ಮಾರುತಿ ಆಲ್ಟೊದಿಂದ ಹೊಸ ದಾಖಲೆ, 45 ಲಕ್ಷ ಕಾರು ಮಾರಾಟ
ಮಾರುತಿ ಆಲ್ಟೊ ಕೆ10 ಗಾಗಿ rohit ಮೂಲಕ ಆಗಸ್ಟ್ 04, 2023 09:57 pm ರಂದು ಮಾರ್ಪಡಿಸಲಾಗಿದೆ
- 41 Views
- ಕಾಮೆಂಟ್ ಅನ್ನು ಬರೆಯಿರಿ
ಕಳೆದ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ, "ಆಲ್ಟೊ" ಎಂಬ ಈ ಹೆಸರು ಮೂರು ತಲೆಮಾರುಗಳ ಜನರಲ್ಲಿ ಜನಜನಿತವಾಗಿದೆ.
ಭಾರತದಲ್ಲಿ ಅತಿ ಹೆಚ್ಚು ಕಾಲ ಓಡುತ್ತಿರುವ ಕಾರಿನ ಹೆಸರನ್ನು ನಾವು ಗಮನಿಸಿದಾಗ, ಮೊದಲು ನೆನಪಿಗೆ ಬರುವುದು ಮಾರುತಿ ಆಲ್ಟೊ. ಅದರ ಅಸ್ತಿತ್ವದ ಎರಡು ದಶಕಗಳಲ್ಲಿ ಇದುವರೆಗೆ 45 ಲಕ್ಷಕ್ಕೂ ಮಿಕ್ಕಿ ಕಾರುಗಳನ್ನು ಮಾರಾಟ ಮಾಡಿದೆ. ದೇಶದಲ್ಲಿ ಅದರ ಸಾಧನೆಯ ಪ್ರಯಣದ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ಭಾರತದಲ್ಲಿ “ಆಲ್ಟೊ” ಬ್ರಾಂಡ್ ನ ಸಂಕ್ಷಿಪ್ತ ಇತಿಹಾಸ
2000 ರಲ್ಲಿ ಮಾರುತಿ ಭಾರತದಲ್ಲಿ “ಆಲ್ಟೊ” ಕಾರನನ್ನು ಪರಿಚಯಿಸಿತು. ಬಿಡುಗಡೆಯಾದ ಕೇವಲ ನಾಲ್ಕು ವರ್ಷಗಳಲ್ಲಿ ಮಾರುತಿ ಹ್ಯಾಚ್‌ಬ್ಯಾಕ್ ಮಾರಾಟದ ಪಟ್ಟಿಯಲ್ಲಿ ಆಲ್ಟೊ ಅಗ್ರಸ್ಥಾನವನ್ನು ಅಲಂಕರಿಸಿತು. 2010 ರಲ್ಲಿ “ಆಲ್ಟೊ K10” ಅನ್ನು ಪರಿಚಯಿಸುವುದರೊಂದಿಗೆ ಇದು ದೊಡ್ಡ 1-ಲೀಟರ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿತು, ಅದೇ ಸಮಯದಲ್ಲಿ ಈ ಹ್ಯಾಚ್‌ಬ್ಯಾಕ್‌ನ CNG ವೇರಿಯಂಟ್ ಅನ್ನು ಮಾರುತಿ ಕಂಪೆನಿ ಪ್ರಾರಂಭಿಸಿತು.
2012 ರಲ್ಲಿ, ಮಾರುತಿ ಹೊಸ-ತಲೆಮಾರಿನ ಆಲ್ಟೊವನ್ನು ಹೊರತಂದಿತು, ಅದು ನಂತರ ಪ್ರವೇಶ-ಮಟ್ಟದ ಮಾಡೆಲ್ ನ ಹೆಸರಲ್ಲಿ “800” ಎಂಬ ಪದ ಕೂಡ ಜೋಡಣೆಯಾಯಿತು. ಅದೇ ಸಮಯದಲ್ಲಿ ಕಾರು ತಯಾರಕರು ಪ್ರವೇಶ-ಮಟ್ಟದ ಹ್ಯಾಚ್‌ಬ್ಯಾಕ್‌ಗಾಗಿ 20 ಲಕ್ಷ ಯುನಿಟ್ ಮಾರಾಟವನ್ನು ನೋಂದಾಯಿಸಿದರು. ಆಲ್ಟೊ 800 ಬಿಡುಗಡೆಯ ನಂತರ, 2014 ರಲ್ಲಿ ಮಾರುತಿಯು ಸೆಕೆಂಡ್-ಜೆನ್ ಆಲ್ಟೊ K10 ಅನ್ನು ಬಿಡುಗಡೆ ಮಾಡಿತು, ಆದರೆ ಆಲ್ಟೊ ಮೊಡೆಲ್ ಮುಂದಿನ ಎರಡು ವರ್ಷಗಳಲ್ಲಿ 30 ಲಕ್ಷ ಮಾರಾಟದ ಮೈಲಿಗಲ್ಲನ್ನು ಪೂರ್ಣಗೊಳಿಸಿತು ಮತ್ತು 2020 ರ ಒಂದೇ ವರ್ಷದಲ್ಲಿ 10 ಲಕ್ಷ ಕಾರನ್ನು ಮಾರಾಟ ಮಾಡಿತ್ತು.
ಈ ಸಾಧನೆಯ ಕುರಿತು ಮಾರುತಿಯ ಪ್ರತಿಕ್ರಿಯೆ
ಈ ಕುರಿತು ಮಾರುತಿ ಸುಜುಕಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಹೇಳೋದು ಹೀಗೆ, “ ಕಳೆದ 2 ದಶಕಗಳಲ್ಲಿ ಆಲ್ಟೊ ಬ್ರ್ಯಾಂಡ್ ನಮ್ಮ ಗ್ರಾಹಕರೊಂದಿಗೆ ಬಲವಾದ ಭಾವನಾತ್ಮಕ ಸಂಪರ್ಕವನ್ನು ಸ್ಥಾಪಿಸಿದೆ. ಆಲ್ಟೊದ ಅದ್ಭುತ ಪ್ರಯಾಣದ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ. 45 ಲಕ್ಷ ಗ್ರಾಹಕರ ಮೈಲಿಗಲ್ಲನ್ನು ಸಾಧಿಸಿರುವುದು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ದೃಢವಾದ ಬೆಂಬಲ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ. ಇದುವೆರೆಗೆ ಯಾವುದೇ ಕಾರ್ ಬ್ರ್ಯಾಂಡ್ ಸಾಧಿಸಲು ಸಾಧ್ಯವಾಗದ ಮೈಲಿಗಲ್ಲು ಇದು”.
ಇದನ್ನೂ ಓದಿರಿ: ಡೆಲಿವರಿಗೆ ಬಾಕಿಯಿದೆ ಮಾರುತಿ ಫ್ರಾಂಕ್ಸ್‌ನ ಬರೋಬ್ಬರಿ 22,000 ಯೂನಿಟ್‌ಗಳು
ನೀವು ಇನ್ನೂ ಆಲ್ಟೊ ಖರೀದಿಸಬಹುದು
ಮೂರನೇ-ತಲೆಮಾರಿನ ಆಲ್ಟೊ ಕೆ10 ಅನ್ನು 2022 ರಲ್ಲಿ ಪರಿಚಯಿಸಲಾಯಿತು ಮತ್ತು ಬಿಎಸ್6.2 ಎಮಿಷನ್ ಮಾನದಂಡಗಳಿಗೆ ಪರಿವರ್ತನೆಯ ಸಮಯದಲ್ಲಿ ಆಲ್ಟೊ 800 ಅನ್ನು ಸ್ಥಗಿತಗೊಳಿಸಿದ ನಂತರ ಮಾರಾಟದಲ್ಲಿರುವ ಏಕೈಕ ಆಲ್ಟೊ ಆಗಿದೆ. ಇಂದಿನ ಆಲ್ಟೋದಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್, ಎಲ್ಲಾ ನಾಲ್ಕು ಪವರ್ ವಿಂಡೋಗಳು, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.
ಪ್ರವೇಶ-ಮಟ್ಟದ ಹ್ಯಾಚ್‌ಬ್ಯಾಕ್ 1-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, ಅದು 67PS ಮತ್ತು 89Nm ಅನ್ನು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ನೊಂದಿಗೆ ಜೋಡಿಸಲಾಗಿದೆ. ಅದೇ ಎಂಜಿನ್ ಅನ್ನು CNG ಯಲ್ಲಿ 57PS ಮತ್ತು 82Nm ನ ಕಡಿಮೆ ಉತ್ಪಾದನೆಯೊಂದಿಗೆ ನೀಡಲಾಗುತ್ತಿದೆ, ಆದರೆ 5-ಸ್ಪೀಡ್ ಮ್ಯಾನುವಲ್‌ಗೆ ಮಾತ್ರ ಜೋಡಿಸಲಾಗಿದೆ. ಪ್ರಸ್ತುತ ಆಲ್ಟೊ ಐಡಲ್-ಎಂಜಿನ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನದೊಂದಿಗೆ ಬರುತ್ತದೆ, ಇದು ಟ್ರಾಫಿಕ್ ಸಂದರ್ಭಗಳಲ್ಲಿ ಕಡಿಮೆ ಇಂಧನ ಬಳಕೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿರಿ: ಮಾರುತಿ ಇನ್ವಿಕ್ಟೋ ಈಗ ಹಿಂದಿನ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ
ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಆಲ್ಟೊ K10 ಅನ್ನು ನಾಲ್ಕು ವಿಶಾಲವಾದ ವೇರಿಯಂಟ್ ಗಳಲ್ಲಿ ನೀಡಲಾಗುತ್ತಿದೆ - Std (O), LXi, VXi ಮತ್ತು VXi+ - ಅದರ ಬೆಲೆಗಳು 3.99 ಲಕ್ಷದಿಂದ 5.96 ಲಕ್ಷವರೆಗೆ (ಎಕ್ಸ್-ಶೋರೂಂ ದೆಹಲಿ) ಇದೆ. ಇದು ರೆನಾಲ್ಟ್ ಕ್ವಿಡ್ ವಿರುದ್ಧ ಸ್ಪರ್ಧಿಸುತ್ತದೆ, ಆದರೆ ಇದನ್ನು ಮಾರುತಿ ಎಸ್-ಪ್ರೆಸ್ಸೊಗೆ ಪರ್ಯಾಯವಾಗಿ ಪರಿಗಣಿಸಬಹುದು.
ಇನ್ನಷ್ಟು ಓದಿರಿ : ಆಲ್ಟೊ K10 ಆನ್ ರೋಡ್ ಪ್ರೈಸ್