Login or Register ಅತ್ಯುತ್ತಮ CarDekho experience ಗೆ
Login

Mahindra XUV 3XO ವರ್ಸಸ್‌ Hyundai Venue: ಸಂಪೂರ್ಣ ಹೋಲಿಕೆ

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಮತ್ತು ಹ್ಯುಂಡೈ ವೆನ್ಯೂ ಡೀಸೆಲ್ ಆಯ್ಕೆಯನ್ನು ಒಳಗೊಂಡಂತೆ ಮೂರು ಎಂಜಿನ್‌ಗಳನ್ನು ಪಡೆಯುತ್ತವೆ ಮತ್ತು ಪ್ರಭಾವಶಾಲಿ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.

ನೀವು ಹೊಸ ಸಬ್-4ಎಮ್‌ ಎಸ್‌ಯುವಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಹೊಸದಾಗಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್‌ಯುವಿ 3XO (XUV300 ನ ಫೇಸ್‌ಲಿಫ್ಟೆಡ್ ಆವೃತ್ತಿ) ಅನ್ನು ಪರಿಗಣಿಸುವ ಸಾಧ್ಯತೆಗಳಿವೆ. ಅದರ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಒಂದಾದ ಹ್ಯುಂಡೈ ವೆನ್ಯೂ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ನೀಡುವುದರ ಜೊತೆಗೆ, ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುತ್ತದೆ. ಆದ್ದರಿಂದ ನೀವು ಈ ಎರಡು ಮೊಡೆಲ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಲು ಯೋಜಿಸುತ್ತಿದ್ದರೆ, ನಿಮಗಾಗಿ ಸರಿಯಾದದನ್ನು ಆಯ್ಕೆ ಮಾಡಲು ಸಹಾಯ ಮಾಡಲು ಅವರ ವಿವರವಾದ ಹೋಲಿಕೆ ಇಲ್ಲಿದೆ:

ಗಾತ್ರದ ಹೋಲಿಕೆ

ಗಾತ್ರ

ಮಹೀಂದ್ರಾ ಎಕ್ಸ್‌ಯುವಿ 3XO

ಹ್ಯುಂಡೈ ವೆನ್ಯೂ

ಉದ್ದ

3990 ಮಿ.ಮೀ

3995 ಮಿ.ಮೀ

ಅಗಲ

1821 ಮಿ.ಮೀ

1770 ಮಿ.ಮೀ

ಎತ್ತರ

1647 ಮಿ.ಮೀ

1617 ಮಿ.ಮೀ (ರೂಫ್‌ರೇಲ್ಸ್‌ನೊಂದಿಗೆ)

ವೀಲ್‌ಬೇಸ್‌

2600 ಮಿ.ಮೀ

2500 ಮಿ.ಮೀ

ಬೂಟ್‌ ಸ್ಪೇಸ್‌

364 ಲೀಟರ್‌ಗಳು

350 ಲೀಟರ್‌ಗಳು

  • ಇವೆರಡರ ನಡುವೆ ಎಲ್ಲಾ ಆಯಾಮಗಳಲ್ಲಿ ಮಹೀಂದ್ರಾ ಎಸ್‌ಯುವಿಯು ದೊಡ್ಡದಾಗಿದೆ.

  • ಎಕ್ಸ್‌ಯುವಿ 3XO ಹೊಂದಿರುವ ಹೆಚ್ಚುವರಿ 100 ಎಂಎಂ ವ್ಹೀಲ್‌ಬೇಸ್ ವೆನ್ಯೂಗಿಂತ ಕ್ಯಾಬಿನ್‌ನೊಳಗೆ ಹೆಚ್ಚು ಲೆಗ್ ರೂಮ್ ಹೊಂದಿರುವಂತೆ ಮಾಡುತ್ತದೆ.

  • ಎಕ್ಸ್‌ಯುವಿ 3XO ಹೆಚ್ಚುವರಿ 14 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಪವರ್‌ಟ್ರೇನ್‌

ವಿಶೇಷಣಗಳು

ಮಹೀಂದ್ರಾ ಎಕ್ಸ್‌ಯುವಿ 3XO

ಹ್ಯುಂಡೈ ವೆನ್ಯೂ

ಎಂಜಿನ್‌

1.2-ಲೀಟರ್ ಟರ್ಬೊ-ಪೆಟ್ರೋಲ್/ 1.2-ಲೀಟರ್ TGDi ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

1.2-ಲೀಟರ್ ನ್ಯಾ/ಎ ಪೆಟ್ರೋಲ್/ 1-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌

112 ಪಿಎಸ್/ 130 ಪಿಎಸ್

117 ಪಿಎಸ್

83 ಪಿಎಸ್/ 120 ಪಿಎಸ್

116 ಪಿಎಸ್

ಟಾರ್ಕ್‌

200 ಎನ್‌ಎಮ್‌/ 250 ಎನ್‌ಎಮ್‌ವರೆಗೆ

300 ಎನ್ಎಂ

115 ಎನ್‌ಎಮ್‌/ 172 ಎನ್‌ಎಮ್‌

250 ಎನ್ಎಂ

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಎಎಮ್‌ಟಿ

5-ಸ್ಪೀಡ್ ಮ್ಯಾನುಯಲ್‌/ 6-ಸ್ಪೀಡ್ ಮ್ಯಾನುಯಲ್‌, 7-ಸ್ಪೀಡ್ ಡಿಸಿಟಿ

6-ಸ್ಪೀಡ್‌ ಮ್ಯಾನುಯಲ್‌ MT

ಕ್ಲೈಮ್‌ ಮಾಡಲಾದ ಮೈಲೇಜ್‌ (ARAI)

ಪ್ರತಿ ಲೀ.ಗೆ18.89 ಕಿ.ಮೀ., ಪ್ರತಿ ಲೀ.ಗೆ 17.96 ಕಿ.ಮೀ./ ಪ್ರತಿ ಲೀ.ಗೆ 20.1 ಕಿ.ಮೀ., ಪ್ರತಿ ಲೀ.ಗೆ 18.2ಕಿ.ಮೀ.

18.89 ಕಿ.ಮೀ., ಪ್ರತಿ ಲೀ.ಗೆ 17.96 ಕಿ.ಮೀ./ ಪ್ರತಿ ಲೀ.ಗೆ 20.1 ಕಿ.ಮೀ., ಪ್ರತಿ ಲೀ.ಗೆ 18.2ಕಿ.ಮೀ.

ಲಭ್ಯವಿಲ್ಲ

ಲಭ್ಯವಿಲ್ಲ

  • ಇಲ್ಲಿರುವ ಎರಡೂ ಸಬ್‌ಕಾಂಪ್ಯಾಕ್ಟ್ SUVಗಳು 1.5-ಲೀಟರ್ ಡೀಸೆಲ್ ಪವರ್‌ಟ್ರೇನ್ ಸೇರಿದಂತೆ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

  • ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎರಡು ಎಸ್‌ಯುವಿಗಳ ನಡುವೆ ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಔಟ್‌ಪುಟ್ ಅನ್ನು ಹೊಂದಿದೆ, ನೀವು ಯಾವ ಇಂಧನ ಅಥವಾ ಎಂಜಿನ್ ಅನ್ನು ಆರಿಸಿಕೊಂಡರೂ ಪರವಾಗಿಲ್ಲ.

  • ಎಕ್ಸ್‌ಯುವಿ 3ಎಕ್ಸ್‌ಒವು ತನ್ನ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಹೊಸ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಆಯ್ಕೆಯನ್ನು ಹೊಂದಿದ್ದರೆ, ಹುಂಡೈ ಎಸ್‌ಯುವಿಯು ಟರ್ಬೋಚಾರ್ಜ್ಡ್ ಯುನಿಟ್‌ನೊಂದಿಗೆ 7-ಸ್ಪೀಡ್ DCT (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ನೊಂದಿಗೆ ಬರುತ್ತದೆ.

  • ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಅನ್ನು ಅದರ ಡೀಸೆಲ್ ಎಂಜಿನ್‌ನೊಂದಿಗೆ 6-ಸ್ಪೀಡ್ AMT ಆಯ್ಕೆಯೊಂದಿಗೆ ನೀಡುತ್ತದೆ, ಆದರೆ ವೆನ್ಯೂನ ಡೀಸೆಲ್ ಎಂಜಿನ್‌ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಅನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ.

ಇದನ್ನೂ ಓದಿ: ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ Vs ಕಿಯಾ ಸೋನೆಟ್: ಸಂಪೂರ್ಣ ಹೋಲಿಕೆ

ತಂತ್ರಜ್ಞಾನದ ಹೈಲೈಟ್‌ಗಳು

ವೈಶಿಷ್ಟ್ಯಗಳು

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ

ಹ್ಯುಂಡೈ ವೆನ್ಯೂ

ಹೊರಭಾಗ

  • ದ್ವಿ-ಎಲ್ಇಡಿ ಆಟೋಮ್ಯಾಟಿಕ್‌ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

  • ಎಲ್ಇಡಿ ಡಿಆರ್‌ಎಲ್‌ಗಳು

  • ಎಲ್ಇಡಿ ಫ್ರಂಟ್ ಫಾಗ್ ಲ್ಯಾಂಪ್ಸ್

  • 17 ಇಂಚಿನ ಅಲಾಯ್ ವೀಲ್‌ಗಳು

  • ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳು

  • ಆಟೋ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

  • ಎಲ್ಇಡಿ ಡಿಆರ್‌ಎಲ್‌ಗಳು

  • 16-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳು

  • ಕಾರ್ನರಿಂಗ್ ಲ್ಯಾಂಪ್‌ಗಳು

  • ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳು

  • ಕೆಂಪು ಬ್ರೇಕ್ ಕ್ಯಾಲಿಪರ್‌ಗಳು (ನೈಟ್ ಎಡಿಷನ್‌)

ಇಂಟೀರಿಯರ್

  • ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್

  • ಲೆಥೆರೆಟ್ ಅಪ್ಹೋಲ್ಸ್‌ಟೆರಿ

  • 60:40 ಸ್ಪ್ಲಿಟ್-ಫೋಲ್ಡಿಂಗ್ ಹಿಂದಿನ ಸೀಟುಗಳು

  • ಸ್ಟೋರೇಜ್‌ನೊಂದಿಗೆ ಮುಂಭಾಗದ ಮಧ್ಯಭಾಗದ ಆರ್ಮ್‌ರೆಸ್ಟ್

  • ಕಪ್‌ಹೋಲ್ಡರ್‌ಗಳೊಂದಿಗೆ ಹಿಂಭಾಗದ ಮಧ್ಯದ ಆರ್ಮ್‌ರೆಸ್ಟ್

  • ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್

  • ಲೆಥೆರೆಟ್ ಅಪ್ಹೋಲ್ಸ್‌ಟೆರಿ

  • ಪೆಡಲ್‌ಗಳಿಗೆ ಮೆಟಲ್ ಫಿನಿಶ್ (ನೈಟ್ ಎಡಿಷನ್‌)

  • ಹಿಂದಿನ ಸೀಟುಗಳನ್ನು 60:40 ಸ್ಪ್ಲಿಟ್-ಫೋಲ್ಡಿಂಗ್

  • 2-ಹಂತದಲ್ಲಿ ಒರಗಿಸಬಹುದಾದ ಹಿಂದಿನ ಸೀಟು

  • ಸ್ಟೋರೇಜ್‌ನೊಂದಿಗೆ ಮುಂಭಾಗದ ಮಧ್ಯಭಾಗದ ಆರ್ಮ್‌ರೆಸ್ಟ್

ಸೌಕರ್ಯ ಮತ್ತು ಸೌಲಭ್ಯ

  • ಪನೋರಮಿಕ್ ಸನ್‌ರೂಫ್

  • ಹಿಂಭಾಗದ ದ್ವಾರಗಳೊಂದಿಗೆ ಡ್ಯುಯಲ್-ಜೋನ್ ಎಸಿ

  • ಕೂಲ್ಡ್ ಗ್ಲೋವ್‌ಬಾಕ್ಸ್‌

  • ವೈರ್‌ಲೆಸ್ ಫೋನ್ ಚಾರ್ಜರ್

  • ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು

  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

  • ಪವರ್-ಫೋಲ್ಡಿಂಗ್ ಮತ್ತು ಪವರ್-ಅಡ್ಜಸ್ಟಬಲ್ ORVM ಗಳು

  • ಆಟೋ-ಡಿಮ್ಮಿಂಗ್ IRVM

  • ಕ್ರೂಸ್ ಕಂಟ್ರೋಲ್

  • ಡ್ರೈವ್ ಮೋಡ್‌ಗಳು (ಪೆಟ್ರೋಲ್-ಆಟೋಮ್ಯಾಟಿಕ್‌ನಲ್ಲಿ ಮಾತ್ರ)

  • ಸನ್‌ರೂಫ್

  • ಹಿಂಭಾಗದ ವೆಂಟ್‌ನೊಂದಿಗೆ ಆಟೋ ಎಸಿ

  • ಕೂಲ್ಡ್ ಗ್ಲೋವ್‌ಬಾಕ್ಸ್‌

  • ವೈರ್‌ಲೆಸ್ ಫೋನ್ ಚಾರ್ಜರ್

  • 4-ವೇ ಪವರ್-ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು

  • ಆಂಬಿಯೆಂಟ್ ಲೈಟಿಂಗ್

  • ಪ್ಯಾಡಲ್ ಶಿಫ್ಟರ್‌ಗಳು

  • ಪುಶ್-ಬಟನ್ ಸ್ಟಾರ್ಟ್/ಸ್ಟಾಪ್

  • ಆಟೋ-ಡಿಮ್ಮಿಂಗ್ IRVM

  • ಕ್ರೂಸ್ ಕಂಟ್ರೋಲ್

  • ಪವರ್-ಹೊಂದಾಣಿಕೆ ಮತ್ತು ಪವರ್-ಫೋಲ್ಡಿಂಗ್ ORVM ಗಳು

  • ಏರ್ ಪ್ಯೂರಿಫೈಯರ್

  • ಡ್ರೈವ್ ಮೋಡ್‌ಗಳು (DCT ಯಲ್ಲಿ ಮಾತ್ರ)

ಇನ್ಫೋಟೈನ್ಮೆಂಟ್

  • 10.25-ಇಂಚಿನ ಟಚ್‌ಸ್ಕ್ರೀನ್

  • 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

  • 7-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

  • ಕನೆಕೆಡ್‌ ಕಾರ್ ಟೆಕ್

  • 8 ಇಂಚಿನ ಟಚ್‌ಸ್ಕ್ರೀನ್

  • ಅರೆ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

  • ಕನೆಕ್ಟೆಡ್‌ ಕಾರ್ ಟೆಕ್

  • 6-ಸ್ಪೀಕರ್ ಸೌಂಡ್ ಸಿಸ್ಟಮ್

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

ಸುರಕ್ಷತೆ

  • 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್)

  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC)

  • 360 ಡಿಗ್ರಿ ಕ್ಯಾಮೆರಾ

  • ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು

  • ಹಿಂದಿನ ವೈಪರ್ ಮತ್ತು ವಾಷರ್

  • ಹಿಂದಿನ ಡಿಫಾಗರ್

  • EBD ಜೊತೆಗೆ ಎಬಿಎಸ್

  • ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)

  • ಆಟೋ ಹೊಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

  • ISOFIX ಚೈಲ್ಡ್ ಸೀಟ್ ಆಂಕರ್‌ಗಳು

  • ಹಂತ-2 ADAS (ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಸೈನ್ ರೆಕಗ್ನಿಷನ್, ಲೇನ್ ಕೀಪ್ ಅಸಿಸ್ಟ್, ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌)

  • 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್)

  • ESC

  • ಹಿಂದಿನ ವೈಪರ್ ಮತ್ತು ವಾಷರ್

  • ಹಿಂದಿನ ಡಿಫಾಗರ್

  • EBD ಜೊತೆಗೆ ಎಬಿಎಸ್

  • ರಿವರ್ಸ್‌ ಕ್ಯಾಮೆರಾ

  • ಟಿಪಿಎಂಎಸ್

  • ISOFIX ಚೈಲ್ಡ್ ಸೀಟ್ ಮೌಂಟ್‌ಗಳು

  • ಹಂತ-1 ADAS (ಮುಂದಕ್ಕೆ ಘರ್ಷಣೆ ಎಚ್ಚರಿಕೆ, ಲೇನ್ ಕೀಪ್ ಅಸಿಸ್ಟ್, ಚಾಲಕ ಗಮನ ಎಚ್ಚರಿಕೆ, ಇತ್ಯಾದಿ)

  • ವೈಶಿಷ್ಟ್ಯಗಳ ಸೌಕರ್ಯಗಳು ಮತ್ತು ತಂತ್ರಜ್ಞಾನದ ವಿಷಯದಲ್ಲಿ, ಎಕ್ಸ್‌ಯುವಿ 3XO ವು ಸೆಗ್ಮೆಂಟ್‌ನ-ಮೊದಲ ಪನೋರಮಿಕ್ ಸನ್‌ರೂಫ್, ಡ್ಯುಯಲ್-ಜೋನ್ AC ಮತ್ತು ದೊಡ್ಡ 10.25-ಇಂಚಿನ ಡಿಸ್‌ಪ್ಲೇಗಳ ರೂಪದಲ್ಲಿ ಕೆಲವು ಪ್ರಯೋಜನಗಳನ್ನು ಹೊಂದಿದೆ.

  • ಏರ್ ಪ್ಯೂರಿಫೈಯರ್ ಮತ್ತು 4-ವೇ ಪವರ್-ಅಡ್ಜಸ್ಟಬಲ್ ಡ್ರೈವರ್ ಸೀಟ್ ಸೇರಿದಂತೆ ವೆನ್ಯೂ ತನ್ನದೇ ಆದ ವಿಶಿಷ್ಟ ಸಾಧನಗಳನ್ನು ಹೊಂದಿದೆ.

  • ಸುರಕ್ಷತೆಯ ವಿಷಯಕ್ಕೆ ಬಂದಾಗ, ಎರಡೂ ಮಾದರಿಗಳು ಸುಸಜ್ಜಿತವಾಗಿವೆ ಏಕೆಂದರೆ ಎರಡೂ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), ESC, TPMS ಮತ್ತು ಬೇಸಿಕ್‌ ADAS ವೈಶಿಷ್ಟ್ಯಗಳನ್ನು ಪಡೆಯುತ್ತವೆ.

  • ಇದರೊಂದಿಗೆ, ಎಕ್ಸ್‌ಯುವಿ 3XOವು 360-ಡಿಗ್ರಿ ಕ್ಯಾಮೆರಾ, ಆಟೋ-ಹೋಲ್ಡ್ ಹೊಂದಿರುವ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಬಲವಾದ ADAS ಸೂಟ್‌ಗಳನ್ನು ಹೊಂದಿದೆ.

  • ADAS ಅನ್ನು ಪಡೆದ ಮೊದಲ ಸಬ್‌-4ಎಮ್‌ ಎಸ್‌ಯುವಿ ಆಗಿರುವ ವೆನ್ಯೂ, ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಹೈ-ಬೀಮ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಬೆಲೆಯ ರೇಂಜ್‌

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ

ಹ್ಯುಂಡೈ ವೆನ್ಯೂ

ಬೆಲೆ ರೇಂಜ್‌

7.49 ಲಕ್ಷ ರೂ.ನಿಂದ 15.49 ಲಕ್ಷ ರೂ. (ಪರಿಚಯಾತ್ಮಕ)

7.94 ಲಕ್ಷ ರೂ.ನಿಂದ 13.48 ಲಕ್ಷ ರೂ.

  • ಎಕ್ಸ್‌ಯುವಿ 3XOವು ವೆನ್ಯೂಗಿಂತ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿದೆ.

  • ಆದರೆ, ವೆನ್ಯೂನ ಟಾಪ್‌ ವೇರಿಂಟ್‌, XUV 3XO ನ ಟಾಪ್‌ ವೇರಿಯೆಂಟ್‌ಗಿಂತ ಸುಮಾರು 2 ಲಕ್ಷ ರೂ.ವರೆಗೆ ಕಡಿಮೆ ಬೆಲೆಯನ್ನು ಹೊಂದಿದೆ.

  • ಈ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಇತರ ಪ್ರತಿಸ್ಪರ್ಧಿಗಳೆಂದರೆ ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್.

ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳು

ಇನ್ನಷ್ಟು ಓದಿ : ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಎಎಮ್‌ಟಿ

r
ಅವರಿಂದ ಪ್ರಕಟಿಸಲಾಗಿದೆ

rohit

  • 23 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ XUV 3XO

Read Full News

explore similar ಕಾರುಗಳು

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಜೂನ್ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ