• English
  • Login / Register

MG Comet EV ಬ್ಲಾಕ್‌ಸ್ಟಾರ್ಮ್ ಎಡಿಷನ್‌ ಬಿಡುಗಡೆ

ಎಂಜಿ ಕಾಮೆಟ್ ಇವಿ ಗಾಗಿ shreyash ಮೂಲಕ ಫೆಬ್ರವಾರಿ 26, 2025 08:25 pm ರಂದು ಪ್ರಕಟಿಸಲಾಗಿದೆ

  • 16 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಾಮೆಟ್ ಇವಿಯ ಸಂಪೂರ್ಣ ಕಪ್ಪು ಬಣ್ಣದ ಬ್ಲಾಕ್‌ಸ್ಟಾರ್ಮ್ ಆವೃತ್ತಿಯು ಅದರ ಟಾಪ್‌ ವೇರಿಯೆಂಟ್‌ ಎಕ್ಸ್‌ಕ್ಲೂಸಿವ್ ವೇರಿಯೆಂಟ್‌ ಅನ್ನು ಆಧರಿಸಿದೆ

MG Comet EV Blackstorm

  • 11,000 ರೂ.ಗಳ ಟೋಕನ್ ಮೊತ್ತಕ್ಕೆ ಬುಕಿಂಗ್‌ಗಳು ತೆರೆದಿರುತ್ತವೆ.

  • ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಸ್ಟಾರಿ ಬ್ಲ್ಯಾಕ್ ಎಕ್ಸ್‌ಟೀರಿಯರ್‌ ಕಲರ್‌ ಅನ್ನು ಪಡೆಯುತ್ತದೆ.

  • ಹೊರಭಾಗದ ಹೈಲೈಟ್‌ಗಳಲ್ಲಿ ಅಲಾಯ್ ವೀಲ್‌ಗಳ ಮೇಲಿನ ಕೆಂಪು ಬಣ್ಣ, ಮುಂಭಾಗದ ಬಂಪರ್ ಮತ್ತು ಬಾನೆಟ್‌ನ ಮೇಲಿನ 'ಮೋರಿಸ್ ಗ್ಯಾರೇಜಸ್' ಅಕ್ಷರಗಳು ಸೇರಿವೆ.

  • ಕೆಂಪು ಹೊಲಿಗೆಯೊಂದಿಗೆ ಸಂಪೂರ್ಣ ಕಪ್ಪು ಬಣ್ಣದ ಸೀಟ್ ಕವರ್‌ ಮತ್ತು ಮುಂಭಾಗದ ಹೆಡ್‌ರೆಸ್ಟ್‌ಗಳಲ್ಲಿ 'ಬ್ಲ್ಯಾಕ್‌ಸ್ಟಾರ್ಮ್' ಬ್ಯಾಡ್ಜ್‌ಗಳನ್ನು ಪಡೆಯುತ್ತದೆ.

  • ಅದೇ 17.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ, ಇದು 230 ಕಿಮೀ ವರೆಗೆ ಕ್ಲೈಮ್‌ ಮಾಡಲಾದ ರೇಂಜ್‌ಅನ್ನು ನೀಡುತ್ತದೆ.

  • ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ ಎಡಿಷನ್‌ನ ಬೆಲೆ 7.80 ಲಕ್ಷ ರೂ. ಮತ್ತು ಬ್ಯಾಟರಿ ಬಾಡಿಗೆ ಪ್ರತಿ ಕಿ.ಮೀ.ಗೆ 2.5 ರೂ. ಆಗಿದೆ.

The MG Comet EV ಎಮ್‌ಜಿ ಕಾಮೆಟ್ ಇವಿ, ಎಮ್‌ಜಿ ಗ್ಲೋಸ್ಟರ್, ಎಮ್‌ಜಿ ಆಸ್ಟರ್ ಮತ್ತು ಎಮ್‌ಜಿ ಹೆಕ್ಟರ್ ನಂತರ ಬ್ಲಾಕ್‌ಸ್ಟಾರ್ಮ್ ಎಡಿಷನ್‌ ಕ್ಲಬ್‌ಗೆ ಸೇರುತ್ತಿರುವ MG ಯ ಭಾರತದ ಕಾರುಗಳ ಪಟ್ಟಿಯ ನಾಲ್ಕನೇ ಮೊಡೆಲ್‌ ಆಗಿದೆ. ಈ ಸಣ್ಣ ಇವಿಯ ಸಂಪೂರ್ಣ ಕಪ್ಪು ಎಡಿಷನ್‌ ಟಾಪ್-ಸ್ಪೆಕ್ ಎಕ್ಸ್‌ಕ್ಲೂಸಿವ್ ವೇರಿಯೆಂಟ್‌ಅನ್ನು ಆಧರಿಸಿದೆ, ಇದರ ಬೆಲೆ 7.80 ಲಕ್ಷ ರೂ. ಮತ್ತು ಬ್ಯಾಟರಿ ಬಾಡಿಗೆ ಪ್ರತಿ ಕಿ.ಮೀ.ಗೆ 2.5 ರೂ. ಆಗಿದೆ. ಎಂಜಿ ಈಗ 11,000 ರೂ.ಗಳ ಟೋಕನ್ ಮೊತ್ತಕ್ಕೆ ಆರ್ಡರ್‌ಗಳನ್ನು ಸಹ ಸ್ವೀಕರಿಸುತ್ತಿದೆ. ಇದು ಒಳಗೆ ಮತ್ತು ಹೊರಗೆ ಕೆಂಪು ಹೈಲೈಟ್‌ಗಳೊಂದಿಗೆ ಸಂಪೂರ್ಣ ಕಪ್ಪು ಎಕ್ಸ್‌ಟೀರಿಯರ್‌ ಥೀಮ್ ಅನ್ನು ಪಡೆಯುತ್ತದೆ.

ಸ್ಟ್ಯಾರಿ ಕಪ್ಪು ಬಣ್ಣದ ಬಾಡಿ ಕಲರ್‌

MG ಕಾಮೆಟ್ EV ಬ್ಲಾಕ್‌ಸ್ಟಾರ್ಮ್ ಕಾರಿನ ಹೊರಭಾಗವು ಸ್ಟಾರಿ ಬ್ಲ್ಯಾಕ್ ಬಣ್ಣದಲ್ಲಿದ್ದು, ಬಂಪರ್ ಮೇಲೆ ಕೆಂಪು ಬಣ್ಣ, ಸ್ಕಿಡ್ ಪ್ಲೇಟ್, ಸೈಡ್ ಕ್ಲಾಡಿಂಗ್ ಮತ್ತು ಹುಡ್ ಮೇಲೆ ಮೋರಿಸ್ ಗ್ಯಾರೇಜ್ ಬ್ಯಾಡ್ಜಿಂಗ್ ಅನ್ನು ಹೊಂದಿದೆ. ಸ್ಟೀಲ್‌ ವೀಲ್‌ಗಳು ಸಂಪೂರ್ಣ ಕಪ್ಪು ಬಣ್ಣದ ಕವರ್‌ಗಳೊಂದಿಗೆ ಕೆಂಪು ನಕ್ಷತ್ರದಂತಹ ಪ್ಯಾಟರ್ನ್‌ನೊಂದಿಗೆ ಕಾಣಬಹುದಾಗಿದೆ. ಕಾಮೆಟ್ ಇವಿ ಯ ಸ್ಪೇಷಲ್‌ ಎಡಿಷನ್‌ಆಗಿ ಎದ್ದು ಕಾಣುವಂತೆ ಮಾಡಲು ಫೆಂಡರ್‌ನಲ್ಲಿ 'ಬ್ಲ್ಯಾಕ್‌ಸ್ಟಾರ್ಮ್' ಬ್ಯಾಡ್ಜ್ ಕೂಡ ಇದೆ.

ಕೆಂಪು ಹೈಲೈಟ್‌ನೊಂದಿಗೆ ಕಪ್ಪು ಸೀಟ್‌ಗಳು

MG Comet EV Blackstorm Interior

ಕಾಮೆಟ್ ಇವಿ ಬ್ಲ್ಯಾಕ್‌ಸ್ಟಾರ್ಮ್‌ನೊಂದಿಗೆ, ಡ್ಯಾಶ್‌ಬೋರ್ಡ್ ಇನ್ನೂ ಬಿಳಿ ಮತ್ತು ಬೂದು ಬಣ್ಣದ ಥೀಮ್‌ನಲ್ಲಿ ಬರುತ್ತದೆ, ಆದಾಗ್ಯೂ ಸೀಟುಗಳನ್ನು ಈಗ ಕೆಂಪು ಹೊಲಿಗೆಯೊಂದಿಗೆ ಕಪ್ಪು ಬಣ್ಣದಲ್ಲಿ ಸಜ್ಜುಗೊಳಿಸಲಾಗಿದೆ ಮತ್ತು ಹೆಡ್‌ರೆಸ್ಟ್‌ಗಳ ಮೇಲೆ 'ಬ್ಲ್ಯಾಕ್‌ಸ್ಟಾರ್ಮ್' ಬ್ಯಾಡ್ಜ್‌ಗಳನ್ನು ನೀಡಲಾಗಿದೆ. ಆದಾಗ್ಯೂ ಒಟ್ಟಾರೆ ಕ್ಯಾಬಿನ್ ವಿನ್ಯಾಸವು ರೆಗ್ಯುಲರ್‌ ಕಾಮೆಟ್‌ನಂತೆಯೇ ಇರುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

MG Comet EV Infotainment System Main Menu

MG ಕಾಮೆಟ್ EV ಬ್ಲಾಕ್‌ಸ್ಟಾರ್ಮ್‌ನ ಫೀಚರ್‌ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು 10.25-ಇಂಚಿನ ಟಚ್‌ಸ್ಕ್ರೀನ್, 10.25-ಇಂಚಿನ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಮತ್ತು ರೆಗ್ಯುಲರ್‌ ಕಾಮೆಟ್‌ನಂತೆ ಮ್ಯಾನ್ಯುವಲ್‌ AC ನಂತಹ ಸೌಲಭ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಕಾಮೆಟ್ ಇವಿ ಬ್ಲಾಕ್‌ಸ್ಟಾರ್ಮ್ 4-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನು ಸಹ ಪಡೆಯುತ್ತದೆ. ಪ್ರಯಾಣಿಕರ ಸುರಕ್ಷತೆಯನ್ನು ಎರಡು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಸೆನ್ಸರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ನೋಡಿಕೊಳ್ಳುತ್ತದೆ.

ರೆಗ್ಯುಲರ್‌ ಕಾಮೆಟ್ ಇವಿಯಂತೆಯೇ ಅದೇ ಬ್ಯಾಟರಿ ಪ್ಯಾಕ್

ಎಮ್‌ಜಿ ಕಾಮೆಟ್ ಇವಿ 17.3 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಂಡಿದೆ, ಇದು ರಿಯರ್‌-ವೀಲ್‌-ಡ್ರೈವ್‌ (RWD) ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಯಾಗಿ ಬರುತ್ತದೆ. ವಿವರವಾದ ವಿಶೇಷಣಗಳು ಈ ಕೆಳಗಿನಂತಿವೆ:

ಬ್ಯಾಟರಿ ರೇಂಜ್‌

17.3 ಕಿ.ವ್ಯಾಟ್‌

ಕ್ಲೈಮ್‌ ಮಾಡಲಾದ ರೇಂಜ್‌

230 ಕಿ.ಮೀ.

ಪವರ್‌

42 ಪಿಎಸ್‌

ಟಾರ್ಕ್‌

110 ಎನ್‌ಎಮ್‌

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ನೀವು ಎಮ್‌ಜಿ ಕಾಮೆಟ್ ಇವಿಗಾಗಿ ನೀಡಲಾಗುವ ಬ್ಯಾಟರಿ ಚಂದಾದಾರಿಕೆ ಯೋಜನೆಯನ್ನು ಆರಿಸಿದರೆ, ಬೆಲೆಗಳು 5 ಲಕ್ಷದಿಂದ 7.80 ಲಕ್ಷ ರೂ.ಗಳವರೆಗೆ ಇರುತ್ತದೆ. ಹಾಗೆಯೇ, ಈ ಚಂದಾದಾರಿಕೆ ಯೋಜನೆಯೊಂದಿಗೆ, ನೀವು ಬ್ಯಾಟರಿ ಚಂದಾದಾರಿಕೆ ವೆಚ್ಚವಾಗಿ ಎಮ್‌ಜಿಗೆ ಪ್ರತಿ ಕಿ.ಮೀ.ಗೆ 2.5 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದನ್ನು ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ ಇಸಿ3 ಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.

ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ

was this article helpful ?

Write your Comment on M g ಕಾಮೆಟ್ ಇವಿ

explore ಇನ್ನಷ್ಟು on ಎಂಜಿ ಕಾಮೆಟ್ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience