Login or Register ಅತ್ಯುತ್ತಮ CarDekho experience ಗೆ
Login

ಥಾರ್ 3-ಡೋರ್ ಗೆ ಹೋಲಿಸಿದರೆ ಈ 10 ಫೀಚರ್ ಗಳನ್ನು ನೀಡುವ Mahindra Thar 5-door

ಮಹೀಂದ್ರ ಥಾರ್‌ ರಾಕ್ಸ್‌ ಗಾಗಿ rohit ಮೂಲಕ ಫೆಬ್ರವಾರಿ 23, 2024 04:51 pm ರಂದು ಪ್ರಕಟಿಸಲಾಗಿದೆ

5-ಡೋರ್ ಥಾರ್, ಪ್ರೀಮಿಯಂ ಲೈಫ್ ಸ್ಟೈಲ್ ಆಫ್‌ರೋಡರ್ ಆಗಿದ್ದು, ಹೆಚ್ಚಿನ ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಗಳನ್ನು ಪಡೆಯುವ ಸಾಧ್ಯತೆಯಿದೆ.

2024 ರ ಅತಿದೊಡ್ಡ ಮತ್ತು ಹೆಚ್ಚು ನಿರೀಕ್ಷಿತ SUV ಬಿಡುಗಡೆಗಳಲ್ಲಿ 5-ಡೋರ್ ಮಹೀಂದ್ರ ಥಾರ್ ಒಂದಾಗಿದೆ. ಇದು ಆಫ್‌ರೋಡಿಂಗ್‌ಗೆ 3-ಡೋರ್ ಥಾರ್ ನಲ್ಲಿ ಇರುವ ಎಲ್ಲಾ ಅಗತ್ಯತೆಗಳನ್ನು ಹೊಂದಿದ್ದರೂ ಕೂಡ, ಹಲವಾರು ಸ್ಪೈ ಶಾಟ್‌ಗಳು ಇದನ್ನು ಇನ್ನೂ ಉತ್ತಮ ರೀತಿಯ ಲೈಫ್ ಸ್ಟೈಲ್ ಆಫ್‌ರೋಡರ್‌ನಂತೆ ನೀಡಲಾಗುವುದು ಎಂದು ಖಚಿತಪಡಿಸಿವೆ. 5-ಡೋರ್ ಥಾರ್ ಅದರ 3-ಡೋರ್ ಥಾರ್ ಗೆ ಹೋಲಿಸಿದರೆ ಪಡೆಯುವ ಎಲ್ಲಾ ಪ್ರೀಮಿಯಂ ಫೀಚರ್ ಗಳ ಪಟ್ಟಿ ಇಲ್ಲಿದೆ:

ಸನ್​ರೂಫ್

3-ಡೋರ್ ಥಾರ್‌ನಲ್ಲಿ ಗ್ರಾಹಕರು ಬಯಸುತ್ತಿದ್ದ ಸನ್‌ರೂಫ್ ಫೀಚರ್ ಅನ್ನು ಮಹೀಂದ್ರಾ ಅಂತಿಮವಾಗಿ ತನ್ನ 5-ಡೋರ್ ವರ್ಷನ್ ನಲ್ಲಿ ಮೆಟಲ್ ಹಾರ್ಡ್ ಟಾಪ್‌ನೊಂದಿಗೆ ನೀಡಲಿದೆ. ಆದರೆ 5-ಡೋರ್ ಥಾರ್ ಫುಲ್ ಪನಾರೊಮಿಕ್ ಯೂನಿಟ್ ಬದಲು ಸಿಂಗಲ್-ಪೇನ್ ಸನ್‌ರೂಫ್ ಅನ್ನು ಮಾತ್ರ ಪಡೆಯುತ್ತದೆ.

ಡ್ಯುಯಲ್-ಝೋನ್ AC

ಮಹೀಂದ್ರಾ ತನ್ನ ಆಧುನಿಕ ಮತ್ತು ಹೆಚ್ಚು ಪ್ರೀಮಿಯಂ SUV ಕೊಡುಗೆಗಳಾದ XUV700 ಮತ್ತು ಸ್ಕಾರ್ಪಿಯೋ N ನಲ್ಲಿ ಕಂಡುಬರುವ ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ನೊಂದಿಗೆ ಲಾಂಗ್-ವೀಲ್ ಬೇಸ್ ಥಾರ್ ಅನ್ನು ಒದಗಿಸುವ ನಿರೀಕ್ಷೆಯಿದೆ. ಮಹಿಂದ್ರಾ ತನ್ನ 3-ಡೋರ್ ಥಾರ್ ನಲ್ಲಿ ಇಲ್ಲದಿರುವ ರಿಯರ್ AC ವೆಂಟ್‌ ಅನ್ನು 5-ಡೋರ್ ಥಾರ್ ನಲ್ಲಿ ನೀಡಿದೆ.

ರಿಯರ್ ಡಿಸ್ಕ್ ಬ್ರೇಕ್ ಗಳು

ಒಂದೆರಡು ಸ್ಪೈ ಚಿತ್ರಗಳಲ್ಲಿ ನೋಡಿದಂತೆ ಆಫ್‌ರೋಡರ್‌ನ 3-ಡೋರ್ ವರ್ಷನ್ ಈ ಸುರಕ್ಷತಾ ತಂತ್ರಜ್ಞಾನವನ್ನು ನೀಡಬಹುದೆಂದು ನಂಬಲಾಗಿದೆ, ಆದರೆ ಅದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಮಹೀಂದ್ರಾ ಅಂತಿಮವಾಗಿ ರಿಯರ್ ಡಿಸ್ಕ್ ಬ್ರೇಕ್‌ಗಳನ್ನು ಥಾರ್‌ನಲ್ಲಿ ನೀಡಲು ರೆಡಿಯಾಗಿದೆ, ಆದರೆ ಇದು ಅದರ ಲಾಂಗ್-ವೀಲ್ ಬೇಸ್ ವರ್ಷನ್ ನಲ್ಲಿ ಮಾತ್ರ.

ಇದನ್ನು ಕೂಡ ಓದಿ: ಈ 14 ಕ್ರೀಡಾಪಟುಗಳಿಗೆ Mahindra ಎಸ್‌ಯುವಿಗಳನ್ನು ಉಡುಗೊರೆಯಾಗಿ ನೀಡಿದ್ದ Anand Mahindra

ದೊಡ್ಡ ಟಚ್‌ಸ್ಕ್ರೀನ್

ಪ್ರಸ್ತುತ ಥಾರ್, 2020 ರಲ್ಲಿ ಪ್ರಾರಂಭವಾದಾಗಿನಿಂದ, ವೈರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಅನ್ನು ನೀಡಿದೆ. ಈಗ, ಅದರ 5-ಡೋರ್ ವರ್ಷನ್ XUV400 EV ಗಿಂತ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಅನ್ನು ನೀಡಲು ರೆಡಿಯಾಗಿದೆ, ಇದು ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಜೊತೆಗೆ ಕೂಡ ಒದಗಿಸಬಹುದು.

ಡಿಜಿಟಲ್ ಡ್ರೈವರ್ ಡಿಸ್ಪ್ಲೇ

ಅದರ ಸ್ಪೈ ಶಾಟ್‌ಗಳಿಂದ ದೃಢೀಕರಿಸಿದಂತೆ 5-ಡೋರ್ ಥಾರ್‌ನಲ್ಲಿ ಲಭ್ಯವಾಗುವ ಮತ್ತೊಂದು ಪ್ರೀಮಿಯಂ ಫೀಚರ್ ಎಂದರೆ XUV400 EV ಯಿಂದ ಪಡೆದಿರುವ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (10.25-ಇಂಚಿನ ಯೂನಿಟ್) ಆಗಿದೆ. ಮತ್ತೊಂದೆಡೆ ಪ್ರಸ್ತುತ ಥಾರ್, ಸೆಂಟರ್ ನಲ್ಲಿ ಕಲರ್ಡ್ MID ಯೊಂದಿಗೆ ಅನಲಾಗ್ ಸೆಟಪ್‌ನೊಂದಿಗೆ ಬರುತ್ತದೆ.

ಇದನ್ನು ಕೂಡ ಓದಿ: ಇನ್ನೂ 2 ಲಕ್ಷಕ್ಕೂ ಹೆಚ್ಚು ಆರ್ಡರ್‌ಗಳನ್ನು ಡೆಲಿವರಿ ಮಾಡಲು ಬಾಕಿ ಉಳಿಸಿಕೊಂಡ Mahindra, ಇದರಲ್ಲಿ Scorpio ಕ್ಲಾಸಿಕ್, ಸ್ಕಾರ್ಪಿಯೋ N ಮತ್ತು Thar ಸಂಖ್ಯೆಯೆ ಅತ್ಯಂತ ಅಧಿಕ..!

ವಿದ್ಯುತ್ ಚಾಲಿತ ಫ್ಯುಯೆಲ್ ಲಿಡ್ ಓಪನರ್

ಥಾರ್ ಮಾಲೀಕರು ಎದುರಿಸುತ್ತಿರುವ ಒಂದು ಸಣ್ಣ ಅನಾನುಕೂಲತೆ ಎಂದರೆ ಫ್ಯುಯೆಲ್ ಲಿಡ್ ಅನ್ನು ಕೀಯೊಂದಿಗೆ ಮಾನ್ಯುಯಲ್ ಆಗಿ ತೆರೆಯುವುದು. ಮಹೀಂದ್ರಾ ಈಗ ಇದರ ಬಗ್ಗೆ ಗಮನಹರಿಸಿದೆ ಮತ್ತು ಲಾಂಗ್-ವೀಲ್ ಬೇಸ್ SUV ಅನ್ನು ವಿದ್ಯುತ್ ಚಾಲಿತ ಫ್ಯುಯೆಲ್ ಲಿಡ್ ಜೊತೆಗೆ ಸಜ್ಜುಗೊಳಿಸಲಿದೆ. ಇದರ ಬಟನ್ ಅನ್ನು ಸ್ಟೀರಿಂಗ್ ವೀಲ್ ನ ಬಲಭಾಗದಲ್ಲಿರುವ ಕಂಟ್ರೋಲ್ ಪ್ಯಾನೆಲ್ ನಲ್ಲಿ ಇರಿಸಲಾಗಿದೆ.

ಮುಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳೊಂದಿಗೆ ರಿವರ್ಸ್ ಕ್ಯಾಮೆರಾ

5-ಡೋರ್ ಥಾರ್ ರಿವರ್ಸಿಂಗ್ ಕ್ಯಾಮೆರಾ ಸೇರಿದಂತೆ ಸುರಕ್ಷತಾ ಫೀಚರ್ ಗಳನ್ನು ವಿಸ್ತರಿಸುತ್ತಿದೆ. 3-ಡೋರ್ ಥಾರ್‌ನಲ್ಲಿ ಲಭ್ಯವಿಲ್ಲದ ಮುಂಭಾಗದ ಪಾರ್ಕಿಂಗ್ ಸೆನ್ಸರ್ ಗಳನ್ನು ಮಹೀಂದ್ರಾ ಇಲ್ಲಿ ನೀಡಲಿದೆ.

ರಿಯರ್ ಸೆಂಟರ್ ಆರ್ಮ್‌ರೆಸ್ಟ್

3-ಡೋರ್ ಥಾರ್‌ಗೆ ಹೋಲಿಸಿದರೆ 5-ಡೋರ್ ಮಾಡೆಲ್ ನಲ್ಲಿ ನೀಡಲಾಗುವ ಸಣ್ಣ ಆದರೆ ಉಪಯುಕ್ತವಾದ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ ಎಂದರೆ ರಿಯರ್ ಸೆಂಟರ್ ಆರ್ಮ್‌ರೆಸ್ಟ್. 3-ಡೋರ್ ಥಾರ್‌ ಎರಡನೇ ಸಾಲಿನಲ್ಲಿ ಎರಡು ಪ್ರತ್ಯೇಕ ಸೀಟ್ ಗಳನ್ನು ಹೊಂದಿರುವುದರಿಂದ, ಅದು ಎರಡೂ ಬದಿಯಲ್ಲಿ ಆರ್ಮ್ ಸಪೋರ್ಟ್ ಅನ್ನು ಮಾತ್ರ ನೀಡಿತು. ಮಧ್ಯದಲ್ಲಿ ಆರ್ಮ್ ಸಪೋರ್ಟ್ ಅನ್ನು ನೀಡಲು ಸಾಧ್ಯವಾಗಲಿಲ್ಲ. ಎರಡನೇ ಸಾಲಿನಲ್ಲಿ ಬೆಂಚ್ ಸೀಟ್ ಗಳನ್ನು ಒದಗಿಸುವುದರಿಂದ 5-ಡೋರ್ ಥಾರ್‌ನಲ್ಲಿ ಇದು ಸಾಧ್ಯವಾಗಲಿದೆ.

ಆರು ಏರ್‌ಬ್ಯಾಗ್‌ಗಳು

ಮುಂಬರುವ ಲಾಂಗ್-ವೀಲ್‌ಬೇಸ್ ಥಾರ್‌ನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಪರಿಚಯಿಸುವುದು ಮಾತ್ರವಲ್ಲದೆ ಸರ್ಕಾರದ ಮುಂಬರುವ ಸುರಕ್ಷತಾ ಕಿಟ್ ಆದೇಶವನ್ನು ಅನುಸರಿಸಲು ಅವುಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲು ಮಹೀಂದ್ರಾ ನಿರ್ಧರಿಸಿದೆ. ಪ್ರಸ್ತುತ ಮಾಡೆಲ್, ಇದೀಗ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಮಾತ್ರ ಪಡೆಯುತ್ತದೆ.

360-ಡಿಗ್ರಿ ಕ್ಯಾಮೆರಾ

5-ಡೋರ್ ಥಾರ್ 360-ಡಿಗ್ರಿ ಕ್ಯಾಮೆರಾದೊಂದಿಗೆ ಬರಬಹುದು. ಇದು ಬಿಗಿಯಾದ ಪಾರ್ಕಿಂಗ್ ಸ್ಥಳಗಳಲ್ಲಿ ಅದನ್ನು ಪಾರ್ಕ್ ಮಾಡಲು ಸುಲಭ ಮತ್ತು ಅನುಕೂಲಕರವಾಗಿಸುತ್ತದೆ ಮತ್ತು ಆಫ್-ರೋಡ್ ಗಳಲ್ಲಿ ತೆಗೆದುಕೊಂಡು ಹೋಗುವಾಗ ಉಪಯುಕ್ತವಾಗಲಿದೆ.

3-ಡೋರ್ ಥಾರ್‌ನಲ್ಲಿ ಪ್ರಸ್ತುತ ಲಭ್ಯವಿಲ್ಲದ ಕೆಲವು ಪ್ರೀಮಿಯಂ ಫೀಚರ್ ಗಳು 5-ಡೋರ್ ವರ್ಷನ್ ನಲ್ಲಿ ನಿರೀಕ್ಷಿಸಲಾಗಿದೆ. ಉದ್ದವಾದ ಥಾರ್‌ ವರ್ಷನ್ ಗೆ ಮಹೀಂದ್ರಾ ಇನ್ನು ಯಾವ ಯಾವ ಫೀಚರ್ ಗಳನ್ನು ಸೇರಿಸಬೇಕು ಎಂದು ನೀವು ಯೋಚಿಸುತ್ತೀರಿ? ಕಾಮೆಂಟ್‌ ವಿಭಾಗಗಳಲ್ಲಿ ನಮಗೆ ತಿಳಿಸಿ.

ಚಿತ್ರದ ಮೂಲ

ಇನ್ನಷ್ಟು ಓದಿ: ಮಹೀಂದ್ರ ಥಾರ್ ಆಟೋಮ್ಯಾಟಿಕ್

Share via

Write your Comment on Mahindra ಥಾರ್‌ ROXX

R
raj gvk
Feb 23, 2024, 12:36:55 AM

Nice 7 seater MPV ... I like it.....

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ