ್ಕಾರ್ಪಿಯೋ ಎನ್-ಪಿಕಪ್ ಕೂಡ ಚೊಚ್ಚಲ ಪ್ರವೇಶ
ಎಸ್‌ಯುವಿಯು ಪ್ರತಿ ಮಾರುಕಟ್ಟೆಯಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ಈ ಯುಗದಲ್ಲಿ, ಪಿಕಪ್ ಖಂಡಿತವಾಗಿಯೂ ಎದ್ದು ಕಾಣುತ್ತದೆ (ಉದಾಹರಣೆಗೆ ಇಸುಝು ವಿ-ಕ್ರಾಸ್ ಮತ್ತು ಟೊಯೋಟಾ ಹಿಲಕ್ಸ್). ಮಹೀಂದ್ರಾ ತನ್ನನ್ನೇ ತಾನು ನಕಲಿಸಿದಂತೆ ತೋರುತ್ತಿದೆ ಏಕೆಂದರೆ ಇತ್ತೀಚಿಗೆ ಕಾರು ತಯಾರಕರು ಹೊರತಂದ ಟೀಸರ್ ಹೊಸ ಸ್ಕಾರ್ಪಿಯೋ ಎನ್‌ನಿಂದ ಪಿಕಪ್ ಅನ್ನು ಹುಟ್ಟುಹಾಕಿದಂತೆ ಭಾಸವಾಗುತ್ತಿದೆ. ನಾವು ಹೀಗೆ ಹೇಳಲು ಕಾರಣವೆಂದರೆ, ಸ್ಕಾರ್ಪಿಯೋ ಕ್ಲಾಸಿಕ್ ಪೂರ್ವಾವೃತ್ತಿಯು ತನ್ನದೇ ಆದ ಪಿಕಪ್ ಆವೃತ್ತಿಯನ್ನು ಹೊಂದಿದ್ದು ಅದು ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮವಾದ ಯಶಸ್ಸನ್ನು ಅನುಭವಿಸಿದೆ.
ಸ್ಕಾರ್ಪಿಯೋ ಎನ್‌ನ ಪಿಕಪ್ ಎಲೆಕ್ಟ್ರಿಕ್ ವಾಹನ ಇನ್ನಷ್ಟು ಉತ್ತವಾಗಿರುವ ಸಾಧ್ಯತೆಯಿದೆ. ಇದು ಮಹೀಂದ್ರಾದ ಹೊಸ INGLO ಪ್ಲ್ಯಾಟ್‌ಫಾರ್ಮ್‌ನ ಆವೃತ್ತಿಯನ್ನು ಆಧರಿಸಿರಬಹುದು ಎಂಬುದು ನಮ್ಮ ನಿರೀಕ್ಷೆಯಾಗಿದೆ. (ಇದು ಕಾರು ತಯಾರಕರ ಉದ್ದೇಶಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ: IN ಎಂದರೆ ಇಂಡಿಯಾ GLO ಅಂದರೆ ಗ್ಲೋಬಲ್ ).
ಇದನ್ನೂ ಓದಿ: ಮಹೀಂದ್ರಾ ಸ್ಕಾರ್ಪಿಯೋ ಎನ್, ಸ್ಕಾರ್ಪಿಯೋ ಕ್ಲಾಸಿಕ್, ಮತ್ತು XUV700 ಪ್ರಸ್ತುತ ಕಾರು ತಯಾರಕರ 69 ಪ್ರತಿಶತ ಬಾಕಿ
ಮಹೀಂದ್ರಾ ಇವಿ ಕುರಿತು ಸಂಕ್ಷಿಪ್ತ ವಿವರಣೆ
ಮಹೀಂದ್ರಾ ತನ್ನ ಇವಿ ಬ್ರ್ಯಾಂಡ್‌ಗಳನ್ನು ಎರಡು ಉಪ-ಬ್ರ್ಯಾಂಡ್‌ಗಳಾಗಿ ವಿಂಗಡಿಸಿದೆ: XUV ಮತ್ತು BE (ಬಾರ್ನ್ ಎಲೆಕ್ಟ್ರಿಕ್). ಈ XUV.e8, ಇದು ಮಹೀಂದ್ರಾ XUV700 ಯ ಸಂಪೂರ್ಣ-ಎಲೆಕ್ಟ್ರಿಕ್ ಪುನರಾವರ್ತನೆಯಾಗಿದೆ ಮತ್ತು ಇದು 2024 ರ ಅಂತ್ಯದ ವೇಳೆಗೆ ಮಾರಾಟಕ್ಕೆ ಬರಲಿದೆ. ಇದರ BE ಶ್ರೇಣಿಯ ಇವಿಗಳನ್ನು, BE.05 ಬಿಡುಗಡೆಯೊಂದಿಗೆ 2025 ರಿಂದ ಮಾತ್ರ ಪರಿಚಯಿಸಲಾಗುವುದು. ಆಗಸ್ಟ್ 15, 2022 ರಂದು ಮಹೀಂದ್ರಾ ಪ್ರದರ್ಶಿಸಿದ ಐದು ಇವಿಗಳಲ್ಲಿ ಇದೂ ಒಂದಾಗಿದ್ದು, ಇದರ ಪರೀಕ್ಷಾ ವಾಹನಗಳು ಇತ್ತೀಚೆಗೆ ಮೊದಲ ಬಾರಿಗೆ ರಸ್ತೆಯಲ್ಲಿ ಕಂಡುಬಂದಿವೆ.
ಇದನ್ನೂ ಓದಿ: ಮಹೀಂದ್ರಾ XUV.e8, XUV700ನ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿ ಚಿತ್ರ ಸಹಿತ ವಿವರಣೆ
ಇನ್ನಷ್ಟು ಇಲ್ಲಿ ಓದಿ : ಸ್ಕಾರ್ಪಿಯೋ ಎನ್ ಆಟೋಮ್ಯಾಟಿಕ್