ಆಗಸ್ಟ್ 15 ರಂದು ನಿಗದಿಯಾಗಿದ್ದ ಬಿಡುಗಡೆಗೆ ಮೊದಲೇ Mahindra Thar 5-door ನ ಫೋಟೋಗಳು ಆನ್‌ಲೈನ್‌ನಲ್ಲಿ ಲೀಕ್ !
ಥಾರ್ 5-ಡೋರ್‌ಗೆ 360-ಡಿಗ್ರಿ ಕ್ಯಾಮೆರಾ ಮತ್ತು ಪ್ಯಾನರೋಮಿಕ್ ಸನ್‌ರೂಫ್‌ನಂತಹ ಹೊಸ ಫೀಚರ್‌ಗಳ ಸೇರ್ಪಡೆಯನ್ನು ದೃಢಪಡಿಸಲಾಗಿದೆ
- ಥಾರ್ 5-ಬಾಗಿಲು ಆವೃತ್ತಿಯು ಆರು-ಸ್ಲ್ಯಾಟ್ ಗ್ರಿಲ್ ಮತ್ತು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ವೃತ್ತಾಕಾರದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಪಡೆಯುತ್ತದೆ.
- ಇದು 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು ಮತ್ತು ಡ್ಯುಯಲ್-ಝೋನ್ ಎಸಿಯಂತಹ ಸೌಕರ್ಯಗಳನ್ನು ಪಡೆಯಬಹುದು.
- ಇದರ ಸುರಕ್ಷತಾ ಕಿಟ್‌ನಲ್ಲಿ ಆರರವರೆಗೆ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ADAS ಇರಬಹುದು.
- 3-ಡೋರ್ ಥಾರ್ ಜೊತೆಗೆ ನೀಡಲಾದ ಅದೇ 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಬಳಸುವ ಸಾಧ್ಯತೆಯಿದೆ.
- 15 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಬೆಲೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.
ಮಹೀಂದ್ರಾ ಥಾರ್ 5-ಡೋರ್ ಭಾರತೀಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾದ ಮುಂದಿನ ಪ್ರಮುಖ ಬಿಡುಗಡೆಯಾಗಿದೆ. ಎಸ್‌ಯುವಿಯನ್ನು ಹಲವು ಬಾರಿ ಭಾರೀ ಕವರ್‌ನಲ್ಲಿ ಗುರುತಿಸಲಾಗಿದೆ ಮತ್ತು ಇತ್ತೀಚೆಗೆ, ಥಾರ್ 5-ಡೋರ್ ಯಾವುದೇ ಕವರ್ ಇಲ್ಲದ ಅವತಾರದ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ, ಇದು ಮೊದಲ ಬಾರಿಗೆ ಅದರ ಮುಂಭಾಗದ ಬಂಪರ್ ಮತ್ತು ಎಸ್‌ಯುವಿಯ ಸೈಡ್‌ನ ಲುಕ್ ಅನ್ನು ಬಹಿರಂಗಪಡಿಸಿದೆ. ಥಾರ್‌ನ ವಿಸ್ತೃತ ಆವೃತ್ತಿಯು ಈ ಸ್ವಾತಂತ್ರ್ಯ ದಿನದಂದು, ಅಂದರೆ 2024ರ ಆಗಸ್ಟ್ 15ರಂದು ಪಾದಾರ್ಪಣೆ ಮಾಡಲಿದೆ.
ಹೊಸ ಗ್ರಿಲ್ ವಿನ್ಯಾಸ ಮತ್ತು ಫೀಚರ್‌ಗಳ ಅನಾವರಣ
ಅದರ 3-ಡೋರ್‌ನ ಆವೃತ್ತಿಗೆ ಹೋಲಿಸಿದರೆ ಥಾರ್ 5-ಡೋರ್‌ನಲ್ಲಿನ ಮೊದಲ ಗಮನಾರ್ಹ ಬದಲಾವಣೆಯೆಂದರೆ ಹೊಸ ಆರು-ಸ್ಲಾಟ್ ಗ್ರಿಲ್ ಆಗಿದೆ, ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮತ್ತೊಂದು ಹೊಸ ಫೀಚರ್ ಎಂದರೆ ಹೆಡ್‌ಲೈಟ್‌ಗಳು, ಇದು ರೆಗುಲರ್ ಥಾರ್‌ನಲ್ಲಿರುವಂತೆ, ಎಲ್ಇಡಿ ಪ್ರೊಜೆಕ್ಟರ್ ಸೆಟಪ್‌ಗಳಂತೆ ಕಾಣುತ್ತದೆ ಮತ್ತು ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳನ್ನು ಸಂಯೋಜಿಸುತ್ತದೆ. ಇಂಡಿಕೇಟರ್ ಮತ್ತು ಫಾಗ್ ಲ್ಯಾಂಪ್‌ಗಳು ಸ್ಥಾನೀಕರಣವು ಥಾರ್‌ನ 3-ಡೋರ್‌ನ ಆವೃತ್ತಿಯಂತೆಯೇ ಇರುತ್ತದೆ. ವಿಸ್ತೃತ ಥಾರ್‌ನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳ ಒಂದು ಲುಕ್ ಅನ್ನು ನಾವು ಪಡೆದುಕೊಂಡಿದ್ದೇವೆ, ಇವುಗಳನ್ನು ಮೊದಲೇ ಗುರುತಿಸಲಾಗಿದೆ.
ಸೈಡ್‌ನಿಂದ ಗಮನಿಸುವಾಗ, ಥಾರ್ 5-ಡೋರ್ ಆವೃತ್ತಿಯು ರೆಗುಲರ್ ಥಾರ್‌ನಂತೆಯೇ ಅದೇ ಬಾಕ್ಸ್ ವಿನ್ಯಾಸವನ್ನು ಉಳಿಸಿಕೊಂಡಿದೆ, ಆದರೆ ಅದರ ವೀಲ್‌ಬೇಸ್ ಅನ್ನು ಹೆಚ್ಚಿಸಿರುವ ಎರಡು-ಬಾಗಿಲುಗಳ ಸೇರ್ಪಡೆಯಿಂದಾಗಿ ಇದು ಈಗ ದೊಡ್ಡದಾಗಿ ಕಾಣುತ್ತದೆ. ಇದು ಸಿ-ಪಿಲ್ಲರ್-ಮೌಂಟೆಡ್ ಹಿಂಬದಿಯ ಡೋರ್ ಹ್ಯಾಂಡಲ್‌ಗಳನ್ನು ಪಡೆಯುತ್ತದೆ ಮತ್ತು ಚಿತ್ರದಲ್ಲಿ, ಥಾರ್ 5-ಡೋರ್‌ನ ORVM ಅನ್ನು ಕ್ಯಾಮೆರಾದೊಂದಿಗೆ ನೋಡಬಹುದು, ಇದು 360-ಡಿಗ್ರಿ ಸೆಟಪ್ ಅನ್ನು ಒಳಗೊಂಡಿರುತ್ತದೆ ಎಂದು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ, ಒಳಭಾಗವು ರೂಫ್‌ನೊಂದಿಗೆ ಅಳವಡಿಸಲಾದ ಪ್ಯಾನರೋಮಿಕ್ ಸನ್‌ರೂಫ್ ಅನ್ನು ಬಹಿರಂಗಪಡಿಸುತ್ತದೆ, ಆಸನಗಳನ್ನು ಮರಳು ಬಣ್ಣದ ಫ್ಯಾಬ್ರಿಕ್‌ನಿಂದ ಕವರ್ ಮಾಡಲಾಗಿದೆ.
ಇದನ್ನು ಸಹ ಓದಿ: ಉತ್ತರಪ್ರದೇಶದಲ್ಲಿ ಸ್ಟ್ರಾಂಗ್ ಹೈಬ್ರಿಡ್ ಕಾರುಗಳ ಬೆಲೆಯನ್ನು ಕಡಿಮೆ ಮಾಡಿದ ಯೋಗಿ ಸರ್ಕಾರ; ಯಾವ ಕಾರುಗಳ ಬೆಲೆಯಲ್ಲಿ ಕಡಿತ ?
ಇತರ ನಿರೀಕ್ಷಿತ ಫೀಚರ್‌ಗಳು
ಮಹೀಂದ್ರಾ ಥಾರ್ 5-ಡೋರ್ ಅನ್ನು 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಡ್ಯುಯಲ್-ಜೋನ್ ಎಸಿಯಂತಹ ಸೌಕರ್ಯಗಳೊಂದಿಗೆ ಸಜ್ಜುಗೊಳಿಸಬಹುದು. ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಇದು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಪಡೆಯಬಹುದು.
ನಿರೀಕ್ಷಿತ ಪವರ್‌ಟ್ರೈನ್‌ಗಳು
ಥಾರ್ 5-ಡೋರ್ ರೆಗುಲರ್ ಥಾರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಬಹುಶಃ ಸುಧಾರಿತ ಔಟ್‌ಪುಟ್‌ಗಳೊಂದಿಗೆ ಬಳಸಿಕೊಳ್ಳುತ್ತದೆ. ಈ ಆಯ್ಕೆಗಳು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿರುತ್ತವೆ, ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿರಬಹುದು. ಹಿಂಬದಿ-ಚಕ್ರ-ಡ್ರೈವ್ (RWD) ಮತ್ತು ನಾಲ್ಕು-ಚಕ್ರ-ಡ್ರೈವ್ (4WD) ಎರಡೂ ಸಂರಚನೆಗಳನ್ನು ಸಹ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಹೀಂದ್ರಾ ಥಾರ್ 5-ಡೋರ್ 2024ರ ಆಗಸ್ಟ್ 15ರಂದು ಬಿಡುಗಡೆಯಾಗಲಿದ್ದು, ಬಿಡುಗಡೆಯಾದ ಸ್ವಲ್ಪ ಸಮಯದ ನಂತರ ಮಾರುಕಟ್ಟೆಗೆ ಲಗ್ಗೆ ಇಡಬಹುದು ಎಂದು ಅಂದಾಜಿಸಲಾಗಿದೆ. ಮಹೀಂದ್ರಾ ಇದರ ಬೆಲೆಯನ್ನು 15 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭಿಸಬಹುದು. ಇದು ಫೋರ್ಸ್ ಗೂರ್ಖಾ 5-ಡೋರ್ ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಮಾರುತಿ ಜಿಮ್ನಿಗೆ ದೊಡ್ಡ ಪರ್ಯಾಯವಾಗಿದೆ.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡುವುದನ್ನು ಮಿಸ್ ಮಾಡ್ಬೇಡಿ
ಇನ್ನಷ್ಟು ಓದಿ : ಥಾರ್ ಆಟೋಮ್ಯಾಟಿಕ್