• English
    • Login / Register

    Mahindra XUV 3XO ವರ್ಸಸ್ Mahindra XUV300: ಪ್ರಮುಖ ವ್ಯತ್ಯಾಸಗಳು

    ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ಗಾಗಿ rohit ಮೂಲಕ ಏಪ್ರಿಲ್ 30, 2024 10:33 pm ರಂದು ಪ್ರಕಟಿಸಲಾಗಿದೆ

    • 43 Views
    • ಕಾಮೆಂಟ್‌ ಅನ್ನು ಬರೆಯಿರಿ

    ಅಪ್ಡೇಟ್ ಆಗಿರುವ XUV300 ಹೊಸ ಹೆಸರಿನ ಜೊತೆಗೆ ಅದರ ಹೊಚ್ಚ ಹೊಸ ಶೈಲಿಯೊಂದಿಗೆ ಸಂಪೂರ್ಣ ವಿಭಿನ್ನವಾಗಿ ಕಾಣುತ್ತದೆ. ಇದು ಈಗ ಅದರ ಸೆಗ್ಮೆಂಟ್ ನಲ್ಲಿ ಹೆಚ್ಚು ಫೀಚರ್ ಗಳನ್ನು ಹೊಂದಿರುವ ಕಾರುಗಳಲ್ಲಿ ಒಂದಾಗಿದೆ.

    Mahindra XUV 3XO vs Mahindra XUV300 compared in images

    ಮಹೀಂದ್ರಾ XUV 3XO ಅನ್ನು XUV300 ನ ಫೇಸ್‌ಲಿಫ್ಟ್ ಆಗಿ ಮಾರುಕಟ್ಟೆಗೆ ತರಲಾಗಿದೆ. ಮಹೀಂದ್ರಾದ ಅಪ್‌ಡೇಟ್ ಮಾಡಲಾದ ಸಬ್‌ಕಾಂಪ್ಯಾಕ್ಟ್ SUV ಹೊರಭಾಗದಲ್ಲಿ ದೊಡ್ಡ ಬದಲಾವಣೆಯನ್ನು ಪಡೆದುಕೊಂಡಿದೆ, ಜೊತೆಗೆ XUV400 EV ನಿಂದ ಸ್ಫೂರ್ತಿ ಪಡೆದ ಸಂಪೂರ್ಣ ಹೊಸ ಒಳಭಾಗ, ಮತ್ತು ಸಾಕಷ್ಟು ಹೊಸ ಫೀಚರ್ ಗಳನ್ನು ಸೇರಿಸಲಾಗಿದೆ. ಈ ಲೇಖನದಲ್ಲಿ, XUV 3XO ತನ್ನ ಹಳೆಯ ವರ್ಷನ್ ಗಿಂತ ಹೇಗೆ ಭಿನ್ನವಾಗಿ ಕಾಣುತ್ತದೆ ಎಂಬುದನ್ನು ನಾವು ನೋಡೋಣ.

     ಮುಂಭಾಗ

    Mahindra XUV 3XO front
    Mahindra XUV300 front

     XUV300 ಗೆ ಹೋಲಿಸಿದರೆ ಮಹೀಂದ್ರಾ ತನ್ನ XUV 3XO ಅನ್ನು ಮರುವಿನ್ಯಾಸಗೊಳಿಸಲಾದ ಮತ್ತು ಸ್ಪ್ಲಿಟ್ ಗ್ರಿಲ್‌ನೊಂದಿಗೆ ನೀಡುತ್ತಿದೆ. ಇದು ಐದು ಕ್ರೋಮ್ ಸ್ಲ್ಯಾಟ್‌ಗಳು ಮತ್ತು ಹೊಸ ಮಹೀಂದ್ರ ಲೋಗೋವನ್ನು ಪಡೆಯುತ್ತದೆ. ನೀವು ಉದ್ದವಾದ ಫಾಂಗ್-ಆಕಾರದ LED DRL ಗಳನ್ನು ಮತ್ತು ಅಪ್ಡೇಟ್ ಆಗಿರುವ ಹೆಡ್‌ಲೈಟ್ ಕ್ಲಸ್ಟರ್‌ಗಳ ಹೌಸಿಂಗ್ ಪ್ರೊಜೆಕ್ಟರ್ ಯೂನಿಟ್ ಗಳನ್ನು ಕೂಡ ನೋಡಬಹುದು. ಅದರ ಟ್ವೀಕ್ ಮಾಡಿದ ಬಂಪರ್ ದೊಡ್ಡ ಏರ್ ಡ್ಯಾಮ್, ಮುಂಭಾಗದ ಕ್ಯಾಮರಾ ಮತ್ತು ಅಡ್ವಾನ್ಸಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳಿಗಾಗಿ (ADAS) ರಾಡಾರ್ ಅನ್ನು ಹೊಂದಿದೆ.

     ಸೈಡ್

    Mahindra XUV 3XO side
    Mahindra XUV300 side

     XUV 3XO ಹೊಸದಾಗಿ ಡಿಸೈನ್ ಮಾಡಲಾದ 17-ಇಂಚಿನ ಡ್ಯುಯಲ್-ಟೋನ್ ಅಲೊಯ್ ವೀಲ್ಸ್ ನೊಂದಿಗೆ ಬರುತ್ತದೆ. ಇದು ಬಿಟ್ಟರೆ, SUV ಯ ಸೈಡ್ ನಲ್ಲಿ ಅಂತಹ ಹೆಚ್ಚು ಬದಲಾವಣೆಯನ್ನು ಮಾಡಲಾಗಿಲ್ಲ.

     ಹಿಂಭಾಗ

    Mahindra XUV 3XO rear
    Mahindra XUV300 rear

     ಹಿಂಭಾಗದಲ್ಲಿ ನೀಡಿರುವ ದೊಡ್ಡ ಬದಲಾವಣೆಯೆಂದರೆ ರಾಪ್ ಅರೌಂಡ್ ಮತ್ತು ಕನೆಕ್ಟೆಡ್ LED ಟೈಲ್ ಲೈಟ್‌ಗಳು. ಇದು ಈಗ ಹೊಸ 'XUV 3XO' ಮತ್ತು ಈ ವೇರಿಯಂಟ್ ಗಾಗಿ ನೀಡಲಾಗಿರುವ ಮಾನಿಕರ್‌ಗಳನ್ನು ಮತ್ತು ದಪ್ಪವಾದ ಸಿಲ್ವರ್ ಸ್ಕಿಡ್ ಪ್ಲೇಟ್ ಇರುವ ಟ್ವೀಕ್ ಮಾಡಿದ ಬಂಪರ್ ಅನ್ನು ಹೊಂದಿದೆ.

     ಇದನ್ನು ಕೂಡ ಓದಿ: ಮಹೀಂದ್ರ ಥಾರ್ 5-ಡೋರ್ ಇಂಟೀರಿಯರ್ ಫೋಟೋಗಳು ಮತ್ತೆ ಲೀಕ್ - ADAS ಪಡೆಯುವ ಸಾಧ್ಯತೆ?

     ಕ್ಯಾಬಿನ್

    Mahindra XUV 3XO cabin
    Mahindra XUV300 cabin

     ಮಹೀಂದ್ರಾ ತನ್ನ XUV300 ಒಳಭಾಗವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಮಹೀಂದ್ರಾ 3XO ಅದರ XUV400 ನಲ್ಲಿರುವ ಎರಡು ಡಿಜಿಟಲ್ ಸ್ಕ್ರೀನ್ ಮತ್ತು ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದು ಡ್ಯಾಶ್‌ಬೋರ್ಡ್‌ನಲ್ಲಿ ಸಾಫ್ಟ್ ಟಚ್ ಲೆಥರ್ ಫಿನಿಷ್, 65 W USB ಟೈಪ್-C ಫಾಸ್ಟ್ ಚಾರ್ಜಿಂಗ್ ಪೋರ್ಟ್, ಸೆಂಟ್ರಲ್ AC ವೆಂಟ್‌ಗಳನ್ನು ಸ್ಥಳಾಂತರಿಸಿ ರಿವೈಸ್ ಮಾಡಲಾಗಿದೆ ಮತ್ತು ಅಪ್ಡೇಟ್ ಆಗಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ನೀಡಲಾಗಿದೆ.

     ದೊಡ್ಡ ಟಚ್‌ಸ್ಕ್ರೀನ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

    Mahindra XUV 3XO 10.25-inch touchscreen
    Mahindra XUV300 7-inch touchscreen

     ಹಳೆಯ XUV300 7-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿತ್ತು, ಆದರೆ XUV 3XO ಯು XUV400 ನಿಂದ ಪಡೆದ 10.25-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ನೀವು ಯಾವ ವರ್ಷನ್ ಅನ್ನು ಖರೀದಿಸುತ್ತೀರಿ ಎಂಬುದರ ಆಧಾರದ ಮೇಲೆ ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಪೋರ್ಟ್ ಮಾಡುತ್ತದೆ.

    Mahindra XUV 3XO 10.25-inch digital driver's display
    Mahindra XUV300 twin-pod analogue instrument cluster

     XUV 3XO ಕೂಡ XUV400 EV ಯಲ್ಲಿರುವ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಅನ್ನು ಹೊಂದಿದೆ. ಆ ಮೂಲಕ ಹಳೆಯ-ಶೈಲಿಯ ಎರಡು ಪ್ರತ್ಯೇಕ ಡಯಲ್‌ಗಳಿರುವ ಅನಲಾಗ್ ಕ್ಲಸ್ಟರ್ ಅನ್ನು ಬದಲಿಸಲಾಗಿದೆ.

     ಇದನ್ನು ಕೂಡ ಓದಿ: ಬೇಸಿಗೆಯಲ್ಲಿ ನಿಮ್ಮ ಕಾರಿನ AC ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಹೇಗೆ

     ಸನ್‌ರೂಫ್‌

    Mahindra XUV 3XO panoramic sunroof
    Mahindra XUV300 sunroof

    ಪ್ರಿ-ಫೇಸ್‌ಲಿಫ್ಟ್ XUV300 ಗೆ ಹೋಲಿಸಿದರೆ XUV 3XO ನಲ್ಲಿ ಹೊಸದಾಗಿ ಬಂದಿರುವ ಮತ್ತೊಂದು ಫೀಚರ್ ಎಂದರೆ ಪನೋರಮಿಕ್ ಸನ್‌ರೂಫ್. XUV300 ಅದೇ ಸೆಗ್ಮೆಂಟ್ ನ ಬೇರೆ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಸನ್‌ರೂಫ್ ಅನ್ನು ಹೊಂದಿದೆ.

     ಇತರ ಫೀಚರ್ ಗಳ ವಿವರ

     ಮಹೀಂದ್ರಾ XUV 3XO ಅನ್ನು 7-ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್ (ಸಬ್ ವೂಫರ್ ಸೇರಿದಂತೆ), ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಡ್ಯುಯಲ್-ಜೋನ್ ACಯಂತಹ ಹೆಚ್ಚಿನ ಫೀಚರ್ ಗಳೊಂದಿಗೆ ನೀಡುತ್ತಿದೆ. ಇದರ ಸುರಕ್ಷತಾ ತಂತ್ರಜ್ಞಾನವು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ ಆಗಿ ನೀಡಲಾಗುವ), 360-ಡಿಗ್ರಿ ಕ್ಯಾಮೆರಾ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಮತ್ತು ಲೆವೆಲ್-2 ಅಡ್ವಾನ್ಸಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳನ್ನು (ADAS) ಒಳಗೊಂಡಿದೆ.

     ಎಂಜಿನ್-ಗೇರ್‌ಬಾಕ್ಸ್ ಆಯ್ಕೆಗಳು

     ಹಳೆ ಮಾಡೆಲ್ ನಲ್ಲಿ ಇರುವಂತೆ, XUV 3XO ಕೂಡ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಬರುತ್ತದೆ. ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ:

     ಸ್ಪೆಸಿಫಿಕೇಷನ್

     .2-ಲೀಟರ್ ಟರ್ಬೊ-ಪೆಟ್ರೋಲ್

    1.2-ಲೀಟರ್ TGDi ಟರ್ಬೊ-ಪೆಟ್ರೋಲ್

     1.5-ಲೀಟರ್ ಡೀಸೆಲ್

     ಪವರ್

    112 PS

    130 PS

    117 PS

     ಟಾರ್ಕ್

    200 Nm

    230 Nm, 250 Nm

    300 Nm

     ಟ್ರಾನ್ಸ್‌ಮಿಷನ್

     6-ಸ್ಪೀಡ್ MT, 6-ಸ್ಪೀಡ್ AT

    6-ಸ್ಪೀಡ್ MT, 6-ಸ್ಪೀಡ್ AT

     6-ಸ್ಪೀಡ್ MT, 6-ಸ್ಪೀಡ್ AT

     ಕ್ಲೇಮ್ ಮಾಡಿರುವ ಮೈಲೇಜ್

     ಪ್ರತಿ ಗಂಟೆಗೆ 18.89 ಕಿ.ಮೀ, ಪ್ರತಿ ಗಂಟೆಗೆ 17.96 ಕಿ.ಮೀ

     ಪ್ರತಿ ಗಂಟೆಗೆ 20.1 ಕಿ.ಮೀ, ಪ್ರತಿ ಗಂಟೆಗೆ 18.2 ಕಿ.ಮೀ

     ಪ್ರತಿ ಗಂಟೆಗೆ 20.6 ಕಿ.ಮೀ, ಪ್ರತಿ ಗಂಟೆಗೆ 21.2 ಕಿ.ಮೀ

     ಪೆಟ್ರೋಲ್-ಆಟೋಮ್ಯಾಟಿಕ್ ವೇರಿಯಂಟ್ ಗಳಲ್ಲಿ ಮೂರು ಡ್ರೈವ್ ಮೋಡ್‌ಗಳಿವೆ: ಜಿಪ್, ಜ್ಯಾಪ್ ಮತ್ತು ಜೂಮ್.

     ಬೆಲೆ ಮತ್ತು ಪ್ರತಿಸ್ಪರ್ಧಿಗಳು

     ಮಹೀಂದ್ರಾ XUV 3XO ಬೆಲೆಯು ರೂ 7.49 ಲಕ್ಷದಿಂದ ಶುರುವಾಗಿ ರೂ 15.49 ಲಕ್ಷದವರೆಗೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ. ಇದು ಕಿಯಾ ಸೋನೆಟ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮುಂಬರುವ ಸ್ಕೋಡಾ ಸಬ್-4m SUV ಗೆ ಪ್ರತಿಸ್ಪರ್ಧಿಯಾಗಿದೆ. ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4m ಕ್ರಾಸ್‌ಒವರ್‌ಗಳಿಗೆ XUV 3XO ಒಂದು ಪರ್ಯಾಯ SUV ಆಯ್ಕೆಯಾಗಿದೆ.

     ಇನ್ನಷ್ಟು ಓದಿ: ಮಹೀಂದ್ರಾ XUV 3XO ಆನ್ ರೋಡ್ ಬೆಲೆ

    was this article helpful ?

    Write your Comment on Mahindra ಎಕ್ಸ್ ಯುವಿ 3ಎಕ್ಸ್ ಒ

    explore ಇನ್ನಷ್ಟು on ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience