Login or Register ಅತ್ಯುತ್ತಮ CarDekho experience ಗೆ
Login

Mahindra XUV 3XO AX7 ವರ್ಸಸ್‌ Volkswagen Taigun Highline: ಯಾವ ಎಸ್‌ಯುವಿ ಖರೀದಿಸಬೇಕು?

ಇವುಗಳು ಬೇರೆ ಬೇರೆ ಎಸ್‌ಯುವಿಯ ಸೆಗ್ಮೆಂಟ್‌ನಲ್ಲಿದ್ದರೂ ಸಹ, ಈ ಆವೃತ್ತಿಗಳಲ್ಲಿನ ಈ ಮೊಡೆಲ್‌ಗಳು ಮ್ಯಾನುಯಲ್‌ ಮತ್ತು ಆಟೋಮ್ಯಾಟಿಕ್‌ ರೂಪಗಳಲ್ಲಿ ಒಂದೇ ರೀತಿಯ ಬೆಲೆಯನ್ನು ಹೊಂದಿವೆ, ಆದರೆ ಅವುಗಳಲ್ಲಿ ಒಂದು ನೀಡುವ ಹಣಕ್ಕೆ ಹೆಚ್ಚು ಮೌಲ್ಯಯುತವಾಗಿದೆ

ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಸಬ್‌-4ಮೀ ಎಸ್‌ಯುವಿ ಸೆಗ್ಮೆಂಟ್‌ಗೆ ಅತ್ಯಾಕರ್ಷಕ ಹೊಸ ಪ್ರೀಮಿಯಂ ವೈಶಿಷ್ಟ್ಯಗಳನ್ನು ತರುತ್ತದೆ. ಇದು ಇದಕ್ಕಿಂತ ಮೇಲಿನ ಸೆಗ್ಮೆಂಟ್‌ನಲ್ಲಿ ನೀಡುವ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ. ಆದರೆ 3XO ವಾಸ್ತವದಲ್ಲಿ ಅದೇ ಬೆಲೆಯ ಕಾಂಪ್ಯಾಕ್ಟ್ ಎಸ್‌ಯುವಿಗಿಂತ ಉತ್ತಮ ಮೌಲ್ಯವನ್ನು ನೀಡುತ್ತದೆಯೇ? ಸರಿ, ವೋಕ್ಸ್‌ವ್ಯಾಗನ್ ಟೈಗುನ್ ಅಂತಹ ಒಂದು ಸ್ಪರ್ಧಿಯಾಗಿದ್ದು, ಟಾಪ್‌-ಸ್ಪೆಕ್ ಪೆಟ್ರೋಲ್-ಚಾಲಿತ ಎಕ್ಸ್‌ಯುವಿ 3ಎಕ್ಸ್‌ಒದಂತೆ ಅದೇ ಬೆಲೆಗೆ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಉತ್ತಮವಾದ ಫೀಚರ್‌ಗಳನ್ನು ಸಹ ನೀಡುತ್ತದೆ. ಆದರೆ ನೀಡಲಾದ ಮೌಲ್ಯದ ವಿಷಯದಲ್ಲಿ ಇವುಗಳಲ್ಲಿ ಯಾವುದು ಹೆಚ್ಚು ಅರ್ಥಪೂರ್ಣವಾಗಿದೆ? ಕಂಡುಹಿಡಿಯೋಣ.

ಬೆಲೆ

ಎಕ್ಸ್‌ಶೋರೂಮ್‌ ಬೆಲೆಗಳು

ಮೊಡೆಲ್‌

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಎಕ್ಸ್‌7 ಎಲ್

ವೋಕ್ಸ್‌ವ್ಯಾಗನ್ ಟೈಗನ್ ಹೈಲೈನ್

ಮ್ಯಾನುಯಲ್‌

13.99 ಲಕ್ಷ ರೂ.

13.88 ಲಕ್ಷ ರೂ.

ಆಟೋಮ್ಯಾಟಿಕ್‌

15.49 ಲಕ್ಷ ರೂ.

15.43 ಲಕ್ಷ ರೂ.

ಎಕ್ಸ್‌ಯುವಿ 3ಎಕ್ಸ್‌ಒ ಎಎಕ್ಸ್‌7 ಎಲ್ ಮತ್ತು ಟೈಗುನ್ ಹೈಲೈನ್ ಎರಡೂ ಒಂದೇ ರೀತಿಯ ಬೆಲೆಯನ್ನು ಹೊಂದಿವೆ ಮತ್ತು ಮ್ಯಾನುಯಲ್‌ಗೆ ಹೋಲಿಸಿದರೆ ಅವುಗಳ ಆಟೋಮ್ಯಾಟಿಕ್‌ ಆವೃತ್ತಿಗಳಿಗೆ ಹೊಂದಿರುವ ಬೆಲೆಯು ಒಂದೇ ಸರಾಸರಿಯಲ್ಲಿದೆ. ಅದರೂ 3ಎಕ್ಸ್‌ಒನ ಬೆಲೆ ಇಲ್ಲಿ ಸ್ವಲ್ಪ ಹೆಚ್ಚಿದೆ.

ಪವರ್‌ಟ್ರೇನ್‌

ಮೊಡೆಲ್‌

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಎಕ್ಸ್‌7 ಎಲ್

ವೋಕ್ಸ್‌ವ್ಯಾಗನ್ ಟೈಗನ್ ಹೈಲೈನ್

ಎಂಜಿನ್‌

1.2-ಲೀಟರ್ TGDi ಟರ್ಬೊ-ಪೆಟ್ರೋಲ್

1-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

130 ಪಿಎಸ್‌

115 ಪಿಎಸ್‌

ಟಾರ್ಕ್‌

230 ಎನ್‌ಎಮ್‌

178 ಎನ್‌ಎಮ್‌

ಗೇರ್‌ಬಾಕ್ಸ್‌

6ಮ್ಯಾನುಯಲ್‌, 6ಆಟೋಮ್ಯಾಟಿಕ್‌

6ಮ್ಯಾನುಯಲ್‌, 6ಆಟೋಮ್ಯಾಟಿಕ್‌

ಎರಡೂ ಕಾರುಗಳು ಒಂದೇ ರೀತಿಯ ಗೇರ್‌ಬಾಕ್ಸ್‌ ಆಯ್ಕೆಗಳನ್ನು ನೀಡುತ್ತವೆ, ಎಕ್ಸ್‌ಯುವಿ 3XO ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಇದು ಹೆಚ್ಚು ಮೋಜಿನ-ಡ್ರೈವ್ ಅನುಭವವನ್ನು ಬಯಸುವವರಿಗೆ ಒಳ್ಳೆಯದು. ಅಲ್ಲದೆ, ಈ ಆವೃತ್ತಿಯೊಂದಿಗೆ, 3XO 1.5-ಲೀಟರ್ ಡೀಸೆಲ್ ಎಂಜಿನ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ, ಇದನ್ನು ಟೈಗುನ್ ನೀಡುವುದಿಲ್ಲ.

ಫೀಚರ್‌ಗಳು

ಫೀಚರ್‌ಗಳು

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಎಕ್ಸ್‌7 ಎಲ್

ವೋಕ್ಸ್‌ವ್ಯಾಗನ್ ಟೈಗನ್ ಹೈಲೈನ್

ಹೊರಭಾಗ

ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

ಟರ್ನ್‌ ಇಂಡಿಕೇಟರ್‌ಗಳೊಂದಿಗೆ ಎಲ್ಇಡಿ ಡಿಆರ್‌ಎಲ್‌ಗಳು

ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳು

ಎಲ್ಇಡಿ ಫಾಗ್ ಲ್ಯಾಂಪ್ಸ್

17 ಇಂಚಿನ ಅಲಾಯ್ ವೀಲ್‌ಗಳು

ರೂಫ್ ರೇಲ್ಸ್‌

ಹಿಂಭಾಗದ ಸ್ಪಾಯ್ಲರ್

ಹ್ಯಾಲೊಜೆನ್ ಹೆಡ್‌ಲೈಟ್‌ಗಳು

ಎಲ್ಇಡಿ ಡಿಆರ್‌ಎಲ್‌ಗಳು

ಕನೆಕ್ಟೆಡ್‌ ಎಲ್ಇಡಿ ಟೈಲ್‌ಲೈಟ್‌ಗಳು

ಎಲ್ಇಡಿ ಫಾಗ್ ಲ್ಯಾಂಪ್ಸ್

16 ಇಂಚಿನ ಅಲಾಯ್ ಚಕ್ರಗಳು

ರೂಫ್ ರೇಲ್ಸ್‌

ಇಂಟಿರೀಯರ್‌

ಡ್ಯುಯಲ್ ಟೋನ್ ಇಂಟೀರಿಯರ್‌

ಲೆಥೆರೆಟ್ ಸೀಟ್‌ಗಳು

ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳಲ್ಲಿ ಲೆದರ್ ಪ್ಯಾಡಿಂಗ್

ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್‌ನಲ್ಲಿ ಲೆದರ್ ಹೊದಿಕೆ

ಎಲ್ಲಾ ಸೀಟ್‌ಗಳಲ್ಲಿ ಎಡ್ಜಸ್ಟ್‌ ಮಾಡಬಹುದಾದ ಹೆಡ್‌ರೆಸ್ಟ್‌ಗಳು

60:40 ಸ್ಪ್ಲಿಟ್‌ನೊಂದಿಗೆ ಹಿಂದಿನ ಸೀಟ್‌ಗಳು

ಎತ್ತರ-ಎಡ್ಜಸ್ಟ್‌ ಮಾಡಬಹುದಾದ ಡ್ರೈವರ್‌ ಸೀಟ್‌ಗಳು

ಡ್ಯುಯಲ್ ಟೋನ್ ಇಂಟೀರಿಯರ್‌

ಫ್ಯಾಬ್ರಿಕ್ ಸೀಟ್‌ಗಳು

60:40 ಸ್ಪ್ಲಿಟ್‌ನೊಂದಿಗೆ ಹಿಂದಿನ ಸೀಟ್‌ಗಳು

ಡ್ಯಾಶ್‌ಬೋರ್ಡ್‌ನಲ್ಲಿ ವೈಟ್ ಆಂಬಿಯೆಂಟ್ ಲೈಟ್

ಸ್ಟೋರೇಜ್‌ನೊಂದಿಗೆ ಮುಂಭಾಗದ ಮಧ್ಯಭಾಗದ ಆರ್ಮ್‌ರೆಸ್ಟ್

ಕಪ್‌ಹೋಲ್ಡರ್‌ಗಳೊಂದಿಗೆ ಹಿಂಭಾಗದ ಫೋಲ್ಡೌಟ್ ಆರ್ಮ್‌ರೆಸ್ಟ್

ಎತ್ತರ-ಎಡ್ಜಸ್ಟ್‌ ಮಾಡಬಹುದಾದ ಡ್ರೈವರ್‌ ಸೀಟ್‌ಗಳು

ಎಲ್ಲಾ ಸೀಟ್‌ಗಳಲ್ಲಿ ಎಡ್ಜಸ್ಟ್‌ ಮಾಡಬಹುದಾದ ಹೆಡ್‌ರೆಸ್ಟ್‌ಗಳು

ಇಂಫೋಟೈನ್‌ಮೆಂಟ್‌

10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

7-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್

ಇನ್‌-ಬಿಲ್ಟ್‌ ಆನ್‌ಲೈನ್ ನ್ಯಾವಿಗೇಷನ್

ಅಡ್ರಿನಾಕ್ಸ್ ಕನೆಕ್ಟೆಡ್‌ ಕಾರ್ ವೈಶಿಷ್ಟ್ಯಗಳು

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ (ನಂತರ ಸೇರಿಸಲಾಗುವುದು)

ಅಮೆಜಾನ್ ಅಲೆಕ್ಸಾ ಇಂಟಿಗ್ರೇಷನ್ (ನಂತರ ಸೇರಿಸಲಾಗುವುದು)

10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

6-ಸ್ಪೀಕರ್ ಸೌಂಡ್ ಸಿಸ್ಟಮ್

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

ಮೈವೋಕ್ಸ್‌ವ್ಯಾಗನ್ ಕನೆಕ್ಟೆಡ್‌ ಕಾರ್‌ ಫೀಚರ್‌ಗಳು

ಸೌಕರ್ಯ ಮತ್ತು ಸೌಲಭ್ಯಗಳು

ಡ್ಯುಯಲ್-ಝೋನ್ ಕ್ಲೈಮೇಟ್‌ ಕಂಟ್ರೋಲ್‌

ಹಿಂದಿನ ಎಸಿ ವೆಂಟ್‌ಗಳು

ವೈರ್‌ಲೆಸ್ ಫೋನ್ ಚಾರ್ಜರ್

ಎಲೆಕ್ಟ್ರಿಕಲಿ ಹೊಂದಾಣಿಕೆ ಮತ್ತು ಮಡಿಸಬಹುದಾದ ORVM ಗಳು

ಕ್ರೂಸ್ ಕಂಟ್ರೋಲ್

ಪನೋರಮಿಕ್ ಸನ್‌ರೂಫ್

ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು

ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್

ಕೂಲ್ಡ್ ಗ್ಲೋವ್‌ಬಾಕ್ಸ್‌

65W ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜಿಂಗ್

ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌

ಹಿಂದಿನ ಎಸಿ ವೆಂಟ್‌ಗಳು

ಆಟೋಮ್ಯಾಟಿಕ್‌ ಹೆಡ್‌ಲೈಟ್‌ಗಳು

ಮಳೆ ಸಂವೇದಿ ವೈಪರ್‌ಗಳು

ಎಲೆಕ್ಟ್ರಿಕಲಿ ಹೊಂದಾಣಿಕೆ ಮತ್ತು ಮಡಿಸಬಹುದಾದ ORVM ಗಳು

ಕೂಲ್ಡ್ ಗ್ಲೋವ್‌ಬಾಕ್ಸ್‌

ಕ್ರೂಸ್ ಕಂಟ್ರೋಲ್

ಮುಂಭಾಗ ಮತ್ತು ಹಿಂಭಾಗದ ಟೈಪ್-ಸಿ ಯುಎಸ್‌ಬಿ ಪೋರ್ಟ್‌ಗಳು

ಸುರಕ್ಷತೆ

6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್)

ಇಬಿಡಿ ಜೊತೆಗೆ ಎಬಿಎಸ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು

ಹಿಂದಿನ ಪಾರ್ಕಿಂಗ್ ಸೆನ್ಸಾರ್‌ಗಳು

ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್

ಎಲ್ಲಾ ಪ್ರಯಾಣಿಕರಿಗಾಗಿ ಸೀಟ್ ಬೆಲ್ಟ್ ರಿಮೈಂಡರ್‌ಗಳು

ISOFIX ಚೈಲ್ಡ್ ಸೀಟ್ ಆಂಕರ್‌ಗಳು

ಹಿಂದಿನ ಡಿಫಾಗರ್

360-ಡಿಗ್ರಿ ಕ್ಯಾಮರಾ

ಬ್ಲೈಂಡ್ ವ್ಯೂ ಮಾನಿಟರ್

ಆಟೋ ಡಿಮ್ಮಿಂಗ್ IRVM

ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

ಲೇನ್ ಕೀಪ್ ಅಸಿಸ್ಟ್

ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್

ಹೈ ಬೀಮ್ ಅಸಿಸ್ಟ್

ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ

ಮುಂಭಾಗದ ಪಾರ್ಕಿಂಗ್ ಅಸಿಸ್ಟ್

ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳು

EBD ಜೊತೆಗೆ ಎಬಿಎಸ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

ಟೈರ್ ಒತ್ತಡದ ಡಿಫ್ಲೇಶನ್ ವಾರ್ನಿಂಗ್‌

ಹಿಲ್ ಸ್ಟಾರ್ಟ್ ಅಸಿಸ್ಟ್ (ಎಟಿ ಮಾತ್ರ)

ಬ್ರೇಕ್ ಅಸಿಸ್ಟ್

ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್

ಸೀಟ್ ಬೆಲ್ಟ್ ರಿಮೈಂಡರ್ (ಮುಂಭಾಗ)

ISOFIX ಚೈಲ್ಡ್ ಸೀಟ್ ಆಂಕರ್‌ಗಳು

ಹಿಂದಿನ ಪಾರ್ಕಿಂಗ್ ಕ್ಯಾಮೆರಾ

ಹಿಂಭಾಗದ ಡಿಫಾಗರ್

ಬೇಸ್‌ಗಿಂತ ಒಂದು ಮೇಲಿರುವ ಟೈಗುನ್‌ನ ಆವೃತ್ತಿಯು ಬೇಸಿಕ್‌ ವೈಶಿಷ್ಟ್ಯ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದ್ದರೂ ಸಹ, ಇಲ್ಲಿ ವಿಜೇತರು ಯಾರೆಂಬುವುದು ಸ್ಪಷ್ಟವಾಗಿದೆ. ಎಕ್ಸ್‌ಯುವಿ 3XO ಪ್ರತಿ ವಿಷಯದಲ್ಲೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಹೆಚ್ಚು ಪ್ರೀಮಿಯಂ ವಿನ್ಯಾಸ ಅಂಶಗಳನ್ನು ಹೊಂದಿದೆ, ಹೆಚ್ಚು ಪ್ರೀಮಿಯಂ ಕ್ಯಾಬಿನ್, ಮತ್ತು ಲೆವೆಲ್ 2 ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ವೈಶಿಷ್ಟ್ಯಗಳೊಂದಿಗೆ ಉತ್ತಮ ಸುರಕ್ಷತಾ ಪ್ಯಾಕೇಜ್ ಅನ್ನು ನೀಡುತ್ತದೆ. ಆದಾಗ್ಯೂ, ಸುರಕ್ಷತೆಯ ವಿಷಯಕ್ಕೆ ಬಂದಾಗ, ವೊಕ್ಸ್‌ವ್ಯಾಗನ್ ಟೈಗುನ್ ಹೆಚ್ಚು ಪ್ರಭಾವಶಾಲಿಯಾಗಿದೆ. ಏಕೆಂದರೆ ಇದು ಗ್ಲೋಬಲ್ NCAP ನಿಂದ ಅದರ 5-ಸ್ಟಾರ್ ರೇಟಿಂಗ್ ಅನ್ನು ಹೊಂದಿದೆ.

ಅಂತಿಮ ಮಾತು

ಈ ಎರಡು ಕಾರುಗಳು ಮತ್ತು ಈ ನಿರ್ದಿಷ್ಟ ಆವೃತ್ತಿಗಳನ್ನು ಪರಿಗಣಿಸುವಾಗ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಆಯ್ಕೆಯು ಉತ್ತಮವಾಗಿರುತ್ತದೆ ಏಕೆಂದರೆ ಇದು ಹೆಚ್ಚಿನ ವೈಶಿಷ್ಟ್ಯಗಳು, ಹೆಚ್ಚಿನ ಕಾರ್ಯಕ್ಷಮತೆ, ಉತ್ತಮ ಗುಣಮಟ್ಟದ ಮತ್ತು ಬೆಲೆಬಾಳುವ ಕ್ಯಾಬಿನ್ ಮತ್ತು ಉತ್ತಮವಾದ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ.

ಇದನ್ನೂ ಓದಿ: ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸಿದ ಸ್ಕೋಡಾ- ವೋಕ್ಸ್‌ವ್ಯಾಗನ್‌

ನೀವು ಗಾತ್ರದಲ್ಲಿ ಮತ್ತು ಹಿಂಬದಿ ಸೀಟಿನ ಜಾಗದಲ್ಲಿ ಸಣ್ಣ ರಾಜಿ ಮಾಡಿಕೊಳ್ಳಲು ಸಿದ್ಧರಿದ್ದರೆ, ಎಕ್ಸ್‌ಯುವಿ 3ಎಕ್ಸ್‌ಒವು ವೋಕ್ಸ್‌ವ್ಯಾಗನ್ ಟೈಗನ್‌ಗಿಂತ ಉತ್ತಮ ಖರೀದಿಯಾಗಲಿದೆ. ಈ ಎರಡು ಮೊಡೆಲ್‌ಗಳಲ್ಲಿ ಯಾವುದನ್ನು ನೀವು ಬಯಸುತ್ತೀರಿ? ಕೆಳಗಿನ ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.

ಇನ್ನಷ್ಟು ಓದಿ: ಎಕ್ಸ್‌ಯುವಿ 3ಎಕ್ಸ್‌ಒ ಎಎಮ್‌ಟಿ

a
ಅವರಿಂದ ಪ್ರಕಟಿಸಲಾಗಿದೆ

ansh

  • 30 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ XUV 3XO

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ