• English
    • Login / Register

    Maruti Alto K10ಗೆ 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ಅತಿ ಕಡಿಮೆ ಬೆಲೆಯ ಕಾರು ಎಂಬ ಹೆಗ್ಗಳಿಕೆ

    ಮಾರುತಿ ಆಲ್ಟೊ ಕೆ10 ಗಾಗಿ dipan ಮೂಲಕ ಮಾರ್ಚ್‌ 03, 2025 08:15 pm ರಂದು ಪ್ರಕಟಿಸಲಾಗಿದೆ

    • 5 Views
    • ಕಾಮೆಂಟ್‌ ಅನ್ನು ಬರೆಯಿರಿ

    ಏರ್‌ಬ್ಯಾಗ್‌ಗಳನ್ನು ಸೇರಿಸುವುದರ ಜೊತೆಗೆ, ಆಲ್ಟೊ ಕೆ 10 ಪವರ್ ಮತ್ತು ಟಾರ್ಕ್‌ನಲ್ಲಿ ಸ್ವಲ್ಪ ಹೆಚ್ಚಳವನ್ನು ಪಡೆಯುತ್ತದೆ

    Maruti Alto K10 Becomes The Most Affordable Car In India With 6 Airbags As Standard

    • ಆಪ್‌ಡೇಟ್‌ನ ನಂತರ 7-ಇಂಚಿನ ಟಚ್‌ಸ್ಕ್ರೀನ್ ಮತ್ತು ಮ್ಯಾನುವಲ್ ಎಸಿ ಸೇರಿದಂತೆ ಸೌಲಭ್ಯಗಳೊಂದಿಗೆ ಫೀಚರ್‌ಗಳ ಸೂಟ್ ಬದಲಾಗದೆ ಉಳಿದಿದೆ.

    • ಇತರ ಸುರಕ್ಷತಾ ಫೀಚರ್‌ಗಳಲ್ಲಿ ಎಬಿಎಸ್‌ನೊಂದಿಗೆ ಇಬಿಡಿ, ESC ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಸೇರಿವೆ.

    • ಇದು 1-ಲೀಟರ್ ನ್ಯಾಚುರಲಿ ಆಸ್ಪಿರೇಟಡ್‌ ಎಂಜಿನ್‌ನೊಂದಿಗೆ ಬರುತ್ತದೆ, ಅದು ಈಗ 68.5 ಪಿಎಸ್‌ ಮತ್ತು 91 ಎನ್‌ಎಮ್‌ (1.5 ಪಿಎಸ್‌ ಮತ್ತು 2 ಎನ್‌ಎಮ್‌ ಹೆಚ್ಚು) ಉತ್ಪಾದಿಸುತ್ತದೆ.

    • ಒಪ್ಶನಲ್‌ ಸಿಎನ್‌ಜಿ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ, ಇದು 57 ಪಿಎಸ್‌ ಮತ್ತು 82 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ.

    • ಇದರ ಬೆಲೆ 4.09 ಲಕ್ಷ ರೂ.ಗಳಿಂದ 6.05 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ, ಪ್ಯಾನ್-ಇಂಡಿಯಾ) ಇದೆ.

    ಮಾರುತಿ ಸೆಲೆರಿಯೊ ಮತ್ತು ಬ್ರೆಝಾ ಕಾರುಗಳನ್ನು ಇತ್ತೀಚೆಗೆ 6 ಏರ್‌ಬ್ಯಾಗ್‌ಗಳೊಂದಿಗೆ (ಸ್ಟ್ಯಾಂಡರ್ಡ್ ಆಗಿ) ಆಪ್‌ಡೇಟ್‌ ಮಾಡಿದ ನಂತರ, ಮಾರುತಿ ಆಲ್ಟೊ K10 ಕಾರುಗಳನ್ನು ಸಹ ಸುರಕ್ಷತಾ ಫೀಚರ್‌ನೊಂದಿಗೆ ಆಪ್‌ಡೇಟ್‌ ಮಾಡಲಾಗಿದೆ. ಗಮನಾರ್ಹವಾಗಿ, ಆಲ್ಟೊ K10 ಸ್ಟ್ಯಾಂಡರ್ಡ್, ಎಲ್‌ಎಕ್ಸ್‌ಐ, ವಿಎಕ್ಸ್‌ಐ ಮತ್ತು ವಿಎಕ್ಸ್‌ಐ ಪ್ಲಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇವೆಲ್ಲವೂ ಆಪ್‌ಡೇಟ್‌ನ ಮೊದಲು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಪಡೆಯುತ್ತಿದ್ದವು. ಈಗ, ಈ ಎಲ್ಲಾ ವೇರಿಯೆಂಟ್‌ಗಳು ಚಾಲಕ ಮತ್ತು ಪ್ರಯಾಣಿಕರ ಏರ್‌ಬ್ಯಾಗ್‌ಗಳು, ಕರ್ಟನ್ ಏರ್‌ಬ್ಯಾಗ್‌ಗಳು ಮತ್ತು ಸೈಡ್ ಏರ್‌ಬ್ಯಾಗ್‌ಗಳನ್ನು ಸಹ ಒಳಗೊಂಡು, ಒಟ್ಟು ಸಂಖ್ಯೆಯು 6 ಕ್ಕೆ ಏರುತ್ತದೆ. ಇದನ್ನು ಹೊರತುಪಡಿಸಿ, ಆಲ್ಟೊ ಕೆ 10 ಗೆ ಬೇರೆ ಯಾವುದೇ ಆಪ್‌ಡೇಟ್‌ಅನ್ನು ನೀಡಲಾಗಿಲ್ಲ.

    ಲಭ್ಯವಿರುವ ಎಲ್ಲಾ ಸುರಕ್ಷತಾ ಫೀಚರ್‌ಗಳು

    Maruti Alto K10 gets 6 airbags as standard now

    ಆರು ಏರ್‌ಬ್ಯಾಗ್‌ಗಳ ಜೊತೆಗೆ, ಮಾರುತಿ ಆಲ್ಟೊ ಕೆ10 ಕಾರಿನಲ್ಲಿ ಇಬಿಡಿಯೊಂದಿಗೆ ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಎಲ್ಲಾ ಸೀಟುಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್, ಎಂಜಿನ್ ಇಮೊಬಿಲೈಸರ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ.

    ಇದನ್ನೂ ಓದಿ: MG Comet EV ಬ್ಲಾಕ್‌ಸ್ಟಾರ್ಮ್ ಎಡಿಷನ್‌ ಬಿಡುಗಡೆ

    ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳು

    Maruti Alto K10 dashboard

    ಆಪ್‌ಡೇಟ್‌ನೊಂದಿಗೆ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ ಸೂಟ್ ಅನ್ನು ಬದಲಾಯಿಸದೆ ಬಿಡಲಾಗಿದೆ, ಮತ್ತು ಆಲ್ಟೊ ಕೆ10 7-ಇಂಚಿನ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, 4-ಸ್ಪೀಕರ್ ಸೌಂಡ್ ಸಿಸ್ಟಮ್, ಮುಂಭಾಗದ ಪವರ್ ವಿಂಡೋಗಳು, ಮ್ಯಾನುವಲ್ AC, ಕೀಲೆಸ್ ಎಂಟ್ರಿ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ನೀಡುವುದನ್ನು ಮುಂದುವರೆಸಿದೆ.

    ಪವರ್‌ಟ್ರೈನ್‌ ಆಯ್ಕೆಗಳು

    Alto K10 engine

    ಮಾರುತಿ ಆಲ್ಟೊ ಕೆ10 ಕಾರು 1 ಲೀಟರ್ 3 ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು ಈಗ ಸ್ವಲ್ಪ ಹೆಚ್ಚಿನ ಪರ್ಫಾರ್ಮೆನ್ಸ್‌ಅನ್ನು ನೀಡುತ್ತದೆ. ಈ ಹ್ಯಾಚ್‌ಬ್ಯಾಕ್ ಸಿಎನ್‌ಜಿ ಆಯ್ಕೆಯೊಂದಿಗೆ ಸಹ ಲಭ್ಯವಿದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

    ಎಂಜಿನ್‌

    1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

    1-ಲೀಟರ್ ಪೆಟ್ರೋಲ್ + ಸಿಎನ್‌ಜಿ

    ಪವರ್‌

    68.5 ಪಿಎಸ್‌

    57 ಪಿಎಸ್‌

    ಟಾರ್ಕ್‌

    91 ಎನ್‌ಎಮ್‌

    82 ಎನ್‌ಎಮ್‌

    ಟ್ರಾನ್ಸ್‌ಮಿಷನ್‌

    5-ಸ್ಪೀಡ್‌ ಮ್ಯಾನ್ಯುವಲ್‌ / 5-ಸ್ಪೀಡ್‌ AMT*

    5-ಸ್ಪೀಡ್‌ ಮ್ಯಾನ್ಯುವಲ್‌

    ಇಂಧನ ದಕ್ಷತೆ (ಕ್ಲೈಮ್‌ ಮಾಡಲಾದ)

    ಪ್ರತಿ ಲೀ.ಗೆ 24.39 ಕಿ.ಮೀ. (ಮ್ಯಾನ್ಯುವಲ್‌) / 24.90 ಕಿ.ಮೀ.(AMT)

    ಪ್ರತಿ ಕೆ.ಜಿ.ಗೆ 33.40 ಕಿ.ಮೀ. 

    *AMT = ಆಟೋಮೆಟೆಡ್‌ ಮ್ಯಾನ್ಯುವಲ್‌ ಟ್ರಾನ್ಸ್ಮಿಷನ್

    ಪೆಟ್ರೋಲ್ ಎಂಜಿನ್ ಹಿಂದಿಗಿಂತ ಸುಮಾರು 1.5 ಪಿಎಸ್‌ ಮತ್ತು 2 ಎನ್‌ಎಮ್‌ ನಷ್ಟು ಹೆಚ್ಚು ಉತ್ಪಾದಿಸಿದೆ. ಆದರೆ, CNG ಆಯ್ಕೆಯ ಪರ್ಫಾರ್ಮೆನ್ಸ್‌ನ ಅಂಕಿಅಂಶಗಳು ಹಿಂದಿನಂತೆಯೇ ಇವೆ.

    ಬೆಲೆ ಮತ್ತು ಪ್ರತಿಸ್ಪರ್ಧಿಗಳು

    Maruti Alto K10 rear

    ಮಾರುತಿ ಆಲ್ಟೊ ಕೆ10 ಕಾರಿನ ಬೆಲೆ 4.09 ಲಕ್ಷ ರೂ.ಗಳಿಂದ 6.05 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ, ಭಾರತಾದ್ಯಂತ) ಇದೆ. ಇದು ರೆನಾಲ್ಟ್ ಕ್ವಿಡ್ ಜೊತೆ ಪೈಪೋಟಿ ನಡೆಸುತ್ತದೆ, ಹಾಗೆಯೇ, ಮಾರುತಿ ಎಸ್-ಪ್ರೆಸ್ಸೊಗೆ ಪರ್ಯಾಯವೆಂದು ಪರಿಗಣಿಸಬಹುದು.

    ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

    was this article helpful ?

    Write your Comment on Maruti ಆಲ್ಟೊ ಕೆ10

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience