• English
  • Login / Register

Mahindra XUV700 AX5 ಸೆಲೆಕ್ಟ್ ಆವೃತ್ತಿ ಬಿಡುಗಡೆ, ಬೆಲೆಗಳು 16.89 ಲಕ್ಷ ರೂ.ನಿಂದ ಪ್ರಾರಂಭ

published on ಮೇ 23, 2024 07:35 pm by rohit for ಮಹೀಂದ್ರ ಎಕ್ಸ್‌ಯುವಿ 700

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ AX5 ಸೆಲೆಕ್ಟ್ ಆವೃತ್ತಿಗಳು 7-ಸೀಟರ್ ಲೇಔಟ್‌ನಲ್ಲಿ ಮಾತ್ರ ಲಭ್ಯವಿದೆ, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ

Mahindra XUV700 AX5 Select variants launched

  • ಈ ಎಸ್‌ಯುವಿಯ AX3 ಮತ್ತು AX5 ಟ್ರಿಮ್‌ಗಳ ನಡುವೆ ಹೊಸ AX5 ಸೆಲೆಕ್ಟ್ ಆವೃತ್ತಿ ಸ್ಥಾನ ಪಡೆಯಲಿದೆ.
  • ಭಾರತದದ್ಯಾಂತ ಈ ಹೊಸ ಆವೃತ್ತಿಯ ಬೆಲೆಗಳು16.89 ಲಕ್ಷ ರೂ.ನಿಂದ 18.99 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇರಲಿದೆ.
  • ಈ ಹೊಸ ಆವೃತ್ತಿಗಳು ರೆಗುಲರ್‌ AX5 ಆವೃತ್ತಿಗಳಿಗಿಂತ ಸುಮಾರು 1.40 ಲಕ್ಷ ರೂ.ವರೆಗೆ ಕಡಿಮೆ ಬೆಲೆಯನ್ನು ಹೊಂದಿದೆ.
  • ಬೋರ್ಡ್‌ನಲ್ಲಿರುವ ವೈಶಿಷ್ಟ್ಯಗಳು 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು, ಪನೋರಮಿಕ್ ಸನ್‌ರೂಫ್ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿವೆ.
  • ಎಸ್‌ಯುವಿಯ 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ಗಳ ಜೊತೆಗೆ ಅವುಗಳ ಗೇರ್‌ಬಾಕ್ಸ್‌ ಸೆಟ್‌ಗಳೊಂದಿಗೆ ಲಭ್ಯವಿದೆ.

 Mahindra XUV700 ಇದೀಗ ಹೊಸ ಮಿಡ್-ಸ್ಪೆಕ್ AX5 ಸೆಲೆಕ್ಟ್ (ಅಥವಾ AX5 S) ಟ್ರಿಮ್ ಅನ್ನು ಪಡೆದುಕೊಂಡಿದೆ, ಇದು AX3 ಮತ್ತು AX5 ಟ್ರಿಮ್‌ಗಳ ನಡುವೆ ಸ್ಥಾನವನ್ನು ಪಡೆಯುತ್ತಿದ್ದು, 7-ಸೀಟ್‌ನ ಲೇಔಟ್‌ನಲ್ಲಿ ಮಾತ್ರ ಲಭ್ಯವಿದೆ. ಇದು ತುಲನಾತ್ಮಕವಾಗಿ ಕಡಿಮೆ ಬೆಲೆಯ ಟ್ಯಾಗ್ ಅನ್ನು ಹೊಂದಿರುವುದರೊಂದಿಗೆ ಮುಂದಿನ-ಇನ್-ಲೈನ್ AX5 ಟ್ರಿಮ್‌ನ ಕೆಲವು ಪ್ರೀಮಿಯಂ ಮತ್ತು ಉಪಯುಕ್ತ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ವೇರಿಯೆಂಟ್‌-ವಾರು ಬೆಲೆಗಳು

ವೇರಿಯೆಂಟ್‌

AX5 ಸೆಲೆಕ್ಟ್‌ 

AX5

ವ್ಯತ್ಯಾಸ

ಪೆಟ್ರೋಲ್ ಮ್ಯಾನುಯಲ್‌

16.89 ಲಕ್ಷ ರೂ.

18.19 ಲಕ್ಷ ರೂ.

(1.30 ಲಕ್ಷ ರೂ.)

ಪೆಟ್ರೋಲ್ ಆಟೋಮ್ಯಾಟಿಕ್‌

18.49 ಲಕ್ಷ ರೂ

19.79 ಲಕ್ಷ ರೂ.

(1.30 ಲಕ್ಷ ರೂ.)

ಪೆಟ್ರೋಲ್ ಮ್ಯಾನುಯಲ್‌ ಇ

17.39 ಲಕ್ಷ ರೂ.

18.69 ಲಕ್ಷ ರೂ.

(1.30 ಲಕ್ಷ ರೂ.)

ಡೀಸೆಲ್ ಮ್ಯಾನುಯಲ್‌ (185 ಪಿಎಸ್)

17.49 ಲಕ್ಷ ರೂ.

18.79 ಲಕ್ಷ ರೂ.

(1.30 ಲಕ್ಷ ರೂ.)

ಡೀಸೆಲ್ ಮ್ಯಾನುಯಲ್‌ ಇ (185 ಪಿಎಸ್)

17.99 ಲಕ್ಷ ರೂ.

ಡೀಸೆಲ್ ಆಟೋಮ್ಯಾಟಿಕ್‌

18.99 ಲಕ್ಷ ರೂ.

20.39 ಲಕ್ಷ ರೂ.

(1.40 ಲಕ್ಷ ರೂ.)

ಮೇಲಿನ ಕೋಷ್ಟಕದಲ್ಲಿ ನೋಡಿದಂತೆ, ಹೊಸ AX5 ಸೆಲೆಕ್ಟ್‌ ಆವೃತ್ತಿಗಳು ರೆಗುಲರ್‌ AX5 ಆವೃತ್ತಿಗಳಿಗಿಂತ ಸುಮಾರು 1.40 ಲಕ್ಷ ರೂ.ವರೆಗೆ ಕಡಿಮೆ ಬೆಲೆಯನ್ನು ಹೊಂದಿದೆ.

ಕ್ಯಾಬಿನ್‌ನಲ್ಲಿರುವ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ತಂತ್ರಜ್ಞಾನ

Mahindra XUV700 AX5 Select variant panoramic sunroof

ಮಹೀಂದ್ರಾವು ತನ್ನ ಹೊಸ ಎಎಕ್ಸ್‌5 ಎಸ್‌ ಆವೃತ್ತಿಗಳನ್ನು ಪನೋರಮಿಕ್ ಸನ್‌ರೂಫ್, ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳೊಂದಿಗೆ (ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟೇಶನ್‌ಗಾಗಿ ತಲಾ ಒಂದು) ವೈರ್‌ಲೆಸ್ ಕನೆಕ್ಟಿವಿಟಿ, ಅಲೆಕ್ಸಾ ವಾಯ್ಸ್‌ ಅಸಿಸ್ಟೆಂಟ್‌ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್‌ನೊಂದಿಗೆ ಸಜ್ಜುಗೊಳಿಸಿದೆ. ಸುರಕ್ಷತೆಯ ದೃಷ್ಟಿಯಿಂದ, ಇದು ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುತ್ತದೆ.

ಮುಂದಿನ-ಇನ್-ಲೈನ್ AX5 ಟ್ರಿಮ್‌ಗೆ ಹೋಲಿಸಿದರೆ, AX5 S ಆವೃತ್ತಿಗಳಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಕಾರ್ನರ್ ಮಾಡುವ ಫಂಕ್ಷನ್‌, ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು, ಫಾಗ್ ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ರಿವರ್ಸಿಂಗ್ ಕ್ಯಾಮೆರಾ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳು ಲಭ್ಯವಿರುವುದಿಲ್ಲ.

ಇದನ್ನು ಸಹ ಓದಿ: Maruti Brezzaದಲ್ಲಿಲ್ಲದ ಈ 10 ಸೌಕರ್ಯಗಳನ್ನು ನೀಡುತ್ತಿರುವ Mahindra XUV 3XO

ಅದೇ ಪವರ್‌ಟ್ರೇನ್‌ಗಳು

ಈ ಎಸ್‌ಯುವಿಯ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳು ಬದಲಾಗದೆ ಉಳಿದಿರುವ ಒಂದು ವಿಭಾಗವಾಗಿದೆ. ಹೊಸ AX5 ಸೆಲೆಕ್ಟ್‌ ಆವೃತ್ತಿಗಳು ಈ ಕೆಳಗಿನ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತವೆ:

ಎಂಜಿನ್‌ಗಳು

2-ಲೀಟರ್ ಟರ್ಬೊ-ಪೆಟ್ರೋಲ್

2.2-ಲೀಟರ್ ಡೀಸೆಲ್

ಪವರ್‌

200 ಪಿಎಸ್‌

156 ಪಿಎಸ್‌/ 185 ಪಿಎಸ್‌

ಟಾರ್ಕ್‌

380 ಎನ್‌ಎಮ್‌

360 ಎನ್‌ಎಮ್‌/ 450 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

6-ಸ್ಪೀಡ್ ಮ್ಯಾನುಯಲ್‌/ 6-ಸ್ಪೀಡ್ ಮ್ಯಾನುಯಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

ಎಸ್‌ಯುವಿಯ ಟಾಪ್‌-ಮೊಡೆಲ್‌ಗಳಾದ AX7 ಮತ್ತು AX7 L ಟ್ರಿಮ್‌ಗಳು ಮಾತ್ರ ಡೀಸೆಲ್ ಆಟೋಮ್ಯಾಟಿಕ್‌ ಪವರ್‌ಟ್ರೇನ್‌ನೊಂದಿಗೆ ಒಪ್ಶನಲ್‌ ಆಲ್-ವೀಲ್-ಡ್ರೈವ್ (AWD) ವ್ಯವಸ್ಥೆಯನ್ನು ಪಡೆಯುತ್ತವೆ.

ಮಹೀಂದ್ರಾ ಎಕ್ಸ್‌ಯುವಿ700ನ ಪ್ರತಿಸ್ಪರ್ಧಿಗಳು

Mahindra XUV700 AX5 Select variant badge

ಮಹೀಂದ್ರಾ ಎಕ್ಸ್‌ಯುವಿ700 ಮಾರುಕಟ್ಟೆಯಲ್ಲಿ MG ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಹ್ಯುಂಡೈ ಅಲ್ಕಾಜರ್ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ, ಆದರೆ ಇದರ 5-ಸೀಟರ್ ಆವೃತ್ತಿಯು ಟಾಟಾ ಹ್ಯಾರಿಯರ್ ಮತ್ತು MG ಹೆಕ್ಟರ್ ಗೆ ನೇರಸ್ಪರ್ಧಿಯಾಗಿದೆ. 

ಇನ್ನಷ್ಟು ಓದಿ : ಮಹೀಂದ್ರಾ ಎಕ್ಸ್‌ಯುವಿ700 ಆನ್‌ರೋಡ್‌ ಬೆಲೆ  

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಹೀಂದ್ರ ಎಕ್ಸ್‌ಯುವಿ 700

1 ಕಾಮೆಂಟ್
1
K
karthikeyan
May 24, 2024, 12:14:40 PM

Instead of Sunroof, M&M can afford to give rear camera, Foldable ORVM, big visible rear turn indicator. M&M can think smartly to have 2 varients. One is with ADAS and other as w/o ADAS.

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trendingಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience