ಮಹೀಂದ್ರಾ ಥಾರ್ ರೋಕ್ಸ್‌ನ VIN 0001 ಕಾರು 1.31 ಕೋಟಿ ರೂ.ಗೆ ಮಾರಾಟ
ಮಹೀಂದ್ರ ಥಾರ್ ರಾಕ್ಸ್ ಗಾಗಿ shreyash ಮೂಲಕ ಸೆಪ್ಟೆಂಬರ್ 20, 2024 07:57 pm ರಂದು ಪ್ರಕಟಿಸಲಾಗಿದೆ
- 35 Views
- ಕಾಮೆಂಟ್ ಅನ್ನು ಬರೆಯಿರಿ
ಯೂನಿಟ್ ಹರಾಜಾದದ್ದು ಟಾಪ್-ಸ್ಪೆಕ್ ಎಎಕ್ಸ್7 ಎಲ್ 4ವೀಲ್‌ಡ್ರೈವ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯಾಗಿದ್ದು, ಆನಂದ್ ಮಹೀಂದ್ರಾ ಅವರ ಸಹಿಯಿರುವ ಬ್ಯಾಡ್ಜ್ ಅನ್ನು ಒಳಗೊಂಡಿದೆ
-
ವಿಜೇತರ ಆಯ್ಕೆಯ ಆಧಾರದ ಮೇಲೆ ನಾಲ್ಕು ಲಾಭೋದ್ದೇಶವಿಲ್ಲದ ಸಂಸ್ಥೆಗಳಲ್ಲಿ ಒಂದಕ್ಕೆ ಆದಾಯವನ್ನು ದಾನ ಮಾಡಲಾಗುತ್ತದೆ.
-
ಹರಾಜಿನಲ್ಲಿದ್ದ ಕಾರು ಟಾಪ್-ಸ್ಪೆಕ್ ಎಎಕ್ಸ್‌೭ ಎಲ್ ಡೀಸೆಲ್ ಆಟೋಮ್ಯಾಟಿಕ್ 4ವೀಲ್‌ಡ್ರೈವ್ ಆವೃತ್ತಿಯಾಗಿತ್ತು.
-
ಇದು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ಗೆ ಜೋಡಿಸಲಾದ 175 ಪಿಎಸ್ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಬಳಸುತ್ತದೆ.
-
ಥಾರ್ ರೋಕ್ಸ್‌ನ ಪರಿಚಯಾತ್ಮಕ, ಎಕ್ಸ್-ಶೋರೂಂ ಬೆಲೆಗಳು 12.99 ಲಕ್ಷ ರೂ.ನಿಂದ 20.49 ಲಕ್ಷದವರೆಗೆ (ರಿಯರ್ ವೀಲ್ ಡ್ರೈವ್‌ಗೆ ಮಾತ್ರ) ಇರಲಿದೆ.
ಮಹೀಂದ್ರಾ ಥಾರ್ ರೋಕ್ಸ್‌ನ ಮೊದಲ ಗ್ರಾಹಕರ ಕಾರನ್ನು ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 16 ರವರೆಗೆ ಹರಾಜಿಗೆ ಹಾಕಲಾಯಿತು. 'VIN 0001' ಸೀರೀಸ್ ಸಂಖ್ಯೆಯನ್ನು ಒಳಗೊಂಡಿರುವ ಥಾರ್ ರಾಕ್ಸ್‌ಗಾಗಿ ಆಕರ್ಷಕವಾದ 1.31 ಕೋಟಿ ರೂ.ನಲ್ಲಿ ಬಿಡ್ಡಿಂಗ್ ಮುಕ್ತಾಯಗೊಂಡಿದೆ. ಈ ಹರಾಜಿನಿಂದ ಸಂಗ್ರಹವಾದ ಹಣವನ್ನು ವಿಜೇತರ ಆಯ್ಕೆಯ ಆಧಾರದ ಮೇಲೆ ನಾಲ್ಕು ಸಾಮಾಜಿಕ ಕಳಕಳಿಯಿರುವ (ಲಾಭರಹಿತ) ಸಂಸ್ಥೆಯಲ್ಲಿ ಒಂದಕ್ಕೆ ದಾನ ಮಾಡಲಾಗುತ್ತದೆ.
2020 ರಲ್ಲಿ ಹರಾಜಾದ 3-ಡೋರ್‌ನ ಥಾರ್‌ಗಿಂತ ದೊಡ್ಡ ಥಾರ್ ಹೆಚ್ಚಿನ ಬೆಲೆಯಲ್ಲಿ ಮೊದಲ ಗ್ರಾಹಕರ ಪಾಲಾಗಲಿದೆ. 3-ಡೋರ್‌ನ ಥಾರ್ 1.11 ಕೋಟಿ ರೂ.ಗೆ ಹರಾಜಾಗಿತ್ತು. ಆ ಸಮಯದಲ್ಲಿ, ಈ ಮೊತ್ತವನ್ನು COVID-19 ಪರಿಹಾರ ಸಂಸ್ಥೆಗಳನ್ನು ಬೆಂಬಲಿಸಲು ದೇಣಿಗೆ ನೀಡಲಾಗಿತ್ತು. 3-ಡೋರ್ ಥಾರ್‌ಅನ್ನು ಬಿಡ್‌ನಲ್ಲಿ ನವದೆಹಲಿಯ ನಿವಾಸಿ ಆಕಾಶ್ ಮಿಂಡಾ ಗೆದ್ದಿದ್ದರು.
VIN 0001 ಥಾರ್ ರೋಕ್ಸ್‌ನ ವಿಶೇಷತೆ ಏನು?
ಥಾರ್ ರೋಕ್ಸ್‌ನ ಟಾಪ್-ಸ್ಪೆಕ್ ಎಎಕ್ಸ್7 ಎಲ್ ಡೀಸೆಲ್ ಆಟೋಮ್ಯಾಟಿಕ್ 4ವೀಲ್‌ಡ್ರೈವ್ ಆವೃತ್ತಿಯನ್ನು ಹರಾಜು ಮಾಡಲು ಮಹೀಂದ್ರಾ ಆಯ್ಕೆ ಮಾಡಿಕೊಂಡಿದೆ. ಥಾರ್ ರೋಕ್ಸ್‌ನ ಈ ಮೊದಲ ಗ್ರಾಹಕರ ಕಾರು 'VIN 0001' ಚಿಹ್ನೆಯನ್ನು ಮಾತ್ರವಲ್ಲದೆ, ಆನಂದ್ ಮಹೀಂದ್ರಾ ಅವರ ಸಹಿಯೊಂದಿಗೆ ಬ್ಯಾಡ್ಜ್ ಅನ್ನು ಸಹ ಹೊಂದಿದೆ. ವಿಜೇತ ಬಿಡ್ಡರ್‌ನಿಂದ ಥಾರ್ ರೋಕ್ಸ್‌ನ ಯಾವ ಬಣ್ಣವನ್ನು ಆಯ್ಕೆ ಮಾಡಲಾಗಿದೆ ಎಂಬುದನ್ನು ಮಹೀಂದ್ರಾ ಇನ್ನೂ ಖಚಿತಪಡಿಸಿಲ್ಲ. ವಾಹನ ತಯಾರಕರು ಲಭ್ಯವಿರುವ ಎಲ್ಲಾ ಬಣ್ಣಗಳ ಆಯ್ಕೆಯನ್ನು ಒದಗಿಸಿದ್ದಾರೆ, ಅವುಗಳೆಂದರೆ, ಡೀಪ್ ಫಾರೆಸ್ಟ್, ಎವರೆಸ್ಟ್ ವೈಟ್, ಟ್ಯಾಂಗೋ ರೆಡ್, ಬ್ಯಾಟಲ್‌ಶಿಪ್ ಗ್ರೇ, ನೆಬ್ಯುಲಾ ಬ್ಲೂ, ಬರ್ನ್ಟ್ ಸಿಯೆನ್ನಾ ಮತ್ತು ಸ್ಟೆಲ್ತ್ ಬ್ಲ್ಯಾಕ್.
ದೊಡ್ಡದಾದ ಥಾರ್‌ನ ಈ ಟಾಪ್-ಸ್ಪೆಕ್ ಆವೃತ್ತಿಯು 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು (ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಆಟೋ ಎಸಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6-ವೇ ಚಾಲಿತ ಡ್ರೈವರ್ ಸೀಟ್ ಮತ್ತು ಪನರೋಮಿಕ್ ಸನ್‌ರೂಫ್‌ನಂತಹ ಫೀಚರ್‌ಗಳೊಂದಿಗೆ ಸಜ್ಜುಗೊಂಡಿದೆ. ಇದರ ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಸಂಪೂರ್ಣ ಸೂಟ್ ಒಳಗೊಂಡಿದೆ.
ಥಾರ್ ರೋಕ್ಸ್‌ನ VIN 0001 ಕಾರು ಅದರ ಎಂಜಿನ್ ವಿಭಾಗದಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ ಮತ್ತು ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:
ಮೊಡೆಲ್ |
ಮಹೀಂದ್ರಾ ಥಾರ್ ರೋಕ್ಸ್ |
ಎಂಜಿನ್ |
2.2-ಲೀಟರ್ ಡೀಸೆಲ್ |
ಪವರ್ |
175 ಪಿಎಸ್ |
ಟಾರ್ಕ್ |
370 ಎನ್‌ಎಮ್ |
ಟ್ರಾನ್ಸ್‌ಮಿಷನ್ |
6-ಸ್ಪೀಡ್ AT* |
ಡ್ರೈವ್ ಪ್ರಕಾರ |
4WD** |
*AT - ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
**4WD - 4-ವೀಲ್ ಡ್ರೈವ್
ಥಾರ್ ರೋಕ್ಸ್ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮ್ಯಾನುವಲ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ. ಥಾರ್ ರೋಕ್ಸ್‌ನ ವಿವರವಾದ ಪವರ್‌ಟ್ರೇನ್ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
2-ಲೀಟರ್ ಟರ್ಬೋ ಪೆಟ್ರೋಲ್ |
2.2-ಲೀಟರ್ ಡೀಸೆಲ್ |
ಪವರ್ |
162 ಪಿಎಸ್ (ಮ್ಯಾನುಯಲ್)/177 ಪಿಎಸ್ (ಆಟೋಮ್ಯಾಟಿಕ್) |
152 ಪಿಎಸ್ (ಮ್ಯಾನುಯಲ್)/175 ಪಿಎಸ್‌ವರೆಗೆ (ಆಟೋಮ್ಯಾಟಿಕ್) |
ಟಾರ್ಕ್ |
330 ಎನ್‌ಎಮ್ (ಮ್ಯಾನುಯಲ್)/380 ಎನ್‌ಎಮ್ (ಆಟೋಮ್ಯಾಟಿಕ್) |
330 ಎನ್‌ಎಮ್ (ಮ್ಯಾನುಯಲ್)/ 370 ಎನ್‌ಎಮ್‌ವರೆಗೆ (ಆಟೋಮ್ಯಾಟಿಕ್) |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನುಯಲ್/6-ಸ್ಪೀಡ್ AT^ |
6-ಸ್ಪೀಡ್ ಮ್ಯಾನುಯಲ್/6-ಸ್ಪೀಡ್ ಆಟೋಮ್ಯಾಟಿಕ್ |
ಡ್ರೈವ್ ಪ್ರಕಾರ |
RWD^ |
RWD/ 4ವೀಲ್ ಡ್ರೈವ್ |
^RWD - ರಿಯರ್ ವೀಲ್ ಡ್ರೈವ್
ಇದನ್ನೂ ಸಹ ಓದಿ: 10.15 ಲಕ್ಷ ರೂ.ಬಲೆಗೆ Hyundai Venue Adventure ಎಡಿಷನ್ ಬಿಡುಗಡೆ
ಸಂಗ್ರಹಿಸಿದ ಮೊತ್ತವನ್ನು ದಾನ ಮಾಡಲಾಗುವುದು
ವಿಜೇತರು ಆಯ್ಕೆ ಮಾಡಿದ ಸಾಮಾಜಿಕ ಕಳಕಳಿಯಿರುವ (ಲಾಭರಹಿತ) ಸಂಸ್ಥೆಗೆ ಆದಾಯವನ್ನು ನೀಡಲಾಗುವುದು. ವಿಜೇತರು ಮತ್ತು ದೇಣಿಗೆ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಆಯ್ಕೆಗಳು ಈ ಕೆಳಗಿನಂತಿವೆ :
-
ನಾಂದಿ ಫೌಂಡೇಶನ್ (ಬಾಲಕಿಯರು ಮತ್ತು ಮಹಿಳೆಯರ ಸಬಲೀಕರಣ)
-
BAIF ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನ (ಜಲಾನಯನ ಮತ್ತು ಗ್ರಾಮೀಣ ಜೀವನೋಪಾಯ ಅಭಿವೃದ್ಧಿ)
-
ಜಲಾನಯನ ಸಂಸ್ಥೆ ಟ್ರಸ್ಟ್ (ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ ಮತ್ತು ಕೃಷಿ)
-
ಯುನೈಟೆಡ್ ವೇ ಮುಂಬೈ (ರಸ್ತೆ ಸುರಕ್ಷತೆಯನ್ನು ಉತ್ತೇಜಿಸುವುದು)
ಬೆಲೆ ರೇಂಜ್ & ಪ್ರತಿಸ್ಪರ್ಧಿಗಳು
ಭಾರತದಾದ್ಯಂತ ಮಹೀಂದ್ರಾ ಥಾರ್ ರೋಕ್ಸ್‌ನ ಪರಿಚಯಾತ್ಮಕ, ಎಕ್ಸ್-ಶೋರೂಮ್ ಬೆಲೆಗಳು 12.99 ಲಕ್ಷ ರೂ.ನಿಂದ 20.49 ಲಕ್ಷ ರೂ.ವರೆಗೆ ಇದೆ. ಥಾರ್ ರೋಕ್ಸ್‌ನ 4 ವೀಲ್ ಡ್ರೈವ್ ಆವೃತ್ತಿಗಳ ಬೆಲೆಗಳನ್ನು ಮಹಿಂದ್ರಾ ಇನ್ನೂ ಘೋಷಿಸಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಇದು ಫೋರ್ಸ್ ಗೂರ್ಖಾ 5-ಡೋರ್ ಮತ್ತು ಮಾರುತಿ ಜಿಮ್ನಿಗೆ ಸ್ಪರ್ಧೆಯನ್ನು ಒಡ್ಡುತ್ತದೆ.
ಹೆಚ್ಚಿನ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡುವುದನ್ನು ಮಿಸ್‌ಮಾಡ್ಬೇಡಿ
ಇನ್ನಷ್ಟು ಓದಿ : ಮಹೀಂದ್ರಾ ಥಾರ್ ರೋಕ್ಸ್ ಡೀಸೆಲ್